Gandhi to Godse: ಗಾಂಧಿ ಭಾರತ ಗೋಡ್ಸೆ ಭಾರತವಾಗಿ ಬದಲಾಗುತ್ತಿದೆ: ಮೆಹಬೂಬಾ ಮುಫ್ತಿ

By Suvarna NewsFirst Published Dec 7, 2021, 7:07 PM IST
Highlights
  • ಗಾಂಧಿ ಭಾರತ ಗೋಡ್ಸೆ ಭಾರತವಾಗಿ ಬದಲಾಗುತ್ತಿದೆ
  • ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಆರೋಪ
  • ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ ಬೆಂಬಲಿಸಿದವರ ವಿರುದ್ಧ ಕೇಸ್‌ ದಾಖಲಿಸಿದ್ದಕ್ಕೆ ಬೇಸರ

ನವದೆಹಲಿ(ಡಿ.7): ಗಾಂಧಿಯವರ ಭಾರತ ಗೋಡ್ಸೆಯ ಭಾರತವಾಗಿ ಬದಲಾಗುತ್ತಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ(Mehbooba Mufti) ಮಂಗಳವಾರ ಆರೋಪಿಸಿದ್ದಾರೆ. ಭಾರತ-ಪಾಕಿಸ್ತಾನ(India-Pakistan) ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನವನ್ನು ಬೆಂಬಲಿಸಿದ್ದ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡ ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿ ಮಾತನಾಡಿದ ಮುಫ್ತಿ ಈ ಹೇಳಿಕೆ ನೀಡಿದ್ದಾರೆ.  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(Atal Bihari Vajpayee) ಅವರ ಕಾಲದಲ್ಲಿ ಉಭಯ ದೇಶಗಳ ನಾಗರಿಕರು ಪರಸ್ಪರ ಬೆಂಬಲಿಸುತ್ತಿದ್ದರು. ವಾಜಪೇಯಿ ಅವರ ಕಾಲದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯ ನಡೆದಿದ್ದು,  ಅಲ್ಲಿ ಪಾಕಿಸ್ತಾನದ ನಾಗರಿಕರು ಭಾರತವನ್ನು ಮತ್ತು ಭಾರತದ ನಾಗರಿಕರು ಪಾಕಿಸ್ತಾನವನ್ನು ಹುರಿದುಂಬಿಸುತ್ತಿದ್ದರು. ಹಾಗೆಯೇ ಪಾಕಿಸ್ತಾನ ಪ್ರಧಾನಿ ಪರ್ವೇಜ್‌ ಮುಷರಫ್‌(Pervez Musharraf) ಕೂಡ ಈ ಹಿಂದೆ ಭಾರತ ಕ್ರಿಕೆಟ್‌ ತಂಡದ ನಾಯಕರಾಗಿದ್ದ ಎಂ.ಎಸ್‌. ಧೋನಿ(MS Dhoni) ಅವರನ್ನು ಸುದ್ದಿಗೋಷ್ಠಿಯೊಂದರಲ್ಲಿ ಹೊಗಳಿದ್ದರು. 

ಆದರೆ ಕೆಲವು ದಿನಗಳ ಹಿಂದೆ ಆಗ್ರಾದಲ್ಲಿ ಕೆಲವು ಯುವಕರು ಭಾರತ  ಪಾಕಿಸ್ತಾನ ಕ್ರಿಕೆಟ್‌ ಪಂದ್ಯದ ವೇಳೆ ಪಾಕಿಸ್ತಾನ ತಂಡವನ್ನು ಹುರಿದುಂಬಿಸಿದ್ದಕ್ಕೆ ಕೇಸ್‌ ದಾಖಲಿಸಲಾಗಿದೆ. ಇವರ ಪರ ವಾದಿಸಲು ಒಬ್ಬ ವಕೀಲ ಕೂಡ ಸಿದ್ಧನಿಲ್ಲ. ಈ ಘಟನೆಯಿಂದ ಗಾಂಧಿ ಭಾರತ ಗೋಡ್ಸೆ(Godse)ಭಾರತವಾಗಿ ಬದಲಾಗುತ್ತಿದೆಯೇ ಎಂಬ ಯೋಚನೆ ಬರುತ್ತಿದೆ ಎಂದು ಮೆಹಬೂಬಾ ಮುಫ್ತಿ ಹೇಳಿದರು. 

ಕಾಶ್ಮೀರದ ಸ್ಥಿತಿಗತಿ ಬಗ್ಗೆ ಮೋದಿ ಜೊತೆ ಚರ್ಚಿಸಿದ ಮುಫ್ತಿ

ಕಳೆದ ತಿಂಗಳು, ನವದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ(Farooq Abdullah) ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಗಾಗಿ ಕರೆ ನೀಡಿದ್ದರು. ಆರ್ಟಿಕಲ್‌   370 ರದ್ದುಗೊಳಿಸಿದ ಸರ್ಕಾರಕ್ಕೆ ನೆರೆಯ ದೇಶ ಪಾಕಿಸ್ತಾನದ ಹಿಡಿತದಲ್ಲಿರುವ ಪಾಕ್‌ ಆಕ್ರಮಿತ ಕಾಶ್ಮೀರವನ್ನು ದೇಶಕ್ಕೆ ವಾಪಸ್‌ ಸೇರಿಸುವ ಸಾಮರ್ಥ್ಯವೂ ಇದೆ ಎಂದು ಅವರು ಹೇಳಿದರು. ಜಮ್ಮು ಕಾಶ್ಮೀರ(Jammu and Kashmir)ದಲ್ಲಿ ಶಾಂತಿ ನೆಲೆಸುವ ಸಲುವಾಗಿ ಭಾರತ ಹಾಗೂ ಪಾಕಿಸ್ತಾನ ಎರಡೂ ಮಾತುಕತೆ ನಡೆಸಬೇಕು.  ನಮ್ಮ ಭೂಪ್ರದೇಶವನ್ನು ಪ್ರವೇಶಿಸಿ ಹಳ್ಳಿಗಳನ್ನು ಸ್ಥಾಪಿಸಿದ ಚೀನಾದೊಂದಿಗೆ ಸರ್ಕಾರ ಮಾತನಾಡುತ್ತಿರುವಾಗ ನಮ್ಮ ದೇಶದ ಗಡಿಯಾಚೆ ಇರುವ ಅವರೊಂದಿಗೆ (ಪಾಕಿಸ್ತಾನದೊಂದಿಗೆ) ಏಕೆ ಮಾತನಾಡಬಾರದು ಎಂದು ಫಾರೂಕ್ ಅಬ್ದುಲ್ಲಾ ಅವರು ಪ್ರಶ್ನಿಸಿದರು. ಗಡಿ ನಿಯಂತ್ರಣ ರೇಖೆಯ ಇನ್ನೊಂದು ಬದಿಯಲ್ಲಿರುವ ಜನರು ನಮ್ಮವರೇ ಎಂದು ಫಾರೂಕ್‌ ಅಬ್ದುಲ್ಲಾ ಈ ಸಂದರ್ಭದಲ್ಲಿ ಹೇಳಿದ್ದರು.

ಇತ್ತೀಚೆಗೆ ಮೆಹಬೂಬಾ ಮುಫ್ತಿ, ಫಾರುಖ್ ಅಬ್ದುಲ್ಲಾ ಸೇರಿದಂತೆ ಕಣಿವೆ ರಾಜ್ಯದ ಹಲವು ರಾಜಕೀಯ ನಾಯಕರು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370ಯನ್ನು ಮರು ಸ್ಥಾಪಿಸುವಂತೆ ಒತ್ತಾಯಿಸಿದ್ದರು. ಕಳೆದೊಂದು ವರ್ಷದಿಂದ ಸತತ ಹೋರಾಟ, ವಿಪಕ್ಷಗಳ ಆಗ್ರಹ, ಪ್ರತಿಭಟನೆ, ಬಂದ್ ಸೇರಿ ಹಲವು ರೀತಿಯ ರೈತರ ಪ್ರತಿಭಟನೆಗೆ ಜಗ್ಗದೇ ಇದ್ದ ಕೇಂದ್ರ ಸರ್ಕಾರ ಇತ್ತೀಚೆಗೆ ದಿಢೀರ್ ಎಂದು ಮೂರು ಕೃಷಿ ಮಸೂದೆಯನ್ನು(repeal of 3 farm laws) ಹಿಂಪಡೆದಿತ್ತು. ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮೂರು ಕೃಷಿ ಮಸೂದೆಗಳನ್ನು ವಾಪಸ್‌ ಪಡೆಯಲಾಗಿದೆ.  ಕೃಷಿ ಮಸೂದೆ ಜಾರಿಗೊಳಿಸಿದ ಒಂದು ವರ್ಷದ ಬಳಿಕ ಕೇಂದ್ರ ಸರ್ಕಾರ ಅದನ್ನು ಮತ್ತೆ ರದ್ದುಪಡಿಸಿದ ಹಿನ್ನೆಲೆಯಲ್ಲಿ ಮೆಹಬೂಬಾ, ಆರ್ಟಿಕಲ್‌ 370ಯನ್ನು ಕೂಡ ಇದೇ ರೀತಿ ರದ್ದು ಮಾಡುವಂತೆ ಕೋರಿದ್ದರು. 

MLC Poll Campaign: ಗಾಂಧಿಯನ್ನು ಕೊಂದ ಗೋಡ್ಸೆ ಪಳೆಯುಳಿಕೆ ಬಿಜೆಪಿ, ಸಿದ್ದು ವಾಗ್ದಾಳಿ

ಇತ್ತ  ಆರ್ಟಿಕಲ್‌ 370 ರದ್ದಾದ ಬಳಿಕ ಕಣಿವೆ ರಾಜ್ಯದ ಪರಿಸ್ಥಿತಿ ಹೇಗಿದೆ?. ಶಾಂತಿ ಸ್ಥಾಪನೆಯಲ್ಲಿ ಆರ್ಟಿಕಲ್ 370 ರದ್ದತಿ ಯಾವ ಪಾತ್ರ ವಹಿಸಿದೆ? ಈ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಇದರ ನಡುವೆ ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದಾದ ಬಳಿಕ ಕಾಶ್ಮೀರದಲ್ಲಿನ ಬದಲಾವಣೆ ಕುರಿತು ಬೆಳಕು ಚೆಲ್ಲಿದೆ. ಈ ಕಾಯಿದೆ ರದ್ದಾದ ಬಳಿಕ 1,678 ವಲಸಿಗರು ಕಾಶ್ಮೀರಕ್ಕೆ ವಾಪಾಸ್ ಆಗಿದ್ದಾರೆ ಎಂದು ಕೇಂದ್ರ  ಸರ್ಕಾರ ಸಂಸತ್ತಿನಲ್ಲಿ ಮಾಹಿತಿ ನೀಡಿದೆ. 

click me!