ಮೊಟ್ಟೆ ಸಾರು ಮಾಡಿಲ್ಲ ಅಂತ ಲೀವಿಂಗ್ ಪಾರ್ಟನರ್‌ಅನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಗುರುಗ್ರಾಮದ ಚೌಮ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದೊಳಗೆ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು.
ಗುರುಗ್ರಾಮ: ಮೊಟ್ಟೆ ಸಾರು ಮಾಡಿಲ್ಲ ಅಂತ ಲೀವಿಂಗ್ ಪಾರ್ಟನರ್‌ಅನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಗುರುಗ್ರಾಮದ ಚೌಮ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದೊಳಗೆ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಅನುಮಾನದ ಮೇರಗೆ ಮಹಿಳೆಯ ಲೀವಿಂಗ್ ಪಾರ್ಟನರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಮದ್ಯದ ಅಮಲಿನಲ್ಲಿದ್ದಾಗ ಪರಸ್ಪರ ಜಗಳ ಮಾಡಿದ್ದು, ಈ ವೇಳೆ ತಾಳ್ಮೆ ಕಳೆದುಕೊಂಡು ಆಕೆಯನ್ನು ಹತ್ಯೆ ಮಾಡಿದಾಗಿ ಆರೋಪಿ 34 ವರ್ಷದ ಲಲ್ಲನ್ ಯಾದವ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ತಾನು ಆಕೆಗೆ ಮೊಟ್ಟೆ ಸಾರು ಮಾಡುವಂತೆ ಹೇಳಿದೆ ಆದರೆ ಆಕೆ ಮಾಡುವುದಕ್ಕೆ ನಿರಾಕರಿಸಿದಳು, ಇದರಿಂದ ಸಿಟ್ಟಿಗೆದ್ದ ನಾನು ಆಕೆಯನ್ನು ಹತ್ಯೆ ಮಾಡಿದ್ದಾಗಿ ಆತ ಹೇಳಿದ್ದಾನೆ. ಕೊಲೆ ಮಾಡಿದ ಆರೋಪಿ ಲಲನ್ ಯಾದವ್ ಬಿಹಾರ ಜಿಲ್ಲೆಯ ಮಾದೇಪುರ ಜಿಲ್ಲೆಯ ಔರಾಹಿ ಗ್ರಾಮದವನಾಗಿದ್ದು, ಗುರುಗ್ರಾಮದಲ್ಲಿ ಮಹಿಳೆಯೊಂದಿಗೆ ವಾಸವಿದ್ದ. ದೆಹಲಿಯ ಸರಾಯ್ ಕಾಲೆ ಖಾನ್ ಪ್ರದೇಶದಲ್ಲಿರುವ ಪಲಂ ವಿಹಾರ ಪೊಲೀಸ್ ಠಾಣೆಯ ತಂಡದವರು ಈತನನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಲೀವ್ ಇನ್ ಪಾರ್ಟ್ನರ್ ಕ್ರೈಂ, ಗೆಳತಿ ಮಾರ್ಫ್ ಫೋಟೋ ಹರಿಬಿಟ್ಟ ಬಾಯ್‌ಫ್ರೆಂಡ್!
ಕೊಲೆಯಾದ ಅಂಜಲಿ ಅಂದಾಜು 32 ವರ್ಷದ ಮಹಿಳೆಯಾಗಿದ್ದು, ಬುಧವಾರ ಈಕೆಯ ಶವ ನಿರ್ಮಾಣ ಹಂತದ ಕಟ್ಟಡದೊಳಗೆ ಪತ್ತೆಯಾಗಿತ್ತು. ಶವವನ್ನು ಕಂಡ ನಂತರ ಕಟ್ಟಡದ ಉಸ್ತುವಾರಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಪ್ರಕಾರ, ಅಂಜಲಿ ಹಾಗೂ ಯಾದವ್ ಅವರನ್ನು ಮಾರ್ಚ್ 10 ರಂದು ಗುರುಗ್ರಾಮ್ ಬಸ್ ನಿಲ್ದಾಣದಿಂದ ಕೆಲಸದ ಸ್ಥಳಕ್ಕೆ ಕರೆತರಲಾಗಿತ್ತು.
ಇವರ ಸರಿಯಾದ ವಿಳಾಸ, ಅಡ್ರೆಸ್, ಐಡಿಯನ್ನು ಕೂಡ ಕಟ್ಟಡ ಮಾಲೀಕರು ಪಡೆದುಕೊಂಡಿರಲಿಲ್ಲ, ಪೊಲೀಸರ ವಿಚಾರಣೆ ವೇಳೆ ಲಲ್ಲನ್ ಯಾದವ್ ಪತ್ನಿ 6 ವರ್ಷಗಳ ಹಿಂದೆ ಹಾವು ಕಚ್ಚ ಮೃತಪಟ್ಟಿದ್ದಳು. 7 ತಿಂಗಳ ಹಿಂದೆ ಈತನಿಗೆ ಅಂಜಲಿ ಪರಿಚಯವಾಗಿದ್ದಾಳೆ. ನಂತರ ಇಬ್ಬರೂ ಒಟ್ಟಿಗೆ ಜೀವನ ಮಾಡಲು ಶುರು ಮಾಡಿದ್ದಾರೆ. ಹತ್ಯೆಯ ನಂತರ ಆರೋಪಿ ಲಲ್ಲನ್ ಓಡಿ ಹೋಗಿದ್ದ. ಕೊಲೆ ನಡೆದ ಸ್ಥಳದಿಂದ ಹತ್ಯೆಗೆ ಬಳಸಿದ ಬೆಲ್ಟ್ ಹಾಗೂ ಹ್ಯಾಮರ್ ಅನ್ನು ವಶಕ್ಕೆ ಪಡೆಯಲಾಗಿದೆ.
ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಮತ್ತೊಂದು ಭೀಕರ ಹತ್ಯೆ, ಪಾರ್ಟ್ನರ್-ಮಗ ಇಬ್ಬರನ್ನೂ ಕೊಂದ ಮಹಿಳೆ!