ಕಾಶ್ಮೀರದ ವಿಶೇಷ ಸ್ಥಾನ ರದ್ದತಿ ಪ್ರಶ್ನಿಸಿದ ಲೆಕ್ಚರರ್‌ ಅಮಾನತು: ಸುಪ್ರೀಂಕೋರ್ಟ್‌ ಆಕ್ಷೇಪ

By Kannadaprabha News  |  First Published Aug 29, 2023, 9:10 AM IST

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಪರಿಚ್ಛೇದವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಉಪನ್ಯಾಸಕನೊಬ್ಬನನ್ನು ಜಮ್ಮು ಮತ್ತು ಕಾಶ್ಮೀರದ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ. ಇದಕ್ಕೆ ಸುಪ್ರಿಂಕೋರ್ಟ್ ಆಕ್ಷೇಪ ವ್ಯಕ್ತಡಿಸಿದೆ.


ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಪರಿಚ್ಛೇದವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಉಪನ್ಯಾಸಕನೊಬ್ಬನನ್ನು ಜಮ್ಮು ಮತ್ತು ಕಾಶ್ಮೀರದ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ. ಇದಕ್ಕೆ ಸುಪ್ರಿಂಕೋರ್ಟ್ ಆಕ್ಷೇಪ ವ್ಯಕ್ತಡಿಸಿದ್ದು, ಈ ಕುರಿತು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಜೊತೆ ಮಾತನಾಡುವಂತೆ ಕೇಂದ್ರ ಸರ್ಕಾರದ ಪ್ರತಿನಿಧಿಯಾದ ಸಾಲಿಸಿಟರ್‌ ಜನರಲ್‌ಗೆ ಸೂಚಿಸಿದೆ.

ಜಮ್ಮು ಕಾಶ್ಮೀರದ (Jammu Kashmir) ಕಾನೂನು ಕಾಲೇಜೊಂದರ ಪೊಲಿಟಿಕಲ್‌ ಸೈನ್ಸ್‌ (Political Science) ಉಪನ್ಯಾಸಕ ಜಹೂರ್‌ ಅಹಮದ್‌ ಭಟ್‌ (Zahoor Ahmed Bhat)ಎಂಬುವರು ಕಳೆದ ಬುಧವಾರ ತಾವೇ ಸುಪ್ರೀಂಕೋರ್ಟ್‌ನ (Supreme Court) ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಂವಿಧಾನ ಪೀಠದ ಎದುರು ಹಾಜರಾಗಿ, ‘2019ರಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಕಾಲೇಜಿನಲ್ಲಿ ಪಾಠ ಮಾಡುವುದು ಕಷ್ಟವಾಗಿದೆ. ವಿದ್ಯಾರ್ಥಿಗಳು ನಾವು ನಿಜವಾಗಿಯೂ ಪ್ರಜಾಪ್ರಭುತ್ವದಲ್ಲಿ ಇದ್ದೇವಾ ಎಂದು ಕೇಳುತ್ತಾರೆ. ಭಾರತೀಯ ಸಂವಿಧಾನದ ನೈತಿಕತೆಗೆ ವಿರುದ್ಧವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ (Union Territories) ಪ್ರದೇಶವಾಗಿ ವಿಭಜಿಸಲಾಗಿದೆ’ ಎಂದು ವಾದಿಸಿದ್ದರು. ಎರಡು ದಿನಗಳ ಬಳಿಕ ಅವರನ್ನು ಅಮಾನತುಗೊಳಿಸಲಾಗಿತ್ತು.

Tap to resize

Latest Videos

370 ರದ್ದು ಬಳಿಕ ಜಮ್ಮುವಿನಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚಳ: ಸಾವಿನ ಸಂಖ್ಯೆ ಇಳಿಕೆ

ಇದನ್ನು ಸೋಮವಾರ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ (Kapil Sibal) ಕೋರ್ಟ್‌ನ ಗಮನಕ್ಕೆ ತಂದರು. ಆಗ ನ್ಯಾಯಪೀಠ, ಬೇರೆ ವಿಷಯಕ್ಕೆ ಸಸ್ಪೆಂಡ್‌ ಮಾಡಿದ್ದರೆ ನಮ್ಮ ಆಕ್ಷೇಪವಿಲ್ಲ. ಆದರೆ ಅವರು ಕೋರ್ಟ್‌ಗೆ ಬಂದಿದ್ದಕ್ಕೆ ಸಸ್ಪೆಂಡ್‌ ಮಾಡಿದ್ದರೆ ಅದು ದ್ವೇಷದ ಕ್ರಮವಾಗುತ್ತದೆ. ಅದು ಖಂಡಿತ ಸರಿಯಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಎಂದು ಕೇಂದ್ರಕ್ಕೆ ಸೂಚನೆ ನೀಡಿತು.

ಒಂದು ಕೇಜಿಗೆ 3 ಲಕ್ಷ ರೂ: ಕಾಶ್ಮೀರದ ಕೆಂಪು ಚಿನ್ನವೀಗ ಬೆಳ್ಳಿಗಿಂತಲೂ ದುಬಾರಿ

ಕಾಶ್ಮೀರದಲ್ಲಿ 370ನೇ ವಿಧಿ ರದ್ದು ನಿರ್ಧಾರಕ್ಕೆ ನಾಲ್ಕು ವರ್ಷ, ಶಾಂತಿ-ಸ್ಥಿರತೆಯಲ್ಲಿ ಕಣಿವೆ ರಾಜ್ಯ!

click me!