ವೈದ್ಯಕೀಯ ಶಿಕ್ಷಣದಲ್ಲಿ ಐತಿಹಾಸಿಕ ನಿರ್ಧಾರ; OBCಗೆ ಶೇ. 27, ಆರ್ಥಿಕ ದುರ್ಬಲರಿಗೆ ಶೇ.10 ಮೀಸಲಾತಿ!

By Suvarna NewsFirst Published Jul 29, 2021, 3:37 PM IST
Highlights
  • ಭಾರತ ಸರ್ಕಾರದಿಂದ ವೈದ್ಯಕೀಯ ಶಿಕ್ಷಣಕ್ಕೆ ಕ್ರಾಂತಿಕಾರಿ ಹೆಜ್ಜೆ
  • ಪ್ರಸಕ್ತ ಶೈಕ್ಷಣಿಕ ವರ್ಷ 2021 ರಿಂದ ಮಹತ್ವದ ಮೀಸಲಾತಿ 
  • ಒಬಿಸಿಗೆ 27% ಮತ್ತು ಆರ್ಥಿಕ ದುರ್ಬಲ ವಿಭಾಗಕ್ಕೆ 10% ಮೀಸಲಾತಿ

ನವದೆಹಲಿ(ಜು.29): ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ಮಹತ್ವದ ಬದಲಾವಣೆ ತಂದಿರುವ ಕೇಂದ್ರ ಸರ್ಕಾರ ಇದೀಗ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮೀಸಲಾತಿ ಘೋಷಿಸಿದೆ. ಇದರಲ್ಲಿ ಪ್ರಮುಖಾಗಿ ಒಬಿಸಿ ವಿಭಾಗಕ್ಕೆ ಶೇಕಡಾ 27 ಹಾಗೂ ಆರ್ಥಿಕ ದುರ್ಬಲರಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡಲಾಗಿದೆ.

 

Our Government has taken a landmark decision for providing 27% reservation for OBCs and 10% reservation for Economically Weaker Section in the All India Quota Scheme for undergraduate and postgraduate medical/dental courses from the current academic year. https://t.co/gv2EygCZ7N

— Narendra Modi (@narendramodi)

ಘೋಷಣೆ ಮಾತ್ರವೇ ಮೀಸಲಲ್ಲ: ರಾಜ್ಯಗಳಿಗೆ ಸುಪ್ರೀಂ ಕಿವಿಮಾತು

ಪ್ರಸಕ್ತ ಶೈಕ್ಷಣಿಗೆ ವರ್ಷ 2021-22 ರಿಂದ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ, ದಂತ ಕೋರ್ಸ್((ಎಂಬಿಬಿಎಸ್ / ಎಂಡಿ / ಎಂಎಸ್ / ಡಿಪ್ಲೊಮಾ / ಬಿಡಿಎಸ್ / ಎಂಡಿಎಸ್) ಕೋರ್ಸ್‌ಗಳಿಗೆ ಈ ಮೀಲಸಾತಿ ಅನ್ವಯವಾಗಲಿದೆ.  ಕೇಂದ್ರದ ಈ ನಿರ್ಧಾರದಿಂದ ಪ್ರತಿ ವರ್ಷ  ಎಂಬಿಬಿಎಸ್‌ನಲ್ಲಿ ಸುಮಾರು 1500 ಒಬಿಸಿ ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ಪದವಿಯಲ್ಲಿ 2500 ಒಬಿಸಿ ವಿದ್ಯಾರ್ಥಿಗಳಿಗೆ, ಸುಮಾರು 550 ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ಪದವೀಧರರಲ್ಲಿ ಸುಮಾರು 1000 ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ಇದು ನೆರವಾಗಲಿದೆ.

1986ರಲ್ಲಿ ಅಖಿಲ ಭಾರತ ಕೋಟಾ(AIQ)ಯೋಜನೆಯನ್ನು ಪರಿಚಯಿಸಲಾಯಿತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಈ ಯೋಜನೆಗೆ ಜಾರಿಗೊಳಿಸಲಾಯಿತು. ಈ ಯೋಜನೆ ಅಡಿಯಲ್ಲಿ ಯಾವುದೇ ರಾಜ್ಯದ ವಿದ್ಯಾರ್ಥಿಗಳಿಗೆ ಬೇರೆ ರಾಜ್ಯದಲ್ಲಿರುವ ಉತ್ತಮ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಆಕಾಂಕ್ಷಿ ಮುಕ್ತ ಅರ್ಹತೆ ಆಧಾರಿತ ಅವಕಾಶಗಳನ್ನು ಒದಗಿಸುತ್ತದೆ. ಅಖಿಲ ಭಾರತ ಕೋಟಾ ಒಟ್ಟು ಯುಜಿ ಸೀಟುಗಳಲ್ಲಿ 15% ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಒಟ್ಟು ಪಿಜಿ ಸೀಟುಗಳಲ್ಲಿ 50% ಅನ್ನು ಒಳಗೊಂಡಿದೆ. 

ಮೀಸಲು ಏರಿಕೆಗೆ ರಾಜ್ಯ ಒಲವು: ಸುಪ್ರೀಂ‌ಗೆ ಪ್ರಮಾಣ ಪತ್ರ ಸಲ್ಲಿಸಲು ನಿರ್ಧಾರ!

1986 ರಿಂದ 2007ರ ವರೆಗೆ AIQ ಕೋಟಾದಲ್ಲಿ ಯಾವುದೇ ಮೀಸಲಾತಿ ಇರಲಿಲ್ಲ. 2007ರಲ್ಲಿ ಸುಪ್ರೀಂ ಕೋರ್ಟ್, ಎಸ್‌ಸಿ ವಿಭಾಗಕ್ಕೆ ಶೇಕಡಾ 15 ಹಾಗೂ ಎಸ್‌ಟಿ ವಿಭಾಗಕ್ಕೆ ಶೇಕಡಾ 7.5 ರಷ್ಟು ಮೀಸಲಾತಿ ಪರಿಚಯಿಸಿತು.  ಇದೀಗ ಮೀಸಲಾತಿಯನ್ನು ಒಬಿಸಿ ಕೋಟಾಗಳಿಗೆ ಶೇಕಡಾ 27 ಹಾಗೂ ಆರ್ಥಿಕ ದುರ್ಬಲರಿಗೆ ಶೇಕಡಾ 10 ಎಂದು ವಿಂಗಡಿಸಿ ಐತಿಹಾಸಿ ನಿರ್ಧಾರ ಕೈಗೊಳ್ಳಲಾಗಿದೆ.

click me!