ಏಷ್ಯಾ ಖಂಡದಲ್ಲಿ ಹೆಚ್ಚು ಕಂಡುಬರುವ ಹುಲಿಗಳ ಸಂಖ್ಯೆ ಒಂದು ಕಾಲದಲ್ಲಿ ಸಾವಿರದಷ್ಟುಇತ್ತು. ಅದರಲ್ಲೂ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸುಮಾರು 80 ಸಾವಿರ ಹುಲಿಗಳು ಇದ್ದವು ಎಂದು ಹೇಳಲಾಗಿದೆ. ಆದರೆ ನಾನಾ ಕಾರಣಗಳಿಂದ ಹುಲಿಗಳ ಸಂತತಿ ಇಳಿಕೆಯಾಗುತ್ತಿದ್ದಂತೆ ಇವುಗಳ ರಕ್ಷಣೆಗಾಗಿ ವಿವಿಧ ದೇಶಗಳು ಸೇರಿ 2010ರಿಂದ ಪ್ರತಿವರ್ಷ ಜು.29ರಂದು ‘ಅಂತಾರಾಷ್ಟ್ರೀಯ ಹುಲಿ ದಿನ’ ಆಚರಿಸಲು ನಿರ್ಧರಿಸಿದವು. ‘ಹುಲಿ ದಿನ’ಕ್ಕೆ ಈ ವರ್ಷ ದಶಮಾನದ ಸಂಭ್ರಮ.
ಏಷ್ಯಾ ಖಂಡದಲ್ಲಿ ಹೆಚ್ಚು ಕಂಡುಬರುವ ಹುಲಿಗಳ ಸಂಖ್ಯೆ ಒಂದು ಕಾಲದಲ್ಲಿ ಸಾವಿರದಷ್ಟುಇತ್ತು. ಅದರಲ್ಲೂ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸುಮಾರು 80 ಸಾವಿರ ಹುಲಿಗಳು ಇದ್ದವು ಎಂದು ಹೇಳಲಾಗಿದೆ. ಆದರೆ ನಾನಾ ಕಾರಣಗಳಿಂದ ಹುಲಿಗಳ ಸಂತತಿ ಇಳಿಕೆಯಾಗುತ್ತಿದ್ದಂತೆ ಇವುಗಳ ರಕ್ಷಣೆಗಾಗಿ ವಿವಿಧ ದೇಶಗಳು ಸೇರಿ 2010ರಿಂದ ಪ್ರತಿವರ್ಷ ಜು.29ರಂದು ‘ಅಂತಾರಾಷ್ಟ್ರೀಯ ಹುಲಿ ದಿನ’ ಆಚರಿಸಲು ನಿರ್ಧರಿಸಿದವು. ‘ಹುಲಿ ದಿನ’ಕ್ಕೆ ಈ ವರ್ಷ ದಶಮಾನದ ಸಂಭ್ರಮ.
ಹುಲಿಯಿಂದ ಕಾಡು, ನಾಡು ರಕ್ಷಣೆ
undefined
ಬೆಕ್ಕಿನ ಜಾತಿಯ ಅತ್ಯಂತ ದೊಡ್ಡ ಪ್ರಾಣಿಗಳಲ್ಲಿ ಹುಲಿ ಮುಖ್ಯವಾಗಿದೆ. ಹುಲಿಯನ್ನು ಸಂರಕ್ಷಣೆ ಮಾಡುವುದೆಂದರೆ ಒಂದು ಕಾಡನ್ನೇ ರಕ್ಷಣೆ ಮಾಡಿದಂತೆ. ಏಕೆಂದರೆ ಹುಲಿ ಸಂರಕ್ಷಿತವಾದರೆ ಕಾಡು ಸಮೃದ್ಧವಾಗಲಿದೆ. ಕಾಡಿನಲ್ಲಿರುವ ಸಸ್ಯಹಾರಿ ಪ್ರಾಣಿಗಳನ್ನು ನಿಯಂತ್ರಿಸಿ ಇಡೀ ಕಾಡನ್ನು ಸಮತೋಲನದಲ್ಲಿ ಇಡಬಲ್ಲದು. ಪ್ರಕೃತಿಕ ಸಮತೋಲನಕ್ಕೆ ಹುಲಿ ಅತ್ಯಂತ ಹೆಚ್ಚು ಕೊಡುಗೆ ನೀಡುತ್ತಿದೆ. ಕಾಡಿನಲ್ಲಿ ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಲ್ಲಿ ಆ ಕಾಡು ಉತ್ತಮವಾಗಿದೆ ಎಂದರ್ಥ. ಹುಲಿ ಇರುವ ಜಾಗದಲ್ಲಿ ಪಕ್ಷಿ, ಕೀಟ, ಕಾಡು ಪ್ರಾಣಿಗಳು ಸಮೃದ್ಧವಾಗಿರುತ್ತವೆ.
1973 ರಿಂದ ಹುಲಿ ರಕ್ಷಣೆ
ಹುಲಿ ಸಂತತಿ ಕುಸಿಯುವ ಕುರಿತಂತೆ ಈ ಹಿಂದಿನ ಅಧ್ಯಯನಗಳನ್ನು ಗಮನಿಸಿದಲ್ಲಿ ಹುಲಿಗಳನ್ನು ನರಭಕ್ಷಕ ಎಂಬ ಪಟ್ಟಕಟ್ಟಿಕೊಂಡಿವೆ. ಇದೇ ಕಾರಣದಿಂದಾಗಿ ನಮ್ಮ ಪೂರ್ವಜರು ಅವುಗಳನ್ನು ಹತ್ಯೆ ಮಾಡುತ್ತಿದ್ದರು. ಅಲ್ಲದೆ, ಸ್ವಾತಂತ್ರ್ಯಾ ಪೂರ್ವದಲ್ಲಿ ಸುಮಾರು ಎಂಬತ್ತು ಸಾವಿರವಿದ್ದ ಹುಲಿಗಳ ಸಂಖ್ಯೆ ಒಂದೆರಡು ಸಾವಿರಕ್ಕೆ ಕುಸಿಯಿತು. ಹೀಗಾಗಿ ದೇಶದಲ್ಲಿ 1972ರ ವನ್ಯಜೀವಿ ಕಾಯ್ದೆ ಜಾರಿಗೆ ಬಂದ ನಂತರ ಹುಲಿಗಳನ್ನು ಉಳಿಸುವ ಸಲುವಾಗಿ 1973ರಲ್ಲಿ ಪ್ರಾಜೆಕ್ಟ್ ಟೈಗರ್ ಎಂಬ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆ ಜಾರಿಗೆ ಬಂದ ನಂತರ ದೇಶದಲ್ಲಿ ಹುಲಿಗಳ ಸಂರಕ್ಷಣೆ ಹೆಚ್ಚಾಗಿ, ಅವುಗಳ ಸಂಖ್ಯೆ ನಿಧಾನವಾಗಿ ಜಾಸ್ತಿಯಾಗತೊಡಗಿದೆ.
ಗಿನ್ನಿಸ್ ದಾಖಲೆ ಸೇರಿದ ಭಾರತದ ಹುಲಿ ಗಣತಿ..!
ರಾಷ್ಟ್ರೀಯ ಪ್ರಾಣಿ ಘೋಷಣೆ
ಮೊದಲು ಭಾರತದಲ್ಲಿ ಸಿಂಹವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ, 1973 ಏಪ್ರಿಲ್ ತಿಂಗಳಲ್ಲಿ ಹುಲಿಯನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂಬುದಾಗಿ ಘೋಷಣೆ ಮಾಡಲಾಗಿದೆ. ಇದೀಗ ದೇಶದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಹುಲಿಗಳ ಸಂತತಿ ಇದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ವಿಶ್ವದಲ್ಲಿ ಅತ್ಯಂತ ಹೆಚ್ಚು ಹುಲಿಗಳಿರುವ ದೇಶ ಎಂದರೆ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದರಲ್ಲೂ 2018 ರಲ್ಲಿ ಬಿಡುಗಡೆಯಾದ ಹುಲಿ ಸಮೀಕ್ಷೆಯಲ್ಲಿ 524 ಹುಲಿಗಳು ಕರ್ನಾಟಕದಲ್ಲಿದ್ದು,( ಮಧ್ಯಪ್ರದೇಶ ಮೊದಲನೇ ಸ್ಥಾನ - 526) ದೇಶದಲ್ಲಿಯೇ ಎರಡನೇ ಸ್ಥಾನ ಪಡೆದಿದೆ.
2010 ರಲ್ಲಿ ಹುಲಿ ದಿನ ಘೋಷಣೆ
ವರ್ಷಗಳು ಉರುಳಿದಂತೆ ಹುಲಿ ಸಂತತಿ ಕ್ಷೀಣಿಸುತ್ತಿತ್ತು. ಹುಲಿಗಳ ಸಂತತಿ ಸರಿಯುತ್ತಿತ್ತು. ವಿಶ್ವಮಟ್ಟದಲ್ಲಿ ಕಳೆದ ಒಂದು ಶತಮಾನದಲ್ಲಿ ಶೇ.97ರಷ್ಟುಹುಲಿಗಳು ನಾಶವಾಗಿದ್ದು, ಇಡೀ ವಿಶ್ವದಲ್ಲಿ ಕೇವಲ ಮೂರು ಸಾವಿರ ಹುಲಿಗಳ ಸಂತತಿ ಇದೆ ಎಂಬ ಅಘಾತಕಾರಿ ಅಂಶ ಬೆಳಕಿಗೆ ಬಂದಿತ್ತು. ಇದನ್ನು ತಡೆಯಲು 2010ರಲ್ಲಿ ಸೇಂಟ್ ಪೀಟರ್ಸ್ ಬರ್ಗ್‌ನಲ್ಲಿ ನಡೆದ ಹುಲಿ ಶೃಂಗಸಭೆಯಲ್ಲಿ (ಟೈಗರ್ಸ್ ಸಮಿಟ್) ಹುಲಿ ಸಂರಕ್ಷಣೆ ಕುರಿತು ನಿರ್ಧರಿಸಿತು. ಇದರ ಪರಿಣಾಮ 2010ರ ಏಪ್ರಿಲ್ 29ನ್ನು ‘ಅಂತಾರಾಷ್ಟ್ರೀಯ ಹುಲಿ ದಿನ’ವನ್ನಾಗಿ ಹಲವಾರು ದೇಶಗಳು ಆಚರಿಸುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುಲಿಗಳ ಸಂರಕ್ಷಿಸಿ, ಸಂತತಿ ಹೆಚ್ಚು ಮಾಡಲು ಪೂರಕವಾಗಿ ವಿವಿಧ ಯೋಜನೆ, ಕಾರ್ಯಕ್ರಮ, ಜನರಲ್ಲಿ ಅರಿವು, ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜೊತೆಗೆ, ವಿಶ್ವಾದ್ಯಾಂತ ಅರಣ್ಯ ಭಾಗಗಳಲ್ಲಿ ನೆಲೆಸಿರುವ ಸಮುದಾಯಗಳಿಗೆ ಹುಲಿ ಸಂರಕ್ಷಣೆಯ ಮಹತ್ವವನ್ನು ಸಾರಲಾಗುತ್ತಿದೆ.
ಹುಲಿ ಏಷ್ಯಾ ಖಂಡದಲ್ಲಿ ಮಾತ್ರ ಇವೆ!
ಬೆಕ್ಕಿನ ಜಾತಿಗೆ ಸೀರಿದ ದೊಡ್ಡ ಮಂಸಾಹಾರಿ ಪ್ರಾಣಿ ಹುಲಿ. ಪ್ರಪಂಚದಲ್ಲಿ ಬಂಗಾಳದ ಹುಲಿ, ಸೈಬೆರಿಯಾ ಹುಲಿ, ಸುಮಾತ್ರಾ ಹುಲಿ, ಮಲಯನ್ ಹುಲಿ, ಇಂಡೋ ಚೀನಾ ಹುಲಿ, ದಕ್ಷಿಣ ಚೀನಾ ಹುಲಿ ಎಂಬ ಆರು ಪ್ರಬೇದಗಳನ್ನು ಗುರುತಿಸಿದ್ದಾರೆ. ಭಾರತ ದೇಶದಲ್ಲಿ ಹುಲಿಗೆ ಬಂಗಾಳದ ಹುಲಿ (ಬೆಂಗಾಲ್ ಟೈಗರ್) ಎಂದು ಕರೆಯುವರು. ಜಾವಾ ಹುಲಿ, ಬಾಲಿ ಹುಲಿ ಎಂಬ ಎರಡು ಪ್ರಬೇಧಗಳು ಈಗಾಗಲೇ ವಿನಾಶವಾಗಿವೆ. ಹುಲಿಗಳು ಏಷ್ಯಾ ಖಂಡಕ್ಕೆ ಮಾತ್ರ ಸೀಮಿತ. ಪ್ರಾಣಿಗಳ ಸ್ವರ್ಗ ಆಫ್ರಿಕಾದಲ್ಲೂ ಹುಲಿ ಇಲ್ಲ ಎಂಬುದು ವಿಶೇಷ.
ವನ್ಯಜೀವಿ ಸಂರಕ್ಷಣೆಗೆ ಸುವರ್ಣ ನ್ಯೂಸ್ ಜಾಗೃತಿ ಅಭಿಯಾನ
ಗುಂಪು ಜೀವಿಗಳಲ್ಲಿ, ಒಂಟಿ ಜೀವನ
ಹುಲಿಗಳು ಗುಂಪುಜೀವಿಗಳಲ್ಲ, ಮಿಲನ ಸಮಯದಲ್ಲಿ ಗಂಡು ಹೆಣ್ಣ ಜೊತೆಗಿದ್ದು ನಂತರ ಒಂಟಿಯಾಗುತ್ತವೆ. ಇವು ಹೆಚ್ಚಾಗಿ ನಿಶಾಚರಿಗಳು, ಇವುಗಳ ಪಾದ ಮೃದುವಾಗಿರುವುದರಿಂದ ಸಂಚರಿಸಲು ಸವೆದ ದಾರಿಗಳನ್ನೇ ಬಳಸುತ್ತವೆ. ಮೂತ್ರ ಸಿಂಪಡಣೆ, ಪರಚುವುದು, ಮೈಉಜ್ಜುವ ಕ್ರಿಯೆಗಳಿಂದ ತಮ್ಮ ಗಡಿಗಳನ್ನು ಗುರುತಿಸಿ ತನ್ನದೇ ಸೀಮೆಯಲ್ಲಿ ಬದುಕುತ್ತವೆ. ಬೇರೆ ಹುಲಿ ತನ್ನ ಪ್ರದೇಶದೊಳಗೆ ಬಂದರೆ ಉಗ್ರವಾದ ಹೋರಾಟ ಮಾಡುತ್ತವೆ.
ಉತ್ತಮ ಬೇಟೆಗಾರನಲ್ಲ
ಹುಲಿ ಅಪ್ರತಿಮ ಬೇಟೆಗಾರನಲ್ಲ, ಅನೇಕ ಬಾರಿ ಪ್ರಯತ್ನಿಸಿ ಕೆಲವು ಸಲ ಮಾತ್ರ ಗೆಲ್ಲುತ್ತದೆ. ಹುಲಿಯ ಆಹಾರ ಸರಪಳಿಯಲ್ಲಿ ಮನುಷ್ಯ ಇಲ್ಲ, ಆದರೆ ಗಾಯಗೊಂಡ ಹುಲಿಗಳು, ವಯಸ್ಸಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಅಸಮರ್ಥವಾದಾಗ ಸುಲಭದಲ್ಲಿ ಸಿಗುವ ಮನುಷ್ಯ, ಜಾನುವಾರುಗಳ ಮೇಲೆ ದಾಳಿ ಮಾಡುತ್ತವೆ.
ಒಂದಕ್ಕಿಂತ ಒಂದು ಭಿನ್ನ
ಹುಲಿಗಳ ಮೈಮೇಲಿನ ಪಟ್ಟೆಗಳು ಪ್ರತಿ ಹುಲಿಗೂ ಭಿನ್ನವಾಗಿರುತ್ತವೆ. ಇದರಿಂದ ಹುಲಿಗಳನ್ನು ನಿರ್ದಿಷ್ಟವಾಗಿ ಗುರುತಿಸಬಹುದು ಎಂದು ಖ್ಯಾತ ವನ್ಯಜೀವಿತಜ್ಞ ಉಲ್ಲಾಸ ಕಾರಂತರ ಅಭಿಪ್ರಾಯವಾಗಿದೆ. ಇವರು ಹುಲಿಗಳಿಗೆ ರೇಡಿಯೋ ಕಾಲರ್ ತೊಡಿಸಿ, ಚಲನವಲನ, ಆಹಾರಕ್ರಮ, ಸಂತಾನೋತ್ಪತ್ತಿ, ಜೀವಿಸುವ ವ್ಯಾಪ್ತಿಯ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಲಾಗುತ್ತಿದೆ ಎನ್ನುತ್ತಾರೆ.
ಹುಲಿ ಸಂರಕ್ಷಣೆ ಶ್ರಮಿಸಿದರೂ, ಮಾನವನ ಸಂಘರ್ಷ
ಹುಲಿ ಸಂರಕ್ಷಣೆ ಬಗ್ಗೆ ಸರ್ಕಾರಗಳು ಮತ್ತು ಅರಣ್ಯ ಇಲಾಖೆಯಿಂದ ಸಾಕಷ್ಟುಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ, ಮಾನವ ಮತ್ತು ಹುಲಿ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಕಾಡು ಕಡಿಮೆಯಾದಂತೆ ಕಾಡಂಚಿನ ಭಾಗದಲ್ಲಿ ಬರುವ ಹಳ್ಳಿಗಳಿಗೆ ಆಹಾರ ಹುಡುಕಿಕೊಂಡು ಹುಲಿಗಳು ಬರುತ್ತಿರುವುದು ಸದ್ಯದ ಆತಂಕ. ನಾಯಿ, ಕುರಿ, ಹಸುಗಳ ಮೇಲೆ ದಾಳಿ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟು ಮಾಡಿದೆ. ಒತ್ತುವರಿ ಸಮಸ್ಯೆಯಿಂದ ಹುಲಿಗಳ ಆವಾಸ ಸ್ಥಾನಕ್ಕೆ ಕುತ್ತು ಬಂದಿದೆ. ಹೀಗಾಗಿ ಹುಲಿಗಳು ಕಾಡಿನಿಂದ ಹೊರಬರುತ್ತಿವೆ. ಸಂಶೋಧನೆಯೊಂದರ ಪ್ರಕಾರ ಶೇ.90 ರಷ್ಟುಹುಲಿಗಳು ಹಸಿವಿನಿಂದಲೇ ಮೃತಪಡುತ್ತಿವೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯ ಪಡುತ್ತಾರೆ.
ಹೆಚ್ಚು ಹುಲಿಗಳಿರುವ ರಾಜ್ಯಗಳು(2018ರ ಗಣತಿ ಪ್ರಕಾರ)
ಮಧ್ಯಪ್ರದೇಶ- 526
ಕರ್ನಾಟಕ- 524
ಉತ್ತರಾಖಂಡ-442
ಮಹಾರಾಷ್ಟ್ರ- 312
ತಮಿಳು ನಾಡು- 264
ಉತ್ತರಪ್ರದೇಶ- 173
ಕೇರಳ- 190
ಆಸ್ಸಾಂ-190
ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳು
ಕರ್ನಾಟಕ ರಾಜ್ಯದಲ್ಲಿ 5 ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಹುಲಿ ಸಂತತಿ ಹೆಚ್ಚಳ ಮತ್ತು ಅವುಗಳ ಸಂರಕ್ಷಣೆಗೆ ರಾಜ್ಯ ಅರಣ್ಯ ಇಲಾಖೆ ಶ್ರಮಿಸುತ್ತಿದೆ. ಅವುಗಳೆಂದರೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿ ರಂಗನ ಬೆಟ್ಟ(ಬಿಆರ್‌ಟಿ), ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ದಾಂಡೇಳಿ ಹುಲಿ ಸಂರಕ್ಷಿತ ಪ್ರದೇಶ.
ಅರಣ್ಯ ಇಲಾಖೆ, ವನ್ಯಜೀವಿ ಪ್ರೇಮಿಗಳು ಮತ್ತು ಅರಣ್ಯವಾಸಿಗಳಿಂದಾಗಿ 1974ರಿಂದ 2000ದ ನಡುವೆ ದೇಶಲ್ಲಿ ಹುಲಿ ಸಂತತಿ ಹೆಚ್ಚಾಗಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದ ಯುಪಿಎ 1ರಲ್ಲಿ ಹುಲಿ ಸಂರಕ್ಷಣೆಗೆ ಹೆಚ್ಚು ಅನುದಾನ ನೀಡಿದ್ದರು. ಆದರೆ 2005ರ ನಂತರ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ಸರ್ಕಾರ ಹೆಚ್ಚಿನ ನೆರವು ನೀಡುತ್ತಿಲ್ಲ. 10 ಸಾವಿರ ಹುಲಿಗಳನ್ನು ಪೋಷಣೆ ಮಾಡಬಹುದಾದ ಭಾರತದಲ್ಲಿ ಕೇವಲ 3000 ಸಾವಿರ ಹುಲಿಗಳನ್ನು ಮಾತ್ರ ಹೊಂದಿದ್ದೇವೆ.
- ಉಲ್ಲಾಸ್ ಕಾರಂತ್, ವನ್ಯಜೀವಿ ತಜ್ಞ