ಕಂಟೇನ್ಮೆಂಟ್, ಪರಿಹಾರ ಪ್ಯಾಕೇಜ್ ಹಾಗೂ ಲಸಿಕೆ ವಿತರಣೆ ಎಂಬುದು ಭಾರತದ ಕೋವಿಡ್ ತಂತ್ರಗಾರಿಕೆಯಲ್ಲಿ ಮಹತ್ವದ ಮೈಲಿಗಲ್ಲುಗಳಾಗಿವೆ. ಕೋವಿಡ್ ಪ್ರಸರಣ ತಡೆದು ಆರ್ಥಿಕ ಚಟುವಟಿಕೆ ನಡೆಯುವಂತೆ ನೋಡಿಕೊಂಡು, ಜನರ ಜೀವ ಉಳಿಸುವಲ್ಲಿ ಈ ಮೂರೂ ಕ್ರಮಗಳು ಮಹತ್ವದ್ದಾಗಿವೆ ಎಂದು ವರದಿ ತಿಳಿಸಿದೆ.
ನವದೆಹಲಿ (ಫೆಬ್ರವರಿ 25, 2023): ಕೊರೋನಾ ವೈರಸ್ ಹಾವಳಿಯಿಂದ ದೇಶವಾಸಿಗಳನ್ನು ರಕ್ಷಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಂಡುಕೇಳರಿಯದ ರೀತಿ ಕೈಗೊಂಡ ಕೋವಿಡ್ ಲಸಿಕಾ ಅಭಿಯಾನದಿಂದ ಬರೋಬ್ಬರಿ 34 ಲಕ್ಷ ಜನರ ಜೀವ ಉಳಿದಿದೆ ಎಂದು ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ವರದಿಯೊಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತಕ್ಕೆ ಆಗಲಿದ್ದ 1.5 ಲಕ್ಷ ಕೋಟಿ ರೂ. ನಷ್ಟ (ದುಡಿಯುವ ವ್ಯಕ್ತಿಗಳ ಸಾವಿನಿಂದ) ಕೂಡ ಕೋವಿಡ್ ಲಸಿಕಾ ಅಭಿಯಾನದಿಂದ ತಪ್ಪಿದ್ದು, ಇದರಿಂದ ಧನಾತ್ಮಕ ಆರ್ಥಿಕ ಪರಿಣಾಮವಾಗಿದೆ ಎಂದು ಹೇಳಿದೆ. ಭಾರತ ಕೋವಿಡ್ ನಿಗ್ರಹಕ್ಕೆ ಕೈಗೊಂಡ ಕ್ರಮಗಳ ಬಗ್ಗೆಯೂ ‘ಆರ್ಥಿಕತೆಗೆ ಚಿಕಿತ್ಸೆ: ಭಾರತದ ಕೋವಿಡ್ ಲಸಿಕೆ ಹಾಗೂ ಇನ್ನಿತರೆ ವಿಷಯಗಳಿಂದ ಆರ್ಥಿಕತೆ ಮೇಲಾದ ಪರಿಣಾಮಗಳ ಅಂದಾಜು’ ಎಂಬ ವರದಿಯಲ್ಲಿ ಪ್ರಶಂಸೆ ವ್ಯಕ್ತಪಡಿಸಿದೆ. ಈ ವರದಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಶುಕ್ರವಾರ ಬಿಡುಗಡೆ ಮಾಡಿದರು.
ವೈರಾಣುವಿನ (Virus) ಪ್ರಸರಣ ತಡೆಯಲು ಕಂಟೇನ್ಮೆಂಟ್ (Containment) ಎಂಬುದನ್ನು ಒಂದು ಕ್ರಮವಾಗಿ ಬಳಸಿದ ಪಾತ್ರದ ಕುರಿತೂ ವರದಿಯಲ್ಲಿ ಚರ್ಚಿಸಲಾಗಿದೆ. ಸೋಂಕಿತರ ಪತ್ತೆ, ಸಮೂಹ ಪರೀಕ್ಷೆ, ಹೋಮ್ ಕ್ವಾರಂಟೈನ್ (Home Quarantine), ಅಗತ್ಯ ವೈದ್ಯಕೀಯ ಉಪಕರಣಗಳ ವಿತರಣೆ, ಆರೋಗ್ಯ ಮೂಲಸೌಕರ್ಯದ ಪುನಶ್ಚೇತನ, ಕೇಂದ್ರ, ರಾಜ್ಯ, ಜಿಲ್ಲೆಗಳ ಹಂತದಲ್ಲಿ ನಿರಂತರ ಸಮನ್ವಯತೆಯಂತಹ ಕ್ರಮಗಳು ವೈರಾಣು ಪ್ರಸರಣ ನಿಗ್ರಹ ಮಾಡಿದ್ದೇ ಅಲ್ಲದೆ, ಆರೋಗ್ಯ ಮೂಲಸೌಕರ್ಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದೆ.
ಕಂಟೇನ್ಮೆಂಟ್, ಪರಿಹಾರ ಪ್ಯಾಕೇಜ್ (Relief Package) ಹಾಗೂ ಲಸಿಕೆ (Vaccine) ವಿತರಣೆ ಎಂಬುದು ಭಾರತದ ಕೋವಿಡ್ ತಂತ್ರಗಾರಿಕೆಯಲ್ಲಿ ಮಹತ್ವದ ಮೈಲಿಗಲ್ಲುಗಳಾಗಿವೆ. ಕೋವಿಡ್ ಪ್ರಸರಣ ತಡೆದು ಆರ್ಥಿಕ ಚಟುವಟಿಕೆ (Economic Activity) ನಡೆಯುವಂತೆ ನೋಡಿಕೊಂಡು, ಜನರ ಜೀವ ಉಳಿಸುವಲ್ಲಿ ಈ ಮೂರೂ ಕ್ರಮಗಳು ಮಹತ್ವದ್ದಾಗಿವೆ ಎಂದು ತಿಳಿಸಿದೆ.
ಇದನ್ನು ಓದಿ: ವಿದೇಶಿ ಲಸಿಕೆ ಫೈಜರ್ ಖರೀದಿಗೆ ವಿಪಕ್ಷ ಒತ್ತಡ ಹೇರಿತ್ತು: ರಾಜೀವ್ ಚಂದ್ರಶೇಖರ್
ವರದಿಯಲ್ಲೇನಿದೆ..?
ಇದನ್ನೂ ಓದಿ: ವಿಶ್ವ ಆರ್ಥಿಕ ಪ್ರಗತಿಯಲ್ಲಿ ಭಾರತದ ಪಾಲು ಶೇ. 15: ಐಎಂಎಫ್ ಮೆಚ್ಚುಗೆ; ಕೇಂದ್ರ ಬಜೆಟ್‌ಗೂ ಶ್ಲಾಘನೆ