ವಯನಾಡಲ್ಲಿ 24 ಗಂಟೆಯೊಳಗೆ ಸೇತುವೆ ನಿರ್ಮಿಸಿದ ಭಾರತೀಯ ಸೇನೆ: ಮೇಲುಸ್ತುವಾರಿ ವಹಿಸಿದ್ದು ಮಹಿಳಾ ಮೇಜರ್

By Anusha Kb  |  First Published Aug 2, 2024, 2:08 PM IST

ಪ್ರವಾಹ ಪೀಡಿತ ವಯನಾಡಿನಲ್ಲಿ ಭಾರತೀಯ ಸೇನೆ 24 ಗಂಟೆಯೊಳಗೆ ರಕ್ಷಣಾ ಕಾರ್ಯಾಚರಣೆಗಾಗಿ ಬೃಹತ್ ಆದ ಸೇತುವೆಯನ್ನು ನಿರ್ಮಿಸಿದ್ದು, ಇದರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಆದರೆ ಈ ಸೇತುವೆ ನಿರ್ಮಾಣ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದ್ದು, ಓರ್ವ ಸೇನೆಯ ಮಹಿಳಾ ಮೇಜರ್ ಎಂಬುದು ಇಲ್ಲಿ ವಿಶೇಷವಾಗಿದೆ.


ವಯನಾಡು: ಪ್ರವಾಹ ಪೀಡಿತ ವಯನಾಡಿನಲ್ಲಿ ಭಾರತೀಯ ಸೇನೆ 24 ಗಂಟೆಯೊಳಗೆ ರಕ್ಷಣಾ ಕಾರ್ಯಾಚರಣೆಗಾಗಿ ಬೃಹತ್ ಆದ ಸೇತುವೆಯನ್ನು ನಿರ್ಮಿಸಿದ್ದು, ಇದರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಭಾರತೀಯ ಸೇನೆಯ ಈ ಸಾಮರ್ಥ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಆದರೆ ಈ ಸೇತುವೆ ನಿರ್ಮಾಣ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದ್ದು, ಓರ್ವ ಸೇನೆಯ ಮಹಿಳಾ ಮೇಜರ್ ಎಂಬುದು ಇಲ್ಲಿ ವಿಶೇಷವಾಗಿದೆ.  ಈ ಕಾರ್ಯಾಚರಣೆಯಲ್ಲಿ ಸೇನೆಯ ಮಹಿಳಾ ಮೇಜರ್ ಸೀತಾ ಅಶೋಕ್ ಸೇಲ್ಕೆ ಅವರು ಭಾಗವಹಿಸಿದ್ದು, ಅವರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.  

ಪ್ರವಾಹದ ನಂತರ ವಯನಾಡಿನ ಮುಂಡಕೈನಲ್ಲಿ ಸೇನೆಯಿಂದ ನಿರ್ಮಾಣವಾದ ಬೈಲೆ ಸೇತುವೆ ನಿರ್ಮಾಣದ ಮೇಲುಸ್ತುವಾರಿಯನ್ನು ಇವರು ವಹಿಸಿದ್ದರು ಎಂದು ತಿಳಿದು ಬಂದಿದೆ. ಅವರು ಸೇತುವೆ ನಿರ್ಮಾಣದ ನಂತರ ಸೇತುವೆಯ ಮೇಲೆ ನಿಂತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಈ ಸೀತಾ ಅಶೋಕ್ ಶೆಲ್ಕೆ ಅವರು 2012ರಲ್ಲಿ ಸೇನೆ ಸೇರಿದ್ದು, ಮೂಲತ ಮಹಾರಾಷ್ಟ್ರದ ಅಹ್ಮದ್‌ನಗರದ ಪರ್ನೇರ್ ತಾಲೂಕಿನ ಗಡಿಲ್ಗಾವ್ ಎಂಬ ಹೆಚ್ಚೆಂದರೆ 600ರಷ್ಟು ಜನಸಂಖ್ಯೆ ಇರುವ ಪುಟ್ಟ ಹಳ್ಳಿಯವರು. ವಕೀಲ ಅಶೋಕ್ ಬಿಖಜಿ ಶೆಲ್ಕೆ ಅವರ ನಾಲ್ವರು ಮಕ್ಕಳಲ್ಲಿ ಒಬ್ಬರಾದ  ಸೀತಾ ಶೆಲ್ಕೆ  ಅಹ್ಮದ್‌ನಗರದ ಲೋನಿಯಲ್ಲರುವ ಪರ್ವರ ಗ್ರಾಮೀಣ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದು, ಬಳಿಕ ಸೇನೆಗೆ ಸೇರಿದರು. 

Tap to resize

Latest Videos

ವಯನಾಡು ಮರಣ ಮೃದಂಗ: ಜವರಾಯನ ವಾಹನದಂತೆ ಕಂಡ ಸಾಲು ಸಾಲು ಆಂಬುಲೆನ್ಸ್‌ಗಳು

ಮೂಲತಃ ಐಪಿಎಸ್ ಅಧಿಕಾರಿಯಾಗಬೇಕು ಎಂಬ ಕನಸು ಕಂಡಿದ್ದ ಸೀತಾ ಅಶೋಕ್ ಶೆಲ್ಕೆ ಮಾರ್ಗದರ್ಶನದ ಕೊರತೆಯಿಂದಾಗಿ ತಮ್ಮ ಗಮನವನ್ನು ಭಾರತೀಯ ಸೇನೆ ಸೇರುವತ್ತ ಗಮನ ಹರಿಸಿದರು. ಎಸ್‌ಎಸ್‌ಬಿ ಪರೀಕ್ಷೆಯಲ್ಲಿ ಎರಡು ಬಾರಿ ಮೊದಲಿಗೆ ಪಾಸಾಗಲು ವಿಫಲವಾದರೂ ಧೃತಿಗೆಡದೇ ಮತ್ತೆ ತಮ್ಮ ಪ್ರಯತ್ನ ಮುಂದುವರೆಸಿದ್ದು, 3ನೇ ಯತ್ನದಲ್ಲಿ ಅವರು ತೇರ್ಗಡೆ ಹೊಂದಿ ಸೇನೆ ಸೇರಿದರು. 

Wayanad Landslide: 'ಇಲ್ಲಿಂದ ಓಡಿಹೋಗ್ಬೇಕು ಅನಸ್ತಿದೆ..' ಪೋಸ್ಟ್‌ಮಾರ್ಟಂ ಮಾಡಿ ವೈದ್ಯರೇ ಸುಸ್ತು!

ಚೆನ್ನೈನಲ್ಲಿ ಅಧಿಕಾರಿಗಳ ತರಬೇತಿ ಕೇಂದ್ರದಲ್ಲಿ(Officers Training Academy) ತರಬೇತಿ ಮುಗಿಸಿದ ಸೀತಾ ಅವರು ವೃತ್ತಿಯಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸುತ್ತಾ ಹೋದರು. ಸೇನೆಗೆ ಸೇರುವಲ್ಲಿ ತಮ್ಮ ಕನಸಿಗೆ  ಬೆನ್ನಾಗಿ ನಿಂತ ಪೋಷಕರಿಗೆ ಧನ್ಯವಾದ ಹೇಳುತ್ತಾರೆ. ಪ್ರಸ್ತುತ ಈಗ ವಯನಾಡಿನಲ್ಲಿ ನಡೆದ ಪ್ರವಾಹ ದುರಂತದ ಬಳಿಕ ನಿರ್ಮಾಣವಾದ ಬೈಲೇ ಸೇತುವೆ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಆರ್ಮಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನ 250 ಸೈನಿಕರ ತಂಡವನ್ನು ಮುನ್ನಡೆಸಿದ್ದಾರೆ.

ಕೇರಳದ ಭೀಕರ ಭೂಕುಸಿತದ ಉಪಗ್ರಹ ಚಿತ್ರ ಇಸ್ರೋ ಬಿಡುಗಡೆ : ವಯನಾಡ್‌ನಲ್ಲಿ ಕುಸಿದದ್ದು ಬರೊಬ್ಬರಿ 21 ಎಕರೆಯ ದೊಡ್ಡ ಗುಡ್ಡ!

ಹಗಲು ರಾತ್ರಿ ಎನ್ನದೇ ಅವಿರತ ಪ್ರಯತ್ನಗಳ ನಂತರ, ಸೇನೆಯು 190 ಅಡಿ ಉದ್ದದ ಈ ಉಕ್ಕಿನ ಸೇತುವೆಯನ್ನು ಯಶಸ್ವಿಯಾಗಿ ನಿರ್ಮಿಸಿದೆ.  ಭಾರೀ ಮಳೆ ಮತ್ತು ಪ್ರವಾಹವನ್ನು ತಡೆದುಕೊಳ್ಳುವಂತೆ ಈ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾದ ವಾಹನಗಳು ಹೊಸದಾಗಿ ನಿರ್ಮಿಸಲಾದ ಈ ಸೇತುವೆಯನ್ನು ದಾಟಲು ಪ್ರಾರಂಭಿಸಿದಾಗ ಸ್ಥಳೀಯ ಸಮುದಾಯ ಹಾಗೂ ಸೇತುವೆ ನಿರ್ಮಾಣದಲ್ಲಿ ಭಾಗಿಯಾದ ಯೋಧರು ನಿಟ್ಟುಸಿರುಬಿಟ್ಟಿದ್ದಾರೆ.

ನಿಜವಾಯ್ತು ಮಾನಸಿಕ ಅಸ್ವಸ್ಥನ ಭೂಕುಸಿತ ದುರಂತ ಭವಿಷ್ಯ, ವರ್ಷದ ಹಿಂದಿನ ವಿಡಿಯೋ ವೈರಲ್!

 



Within 36 hours Indian Army opened Bailey Bridge at Wayanad

And connected people who got alienated by the landslide

Salute to Indian Army ⟬⟭💜 pic.twitter.com/798lI12j31

— Veena Jain (@DrJain21)

 

click me!