ನವದೆಹಲಿ(ಅ.27): ಭಾರತ ರಕ್ಷಣಾ ಕ್ಷೇತ್ರ(Indian Military) ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಬರೋಬ್ಬರಿ 5,000 ಕಿಲೋಮೀಟರ್ ದೂರದ ಗುರಿಯನ್ನು ಅತ್ಯಂತ ನಿಖರವಾಗಿ ಹೊಡೆದುರುಳಿಸಬಲ್ಲ ಅಗ್ನಿ V ಕ್ಷಿಪಣಿ(Agni V missile) ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ಮಾಡಿದೆ. 3 ಹಂತದ ಘನ ಇಂಧನ ಎಂಜಿನ್ ಹೊಂದಿರುವ ಈ ಬ್ಯಾಲಿಸ್ಟಿಕ್ ಮಿಸೈಲ್‌ನ್ನು ಒಡಿಶಾದ ಬಾಲಸೋರ್‌ನಲ್ಲಿರುವ ಎಪಿಜೆ ಅಬ್ದುಲ್ ಕಲಾಂ(APJ Abdul Kalam) ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗಿದೆ.
ಚೀನಾದಿಂದ ಇಡೀ ಭೂಮಿ ಸುತ್ತಬಲ್ಲ ಶಬ್ದಾತೀತ ಕ್ಷಿಪಣಿ ಪರೀಕ್ಷೆ?
ಇಂದು (ಅ.27) ಸಂಜೆ 7.30ಕ್ಕೆ ಪರೀಕ್ಷೆ ನಡೆಸಲಾಗಿದೆ. ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್(DRDO) ಅಭಿವೃದ್ಧಿ ಪಡಿಸಿರುವ ಈ ಕ್ಷಿಪಣಿ ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಿದೆ. ಭಾರತ ಅಭಿವೃದ್ಧಿ ಪಡಿಸಿದ ಈ ಕ್ಷಿಪಣಿ ಪ್ರಾಥಮಿಕವಾಗಿ ಚೀನಾದ ವಿರುದ್ಧ ಭಾರತ ಪರಮಾಣು ನಿರೋಧಕತೆಯನ್ನು ಹೆಚ್ಚಿಸಲಿದೆ. ಅಗ್ನಿ V ಕ್ಷಿಪಣಿ 50 ಟ್ ತೂಕ ಹೊಂದಿದೆ. 1.5 ಟನ್‌ಗಳ ಪೇಲೋಡ್ ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ.
ಅಗ್ನಿ V ಕ್ಷಿಪಣಿ ವಿಶೇಷತೆ ಏನಂದರೆ, ಚೀನಾ, ಏಷ್ಯಾ , ಯುರೋಪ್ ಮತ್ತು ಆಫ್ರಿಕಾದ ಭಾಗಗಳನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಭಾರತದ ಅಗ್ನಿ ವಿ ಕ್ಷಿಪಣಿ ಪರೀಕ್ಷೆ ಇತರ ದೇಶಗಳಲ್ಲಿ ನಡುಕ ಹುಟ್ಟಿಸಿದೆ. ಸದ್ಯ ಭಾರತದ 500, ಒಂದು ಸಾವಿರ, 2,000 ಹಾಗೂ 3,000 ಕಿ.ಮೀ ಗುರಿ ಸಾಮರ್ಥ್ಯದ ಕ್ಷಿಪಣಿ ಹೊಂದಿದೆ. ಆದರೆ ಇದೇ ಮೊದಲ ಬಾರಿಗೆ 5,000 ಕಿಲೋಮೀಟರ್ ದೂರ ಸಾಮರ್ಥ್ಯದ ಮಿಸೈಲ್ ಭಾರತ ಅಭಿವೃದ್ಧಿ ಪಡಿಸಿರುವುದು ಹೆಮ್ಮೆಯ ವಿಚಾರವಾಗಿದೆ.
ಕ್ರಿಕೆಟ್ ಆಡುವಾಗ ಸಿಕ್ಕಿತು 8 ಕೆಜಿ ತೂಕದ ಕ್ಷಿಪಣಿ: ಬಾಂಬ್ ನಿಷ್ಕ್ರಿಯ ದಳಕ್ಕೆ ಹಸ್ತಾಂತರ!
5,000 ಕಿ.ಲೋ ಮೀಟರ್ ಗುರಿ ಸಾಮರ್ಥ್ಯ ಹೊಂದಿರುವ ಕ್ಷಿಪಣಿ ಹೊಂದಿರುವ 8 ನೇ ದೇಶ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಅಮೆರಿಕ, ಯುಕೆ, ರಷ್ಯಾ ,ಚೀನಾ, ಫ್ರಾನ್ಸ್, ಇಸ್ರೇಲ್ ಮತ್ತು ಉತ್ತರ ಕೊರಿಯಾ ಬಳಿಕ ಇದೀಗ ಖಂಡಾಂತರ ಕ್ಷಿಪಣಿ ಸಾಮರ್ಥ್ಯ ಹೊಂದಿರುವ ದೇಶವಾಗಿದೆ. ಭಾರತ ಈಗಾಗಲೇ ಅಗ್ನಿ III ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಇದರ ಸಾಮರ್ಥ್ 3,000 ಕಿ.ಮೀ ಯಿಂದ 5,000 ಕಿ.ಮೀ ವ್ಯಾಪ್ತಿ ಹೊಂದಿದೆ.
ಜೂನ್ ತಿಂಗಳಲ್ಲಿ ಭಾರತ ಅಗ್ನಿ ಪ್ರೈಮ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಅಗ್ನಿ ಪ್ರೈಮ್ 2,000 ಗುರಿ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯನ್ನು ಡಿಆರ್‌ಡಿಓ ಅಭಿವೃದ್ಧಿಪಡಿಸಿದೆ. ಅಗ್ನಿ ಪ್ರೈಮ್ ಸುಧಾರಿತ ಕ್ಷಿಪಣಿಯಾಗಿದ್ದು, 1,000 ದಿಂದ 2,000 ಕಿಲೋಮೀಟರ್ ಸಾಮರ್ಥ್ಯ ಹೊಂದಿದೆ.
ಫೆಬ್ರವರಿ ತಿಂಗಳಲ್ಲಿ DRDO ಅಭಿವೃದ್ಧಿ ಪಡಿಸಿದ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿತ್ತು. ಇದರ ವಿಶೇಷ ಅಂದರೆ ಚಲಿಸುತ್ತಿರುವ ಗುರಿ ವಿರುದ್ಧ ನಿಖರವಾಗಿ ಪ್ರಯೋಗಿಸಬಲ್ಲ ಕ್ಷಿಪಣಿ ಇದಾಗಿದೆ. ಸೇನಾ ವಿಮಾನ, ಹೆಲಿಕಾಪ್ಟರ್ ಮೂಲಕ ಈ ಆ್ಯಂಟಿ ಟ್ಯಾಂಕ್ ಮಿಸೈಲ್ ಬಳಕೆ ಮಾಡಲಾಗುತ್ತದೆ.
DRDO ಸ್ವದೇಶಿ ನಿರ್ಮಿತಿ ಮಿಸೈಲ್ ಜೊತೆಗೆ ಭಾರತ ಇಸ್ರೇಲ್ ಜೊತೆ ಜಂಟಿಯಾಗಿ ಕೆಲ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಿದೆ. ಭಾರತ ಹಾಗೂ ಇಸ್ರೇಲ್ ಅಭಿವೃದ್ಧಿ ಪಡಿಸಿದ ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ ಜನವರಿಯಲ್ಲಿ ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ. ಡಿಜಿಟಲ್ ಎಂಎಂಆರ್ ರೇಡಾರ್ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಎಂಆರ್‌ಎಸ್‌ಎಎಂ ಪ್ರತಿಬಂಧಕವನ್ನು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು.