Republic Day: ಇತಿಹಾಸ, ಪ್ರಾಮುಖ್ಯತೆ ಏನು? ಆಚರಣೆ ಯಾಕೆ ಮಾಡುತ್ತಾರೆ?

By Suvarna News  |  First Published Jan 21, 2022, 9:57 AM IST

* 72 ನೇ ಗಣರಾಜ್ಯೋತ್ಸವ ಆಚರಣೆಯ ಸಿದ್ಧತೆಯಲ್ಲಿದೆ ಭಾರತ

* ಗಣರಾಜ್ಯೋತ್ಸವ ಆಚರಣೆ ಮಾಡೋದೇಕೆ? ಪ್ರಾಮುಖ್ಯತೆ ಏನು?

* ಬೀಟಿಂಗ್ ದಿ ರಿಟ್ರೀಟ್ ಮೂಲಕ ಔಪಚಾರಿಕವಾಗಿ ಗಣರಾಜ್ಯ ಸಂಭ್ರಮ ಅಂತ್ಯ


ನವದೆಹಲಿ(ಜ.21): ಪ್ರತಿ ವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವವನ್ನು ಬಹಳಷ್ಟು ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಆಚರಿಸಲಾಗುತ್ತದೆ. ನವದೆಹಲಿಯ ಜನಪಥ್‌ನಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯನ್ನೊಳಗೊಂಡ ಅದ್ಭುತ ಪರೇಡ್ ಮತ್ತು ದೇಶದ ಮೂಲೆ ಮೂಲೆಯಲ್ಲೂ ನಡೆಯುವ ರಾಷ್ಟ್ರ ಧ್ವಜಾರೋಹಣವು ಈ ದಿನದಂದು ಅನುಸರಿಸುವ ಸಾಮಾನ್ಯ ವಿಚಾರಗಳಾಗಿವೆ. ಇನ್ನು1965 ರಲ್ಲಿ ಹಿಂದಿಯನ್ನು ಭಾರತದ ಅಧಿಕೃತ ಭಾಷೆಯಾಗಿ ಘೋಷಿಸಿದ್ದು. ಇನ್ನು ಈ ವರ್ಷ ನಾವು  72 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. 

ಗಣರಾಜ್ಯೋತ್ಸವದ ಮಹತ್ವ

Tap to resize

Latest Videos

undefined

ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಂತರ, ಡಾ.ಬಿ.ಆರ್. ಅಂಬೇಡ್ಕರ್ ರವರ ನೇತೃತ್ವದ ಕರಡು ಸಮಿತಿಯು ಹೊಸ ಸಂವಿಧಾನವನ್ನು ರಚಿಸಿತು. ಭಾರತೀಯ ಸಂವಿಧಾನವು 26 ಜನವರಿ 1950 ರಂದು ಜಾರಿಗೆ ಬಂದಿತು, ಇದು ಭಾರತವನ್ನು ಸ್ವತಂತ್ರ ಗಣರಾಜ್ಯವೆಂದು ಘೋಷಿಸಿತು. 1930 ರಲ್ಲಿ ಈ ದಿನದಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯದ ಘೋಷಣೆಯಾದ ಪೂರ್ಣ ಸ್ವರಾಜ್ ಅನ್ನು ಪಡೆದ ಕಾರಣ ಜನವರಿ 26 ಅನ್ನು ದಿನಾಂಕವಾಗಿ ಆಯ್ಕೆ ಮಾಡಲಾಯಿತು.

75 ವರ್ಷದಲ್ಲಿ ಮೊದಲ ಬಾರಿ, 30 ನಿಮಿಷ ತಡವಾಗಿ ಆರಂಭವಾಗುತ್ತೆ Republic Day ಪರೇಡ್!

ಗಣರಾಜ್ಯೋತ್ಸವವು ಸ್ವತಂತ್ರ ಮತ್ತು ವೈಯಕ್ತಿಕ ಭಾರತದ ಮನೋಭಾವವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಪ್ರಮುಖವಾಗಿ ಮಿಲಿಟರಿ ಉಪಕರಣಗಳ ಪ್ರದರ್ಶನ, ರಾಷ್ಟ್ರಧ್ವಜ ಅನಾವರಣವಾಗಿದೆ.

ಆಚರಣೆ ಹೇಗೆ?

ಗಣರಾಜ್ಯೋತ್ಸವವನ್ನು ಭಾರತದಾದ್ಯಂತ ಬಹಳ ಸಡಗರದಿಂದ ಆಚರಿಸಲಾಗುತ್ತದೆ. ಇದು ಸ್ವತಂತ್ರ ಭಾರತದ ಸಂವಿಧಾನವನ್ನು ಗೌರವಿಸುವ ದಿನ. ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಧ್ವಜಾರೋಹಣ ನಡೆಯುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಪ್ರತಿಪಾದಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತವೆ. ನವದೆಹಲಿಯಲ್ಲಿ, ಇಂಡಿಯಾ ಗೇಟ್‌ನಲ್ಲಿ ಭಾರತದ ರಾಷ್ಟ್ರಪತಿಗಳಿಂದ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಪರೇಡ್‌ಗಳ ವೈಭವವು ನವದೆಹಲಿಯ ರಾಜ್‌ಪಥ್‌ನಲ್ಲಿ ನಡೆಯುತ್ತದೆ. ಪರೇಡ್ ಅನ್ನು ಭಾರತೀಯ ಅಧ್ಯಕ್ಷರು ನಡೆಸುತ್ತಾರೆ ಮತ್ತು ರಕ್ಷಣಾ ಸಚಿವಾಲಯವು ಆಯೋಜಿಸುತ್ತದೆ. ಈ ದಿನ ಭಾರತ ತನ್ನ ಮಿಲಿಟರಿ ಪರಾಕ್ರಮವನ್ನು ಪ್ರದರ್ಶಿಸುವುದಲ್ಲದೆ, ಇಲ್ಲಿನ ವೈವಿಧ್ಯಮಯ ಸಂಸ್ಕೃತಿಯ ಅನಾವರಣವೂ ಆಗುತ್ತದೆ. ಈ ಕಾರ್ಯಕ್ರಮದ ಮೂಲಕ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ನೀಡಲಾಗುತ್ತದೆ. ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಗೆ ರಿಂಗ್ಲೆಟ್ ಹಾಕುವ ಮೂಲಕ ಭಾರತದ ಪ್ರಧಾನಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ಬಳಿಕ 21-ಗನ್ ಸೆಲ್ಯೂಟ್, ರಾಷ್ಟ್ರಧ್ವಜಾರೋಹಣ ಮತ್ತು ರಾಷ್ಟ್ರಗೀತೆಯನ್ನು ಹೆಮ್ಮೆಯಿಂದ ಹಾಡಲಾಗುತ್ತದೆ. ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ ಮತ್ತು ವೀರ ಚಕ್ರದ ರೂಪದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಆಪತ್ಕಾಲದಲ್ಲಿ ಧೈರ್ಯ ತೋರಿದ ಮಕ್ಕಳು ಮತ್ತು ಸಾಮಾನ್ಯ ನಾಗರಿಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

Republic Day Tableau: ಆಯ್ಕೆ ಹೇಗೆ.? ತಿರಸ್ಕಾರಕ್ಕೆ ಕಾರಣಗಳು ಏನೇನು?

ಶೌರ್ಯ ಪ್ರಶಸ್ತಿಗಳ ವಿಜೇತರು ಮಿಲಿಟರಿ ಜೀಪ್‌ಗಳಲ್ಲಿ ರಾಷ್ಟ್ರಪತಿಗೆ ಸೆಲ್ಯೂಟ್ ಮಾಡುತ್ತಾರೆ. ಇದರ ನಂತರ ಭಾರತವು ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುತ್ತದೆ. ಸಶಸ್ತ್ರ ಪಡೆಗಳು, ಪೊಲೀಸ್ ಮತ್ತು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನಿಂದ ಪಥಸಂಚಲನ ಸೇರಿದಂತೆ ವಿವಿಧ ರೆಜಿಮೆಂಟ್‌ಗಳಿಂದ ಭಾರತದ ಪ್ರಥಮ ಪ್ರಜೆ, ರಾಷ್ಟ್ರಪತಿ ಗೌರವ ವಂದನೆ ಸ್ವೀಕರಿಸುತ್ತಾರೆ. ಭಾರತೀಯ ವಾಯುಪಡೆಯ ಫೈಟರ್ ಜೆಟ್‌ಗಳು ಜನಪಥ್‌ನಲ್ಲಿ ಹಾರಾಟ ನಡೆಸಿ ಪರಾಕ್ರಮ ಪ್ರದರ್ಶಿಸುವ ಮೂಲಕ ಮೆರವಣಿಗೆ ಕೊನೆಗೊಳ್ಳುತ್ತದೆ. ಈ ಆಚರಣೆಯು ದೇಶದಾದ್ಯಂತ ನಡೆಯುತ್ತದೆ, ಆದಾಗ್ಯೂ, ದೆಹಲಿಯು ಭಾರತದ ರಾಜಧಾನಿಯಾಗಿದ್ದು, ಗಣರಾಜ್ಯೋತ್ಸವದ ಅತಿದೊಡ್ಡ ಆಚರಣೆಗೆ ಸಾಕ್ಷಿಯಾಗಿದೆ. ಗಣರಾಜ್ಯೋತ್ಸವದ ಪರೇಡ್‌ನ ಲೈವ್ ವೆಬ್‌ಕಾಸ್ಟ್ ಕೂಡಾ ಮಾಡಲಾಗುತ್ತದೆ. ಈ ಮೂಲಕ ಪ್ರತಿ ವರ್ಷ ಆಕರ್ಷಕ ಪರೇಡ್‌ ವೀಕ್ಷಿಸಲು ಬಯಸುವ ಲಕ್ಷಾಂತರ ಜನರು ಇಂಟರ್ನೆಟ್‌ ಮೂಲಕ ನೋಡಬಹುದಾಗಿದೆ. ಕಾರ್ಯಕಗ್ರಮ ಮುಗಿದ ನಂತರ, ವಿಶೇಷ ತುಣುಕನ್ನು 'ವಿಡಿಯೋ ಆನ್ ಡಿಮ್ಯಾಂಡ್' ಎಂದು ಪಡೆಯಬಹುದಾಗಿದೆ. ಆಚರಣೆಗಳು ತುಲನಾತ್ಮಕವಾಗಿ ಚಿಕ್ಕದಾದರೂ, ಎಲ್ಲಾ ರಾಜ್ಯ ರಾಜಧಾನಿಗಳಲ್ಲಿಯೂ ಸಹ ನಡೆಯುತ್ತದೆ, ಅಲ್ಲಿ ರಾಜ್ಯದ ರಾಜ್ಯಪಾಲರು ಧ್ವಜಾರೋಹಣ ಮಾಡುತ್ತಾರೆ. ಜಿಲ್ಲಾ ಕೇಂದ್ರಗಳು, ಉಪವಿಭಾಗಗಳು, ತಾಲೂಕುಗಳು ಮತ್ತು ಪಂಚಾಯತ್‌ಗಳಲ್ಲಿಯೂ ಇದೇ ಆಚರಣೆಗಳನ್ನು ನಡೆಸಲಾಗುತ್ತದೆ.

Republic Day Karnataka Tableau: ಈ ಬಾರಿ ಸ್ತಬ್ಧಚಿತ್ರದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಚಿತ್ರಣ

ಎಲ್ಲಾ ಆಚರಣೆಗಳು ಮುಗಿದ ಬಳಿಕ ನಂತರ ಬೀಟಿಂಗ್ ದಿ ರಿಟ್ರೀಟ್ ನಡೆಯುತ್ತದೆ ಇದು ಅಧಿಕೃತವಾಗಿ ಗಣರಾಜ್ಯೋತ್ಸವ ಆಚರಣೆ ಅಂತ್ಯವಾಗುವುದನ್ನು ಸೂಚಿಸುತ್ತದೆ. 26 ರಿಂದ 29 ರ ವರೆಗೆ ಪ್ರತಿದಿನ ಸಂಜೆ ಎಲ್ಲಾ ಪ್ರಮುಖ ಸರ್ಕಾರಿ ಕಟ್ಟಡಗಳು ದೀಪಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟಿರುತ್ತವೆ. ಗಣರಾಜ್ಯೋತ್ಸವದ ನಂತರ ಮೂರನೇ ದಿನವಾದ ಜನವರಿ 29 ರ ಸಂಜೆ ಬೀಟಿಂಗ್ ದಿ ರಿಟ್ರೀಟ್ ಸಮಾರಂಭವನ್ನು ನಡೆಸಲಾಗುತ್ತದೆ. ಡ್ರಮ್ಮರ್‌ಗಳು ಏಕವ್ಯಕ್ತಿ ಪ್ರದರ್ಶನವನ್ನು ಸಹ ನೀಡುತ್ತಾರೆ. ಬ್ಯಾಂಡ್‌ಗಳು ಜನಪ್ರಿಯ ಮಾರ್ಷಲ್ ಟ್ಯೂನ್ ಸಾರೆ ಜಹಾನ್ ಸೆ ಅಚ್ಚಾವನ್ನು ನುಡಿಸುತ್ತವೆ. ಸರಿಯಾಗಿ ಸಂಜೆ 6 ಗಂಟೆಗೆ, ರಾಷ್ಟ್ರಧ್ವಜವನ್ನು ಇಳಿಸಲಾಗುತ್ತದೆ ಮತ್ತು ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ, ಗಣರಾಜ್ಯೋತ್ಸವವನ್ನು ಔಪಚಾರಿಕ ಅಂತ್ಯಗೊಳಿಸಲಾಗುತ್ತದೆ. .

click me!