ಮಣಿಪುರ ಹಿಂಸಾಚಾರ: ಮ್ಯಾನ್ಮಾರ್‌ ಜತೆ ಗಡಿ ಶಾಂತಿ, ಭದ್ರತೆ ವಿಚಾರವಾಗಿ ಮಾತುಕತೆ ನಡೆಸಿದ ಕೇಂದ್ರ ಸರ್ಕಾರ

By BK Ashwin  |  First Published Jul 2, 2023, 11:23 AM IST

ಭಾರತ ಮತ್ತು ಮ್ಯಾನ್ಮಾರ್ ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡುವುದು ಮತ್ತು ಅಕ್ರಮ ಗಡಿಯಾಚೆಗಿನ ಚಲನೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿವೆ.


ದೆಹಲಿ (ಜುಲೈ 2, 2023): ಮಣಿಪುರದಲ್ಲಿ ಹಿಂಸಾಚಾರ ಆಗಾಗ್ಗೆ ವರದಿಯಾಗುತ್ತಲೇ ಇದೆ. ಇನ್ನೇನು ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತದೆ ಎಂಬ ವರದಿ ಕೇಳಿಬಂದ ಬಳಿಕ ಮತ್ತೆ ಹಿಂಸಾಚಾರ ನಡೆಯುತ್ತಿದೆ. ಇನ್ನು, ಈ ಹಿಂಸಾಚಾರದಲ್ಲಿ ಮ್ಯಾನ್ಮಾರ್‌ ಕೈವಾಡ ಇರಬಹುದು ಅಥವಾ ಅಲ್ಲಿಂದ ಶಸ್ತ್ರಾಸ್ತ್ರ ರವಾನೆಯಾಗುತ್ತಿರುವ ವರದಿಯೂ ಕೇಳಿಬರುತ್ತಿದೆ. ಈ ಹಿನ್ನೆಲೆ ಭಾರತ ಮತ್ತು ಮ್ಯಾನ್ಮಾರ್ ನಡುವೆ ಹಲವು ವಿಚಾರವಾಗಿ ಮಾತುಕತೆ ನಡೆದಿದೆ.

ಭಾರತ ಮತ್ತು ಮ್ಯಾನ್ಮಾರ್ ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡುವುದು ಮತ್ತು ಅಕ್ರಮ ಗಡಿಯಾಚೆಗಿನ ಚಲನೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿವೆ. ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಅವರು 2 ದಿನಗಳ ಮ್ಯಾನ್ಮಾರ್‌ ಪ್ರವಾಸಲ್ಲಿದ್ದು, ಈ ವೇಳೆ ಅವರು ಮ್ಯಾನ್ಮಾರ್ ಅಧ್ಯಕ್ಷ, ರಾಜ್ಯ ಆಡಳಿತ ಮಂಡಳಿಯ ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರೊಂದಿಗೆ ನೇ ಪೈ ತಾವ್‌ನಲ್ಲಿ ಚರ್ಚೆ ನಡೆಸಿದ್ದಾರೆ.

Tap to resize

Latest Videos

ಇದನ್ನು ಓದಿ: ಭದ್ರತೆ ನೆಪವೊಡ್ಡಿ ಮಣಿಪುರದಲ್ಲಿ ರಾಹುಲ್ ಗಾಂಧಿ ತಡೆದ ಪೊಲೀಸರು: ಹೆಲಿಕಾಪ್ಟರ್‌ನಲ್ಲಿ ಪ್ರಯಾಣ!

ತಮ್ಮ ಎರಡು ದಿನಗಳ ಭೇಟಿಯಲ್ಲಿ ಅವರು ಮ್ಯಾನ್ಮಾರ್ ರಕ್ಷಣಾ ಸಚಿವ ಜನರಲ್ (ನಿವೃತ್ತ) ಮಯಾ ತುನ್ ಊ ಅವರನ್ನು ಭೇಟಿ ಮಾಡಿದರು ಮತ್ತು ಮ್ಯಾನ್ಮಾರ್ ನೌಕಾಪಡೆಯ ಕಮಾಂಡರ್-ಇನ್-ಚೀಫ್ ಅಡ್ಮಿರಲ್ ಮೋ ಆಂಗ್ ಮತ್ತು ರಕ್ಷಣಾ ಉದ್ಯಮಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಖಾನ್ ಮೈಂಟ್ ಥಾನ್ ಅವರೊಂದಿಗೆ ಸಭೆ ನಡೆಸಿದರು. ಭೇಟಿಯು ಮ್ಯಾನ್ಮಾರ್‌ನ ಹಿರಿಯ ನಾಯಕತ್ವದೊಂದಿಗೆ ಭಾರತದ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶವನ್ನು ಒದಗಿಸಿದೆ ಎಂದು ಭಾರತದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. 

ಹಾಗೆ, ಈ ಸಭೆಗಳಲ್ಲಿ, "ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡುವುದು, ಅಕ್ರಮ ಗಡಿಯಾಚೆಗಿನ ಚಲನೆಗಳು ಮತ್ತು ಮಾದಕವಸ್ತು ಕಳ್ಳಸಾಗಣೆ, ಸ್ಮಗ್ಲಿಂಗ್‌ನಂತಹ ದೇಶೀಯ ಅಪರಾಧಗಳ ಕುರಿತು ಉಭಯ ಕಡೆಯವರು ಚರ್ಚಿಸಿದರು." ಅಲ್ಲದೆ, "ಎರಡೂ ಕಡೆಯವರು ತಮ್ಮ ತಮ್ಮ ಪ್ರದೇಶಗಳನ್ನು ಇತರರಿಗೆ ಹಾನಿಕರವಾದ ಯಾವುದೇ ಚಟುವಟಿಕೆಗಳಿಗೆ ಬಳಸಲು ಅನುಮತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು’’ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ಮಣಿಪುರ ಹಿಂಸೆಗೆ ವಿದೇಶಿ ಕುಮ್ಮಕ್ಕು; ಮ್ಯಾನ್ಮಾರ್‌ ಶಸ್ತ್ರಾಸ್ತ್ರ ಬಳಕೆ: ಹಿಂಸಾಪೀಡಿತ ರಾಜ್ಯಕ್ಕೆ ರಾಹುಲ್‌ ಗಾಂಧಿ ಭೇಟಿ

ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಎಂಬ ಎರಡು ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಮಣಿಪುರ ರಾಜ್ಯವು 1700 ಕಿಮೀ ಗಡಿಯಲ್ಲಿ 398 ಕಿಮೀಗಳನ್ನು ಮ್ಯಾನ್ಮಾರ್‌ನ  ಪೂರ್ವಕ್ಕೆ ಸಾಗಯಿಂಗ್ ಪ್ರದೇಶ ಮತ್ತು ದಕ್ಷಿಣಕ್ಕೆ ಚಿನ್ ರಾಜ್ಯ ಎಂಬ ಎರಡು ಪ್ರದೇಶಗಳೊಂದಿಗೆ ಹಂಚಿಕೊಳ್ಳುತ್ತದೆ. “ಆ ದೇಶದ ಯಾವುದೇ ಬೆಳವಣಿಗೆಗಳು ಭಾರತದ ಗಡಿ ಪ್ರದೇಶಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಈ ಹಿನ್ನೆಲೆ ಮ್ಯಾನ್ಮಾರ್‌ನಲ್ಲಿ ಶಾಂತಿ ಮತ್ತು ಸ್ಥಿರತೆ ಹಾಗೂ ಅದರ ಜನರ ಯೋಗಕ್ಷೇಮವು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ.

ಮೇ 3 ರಂದು ಮೈತೇಯಿ ಮತ್ತು ಕುಕಿಗಳ ನಡುವೆ ಮಣಿಪುರದಲ್ಲಿ ಘರ್ಷಣೆಗಳು ಪ್ರಾರಂಭವಾದಾಗಿನಿಂದ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 40,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಮೈತೇಯಿಗಳು ಕಣಿವೆಯಲ್ಲಿ ವಾಸಿಸುತ್ತಿದ್ದರೆ ಕುಕಿಗಳು ಹೆಚ್ಚಾಗಿ ಬೆಟ್ಟಗಳಲ್ಲಿ ವಾಸಿಸುತ್ತಾರೆ. ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳ್ಳಲು ಮೈತೇಯಿ ಬೇಡಿಕೆಯ ನಂತರ ಹಿಂಸಾಚಾರ ಪ್ರಾರಂಭವಾಯಿತು.

ಇದನ್ನೂ ಓದಿ: ಸೇನೆಗೇ ಸಡ್ಡು ಹೊಡೆದು 12 ಉಗ್ರರ ಬಿಡಿಸಿದ ಸ್ತ್ರೀಯರು: ಯೋಧರಿಗೆ ದಿಗ್ಬಂಧನ; ಉಗ್ರರ ರಕ್ಷಣೆಗೆ ನಿಂತ ಸಾವಿರಾರು ಗ್ರಾಮಸ್ಥರು

click me!