ಕಳೆದ 10 ವರ್ಷಗಳಲ್ಲಿ ವಿಪತ್ತುಗಳನ್ನು ಭಾರತ ಎದುರಿಸಿದ ರೀತಿ ನೋಡಿ ಜಗತ್ತಿಗೆ ಬೆರಗು

By Kannadaprabha News  |  First Published Jan 8, 2024, 11:27 AM IST

When the going gets tough, the tough get going.. ಎನ್ನುವ ಮಾತಿದೆ. ಕಠಿಣ ಪರಿಸ್ಥಿತಿಗಳು ಎದುರಾದಾಗಲೇ ನಾಯಕನ ಸಾಮರ್ಥ್ಯ ಅರಿವಾಗುವುದು. ಅರ್ಹತೆಯಿದ್ದರೆ ದಿಟ್ಟತನದ ನಿರ್ಧಾರ ಮತ್ತು ಕ್ರಮಗಳ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಾನೆ .ನರೇಂದ್ರ ಮೋದಿಯಂತೂ ತಮ್ಮ ಸಾಮರ್ಥ್ಯವನ್ನು ಇಂತಹ ಅನೇಕ ಸಂದರ್ಭದಲ್ಲಿ ನಿರೂಪಿಸಿದ್ದಾರೆ‌. ಹಾಗಾಗಿಯೇ ಜನರಿಗೆ ಮೋದಿ ಅಂದರೆ ನಂಬಿಕೆ.


 ಆರ್‌.ಗುರುಪ್ರಸಾದ್, ನಮೋಬ್ರಿಗೇಡ್

ಇತ್ತೀಚೆಗೆ ಮೂರು ರಾಜ್ಯಗಳ ಚುನಾವಣೆಯಲ್ಲಿ ಜಯಗಳಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರು. ಬೇರೆಯವರಿಗಾದರೆ ಗೆಲುವಿನ ನಶೆ ತಲೆಗೇರುತ್ತಿತ್ತೇನೋ. ಆದರೆ ಮೋದಿಯವರು ಸೋಲು ಗೆಲುವಲ್ಲಿ ಸಮಚಿತ್ತವನ್ನು ಕಾಯ್ದುಕೊಳ್ಳುವುದನ್ನು ಸಿದ್ಧಿಸಿಕೊಂಡಿದ್ದಾರೆ. ಹಾಗಾಗಿಯೇ ತಮ್ಮ ಭಾಷಣದಲ್ಲಿ ‘ಈಗ ಚುನಾವಣೆ ಮುಗಿಯಿತು. ಮಿಚಾಂಗ್ ಚಂಡಮಾರುತ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರೆಲ್ಲರೂ ಜನರಿಗಾಗಿ ರಾಜಕೀಯ ಮರೆತು ಮುಂದೆ ನಿಂತು ಕೆಲಸ ಮಾಡೋಣ’ ಎಂದು ಕರೆ ನೀಡಿದ್ದು ನಿಜಕ್ಕೂ ಮನಮುಟ್ಟುವಂತಿತ್ತು.

Tap to resize

Latest Videos

When the going gets tough, the tough get going.. ಎನ್ನುವ ಮಾತಿದೆ. ಕಠಿಣ ಪರಿಸ್ಥಿತಿಗಳು ಎದುರಾದಾಗಲೇ ನಾಯಕನ ಸಾಮರ್ಥ್ಯ ಅರಿವಾಗುವುದು. ಅರ್ಹತೆಯಿದ್ದರೆ ದಿಟ್ಟತನದ ನಿರ್ಧಾರ ಮತ್ತು ಕ್ರಮಗಳ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಾನೆ .ನರೇಂದ್ರ ಮೋದಿಯಂತೂ ತಮ್ಮ ಸಾಮರ್ಥ್ಯವನ್ನು ಇಂತಹ ಅನೇಕ ಸಂದರ್ಭದಲ್ಲಿ ನಿರೂಪಿಸಿದ್ದಾರೆ‌. ಹಾಗಾಗಿಯೇ ಜನರಿಗೆ ಮೋದಿ ಅಂದರೆ ನಂಬಿಕೆ.

ಎಚ್‌ಡಿ ದೇವೇಗೌಡರ ನಿವಾಸಕ್ಕೆ ಕೇಂದ್ರ ಸಚಿವ ಅರ್ಜುನ್ ಮುಂಡಾ ಭೇಟಿ; ಎಚ್‌ಡಿಕೆ ಕೇಂದ್ರ ಸಚಿವ ಸಂಪುಟ ಸೇರ್ತಾರಾ?

ಗುಜರಾತ್‌ನಿಂದ ಶುಭಾರಂಭ

1979ರಲ್ಲಿ ಗುಜರಾತಿನಲ್ಲಿ ಮೋರ್ಬಿ ಅಣೆಕಟ್ಟು ಒಡೆದು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ 29 ವಯಸ್ಸಿನ ನರೇಂದ್ರ ಮೋದಿಯವರು ಸಂಘಟನೆಯ ವಿಪತ್ತು ನಿರ್ವಹಣಾ ಚಟುವಟಿಕೆಗಳನ್ನು ಮುನ್ನಡೆಸಿದ್ದರು. 2001ರಲ್ಲಿ ಕಛ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸುಮಾರು 13,000ಕ್ಕೂ ಹೆಚ್ಚು ಜನರು ಬಲಿಯಾದರು. ಈ ಸಂದರ್ಭದಲ್ಲಿ ಮೋದಿ ಪಕ್ಷದ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದ್ದರು. ಇದಾದ ಕೆಲ ದಿನಗಳಲ್ಲಿ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದು ಬಂತು. ಪ್ರಾಕೃತಿಕ ವಿಪತ್ತು ನಿರ್ವಹಣೆಯ ಅವರ ಈ ನೇರ ಅನುಭವ ಮುಂದೆ ಆಡಳಿತ ನಡೆಸುವಾಗ ಜನರ ಪರಿಸ್ಥಿತಿಯನ್ನು ಅರಿಯಲು ಸಹಕಾರಿಯಾಯ್ತು. ಹಾಗಾಗಿಯೇ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತಂದರು. ಈ ರೀತಿಯ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಗುಜರಾತ್. ತದನಂತರ ಈ ಕಾನೂನನ್ನು ಆಧರಿಸಿ ಇಡೀ ದೇಶಕ್ಕೆ ಇದೇ ರೀತಿಯ ಕಾನೂನುಗಳನ್ನು ಜಾರಿಗೆ ತರಲು ಅಂದಿನ ಕೇಂದ್ರ ಸರ್ಕಾರ ನಿರ್ಧರಿಸಿತು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಈ ಕಾಯಿದೆಯು ದೇಶದ ಪ್ರತಿಯೊಂದು ಸರ್ಕಾರಕ್ಕೂ ಸಹಾಯ ಮಾಡಿತು.

ವಿಪತ್ತು ನಿರ್ವಹಣೆಗೆ 3 ಪಟ್ಟು ಹಣ

ಆರಂಭದಿಂದಲೂ ವಿಪತ್ತು ನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಮೋದಿ, ತಾವು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಕೃಷಿ ಇಲಾಖೆಯಡಿಯಲ್ಲಿದ್ದ ವಿಪತ್ತು ನಿರ್ವಹಣಾ ಜವಾಬ್ದಾರಿಯನ್ನು ಗೃಹ ಇಲಾಖೆಯ ಅಡಿಯಲ್ಲಿ ತಂದು ಕ್ರಿಯಾಶೀಲಗೊಳಿಸಿದರು. SDRF ಮತ್ತು NDRF ಗಳಿಗೆ ಕಳೆದ ಕೇಂದ್ರ ಸರ್ಕಾರ ನೀಡುತ್ತಿದ್ದ ಹಣಕ್ಕಿಂತ ಮೂರು ಪಟ್ಟು ಹೆಚ್ಚು ಹಣವನ್ನು ಒದಗಿಸಿದರು. ಪ್ರಧಾನಿ ಮೋದಿಯವರು ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲಿ ಪರಸ್ಪರ ಸಹಕರಿಸಲು 25 ರಾಷ್ಟ್ರಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡರು. 

ಮಾಲ್ಡೀವ್ಸ್‌ ಟ್ರಿಪ್‌ ಕ್ಯಾನ್ಸಲ್‌ ಮಾಡಿದ ಭಾರತೀಯರು: ಬೆದರಿದ ಮುಯಿಝು ಸರ್ಕಾರದಿಂದ ಟೀಕೆಗೆ ಸ್ಪಷ್ಟನೆ

ಮೊದಲೆಲ್ಲ ಗಡ್ಡಕ್ಕೆ ಬೆಂಕಿ ಹೊತ್ತಿದಾಗ ಬಾವಿ ತೋಡುವ ಕಾರ್ಯ ನಡೆಯುತ್ತಿತ್ತು. ಇದಕ್ಕೆ ಚುರುಕು ನೀಡಿದ ಮೋದಿ, ಯಾವುದೇ ವಿಪತ್ತುಗಳಿಗೆ ದೇಶ ಸನ್ನದ್ಧವಾಗಿರುವಂತೆ ನೋಡಿಕೊಂಡರು. 2014ರಲ್ಲಿ ಕಾಶ್ಮೀರದಲ್ಲಿನ ಭೀಕರ ಪ್ರವಾಹದ ಸಂದರ್ಭದಲ್ಲಿ ಪ್ರಧಾನಿ ಖುದ್ದು ಭೇಟಿ ನೀಡಿ ಅವರು ತೆಗೆದುಕೊಂಡ ತೀರ್ಮಾನಗಳು ಸಾವಿರಾರು ಜನರನ್ನು ಬದುಕಿಸಿದ್ದವು‌. 2015ರಲ್ಲಿ ನೇಪಾಳದಲ್ಲಿ ಭಯಾನಕ ಭೂಕಂಪನವಾದಾಗ ಆಪರೇಷನ್ ಮೈತ್ರಿ ಹೆಸರಿನಲ್ಲಿ ಸುಮಾರು 6000ಕ್ಕೂ ಹೆಚ್ಚು ಜನರನ್ನು ಭಾರತ ರಕ್ಷಿಸಿತು. 

ಇದೇ ವರ್ಷ ಆಂತರಿಕ ಬಿಕ್ಕಟ್ಟಿನಿಂದ ಅಕ್ಷರಶಃ ಯುದ್ಧ ಭೂಮಿಯಾಗಿದ್ದ ಯೆಮನ್‌ನಿಂದ ಸುಮಾರು 4500 ಜನ ಭಾರತೀಯರನ್ನು ಕರೆತರಲಾಯಿತು. ಕೇಂದ್ರ ಸರ್ಕಾರದ ಮಂತ್ರಿಯೊಬ್ಬರು ಜನರನ್ನು ರಕ್ಷಿಸಲು ಈ ರೀತಿ ಸೈನಿಕನಂತೆ ಯುದ್ಧಭೂಮಿಯಲ್ಲಿ ನಿಂತಿದ್ದು ಬಹುಶಃ ಇದೇ ಮೊದಲು. ಒಡಿಶಾದಲ್ಲಿ ರೈಲು ಅಪಘಾತವಾದಾಗ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಪುನಃ ಮೊದಲಿನಂತೆ ರೈಲು ಸಂಚರಿಸುವವರೆಗೆ ಕೆಲಸ ಮಾಡಿದ್ದನ್ನು ನೋಡಿದ್ದೇವೆ. ಇತ್ತೀಚೆಗೆ ಉತ್ತರ ಕಾಶಿಯಲ್ಲಿ ಟನಲ್ ಕುಸಿದಾಗಲೂ 17 ದಿನದವರೆಗೆ ಮುಖ್ಯಮಂತ್ರಿ ಮತ್ತು ಸ್ಥಳದಲ್ಲೇ ಟೆಂಟ್ ಹಾಕಿ ಉಳಿದಿದ್ದ ಹಾಗೂ ಅಲ್ಲೇ ಊಟ-ತಿಂಡಿ ಮಾಡಿದ ಕೇಂದ್ರ ಸಚಿವ ವಿ.ಕೆ ಸಿಂಗರನ್ನು ಕಂಡಿದ್ದೇವೆ.

ಕೊರೋನಾ ಬಿಕ್ಕಟ್ಟಿನಲ್ಲಿ ಗೆಲುವು
ಇನ್ನು ಕೊರೋನಾ ಮಾನವ ನಿರ್ಮಿತ ವಿಪತ್ತಿಗೆ ಇಡಿಯ ಜಗತ್ತು ಸ್ತಬ್ಧವಾಗಿತ್ತು. ನೂರಾ ಮೂವತ್ತು ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಈ ಸಾಂಕ್ರಾಮಿಕವನ್ನು ಹೇಗೆ ನಿಭಾಯಿಸುತ್ತದೆಂದು ಕಾಯುತ್ತಿತ್ತು. ಇಲ್ಲಿಯ ಅನ್ನ ತಿಂದು ಚೀನಾಕ್ಕೆ ನಿಷ್ಠರಾಗಿರುವ ‘ಕಮ್ಮಿನಿಷ್ಠರು’ ಇದೊಂದು ಬಾರಿ ಮೋದಿ ಸೋತು ಬಿಡಲಿ ಎಂದು ಬೇಡಿಕೊಳ್ಳುತ್ತಿದ್ದರು. ಆದರೆ ದೇವರ ಆಶೀರ್ವಾದ ಮತ್ತು ಜನರ ಪ್ರಾರ್ಥನೆಯ ಜೊತೆಗೆ ದೇಶವಾಸಿಗಳನ್ನು ತಮ್ಮ ಕುಟುಂಬವೆಂದೇ ಭಾವಿಸಿದ ಮೋದಿಯವರ ಕಾಳಜಿಯಿಂದ ಕೊರೋನಾವನ್ನು ಸಮರ್ಥವಾಗಿ ಎದುರಿಸಿದೆವು. ಜಗತ್ತಿನ ಫಾರ್ಮಸಿ ಲಾಬಿಯನ್ನು ಎದುರು ಹಾಕಿಕೊಂಡು 200 ಕೋಟಿಗೂ ಹೆಚ್ಚು ಭಾರತೀಯ ಲಸಿಕೆಗಳನ್ನು ನಮ್ಮ ದೇಶ ಉಚಿತವಾಗಿ ನೀಡಿತು. ಭಾರತ ಮತ್ತೆ ಗೆದ್ದಿತು.

ಹೀಗೆ ಕಳೆದೊಂದು ದಶಕದಲ್ಲಿ ಭೂಕಂಪ, ಪ್ರವಾಹ, ಅಪಘಾತ ಮತ್ತು ಕೊರೋನಾದಂತಹ ಮಹಾಮಾರಿಗಳನ್ನು ಭಾರತ ಎದುರಿಸಿದ ರೀತಿ ನೋಡಿ ಜಗತ್ತು ಬೆರಗುಗೊಂಡಿದೆ. ಅಷ್ಟೇ ಅಲ್ಲ, ವಿದೇಶಗಳಲ್ಲಿ ಅವಘಡಗಳು ನಡೆದಾಗಲೂ ''ವಸುಧೈವ ಕುಟುಂಬ''ದ ಕಲ್ಪನೆಯೊಂದಿಗೆ ಜನರನ್ನು ರಕ್ಷಿಸಲು ಭಾರತ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ಪ್ರಬಲ ಇಚ್ಛಾಶಕ್ತಿ ಹೊಂದಿರುವ ಮೋದಿ ಎಂಬ ಸಮರ್ಥ ನಾಯಕತ್ವ. ಇಂತಹ ನಾಯಕತ್ವ ಕಳೆದುಕೊಂಡರೆ ನಮ್ಮ ಜೀವವನ್ನು ನಾವೇ ಅಪಾಯಕ್ಕೆ ತಳ್ಳಿಕೊಂಡಂತೆ.

click me!