ಸಂದೇಶ್‌ಖಾಲಿಯಲ್ಲಿ ರೇಪ್‌ ಆಗಿದ್ದರೆ ವಿಡಿಯೋ ಕೊಡಿ: ಟಿಎಂಸಿ ನಾಯಕಿಯ ಉದ್ಧಟತನದ ಹೇಳಿಕೆ

By Kannadaprabha NewsFirst Published Feb 20, 2024, 9:48 AM IST
Highlights

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ನಾಯಕರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತುಪಡಿಸಲು ವಿಡಿಯೋ ತೋರಿಸಿ ಎಂದು ಟಿಎಂಸಿ ನಾಯಕಿಯೊಬ್ಬರು ಉದ್ಧಟತನದ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಕೋಲ್ಕತಾ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ನಾಯಕರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತುಪಡಿಸಲು ವಿಡಿಯೋ ತೋರಿಸಿ ಎಂದು ಟಿಎಂಸಿ ನಾಯಕಿಯೊಬ್ಬರು ಉದ್ಧಟತನದ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಸಂದೇಶ್‌ಖಾಲಿಯಲ್ಲಿ ಅತ್ಯಾಚಾರಗಳು ನಡೆದಿವೆ ಎಂಬುದಕ್ಕೆ ಒಂದೇ ಒಂದು ವಿಡಿಯೋ ದಾಖಲೆ ತೋರಿಸಿ. ಇದೆಲ್ಲಾ ಬಿಜೆಪಿ ಸೃಷ್ಟಿಸಿರುವ ನಾಟಕ ಎಂದು ಟೀವಿ ವಾಹಿನಿ ಚರ್ಚೆ ವೇಳೆ ಟಿಎಂಸಿ ವಕ್ತಾರೆ ಜೂಯ್‌ ಬಿಸ್ವಾಸ್‌ ಹೇಳಿದ್ದಾರೆ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಟಿಎಂಸಿ ನಾಯಕರು ಸುಂದರ ಮಹಿಳೆಯರನ್ನು ಕಚೇರಿಗೆ ಹೊತ್ತೊಯ್ದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಬಡಿಗೆ ಹಿಡಿದು ಫೆ.8ರಂದು ಪ್ರತಿಭಟನೆ ನಡೆಸಿದ್ದರು. ಇದು ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ಇದೇ ವಿಷಯವಾಗಿ ಡಿಡಿ ನ್ಯೂಸ್‌ನ ಕಾರ್ಯಕ್ರಮದಲ್ಲಿ ಸಂದರ್ಶಕಿಯೊಬ್ಬರು ಜೂಯ್‌ ಅವರನ್ನು ಪ್ರಶ್ನಿಸಿದಾಗ ಅವರು ವಿಡಿಯೋ ದಾಖಲೆಗಳನ್ನು ಕೇಳಿದ್ದಾರೆ.

ಚುನಾವಣಾ ಬಾಂಡ್‌ಗಳಿಂದ 16518 ಕೋಟಿ ಸಂಗ್ರಹ: ಯಾವ ಪಕ್ಷಕ್ಕೆ ಎಷ್ಟು ಇಲ್ಲಿದೆ ಡಿಟೇಲ್ಸ್

ಆರೋಪದ ಬಳಿಕ 10 ಮಹಿಳಾ ಪೊಲೀಸ್‌ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಆ ತಂಡ ಗ್ರಾಮಗಳಿಗೆ ಹೋಗಿ ಆರೋಪಗಳ ಸತ್ಯಾಸತ್ಯತೆ ಪರಿಶೀಲನೆಗೆ ಯತ್ನಿಸಿದೆ. ಯಾವೊಬ್ಬ ಮಹಿಳೆಯೂ ಲೈಂಗಿಕ ಕಿರುಕುಳದ ದೂರು ನೀಡಿಲ್ಲ. ಒಂದು ವೇಳೆ ಅಂತಹ ದೂರು ಬಂದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ನಮ್ಮ ರಾಜ್ಯದಲ್ಲಿ ಮಹಿಳೆಯೇ ಮುಖ್ಯಮಂತ್ರಿ ಇದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಯಾವಾಗಲೂ ಮಹಿಳೆಯರ ಪರವೇ ಅವರು ನಿಲ್ಲುತ್ತಾರೆ ಎಂದು ಜೂಯ್‌ ಹೇಳಿದ್ದಾರೆ.

ಮಣಿಪುರ ಹಿಂಸೆಗೆ ಸಂದೇಶ್‌ಖಾಲಿ ಘಟನೆ ಹೋಲಿಕೆ ಬೇಡ: ಸುಪ್ರೀಂ

ನವದೆಹಲಿ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಭೂಕಬಳಿಕೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಈ ಘಟನೆಯನ್ನು ಮಣಿಪುರ ಘಟನೆ ರೀತಿ ಪರಿಗಣಿಸಿ ಸಿಬಿಐ ತನಿಖೆಗೆ ಆದೇಶಿಸಲಾಗದು. ಏಕೆಂದರೆ ಈಗಾಗಲೇ ಈ ಪ್ರಕರಣದ ಕುರಿತು ಬಂಗಾಳ ಹೈಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಅಲ್ಲದೆ ಘಟನೆ ಕುರಿತು ಅಧ್ಯಯನ ನಡೆಸಿ ಸೂಕ್ತ ತನಿಖೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಹೈಕೋರ್ಟ್‌ ಹೆಚ್ಚು ಸೂಕ್ತವಾಗಿದೆ ಎಂದು ಹೇಳಿತು.

TMC Vs BSF: ಬಾಂಗ್ಲಾ ಗಡಿಯಲ್ಲಿ ಗ್ರಾಮಸ್ಥರು ತೋಡಿದ ಗುಂಡಿಗೆ ಬಿದ್ದು ನಾಲ್ವರು ಮಕ್ಕಳು ಸಾವು

ಬಂಗಾಳ: ರಾಷ್ಟ್ರಪತಿ ಆಳ್ವಿಕೆಗೆ ಮಹಿಳಾ ಆಯೋಗ ಆಗ್ರಹ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿನ ಸಂದೇಶ್‌ಖಾಲಿ ಘಟನೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹಿಸಿದೆ. ಈ ಕುರಿತು ಮಾತನಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ, 'ನಾವು ಸಂದೇಶ್‌ಖಾಲಿಗೆ ತೆರಳಿ ಅಲ್ಲಿನ ಮಹಿಳೆಯರ ಜೊತೆ ಸಂವಾದ ನಡೆಸಿದೆವು. ಅಲ್ಲಿನ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಮಹಿಳೆಯರು ಟಿಎಂಸಿ ಕಚೇರಿಯಲ್ಲಿ ತಮಗೆ ಅತ್ಯಾಚಾರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ನಾವು ಆಗ್ರಹಿಸುತ್ತೇವೆ. ಜೊತೆಗೆ ಇದನ್ನೇ ನಮ್ಮ ವರದಿಯಲ್ಲೂ ತಿಳಿಸುತ್ತೇವೆ ಎಂದರು.

ಟಿಎಂಸಿ ಅಸಮಾಧಾನ: ಆಯೋಗದ ಅಭಿಪ್ರಾಯದ ಬಗ್ಗೆ ಟೀಕಿಸಿರುವ ಟಿಎಂಸಿ, ಮಹಿಳಾ ಆಯೋಗವು ಬಿಜೆಪಿ ಅಧಿಕಾರದಲ್ಲಿ ನಡೆಯುತ್ತಿದೆ. ಅದು ಇಲ್ಲದ್ದನ್ನು ಸೃಷ್ಟಿಸಿಕೊಂಡು ಹೇಳುತ್ತಿದೆ ಎಂದು ಕುಟುಕಿದೆ. ಆದರೆ ಈ ಆರೋಪವನ್ನು ಆಯೋಗದ ಅಧ್ಯಕ್ಷೆ ರೇಖಾ ತಿರಸ್ಕರಿಸಿದ್ದಾರೆ.

click me!