ಗೋಕಳ್ಳಸಾಗಣೆ ಶಂಕೆ: ಅಮಾಯಕ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ, 30 ಕಿ.ಮೀ ಕಾರು ಹಿಂಬಾಲಿಸಿ ಗುಂಡಿನ ದಾಳಿ

By Kannadaprabha News  |  First Published Sep 4, 2024, 8:48 AM IST

ಗೋವು ಕಳ್ಳಸಾಗಣೆ ಎಂಬ ಅನುಮಾನದ ಮೇಲೆ ವಿದ್ಯಾರ್ಥಿಯೊಬ್ಬನನ್ನು ಗುಂಪೊಂದು ಹತ್ಯೆ ಮಾಡಿದ ಘಟನೆ ಹರ್ಯಾಣದಲ್ಲಿ ನಡೆದಿದೆ. 30 ಕಿ.ಮೀ ಕಾರು ಹಿಂಬಾಲಿಸಿ ಗುಂಡಿನ ದಾಳಿ ನಡೆಸಲಾಗಿದೆ. ಈ ಘಟನೆ ಪೂರ್ವನಿಯೋಜಿತ ಸಂಚು ಎಂಬ ಶಂಕೆ ವ್ಯಕ್ತವಾಗಿದೆ.


ಚಂಡೀಗಡ: ಗೋವು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ತಪ್ಪಾಗಿ ತಿಳಿದು ವಿದ್ಯಾರ್ಥಿಯೊಬ್ಬನನ್ನು ಗುಂಪೊಂದು 30 ಕಿ.ಮೀ ತನಕ ಹಿಂಬಾಲಿಸಿ, ಗುಂಡಿಟ್ಟು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅ.23ರಂದೇ ಈ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತ ಬಾಲಕನನ್ನು ಆರ್ಯನ್ ಎಂದು ಗುರುತಿಸಲಾ ಗಿದೆ. ಘಟನೆ ಸಂಬಂಧ ದಾಳಿ ನಡೆಸಿ ಪರಾರಿಯಾಗಿದ್ದ ಐವರನ್ನು ಬಂಧಿಸಲಾಗಿದೆ. ಈ ನಡುವೆ ಇದೊಂದು ಪೂರ್ವ ಯೋಚಿತ ಸಂಚು ದಾಳಿಗೊಳಗಾದ ಕಾರಿನಲ್ಲಿ ಆರ್ಯನ್ ಜೊತೆಗಿದ್ದ ಬಾಲಕ ಕೂಡಾ ಈ ಸಂಚಿನಲ್ಲಿ ಭಾಗಿಯಾಗಿದ್ದನು. 
 
ನಗರದಲ್ಲಿ ರೆನಾಲ್ಡ್ ಅಸ್ಟರ್, ಬೊಯೊಟಾ ಫಾರ್ಚೂನರ್ ಕಾರುಗಳಲ್ಲಿ ಕಿಡಿಗೇಡಿಗಳು ದನಗಳ ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಗೋವು ರಕ್ಷಕರ ಗುಂಪಿಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ತಪಾಸಣೆ ಮಾಡುವ ವೇಳೆ ದೆಹಲಿ- ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಸ್ಟರ್ ಕಾರಿ ನಲ್ಲಿ ಗುಂಪೊಂದು ತೆರಳುತ್ತಿರುವುದು ಕಂಡುಬಂತು. ಅದೇ ಕಾರನ್ನು ಗೋಕಳ್ಳರ ಕಾರೆಂದು ಭಾವಿಸಿದ ತಂಡ, ಅವರನ್ನು ದಿಲ್ಲಿ-ಆಗ್ರಾ ನಡುವಿನ ಹೆದ್ದಾರಿಯಲ್ಲಿ 30 ಕಿ.ಮೀ ದೂರದವರೆಗೆ ಕಾರನ್ನು ಹಿಂಬಾಲಿಸಿದೆ. ಕಾರು ನಿಲ್ಲಿಸುವುದಕ್ಕೆ ಸೂಚಿಸಿದೆ. ಆದರೆ ಭಯದಿಂದ ಆರ್ಯನ್ ಮತ್ತು ಸ್ನೇಹಿತರು ಕಾರನ್ನು ಮತ್ತಷ್ಟು ವೇಗವಾಗಿ ಓಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಆರೋಪಿಗಳು ಕಾರಿನತ್ತ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಆರ್ಯನ್‌ ಕುತ್ತಿಗೆಗೆ ಗುಂಡು ತಗುಲಿದೆ. ಆ ಬಳಿಕ ಆರ್ಯನ್ ಚಲಿಸುತ್ತಿದ್ದ ಕಾರಿನ ಬಾಗಿಲು ತೆಗೆಯಲಾಗಿದೆ. 

ಚೆನ್ನೈಗೆ ಸಾಗಿಸುತ್ತಿದ್ದ 12 ಕೋಟಿ ಮೌಲ್ಯದ ಐಫೋನ್ ಕಳ್ಳತನ,ಕೇಸ್ ದಾಖಲಿಸಲು 15 ದಿನ ತೆಗೆದ ಪೊಲೀಸ್!

Latest Videos

undefined

ಈ ಸಂದರ್ಭದಲ್ಲಿ ಗೋರಕ್ಷಕರ ಗುಂಪು, ಆರ್ಯನ್ ತಂಡ ತಮ್ಮ ಮೇಲೆ ಪ್ರತಿದಾಳಿ ನಡೆಸಬ ಹುದು ಎಂದು ಭಯಗೊಂಡು, ಮತ್ತೆ ಗುಂಡು ಹಾರಿಸಿದೆ. ಈ ವೇಳೆ ಆರ್ಯನ್ ಎದೆಗೆ ಗುಂಡು ತಗುಲಿದೆ. ಬಳಿಕ ಕಾರಿನಲ್ಲಿ ಇಬ್ಬರು ಹುಡುಗಿಯರು ಇರುವುದನ್ನು ನೋಡಿ, ತಪ್ಪಾಗಿ ಗುಂಡು ಹಾರಿಸಿರುವುದು. ಗೋರಕ್ಷಕರ ಗುಂಪಿಗೆ ಅರಿವಾಗಿದ್ದು, ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಐವರನ್ನು ಬಂಧಿಸಿದ್ದಾರೆ.

ಪೂರ್ವ ಯೋಜಿತ ಸಂಚು? ಈ ನಡುವೆ ಘಟನೆ ಕುರಿತು ಹೊಸ ಆರೋಪ ಮಾಡಿರುವ ಆರ್ಯನ ತಂದೆ, ಇದೊಂದು ಪೂರ್ವ ಯೋಜಿತ ಸಂಚು. ಕಾರಿನಲ್ಲಿ ನನ್ನ ಮಗನ ಜೊತೆಗಿದ್ದ ಬಾಲಕ ಸಹ ಭಾಗಿಯಾಗಿದ್ದಾನ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. 

"ಜೀವನದಲ್ಲಿ ಎಲ್ಲವನ್ನೂ ಮಾಡಿ, ಮದುವೆ ಮಾತ್ರ ಅಗಬೇಡಿ...", ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ

click me!