ಅಹ್ಮದಾಬಾದ್(ಜ.5): ಗುಜರಾತ್‌ನ ರಣ್ ಅಫ್ ಕಚ್ ಈಗ ವಲಸೆ ಹಕ್ಕಿಗಳ ಹಕ್ಕಿಗಳ ಹನಿಮೂನ್ ಸ್ಪಾಟ್ ಆಗಿದ್ದು, ಸಾವಿರಾರು ಫ್ಲೆಮಿಂಗೋ ಹಕ್ಕಿಗಳು ಅಲ್ಲಿ ಇಟ್ಟಿರುವ ಸಾಲು ಸಾಲು ಮೊಟ್ಟೆಗಳ ಒಂದು ಮನ ಮೋಹಕ ದೃಶ್ಯವನ್ನು ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದ್ದು, ಈ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಗುಜರಾತ್‌ನ ಗುಡ್ಕರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಸುಂದರ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಫ್ಲೆಮಿಂಗೊಗಳ ಗೂಡುಕಟ್ಟುವ ಪ್ರದೇಶದ ಅದ್ಭುತ ಡ್ರೋನ್ ದೃಶ್ಯಗಳನ್ನು ರಾಜ್‌ಕೋಟ್ ( Rajkot) ನ ಐಎಎಸ್ ಅಧಿಕಾರಿ ಮತ್ತು ಜಿಲ್ಲಾ ಅಭಿವೃದ್ಧಿ ಅಧಿಕಾರಿ (ಡಿಡಿಒ) ದೇವ್ ಚೌಧರಿ (Dev Choudhary) ಅವರು ಟ್ವಿಟ್ ಮಾಡಿದ್ದರು.
ಮೊಟ್ಟೆ, ಮರಿಗಳ ವಿಚಾರದಲ್ಲಿ ತುಂಬಾ ಸೂಕ್ಷ್ಮವಾಗಿರುವ ಫ್ಲೆಮಿಂಗೋ ಹಕ್ಕಿಗಳು, ಅಭದ್ರತೆ ಎನಿಸಿದಲ್ಲಿ ಒಂದು ಚೂರು ಹೆಚ್ಚು ಕಡಿಮೆಯಾದರು ಮೊಟ್ಟೆಗಳನ್ನೇ ತ್ಯಜಿಸಿ ಬಿಡುತ್ತವೆ. ಮರು ಭೂಮಿಯಂತಿರುವ ಈ ಪ್ರದೇಶದಲ್ಲಿ ಅಪಾರ ಪ್ರಮಾಣದ ಫ್ಲೆಮಿಂಗೋಗಳ ಸಾವಿರಾರು ಗೂಡುಗಳಿದ್ದು, ಅದರಲ್ಲಿ ಮೊಟ್ಟೆಗಳು ಕಾಣಿಸುತ್ತಿವೆ. ಚಳಿಗಾಲದಲ್ಲಿ ಸಾವಿರಾರು ವಲಸೆ ಹಕ್ಕಿಗಳು ಈ ರಣ್ ಅಫ್ ಕಚ್‌ಗೆ ಬಂದು ಸೇರುತ್ತವೆ. ಡ್ರೋನ್ ಕ್ಯಾಮರಾದಿಂದ ಸೆರೆಯಾಗಿರುವ ಈ ದೃಶ್ಯ ನೋಡುಗರ ಕಣ್ಣಿಗೆ ದೃಶ್ಯ ಕಾವ್ಯದಂತೆ ಗೋಚರಿಸುತ್ತಿದೆ.
कच्छ के छोटे रण से खुबसूरत तस्वीरें आई है।
ठण्ड के इस मौसम में विदेशो से हजारो पक्षी इस इलाके में आते है।
सुर्खाब,फ्लेमिंगो ने अंडे दिए है उसकी तस्वीरे दिलचस्प है।
दरअसल पूरा इलाका घुडखर अभ्यारण के तौर पर जाना जाता है। pic.twitter.com/FV3SiQO95w
undefined
ಈ ವಿಡಿಯೋವನ್ನು ಎರಡು ದಿನಗಳ ಹಿಂದೆ ಟ್ಟಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಆಗಲೇ 21,000ಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಆದರೆ ಈ ಪ್ರದೇಶದಲ್ಲಿ ಡ್ರೋನ್ ಮೂಲಕ ವಿಡಿಯೋ ಮಾಡಿದ್ದು ಸರಿಯಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಡ್ರೋನ್ ಕ್ಯಾಮರಾಗಳಿಂದ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ಇಲ್ಲಿ ಫ್ಲೆಮಿಂಗೋಗಳ ಇಷ್ಟೊಂದು ಮೊಟ್ಟೆಗಳಿವೆ. ಆದರೆ ಒಂದೇ ಒಂದು ಫ್ಲೆಮಿಂಗೋ ಇಲ್ಲಿಲ್ಲ. ಅಂದರೆ ಅವುಗಳಿಗೆ ತೊಂದರೆಯಾಗುತ್ತಿದೆ ಎಂದರ್ಥ. ದಯವಿಟ್ಟು ಇಂತಹ ವಿಡಿಯೋಗಳಿಗೆ ಪ್ರಚಾರ ನೀಡಬೇಡಿ. ಈ ರೀತಿ ಡ್ರೋನ್ ಬಳಸಿ ವಿಡಿಯೋ ಮಾಡಿದವರನ್ನು ಬಂಧಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಐಆರ್‌ಎಸ್ ಅಧಿಕಾರಿ ರಾಜ್‌ಕುಮಾರ್ ಯಾದವ್ (Rajkumar Yadav) ಎಂಬವರು ಈ ವಿಡಿಯೋಗೆ ಲವ್ಲಿ ಎಂದು ಕಾಮೆಂಟ್ ಮಾಡಿದ್ದಾರೆ.
No Visa No Passport... ತಮಿಳುನಾಡಿನ ಈ ಪಕ್ಷಿಧಾಮದಲ್ಲಿ ಈಗ ವಿದೇಶಿಯರದ್ದೇ ಕಲರವ...!
ಕಳೆದ ವರ್ಷ ಸುಮಾರು 60,000 ಮರಿಗಳು ಗ್ರೇಟ್ ರಾನ್ ಆಫ್ ಕಚ್ (GRK) ನ ಕುಡಾ ಸ್ಟ್ರೆಚ್‌ನಲ್ಲಿ ಫ್ಲೆಮಿಂಗೋಗಳು ಕಟ್ಟಿದ ವಿಶೇಷ ಗೂಡಿನಲ್ಲಿ ಕಂಡು ಬಂದಿದ್ದವು. ಆಗಸ್ಟ್ ಮತ್ತು ಸೆಪ್ಟೆಂಬರ್ 2020 ರ ನಡುವೆ, ಪೂರ್ವ ಕಚ್‌ನ GRK(Great Rann of Kutch) ಯಲ್ಲಿರುವ ಕುಡಾ ಪ್ರದೇಶಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ಮತ್ತು ತಜ್ಞರು ಅಲ್ಲಿ ಸುಮಾರು 1,00,000 ಗೂಡುಗಳಿರುವುದನ್ನು ಗಮನಿಸಿದ್ದರು. ಈ ಹೊಸ ಪ್ರದೇಶದಲ್ಲಿ ಪಕ್ಷಿಗಳ ಸಂತಾನೋತ್ಪತ್ತಿ ಪ್ರಯತ್ನ ಸತತ ಎರಡನೇ ವರ್ಷ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
Climate Change: ಪಕ್ಷಿಗಳಲ್ಲೂ ಡೈವೋರ್ಸ್: ಹೊಸ ಸಂಗಾತಿ ಹುಡುಕುತ್ತಿರುವ ಕಡಲು ಕೋಳಿಗಳು!
ಫ್ಲೆಮಿಂಗೋಗಳು ಬಹಳ ಸೂಕ್ಷ್ಮವಾಗಿರುತ್ತವೆ ಮತ್ತು ತಮ್ಮ ಗೂಡಿಗೆ ತೊಂದರೆಯಾದರೆ ತಮ್ಮ ಮೊಟ್ಟೆಗಳನ್ನು ತ್ಯಜಿಸುತ್ತವೆ. ಮರುಭೂಮಿಯಲ್ಲಿನ ಪ್ರವಾಹದಿಂದಾಗಿ ಕೆಲವು ಮೊಟ್ಟೆಗಳು ಕೊಚ್ಚಿಕೊಂಡು ಹೋಗುತ್ತವೆ ಎಂದು ಅರಣ್ಯ ಅಧಿಕಾರಿಗಳು ಈ ಹಿಂದೆ ಹೇಳಿದ್ದರು. ಮೊಟ್ಟೆಗಳಿಂದ ಮರಿಗಳು ಹೊರಬರಲು ಸುಮಾರು ನಾಲ್ಕು ವಾರಗಳನ್ನು ತೆಗೆದುಕೊಳ್ಳುತ್ತದೆ. ಮೊಟ್ಟೆಯಿಂದ ಮೊಟ್ಟೆಯೊಡೆದು ಮರಿ ಹೊರಬಂದ ನಂತರ, ಒಂದು ಪೋಷಕ ಹಕ್ಕಿ ಆಹಾರಕ್ಕಾಗಿ ಹೊರಟರೆ ಮತ್ತೊಂದು ಮರಿಗಳನ್ನು ನೋಡಿಕೊಳ್ಳುತ್ತದೆ ಎಂದು ಹೇಳುತ್ತಾರೆ ತಜ್ಞರು.