ಆತ್ಮರಕ್ಷಣೆಗಾಗಿ ಹುಡುಗಿಯರು ಯಾರನ್ನೂ ಬೇಕಾದರೂ ಹತ್ಯೆ ಮಾಡಬಹುದು/ ವಿವಾದ ಎಬ್ಬಿಸಿದ ಹೇಳಿಕೆ/ ಹೊರಗೆ ಹೋಗುವಾಗ ಪೆಪ್ಪರ್ ಸ್ಪ್ರೆ ತೆಗೆದುಕೊಂಡು ಹೋಗಿ
ಹೈದರಾಬಾದ್(ಜ 26) 'ಆತ್ಮರಕ್ಷಣೆಗಾಗಿ ಹುಡುಗಿಯರು ಯಾರನ್ನೂ ಬೇಕಾದರೂ ಹತ್ಯೆ ಮಾಡಬಹುದು' ಹೀಗೆಂದು ಹೇಳಿದ್ದು ಹೈದರಾಬಾದ್ ಮೆಟ್ರೊಪಾಲಿಟಿನ್ ಕಾನೂನು ಸೇವೆಗಳ ಪ್ರಾಧಿಕಾರದ(ಎಂಎಲ್ಎಸ್‌ಎ) ಕಾರ್ಯದರ್ಶಿ ಎಂ. ರಾಧಾಕೃಷ್ಣ ಚೌಹಾಣ್.
ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಇಂಥ ಅಭಿಪ್ರಾಯ ನೀಡಿದ್ದು ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಮಾಡಿಕೊಟ್ಟಿದೆ.
ಟೆರೆಸ್ ಗಿಡಗಳಿಗೆ ನೀರಾಕುತ್ತಿದ್ದ ಯುವತಿ ಶೂಟ್ ಮಾಡಿ ಪಾಗಲ್ ಪ್ರೇಮಿ ಎಸ್ಕೇಪ್!
ಮನೆಯಿಂದ ಹೊರ ಹೋಗುವ ವೇಳೆ ಹೆಣ್ಣು ಮಕ್ಕಳಿಗೆ ಪೆಪ್ಪರ್ ಸ್ಪ್ರೆ ತೆಗೆದುಕೊಂಡು ಹೋಗಲು ಹೇಳಿ. ಆತ್ಮರಕ್ಷಣೆಗಾಗಿ ಹತ್ಯೆ ಮಾಡಿದರೆ ಅದು ಅಪರಾಧ ಆಗುವುದಿಲ್ಲ ಎಂದು ಹೇಳಿದ್ದಾರೆ.
ಹುಡುಗಿಯರು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಹಕ್ಕು ಹೊಂದಿದ್ದಾರೆ. ತಮ್ಮ ಮೇಲೆ ದಾಳಿಯಾದರೆ ಅದರಿಂದ ರಕ್ಷಣೆ ಮಾಡಿಕೊಳಳ್ಳುವುದು ಒಂದು ಹಕ್ಕೇ ಆಗುತ್ತದೆ ಎಂದು ಹೇಳಿದರು.