ಕ್ಷುಲ್ಲಕ ಕಾರಣಕ್ಕೆ 25 ವರ್ಷದ ವ್ಯಕ್ತಿಯೋರ್ವನನ್ನು ಆತನ ಮಕ್ಕಳ ಎದುರೇ ತೀರ ಸಮೀಪದಿಂದ ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಮೀರತ್‌ನ ಜೈದಿ ಫಾರ್ಮ್ ನಿವಾಸಿ ಅರ್ಷಾದ್ ಕೊಲೆಯಾದ ಯುವಕ
ಉತ್ತರ ಪ್ರದೇಶ: ಕ್ಷುಲ್ಲಕ ಕಾರಣಕ್ಕೆ 25 ವರ್ಷದ ವ್ಯಕ್ತಿಯೋರ್ವನನ್ನು ಆತನ ಮಕ್ಕಳ ಎದುರೇ ತೀರ ಸಮೀಪದಿಂದ ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಮೀರತ್‌ನ ಜೈದಿ ಫಾರ್ಮ್ ನಿವಾಸಿ ಅರ್ಷಾದ್ ಕೊಲೆಯಾದ ಯುವಕ
ಮಂಗಳವಾರ ರಾತ್ರಿ ಮೀರತ್‌ನ ಲೋಹಿಯಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆರೋಪಿ ಅರ್ಷಾದ್ ತಲೆಗೆ ತೀರ ಸಮೀಪದಿಂದಲೇ ಗುಂಡಿಕ್ಕಿ ಪರಾರಿಯಾಗಿದ್ದಾನೆ. ಈ ಆಘಾತಕಾರಿ ದೃಶ್ಯದ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಆರೋಪಿ ಹಾಗೂ ಕೊಲೆಯಾದ ವ್ಯಕ್ತಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಅಲ್ಲಿದ್ದ ಬೇರೆ ವ್ಯಕ್ತಿ ಇಬ್ಬರ ಜಗಳವನ್ನು ಬಿಡಿಸಿ ಇಬ್ಬರನ್ನು ದೂರ ದೂರ ಮಾಡಿದ್ದಾನೆ. ಇದಾಗಿ ಕ್ಷಣದಲ್ಲಿ ಅರ್ಷಾದ್ ತನ್ನ ಮೊಬೈಲ್ ತೆಗೆದು ನೋಡುತ್ತಿದ್ದ, ಅಷ್ಟರಲ್ಲೇ ಆರೋಪಿ ತನ್ನ ಬಳಿ ಇದ್ದ ಪಾಯಿಂಟ್ ರೇಂಜ್ ಪಿಸ್ತೂಲ್‌ನಿಂದ ಆತನ ತಲೆಗೆ ಗುಂಡಿಕ್ಕಿದ್ದಾನೆ.
ಪತ್ನಿಯ ಜೊತೆ ಚಾಟ್ ಮಾಡ್ತಿದ್ದ ನೆರೆಮನೆಯ ಯುವಕನನ್ನು ಚಾಕು ಇರಿದು ಕೊಂದ ಗಂಡ!
ಹಠಾತ್ ಬಂದೆರಗಿದ್ದ ಗುಂಡಿನ ದಾಳಿಯಿಂದಾಗಿ ಅರ್ಷಾದ್ ಸ್ಥಳದಲ್ಲೇ ನೆಲಕ್ಕೆ ಕುಸಿದು ಸಾವನ್ನಪ್ಪಿದ್ದಾನೆ. ಇದೇ ವೇಳೆ ಗುಂಡಿನ ಸದ್ದಿಗೆ ಅಲ್ಲಿ ಸೇರಿದ ಜನರೆಲ್ಲಾ ದಿಕ್ಕಾಪಾಲಾಗಿ ಓಡಿದ್ದಾರೆ. ಇಬ್ಬರ ನಡುವಿನ ಈ ಹಿಂದಿನ ವೈಷಮ್ಯವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಗುಂಡಿನ ದಾಳಿಗೊಳಗಾದ ಅರ್ಷಾದ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರು ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಆರ್ಷಾದ್ ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಭದನದಲ್ಲಿರುವ ಸ್ವಿಮಿಂಗ್ ಫೂಲ್‌ಗೆ ಸ್ನಾನ ಮಾಡಲು ಬಂದಿದ್ದ. ಇದೇ ವೇಳೆ ಆತನಿಗೆ ಆರೋಪಿ ಬಿಲಾಲ್ ಜೊತೆ ವಾಗ್ವಾದ ಶುರುವಾಗಿದೆ. ಇದರು ತಾರಕಕ್ಕೇರಿದ್ದು ಬಿಲಾಲ್ ತನ್ನ ಬಳಿ ಇದ್ದ ಪಿಸ್ತೂಲ್‌ನಿಂದ ಅರ್ಷಾದ್ ತಲೆಗೆ ಗುಂಡಿಕ್ಕಿದ್ದಾನೆ. ಕೂಡಲೇ ಕುಸಿದು ಬಿದ್ದ ಅರ್ಷಾದ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತಾದರೂ ಯಾವುದೇ ಪ್ರಯೋಜನವಾಗಿಲ್ಲ.
ಮೈಸೂರಿನಲ್ಲಿ ಗುರಾಯಿಸಿ ನೋಡಿದಕ್ಕೆ ಯುವಕನ ಕೊಲೆ: ನಾಲ್ವರ ಬಂಧನ
ವಿಚಾರ ತಿಳಿದು ಪೊಲೀಸರು ಸ್ಥಳಕ್ಕೇ ಆಗಮಿಸಿದ್ದು, ಅರ್ಷಾದ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಕೊಲೆಯಾದ ಅರ್ಷಾದ್ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಬಿಲಾಲ್ ವಿರುದ್ಧ ಕೇಸು ದಾಖಲಾಗಿದೆ. ಘಟನೆಯ ಬಳಿಕ ಪರಾರಿಯಾಗಿರುವ ಆತನ ಪತ್ತೆಗೆ ಪೊಲೀಸ್ ತಂಡ ರಚನೆ ಆಗಿದೆ.
UP – मेरठ में Live मर्डर का Video –
स्विमिंग पूल में नहाने गए 25 वर्षीय अरशद की गोली मारकर हत्या। आरोपी बिलाल और दानिश फरार हैं। दोनों पक्षों में 2 दिन पहले कोई विवाद हुआ, उसी के चलते ये हत्या हुई।
🚨 Sensitive Visual 🚨 pic.twitter.com/YI5y6pTfIS