ಉನ್ನಾವೋ ಅತ್ಯಾಚಾರ: ಉಚ್ಛಾಟಿತ ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ!

By Suvarna News  |  First Published Dec 20, 2019, 2:33 PM IST

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಬಿಜೆಪಿ ಉಚ್ಛಾಟಿತ ಶಾಸಕ| ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಕುಲದೀಪ್ ಸೆಂಗರ್| ಕುಲದೀಪ್ ಸೆಂಗರ್'ಗೆ 25 ಲಕ್ಷ ರೂ. ದಂಡ ವಿಧಿಸಿದ ದೆಹಲಿಯ ತೀಸ್ ಹಜಾರಿ ಕೋರ್ಟ್| ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ ನ್ಯಾಯಧೀಶ ಧರ್ಮೇಶ್ ಶರ್ಮಾ| ಸಂತ್ರಸ್ತೆಗೆ 10 ಲಕ್ಷ ರೂ. ಪರಿಹಾರ ನೀಡಲು ನ್ಯಾಯಾಲಯ ಆದೇಶ|


ನವದೆಹಲಿ(ಡಿ.20): ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಉಚ್ಛಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗರ್'ಗೆ ಜೀವಾವಧಿ ಶಿಕ್ಷೆ ಹಾಗೂ 25 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ತೀಸ್ ಹಜಾರಿ ಕೋರ್ಟ್, ಕುಲದೀಪ್ ಸೆಂಗರ್ ಅಪರಾಧಿ ಎಂದು ತೀರ್ಪು ನೀಡಿತು. ನ್ಯಾಯಾಧೀಶರು ತೀರ್ಪು ಓದುತ್ತಿದ್ದಂತೇ ಕುಲದೀಪ್ ಸೆಂಗರ್ ನ್ಯಾಯಾಲಯದಲ್ಲೇ ಕಣ್ಣೀರಿಟ್ಟರು.

2017 Unnao rape case: BJP expelled MLA Kuldeep Singh Sengar sentenced to life imprisonment by Delhi's Tis Hazari Court pic.twitter.com/SqBcCmzjdc

— ANI (@ANI)

Tap to resize

Latest Videos

undefined

ಸಂತ್ರಸ್ಥೆಯ ಮೇಲೆ ಕುಲದೀಪ್ ಅತ್ಯಾಚಾರ ನಡೆಸಿದ್ದು ಸಾಬೀತಾಗಿದ್ದು, ಅವರಿಗೆ ಜೀವಾವಧಿ ಶಿಕ್ಷೆ ಘೋಷಿಸುವುದಾಗಿ ನ್ಯಾಯಾಧೀಶ ಧರ್ಮೇಶ್ ಶರ್ಮಾ ಪ್ರಕಟಿಸಿದರು.

ಉನ್ನಾವ್‌ ರೇಪ್‌ ಕೇಸ್‌: ಬಿಜೆಪಿ ಉಚ್ಛಾಟಿತ ಶಾಸಕ ದೋಷಿ!

ಅಲ್ಲದೇ ಒಟ್ಟು 25 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಅದರಲ್ಲಿ 10 ಲಕ್ಷ ರೂ. ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ.

The Court also orders CBI to assess threat perception and offer the necessary protection to the victim and her family; CBI has also been directed to provide safe house to victim and her family. https://t.co/Y0DgUlOmvk

— ANI (@ANI)

2017ರಲ್ಲಿ ತಮ್ಮ ಮೇಲೆ ಕುಲದೀಪ್ ಸೆಂಗರ್ ಅತ್ಯಾಚಾರ ನಡೆಸಿದ್ದರು ಎಂದು ಅವರ ಅಪ್ರಾಪ್ತೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಡಿಸೆಂಬರ್ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!