ನೂತನ ಶಿಕ್ಷಣ ನೀತಿಯಿಂದ ಉದ್ಯೋಗದಾತರ ಸೃಷ್ಟಿ: ಮೋದಿ

By Kannadaprabha News  |  First Published Aug 2, 2020, 8:20 AM IST

ಇತ್ತೀಚೆಗೆ ಘೋಷಿಸಲಾಗಿರುವ ನೂತನ ಶಿಕ್ಷಣ ನೀತಿಯಿಂದ ‘ಉದ್ಯೋಗ ಬಯಸುವವರು’ ಸೃಷ್ಟಿಆಗುವುದಿಲ್ಲ. ಬದಲಾಗಿ ‘ಉದ್ಯೋಗದಾತರು’ ಸೃಷ್ಟಿಆಗಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.


ನವದೆಹಲಿ(ಆ.02): ಇತ್ತೀಚೆಗೆ ಘೋಷಿಸಲಾಗಿರುವ ನೂತನ ಶಿಕ್ಷಣ ನೀತಿಯಿಂದ ‘ಉದ್ಯೋಗ ಬಯಸುವವರು’ ಸೃಷ್ಟಿಆಗುವುದಿಲ್ಲ. ಬದಲಾಗಿ ‘ಉದ್ಯೋಗದಾತರು’ ಸೃಷ್ಟಿಆಗಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

"

Tap to resize

Latest Videos

undefined

‘ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌’ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ಶಿಕ್ಷಣದ ಉದ್ದೇಶ ಹಾಗೂ ಅದರಲ್ಲಿನ ಒಳಅಂಶಗಳನ್ನು ಪರಿವರ್ತಿಸುವುದು ನೂತನ ಶಿಕ್ಷಣ ನೀತಿಯ ಉದ್ದೇಶವಾಗಿದೆ ಎಂದರು.

ಬೆಂಗಳೂರಿನ ದೊಡ್ಡ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಬೆರಳೆಣಿಕೆ ಸೋಂಕಿತರು..!

ಸಂಶೋಧನೆ, ಸೃಜನಶೀಲತೆ ಹಾಗೂ ಕಲಿಕೆ ಅಗತ್ಯವಾಗಿರುವ ಸಮಯವಿದು. ಹೊಸ ಶಿಕ್ಷಣ ನೀತಿ ಅದನ್ನೇ ನೀಡಲಿದೆ. 2035ರ ವೇಳೆಗೆ ಉನ್ನತ ಶಿಕ್ಷಣದ ಅನುಪಾತವನ್ನು ಶೇ.50ಕ್ಕೆ ಏರಿಸುವ ಗುರಿ ಹೊಂದಿದೆ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದಲೇ ಶಿಕ್ಷಣ ಎಟಕುವಂತಾಗಲು ಹೊಸ ನೀತಿ ಸಹಕರಿಸಲಿದೆ. ಮಕ್ಕಳಿಗೆ ಏನು ಬೇಕೋ ಅದನ್ನು ಕಲಿಸುವುದರ ಮೇಲೆ ಶಿಕ್ಷಣ ನೀತಿಯು ಗಮನ ಹರಿಸಲಿದೆ. ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತವೂ ಪರಿಣಾಮಕಾರಿ ಭೂಮಿಕೆ ನಿಭಾಯಿಸಲು ಸಜ್ಜಾಗಬೇಕು. ಬಡವರು ಉತ್ತಮ ಜೀವನ ನಿರ್ವಹಿಸುವಂತಾಗುವಲ್ಲಿ ಹಾಗೂ ನಿರಾಳ ಜೀವನದ ಗುರಿ ತಲುಪುವಂತಾಗುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

21ನೇ ಶತಮಾನದ ಯುವಕರ ಆಶೋತ್ತರ ಗಮನದಲ್ಲಿ ಇರಿಸಿಕೊಂಡು ಶಿಕ್ಷಣ ನೀತಿ ರೂಪಿಸಲಾಗಿದೆ. ಶಿಕ್ಷಣವನ್ನು ಇನ್ನಷ್ಟುಸುಧಾರಿತ ಹಾಗೂ ಆಧುನಿಕಗೊಳಿಸಲಾಗುತ್ತದೆ. ಶಿಕ್ಷಣದ ಗುಣಮಟ್ಟದ ಮೇಲೆ ನೀತಿಯು ಗಮನ ಕೇಂದ್ರೀಕರಿಸುತ್ತದೆ ಎಂದರು.

ಕೊನೆಗೂ BIEC ಕೋವಿಡ್‌ ಸೆಂಟರ್‌ಗೆ ಸಿಕ್ತು ಉದ್ಘಾಟನಾ ಭಾಗ್ಯ; ಸೋಂಕಿತರಿಗೆ 1100 ಬೆಡ್‌ಗಳು ಲಭ್ಯ

ಪಾಟಿಚೀಲದ (ಶಾಲಾಚೀಲ) ಭಾರದಿಂದ ಕಲಿಕೆಯ ಮೇಲೆ ಇನ್ನು ಗಮನ ಬದಲಾಗಲಿದೆ. ವಿಷಯಗಳನ್ನು ಕೇವಲ ಜ್ಞಾಪಕದಲ್ಲಿ ಇರಿಸಿಕೊಲ್ಳುವ ಬದಲು ವಿಮರ್ಶೆಗೆ ಒಳಪಡಿಸಲು ಸಾಧ್ಯವಾಗಲಿದೆ ಎಂದೂ ಅವರು ಹೇಳಿದರು.

ಇದೇ ವೇಳೆ 1ರಿಂದ 5ನೇ ತರಗತಿವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಆದ್ಯತೆ ನೀಡಿರುವುದನ್ನು ಪ್ರಸ್ತಾಪಿಸಿದ ಅವರು, ‘ಭಾರತದ ಭಾಷೆಗಳು ಇನ್ನಷ್ಟುಬೆಳೆಯುತ್ತವೆ. ಇದರಿಂದ ಭಾರತ ಜ್ಞಾನ ಬೆಳೆಯುತ್ತದಷ್ಟೇ ಅಲ್ಲ, ಏಕತೆಯನ್ನೂ ಬಲಗೊಳಿಸುತ್ತದೆ’ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

click me!