ಸ್ವಾವಲಂಬಿ ಭಾರತಕ್ಕೆ ಮದ್ದು ಯಾವುದೆಂದು ವಿವರಿಸಿದ ವಿತ್ತ ಸಚಿವೆ ನಿರ್ಮಲಾ!

By Suvarna News  |  First Published May 13, 2020, 5:25 PM IST

ಪ್ರಧಾನಿ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ವೆಚ್ಚದ ಬಜೆಟ್‌ ವಿವರ ಪ್ರಕಟಿಸಿದ ನಿರ್ಮಲಾ ಸೀತಾರಾಮನ್| ಕೊರೋನಾದಿಂದಾದ ನಷ್ಟ ಪರಿಹರಿಸಲು ಕೇಂದ್ರದಿಂದ ಬೃಹತ್ ನೆರವು ಘೋಷಣೆ| ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಬಜೆಟ್


ನವದೆಹಲಿ(ಮೇ.13): ಕೊರೋನಾ ಅಟ್ಟಹಾಸದಿಂದ ಬಡ ವರ್ಷದ ಜನರಿಗೆ, ಕಾರ್ಮಿಕರಿಗೆ ಸೇರಿದಂತೆ ಅನೇಕ ಮಂದಿಗೆ ಅಪಾರ ಸಮಸ್ಯೆಗಳೆದರಾಗಿದೆ. ಕೊರೋನಾದಿಂದಾದ ನಷ್ಟ ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾತ್ರಿ ಬರೋಬ್ಬರಿ 20 ಲಕ್ಷ ಕೋಟಿ ಮೊತ್ತದ ಆರ್ಥಿಕ ಬಜೆಟ್ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ಆಯೋಜಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದರ ವಿವರ ಪ್ರಕಟಿಸಿದ್ದಾರೆ. 

ಸ್ಥಳೀಯ ಉತ್ಪನ್ನ ಖರೀದಿಸಿ: ಚೀನಿ ಉತ್ಪನ್ನ ತ್ಯಜಿಸಲು ಮೋದಿ ಪರೋಕ್ಷ ಮನವಿ!

Latest Videos

ಆರ್ಥಿಕ ಪ್ಯಾಕೇಜ್‌ ಘೋಷಣೆ ಬಗ್ಗೆ ಮಾಹಿತಿ ನಿಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಅನೇಕ ವರ್ಗದ ಜನರೊಂದಿಗೆ, ತಜ್ಞರೊಂದಿಗೆ, ಇಲಾಖೆ ಹಾಗೂ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ದೂರದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಈ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಈ ಮೂಲಕ ಆತ್ಮನಿರ್ಭರ್ ಭಾರತ್ ಅಭಿಯಾನ್ (ಸ್ವಾವಲಂಭಿ ಭಾರತ ಅಭಿಯಾನ)ಗೆ ಚಾಲನೆ ನೀಡಿದ್ದಾರೆ. ಈ ಅಭಿಯಾನದ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚು ಮಹತ್ವ ನೀಡಿ, ಇದನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದೇ ಇದರ ಗುರಿ. ವೆಂಟಿಲೇಟರ್ ಹಾಗೂ ಒಪಿಪಿಇ ಕಿಟ್ ಉತ್ಪಾದನೆಯೂ ಈ ಅಭಿಯಾನದಡಿಯಲ್ಲಿ ಸೇರ್ಪಡೆಯಾಗುತ್ತದೆ ಎಂದಿದ್ದಾರೆ.

Live from Delhi: FM Nirmala Sitharaman briefs the media https://t.co/qsYh6pCIYW

— ANI (@ANI)

ಐದು ಸ್ತಂಭಗಳ ಆಧಾರದ ಮೇಲೆ ಸ್ವಾವಲಂಭಿ ಭಾರತದ ನಿರ್ಮಾಣ ಮಾಡುವ ಗುರಿ ನಮ್ಮದಾಗಿದೆ ಎಂದಿರುವ ನಿರ್ಮಲಾ ಸೀತಾರಾಮನ್, ಈ ಪ್ಯಾಕೇಜ್ ಮಾಹಿತಿಯನ್ನು‌ ಹಂತ ಹಂತವಾಗಿ ನೀಡುವುದಾಗಿಯೂ ತಿಳಿಸಿದ್ದಾರೆ. ಇಂದು ಬುಧವಾರ ನೀಡಿರುವ ವಿಸ್ತರಣೆ ಹೀಗಿದೆ.

20 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು?

* 15 ಸಾವಿರ ಕೋಟಿ ತುರ್ತು ಆರೋಗ್ಯ ನಿಧಿ

* 3 ತಿಂಗಳವರೆಗೆ ಎಟಿಎಂನಲ್ಲಿ ವಿತ್‌ ಡ್ರಾ ಉಚಿತ, ಯಾವುದೇ ಶುಲ್ಕ ಇಲ್ಲ

* ಸಣ್ಣ ಹಾಗೂ ಅತಿ ಸಣ್ಣ ಉದ್ಯಮಿಗಳಿಗೆ 3 ಲಕ್ಷ ಕೋಟಿ ಸಾಲ: 25 ಕೋಟಿ ರೂ. ಸಾಲ, 1000 ಕೋಟಿ ವ್ಯವಹಾರ ಉದ್ದಿಮೆಗಳ ಸಾಲ.  ಈ ಯೋಜನೆಯಿಂದ 45 ಲಕ್ಷ ಫ್ಯಾಕ್ಟರಿಗಳಿಗೆ ಸಹಾಯ. ಮುಂದಿನ ನಾಲ್ಕು ವರ್ಷದ ಅವಧಿಗೆ ಅಕ್ಟೋಬರ್ 31 ರಿಂದ ಸಾಲ ಸೌಲಭ್ಯ. ಸಾಲ ಮತ್ತು ಬಡ್ಡಿಗೆ ಭದ್ರತೆ ಒದಗಿಸುವ ಅವಶ್ಯಕತೆ ಇಲ್ಲ.

* NBFCಗೆ 45 ಸಾವಿರ ಕೋಟಿ ಸಾಲ

* ತೊಂದರೆಯಲ್ಲಿರುವ ಸಣ್ಣ ಉದ್ಯಮಿಗಳಿಗೆ 20 ಸಾವಿರ ಕೋಟಿ ವಿಶೇಷ ಸಹಾಯಧನ.

ಜೂನ್ 1 ರಿಂದ ಕೇವಲ ದೇಶಿಯ ಉತ್ಪನ್ನ ಮಾರಾಟ; ಗೃಹ ಸಚಿವರ ಆದೇಶ

ಉದ್ಯಮ ಕ್ಷೇತ್ರ

* ಸಣ್ಣ, ಅತಿ ಸಣ್ಣ ಕಂಪನಿಗಳಿಗೆ 4 ಸಾವಿರ ಕೋಟಿ ಸಹಾಯಧನ: ಈ ಕಂಪನಿಗಳ ಸಾಲಕ್ಕೆ ಸರ್ಕಾರದ ಗ್ಯಾರಂಟಿ. ಇದರಿಂದ 2 ಲಕ್ಷ ಸಣ್ಣ, ಅತಿ ಸಣ್ಣ, ಮಧ್ಯಮ ಉದ್ಯಮಿಗಳಿಗಗೆ ಪ್ರಯೋಜನ. 4 ವರ್ಷದ ಸಾಲ ಪಡೆದವರಿಗೆ 1 ವರ್ಷ ಬಡ್ಡಿ ಕಟ್ಟುವಂತಿಲ್ಲ.

* ಉದ್ಯಮ ವಿಸ್ತರಣೆ ಬಯಸುವವರಿಗೆ ಕೊಡುಗೆ, 50 ಸಾವಿರ ಕೋಟಿ ನೆರವು.

* ಹೂಡಿಕೆ ಮಿತಿ ಹೆಚ್ಚಳಕ್ಕೆ ಅನುಮತಿ. ಹೂಡಿಕೆ ಹೆಚ್ಚಳವಾದರೂ MSME ಎಂದು ಪರಿಗಣಿಸುದಿಲ್ಲ. ಉದ್ಯಮ ದೊಡ್ಡದಾದರೂ ಮಧ್ಯಮ ಕೈಗಾರಿಕೆಯಾಗಿಯೇ ಪರಿಗಣನೆ.

* 1 ಕೋಟಿವರೆಗಿನ ಬಂಡವಾಳ ಉದ್ದಿಮೆಗಳು ಅತಿ ಸಣ್ಣ ವ್ಯಾಪ್ತಿಗೆ. 25 ಲಕ್ಷದಿಂದ 1 ಕೋಟಿಗೆ ಮಿತಿ ಹೆಚ್ಚಳ. 1 ಕೋಟಿ ಬಂಡವಾಳ, 5 ಕೋಟಿ ವ್ಯವಹಾರವಿದ್ದರೂ ಅತಿ ಸಣ್ಣ ಉದ್ದಿಮೆ ಎಂದೇ ಪರಿಗಣನೆ. 10 ಕೋಟಿ ಬಂಡವಾಳ, 50 ಕೋಟಿ ವ್ಯವಹಾರವಿದ್ದರೂ ಸಣ್ಣ ಉದ್ದಿಮೆ. 20 ಕೋಟಿ ಬಂಡವಾಳ, 100 ಕೋಟಿ ವ್ಯವಹಾರ ನಡೆದರೆ ಮಧ್ಯಮ ಉದ್ದಮೆ.

ಗುತ್ತಿಗೆದಾರರಿಗೆ ಬಂಪರ್

* 200 ಕೋಟಿವರೆಗಿನ ಗುತ್ತಿಗೆ ಭಾರತೀಯರಿಗೇ ನೀಡಬೇಕು, ಗ್ಲೋಬಲ್ ಟೆಂಡರ್ ಇರುವುದಿಲ್ಲ. ಟೆಂಡರ್ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆ. ಭಾರತೀಯ ಕಂಪನಿಗಳೊಂದಿಗೆ ವಿದೇಶೀ ಕಂಪನಿಗಳ ಸ್ಪರ್ಧೆಗೆ ಅವಕಾಶ ಇಲ್ಲ.

* ಸರ್ಕಾರದಿಂದ ಬರಬೇಕಾದ ಉದ್ಯಮಿಗಳ ಬಾಕಿ ಹಣ 45 ದಿನದಲ್ಲಿ ಪಾವತಿ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೆ  ಬಾಕಿ ಣ ಬಿಡುಗಡೆ. ಭಾರತೀಯ ಕಂಪನಿಗಳಿಂದಲೇ 22 ಕೋಟಿವರೆಗಿನ ಸರ್ಕಾರಿ ಖರೀದಿ.

ಮುಂದಿನ ಮೂರು ತಿಂಗಳು PF ಕಟ್ಟುವಂತಿಲ್ಲ

* ಇಪಿಎಫ್ ಪಾವತಿ ಅವಧಿ ವಿಸ್ತರಣೆ. ಕಂಪನಿಗಳ ಪಿಎಫ್‌ ಹಣವನ್ನು ಸರ್ಕಾರವೇ ಕಟ್ಟಲಿದೆ. 2500 ಕೋಟಿ ರೂ. ಸರ್ಕಾರದಿಂದಲೇ ಸಂದಾಯ. 72.22 ಲಕ್ಷ ನೌಕರರಿಗೆ ಇದರಿಂದ ಸಹಾಯ. 3.60 ಲಕ್ಷ ಕಂಪನಿಗಳಿಗೆ ಇದರಿಂದ ಲಾಭ.

* ಮಧ್ಯಮ ಗಾತ್ರದ ಉದ್ದಿಮೆಗಳು ಶೇ.10ರಷ್ಟು ಪಿಎಫ್‌ ಕಟ್ಟಬೇಕು.

* ಉದ್ಯೋಗಿಗಳು ಹಾಗೂ ಉದ್ಯೋಗದಾತರಿಗೆ 6750 ಕೋಟಿ ಲಾಭ.

* NBFC ಸಂಸ್ಥೆಗಳಿಂದ ಸಾಲ ಪತ್ರ ಖರೀದಿ

ಮೇ.17ರ ಬಳಿಕ ಮತ್ತೆ ಲಾಕ್‌ಡೌನ್ ಫಿಕ್ಸ್: ಹೊಸ ರೀತಿ ಎನ್ನುವುದೇ ಸಸ್ಪೆನ್ಸ್...!

ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 30 ಸಾವಿರ ಕೋಟಿ ರೂ.

ವಿದ್ಯುತ್ ಸರಬರಾಜು ಕಂಪನಿಗಳಿಗೆ 90 ಸಾವಿರ ಕೋಟಿ ರೂ. ಸಹಾಯಧನ

* ವಿದ್ಯುತ್ ಬಳಕೆದಾರರಿಗೆ ಅನುಕೂಲ ಮಾಡುವ ಕಂಪನಿಗಳಿಗೆ ಮಾತ್ರ ಸಹಾಯ

ಕೇಂದ್ರ ಸರ್ಕಾರಿ ಗುತ್ತಿಗೆದಾರರಿಗೆ ರಿಲೀಫ್

* ಕಾಮಗಾರಿ ಪೂರ್ಣಗೊಳಿಸಲು 6 ತಿಂಗಳ ಅವಧಿ ವಿಸ್ತರಣೆ, ಗುತ್ತಿಗೆದಾರರ ಸಾಲಕ್ಕೆ ಕೇಂದ್ರ ಸರ್ಕಾರದಿಂದಲೇ ಭದ್ರತೆ. 

* ನಗಾರಾಭಿವೃದ್ಧಿ ಇಲಾಖೆಯಿಂದ ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿ. ಕಾಮಗಾರಿ ವಿಳಂಬವಾದರೆ ಯಾವುದೇ ದಂಡ ವಿಧಿಸುವಂತಿಲ್ಲ. ಎಷ್ಟು ಕಾಮಗಾರಿಯಾಗುತ್ತದೋ ಅಷ್ಟಕ್ಕೆ ಮಾತ್ರ ಕೇಂದ್ರದ ಗ್ಯಾರಂಟಿ.

ಮೋದಿ ಭಾಷಣ; ಸ್ವಾವಲಂಬಿ ಭಾರತ ನಿರ್ಮಾಣಕ್ಕೆ 20 ಲಕ್ಷ ಕೋಟಿ ರೂ. ಪ್ಯಾಕೇಜ್, ಲಾಕ್‌ಡೌನ್ 4 ಘೋಷಣೆ

ತೆರಿಗೆದಾರರಿಗೆ ರಿಲೀಫ್

* ನಾಳೆ, ಗುರುವಾರದಿಂದ 2021 ಮಾರ್ಚ್ 31ರವರೆಗೆ ಟಿಡಿಎಸ್‌ ಕಡಿತ

* TDS/ TCSನಲ್ಲಿ ಶೇ. 25ರಷ್ಟು ಕಡಿತ. 

* ಕೇಂದ್ರ ಸರ್ಕಾರಕ್ಕೆ 50 ಸಾವಿರ ಕೋಟಿ. ರೂ. ಖೋತಾ.

* ಬಾಕಿ ಇರುವ ಟಿಡಿಎಸ್‌ ಈಗಾಗಲೇ ಬಿಡುಗಡೆ.

* ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕರೆಗೆ ನವೆಂಬರ್ ಅಂತ್ಯದವರೆಗೆ ಕಾಲಾವಕಾಶ.

* ವಿವಾದ್‌ ಸೆ ವಿಶ್ವಾಸ್ ಯೋಜನೆ ಡಿಸೆಂಬರ್ 31ರವರೆಗೆ ವಿಸ್ತರಣೆ. ತೆರಿಗೆ ವಿವಾದ ಬಗೆಹರಿಸಿಕೊಳ್ಳುವ ಯೋಜನೆ ವಿಸ್ತರಣೆ.

ನಿರ್ಮಲಾ ಸೀತಾರಾಮನ್ ಮಂಡಿಸಿ ಬಜೆಟ್‌ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

click me!