Latest Videos

ಮುತ್ತೈದೆಯರು ಕುಂಕುಮ ಇಡುವಂತಿಲ್ಲ, ಕಾಲ್ಗೆಜ್ಜೆಯೂ ತೊಡುವಂತಿಲ್ಲ; ಅಲಂಕಾರಕ್ಕೆ ಹೆದರ್ತಾರೆ ಇಲ್ಲಿಯ ಮಹಿಳೆಯರು

By Mahmad RafikFirst Published May 23, 2024, 10:27 PM IST
Highlights

ಈ ಗ್ರಾಮದ ಮಹಿಳೆಯರಿಗೆ ಲಿಪ್‌ಸ್ಟಿಕ್, ಪೌಡರ್ ದೂರದ ಮಾತು. ಸರಳವಾಗಿಯೂ ಅಲಂಕಾರ ಮಾಡಿಕೊಳ್ಳಲು ಹೆದರುತ್ತಾರೆ. ಇದಕ್ಕೆ ಕಾರಣ ಗ್ರಾಮದಲ್ಲಿರುವ ಆ ಭಯ.

ನವದೆಹಲಿ: ಹಿಂದೂ ಸಂಪ್ರದಾಯದಲ್ಲಿ ಮುತ್ತೈದೆ ಅಂದ್ರೆ ಹಣೆಗೆ ಕುಂಕುಮ, ಮುಡಿ ತುಂಬಾ ಹೂ, ಕೈಯಲ್ಲಿ ಬಳೆ, ಕಾಲಲ್ಲಿ ಗೆಜ್ಜೆ, ಕೊರಳಲ್ಲಿ ಮಾಂಗಲ್ಯ ಸರ ಧರಿಸೋದು  ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.  ಇಲ್ಲೊಂದು ಗ್ರಾಮವಿದೆ. ಇಲ್ಲಿಯ ಮಹಿಳೆಯರು ಅಲಂಕಾರ ಅಂದ್ರೆ ಹೆದರಿಕೊಳ್ಳುತ್ತಾರೆ. ಮುತ್ತೈದೆಯರು ಕುಂಕುಮ ಸಹ ಹಚ್ಚಿಕೊಳ್ಳಲು.

ಮದುವೆ, ಹಬ್ಬ ಸೇರಿದಂತೆ ಇತರೆ ಸಮಾರಂಭಗಳು ಬಂದರೆ ಮಹಿಳೆಯರಿಗೆ ಹೇಗೆ ತಯಾರು ಆಗಬೇಕು ಅನ್ನೋದು ದೊಡ್ಡ ಪ್ರಶ್ನೆ ಎದುರಾಗುತ್ತದೆ. ಸೀರೆ ಬಣ್ಣಕ್ಕೆ ಮ್ಯಾಚಿಂಗ್ ಆಗೋ ಬಳೆ, ಆಭರಣ, ಲಿಪ್‌ಸ್ಟಿಕ್ ಸೇರಿದಂತೆ ಹಲವು ವಸ್ತುಗಳನ್ನು ಹುಡುಕುತ್ತಾರೆ. ಈ ಗ್ರಾಮದ ಮಹಿಳೆಯರಿಗೆ ಲಿಪ್‌ಸ್ಟಿಕ್, ಪೌಡರ್ ದೂರದ ಮಾತು. ಸರಳವಾಗಿಯೂ ಅಲಂಕಾರ ಮಾಡಿಕೊಳ್ಳಲು ಹೆದರುತ್ತಾರೆ. 

ಇದಕ್ಕೆ ಕಾರಣ ಗ್ರಾಮದಲ್ಲಿರುವ ಆ ಭಯ. ವಿಚಿತ್ರ ಭಯದ ಕಾರಣ ಈ ಗ್ರಾಮಕ್ಕೆ ಬರುವ ಮಹಿಳೆಯರು ಸಹ ಕುಂಕುಮ ಹಚ್ಚಿಕೊಳ್ಳಲ್ಲ, ಕಾಲ್ಗಜ್ಜೆಯೂ ಹಾಕಿಕೊಳ್ಳಲ್ಲ,ಕುರ್ಚಿಯ ಮೇಲೆಯೂ ಕುಳಿತುಕೊಳ್ಳಲ್ಲ ಎಂದು ವರದಿಯಾಗಿದೆ.

ಎಲ್ಲಿದೆ ಈ ಗ್ರಾಮ?

ಛತ್ತೀಸಗಢ ರಾಜ್ಯದ ಧಮ್ತರಿ ಜಿಲ್ಲೆಯಿಂದ 90 ಕಿ.ಮೀ. ದೂರದ ಸಂದ್ಬಾಹಾರ ಗ್ರಾಮದಲ್ಲಿ ಈ ವಿಚಿತ್ರ ಪದ್ಧತಿ ಇದೆ. ಈ ಗ್ರಾಮದಲ್ಲಿ ಸುಮಾರು 40 ಕುಟುಂಬಗಳು ವಾಸವಾಗಿವೆ. ಇಲ್ಲಿಯ ಮಹಿಳೆಯರಿಗೆ ಮಂಚದ ಮಲಗಲು ಮತ್ತು ಕುರ್ಚಿಯ ಮೇಲೆ ಕುಳಿತುಕೊಳ್ಳಲು ಅನುಮತಿ ಸಹ ಇಲ್ಲ.  ಈ ಎಲ್ಲಾ ನಿಬಂಧನೆಗಳು ಯಾಕೆ ಎಂಬುದನ್ನು ಗ್ರಾಮದ ಹಿರಿಯ ವ್ಯಕ್ತಿ ಶಿಶುದಾಸ್ ಮಾಣಿಕ್ ವಿವರಿಸುತ್ತಾರೆ.

ಒಂದು ಲೇಖನದಿಂದ ಹುಟ್ಟಿದ ಎರಡು ಪ್ರಶ್ನೆಯಿಂದ ಕೋಲ್ಕತ್ತಾದ IIMನಲ್ಲಿ ಸಿಕ್ತು ಸೀಟ್

ಇಂದು ನಾವು ಚಂದ್ರನ ಮೇಲೆ ತಲುಪಿರಬಹುದು. ಆದ್ರೆ ಇಂದೂ ಸಹ ಹಲವು ಕಡೆ ನಮ್ಮ ಹಳೆಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗುತ್ತಿರೋದನ್ನು ಓದುತ್ತಿರುತ್ತೇವೆ. ಅದೇ ರೀತಿ ನಮ್ಮ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳುತ್ತಾರೆ. ಯಾರು ಸಹ ಮಹಿಳೆಯರ ಮೇಲೆ ಒತ್ತಡ ಹಾಕಲ್ಲ. ಎಲ್ಲರೂ ಸ್ವಯಂ ಪ್ರೇರಣೆಯಿಂದ ಈ ನಿಯಮಗಳನ್ನು ಪಾಲನೆ ಮಾಡುತ್ತಾರೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ತಲೆಮಾರುಗಳಿಂದ ನಡೆದುಕೊಂಡು ಬಂದ ಪದ್ಧತಿ

ನಮ್ಮೂರಿನ ಮಹಿಳೆಯರು ಯಾವುದೇ ರೀತಿಯಲ್ಲಿಯೂ ಅಲಂಕಾರ ಮಾಡಿಕೊಳ್ಳಲ್ಲ. ಮರದಿಂದ ಮಾಡಲ್ಪಟ್ಟ ಯಾವುದೇ ವಸ್ತುಗಳ ಮೇಲೆಯೂ ಮಹಿಳೆಯರು ಕುಳಿತುಕೊಳ್ಳಲ್ಲ. 12 ತಿಂಗಳು ನೆಲದ ಮೇಲೆಯೇ ಮಲಗುತ್ತಾರೆ. ದೇವಿಯ ಕೋಪದಿಂದ ಪಾರಾಗಲು ತಲೆಮಾರುಗಳಿಂದ ಈ ರೀತಿ ನಡೆದುಕೊಂಡು ಬರಲಾಗುತ್ತಿದೆ. ಯಾರು ಈ ಪದ್ದತಿ ಪಾಲನೆ ಮಾಡಲ್ಲವೋ ಅವರು ದೇವಿಯ ಕೋಪಕ್ಕೆ ತುತ್ತಾಗಿ ಪ್ರಾಣಾಪಾಯಕ್ಕೆ ಸಿಲುಕುತ್ತಾರೆ. ಈ ಒಂದು ಭಯದಿಂದ ಪದ್ಧತಿ ಮುಂದುವರಿದುಕೊಂಡು ಬಂದಿದೆ ಎಂದು ಹಿರಿಯರು ಹೇಳುತ್ತಾರೆ. 

ಮದುವೆ ಆಗ್ತಿದೆ ಇಬ್ಬರು ಮಾಜಿ ಗೆಳೆಯರನ್ನು ಹೇಗೆ ಮರೆಯಲಿ ಎಂದು ಕೇಳಿದ ಯುವತಿಗೆ ನೆಟ್ಟಿಗರು ಕೊಟ್ರು ಟಿಪ್ಸ್

 

ನಿಯಮ ಉಲ್ಲಂಘನೆ ಮಾಡಿದರೆ ಏನಾಗುತ್ತೆ?

ಗ್ರಾಮದ ಬೆಟ್ಟದ ಮೇಲೆ ಕಾರಿಪಟ್ ದೇವಿ ವಾಸವಾಗಿದ್ದಾಳೆ. ಈ ನಿಯಮಗಳ ಪಾಲನೆ ಆಗದಿದ್ದರೆ ದೇವಿ ಕೋಪಗೊಳ್ಳುತ್ತಾಳೆ. ದೇವಿಯ ಕೋಪಗೊಂಡರೆ ಗ್ರಾಮದಲ್ಲಿ ಸಂಕಷ್ಟಗಳು ಉಂಟಾಗುತ್ತವೆ. ನಿಯಮ ಪಾಲನೆ ಮಾಡದಿರುವವರ ಜೀವಕ್ಕೂ ಅಪಾಯವುಂಟಾಗುವ ಸಾಧ್ಯತೆ ಇರುತ್ತದೆ ಎಂದು ಶಿಶುದಾಸ್ ಪದ್ಧತಿ ಆಚರಣೆಯ ಹಿಂದಿನ ಕಾರಣವನ್ನು ವಿವರಿಸುತ್ತಾರೆ.

1960ರಲ್ಲಿ ಮಹಿಳೆಯೊಬ್ಬರು ಈ ನಿಯಮ ಪಾಲನೆ ಮಾಡಿರಲಿಲ್ಲ. ಇದರ ಪರಿಣಾಮ ಕೆಲವೇ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮಹಿಳೆ ಸಾವನ್ನಪ್ಪಿದರು. ಹಾಗಾಗಿ ಯಾರೂ ಸಹ ಈ ನಿಯಮ ಉಲ್ಲಂಘನೆ ಮಾಡಲು ಮುಂದಾಗಲ್ಲ ಎಂದು ಶಿಶುದಾಸ್ ವಿವರಿಸುತ್ತಾರೆ.

click me!