ಕೊರೋನಾ ವೈರಸ್ ಭೀತಿಯಿಂದಾಗಿ ಎರಡನೇ ಭಾರಿಗೆ ಭಾರತದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಭಾರತ ಇದೇ ಮೊದಲ ಬಾರಿಗೆ ಜಿಡಿಪಿ ಮಹಾ ಕುಸಿತ ಕಾಣಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಈ ಕುರಿತಾಧ ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಏ.17): ಕೊರೋನಾ ವೈರಸ್ ನಿಯಂತ್ರಿಸಲು ಲಾಕ್‌ಡೌ ಅನ್ನು ಎರಡನೇ ಬಾರಿ ವಿಸ್ತರಿಸಿರುವುದರಿಂದ ದೇಶದ ಆರ್ಥಿಕತೆ ಈ ಮೊದಲು ಅಂದಾಜಿಸಿದ್ದಕ್ಕಿಂತ ಹೆಚ್ಚು ಆಳಕ್ಕೆ ಕುಸಿಯುವ ಭೀತಿಯನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ. 2021ರ ಮಾರ್ಚ್ ವೇಳೆಗೆ ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 40 ವರ್ಷಗಳಲ್ಲೇ ಮೊದಲ ಬಾರಿ ಋುಣಾತ್ಮಕ ಪ್ರಗತಿ ದಾಖಲಿಸುವ ಸಾಧ್ಯತೆಯಿದೆ.
ದೇಶದಲ್ಲೇ ಮೊದಲ ಬಾರಿ ಆನ್‌ಲೈನ್‌ನಲ್ಲಿ BBMP ಬಜೆಟ್
ದೇಶದ ಜಿಡಿಪಿ ಕೊನೆಯ ಬಾರಿ ಋುಣಾತ್ಮಕ ಬೆಳವಣಿಗೆ ದಾಖಲಿಸಿದ್ದು 1980ರಲ್ಲಿ. ಆ ವರ್ಷ ಜಿಡಿಪಿ ಒಟ್ಟು ಶೇ.5.2ರಷ್ಟು ಕುಸಿದಿತ್ತು. ಈಗ 2020-21ನೇ ಸಾಲಿನಲ್ಲಿ ಇದು ಶೇ.0.4 ಅಥವಾ ಶೇ.0.1ರಷ್ಟು ಋುಣಾತ್ಮಕ ಬೆಳವಣಿಗೆ ದಾಖಲಿಸುವ ಸಾಧ್ಯತೆಯಿದೆ. ಅಂದರೆ ಜಿಡಿಪಿ ಬೆಳವಣಿಗೆ ದರ ಶೇ.- 0.4 ಅಥವಾ ಶೇ.- 0.1ರಷ್ಟು ಆಗಬಹುದು. 21 ದಿನಗಳ ಲಾಕ್‌ಡೌನನ್ನು 40 ದಿನಗಳಿಗೆ ವಿಸ್ತರಿಸಿರುವುದರಿಂದ ದೇಶದ ಒಟ್ಟು ಉತ್ಪನ್ನದ ನಷ್ಟ ಶೇ.8ರಷ್ಟಾಗುವ ಸಾಧ್ಯತೆಯಿದೆ. ಲಾಕ್‌ಡೌನ್ ಮುಗಿದ ಮೇಲೂ ಉದ್ಯೋಗ ನಷ್ಟ ಹಾಗೂ ಜನರಲ್ಲಿರುವ ಭೀತಿಯಿಂದಾಗಿ ಆರ್ಥಿಕತೆ ಕುಸಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೋದಿ ಪ್ಲಾನ್ ವರ್ಕೌಟ್ ಆಗಲ್ಲ, ಕೊರೋನಾ ನಿಯಂತ್ರಿಸಲು ರಾಹುಲ್ ಗಾಂಧಿ ಹೊಸ ಸೂತ್ರ!
ಅಸಂಘಟಿತ ವಲಯದ ಕಾರ್ಮಿಕರು ಜೀವನ ನಡೆಸುವುದು ಕಷ್ಟವಾಗಲಿದೆ. ಕಾರ್ಪೊರೇಟ್ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಮೇಲೂ ಹೆಚ್ಚು ಒತ್ತಡ ಬೀಳಲಿದೆ. ಇದು ಅಭಿವೃದ್ಧಿಯನ್ನು ಹಿಮ್ಮುಖವಾಗಿಸಲಿದೆ. ಈಗಾಗಲೇ ದೇಶದ ಅರ್ಧಕ್ಕರ್ಧ ಕುಟುಂಬಗಳ ಆದಾಯ ಕುಸಿತವಾಗಿದೆ. ಅವರಲ್ಲಿ ಹೆಚ್ಚಿನವರಿಗೆ ಈ ಪರಿಸ್ಥಿತಿ ಸುಧಾರಿಸುವ ಯಾವುದೇ ಭರವಸೆ ಇಲ್ಲ. ಲಾಕ್‌ಡೌನ್‌ನಿಂದ ಆಗಲಿದ್ದ ನಷ್ಟ ಅದನ್ನು ಎರಡನೇ ಬಾರಿ ವಿಸ್ತರಿಸಿರುವುದರಿಂದ ಹೆಚ್ಚಾಗಿದೆ ಎಂದು ನೊಮುರಾ ಹೋಲ್ಡಿಂಗ್ಸ್ ಇಂಕ್, ಸೊಸೈಟೆ ಜನರೇಲ್ ಜಿಎಸ್‌ಸಿ ಪ್ರೈ.ಲಿ., ಸಿಎಂಐಇ, ಐಸಿಆರ್‌ಎ, ಬಾಕ್ಲೇರ್ಸ್ ಬ್ಯಾಂಕ್ ಮುಂತಾದ ಸಂಸ್ಥೆಗಳ ಆರ್ಥಿಕ ತಜ್ಞರು ಹೇಳಿದ್ದಾರೆ.