ಜಾಗತಿಕ ಸೂಚ್ಯಂಕಗಳಲ್ಲಿ ಭಾರತದ ಸಾಧನೆ ಕಳಪೆ ಏಕೆ..? ಆರ್ಥಿಕ ಸಲಹಾ ಮಂಡಳಿ ಸದಸ್ಯರು ಹೇಳುವುದು ಹೀಗೆ..

By BK Ashwin  |  First Published Nov 23, 2022, 12:01 PM IST

ಇತ್ತೀಚಿನ ವರ್ಷಗಳಲ್ಲಿ ಅಭಿಪ್ರಾಯ-ಆಧಾರಿತ ಜಾಗತಿಕ ಸೂಚ್ಯಂಕಗಳು ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ ಮುಂತಾದ ವ್ಯಕ್ತಿನಿಷ್ಠ ವಿಷಯಗಳ ಮೇಲೆ ಭಾರತದ ಶ್ರೇಯಾಂಕದಲ್ಲಿ ಕುಸಿತ ಕಾಣುತ್ತಿದೆ ಎನ್ನುವ ಪ್ರವೃತ್ತಿ ಕಂಡುಬರುತ್ತಿದೆ.


ಭಾರತ (India) ಪ್ರಜಾಪ್ರಭುತ್ವ (Democracy), ಪತ್ರಿಕಾ ಸ್ವಾತಂತ್ರ್ಯ (Press Freedom) ಮುಂತಾದ ವ್ಯಕ್ತಿನಿಷ್ಠ ವಿಷಯಗಳ ಜಾಗತಿಕ ಸೂಚ್ಯಂಕಗಳಲ್ಲಿ (Global Indices) ಶ್ರೇಯಾಂಕದಲ್ಲಿ (Rankings) ಕುಸಿತ ಕಾಣುತ್ತಿದೆ ಎಂಬ ವರದಿಗಳು ವರ್ಷ ವರ್ಷ ಬರುತ್ತಿರುತ್ತದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಸಲಹಾ ಮಂಡಳಿಯ (Economic Advisory Council) (ಇಎಸಿ) (EAC) ಭಾಗವಾಗಿರುವ ಸಂಜೀವ್ ಸಾನ್ಯಾಲ್ (Sanjeev Sanyal) ಪ್ರತಿಕ್ರಿಯೆ ನೀಡಿದ್ದಾರೆ. ಏಷ್ಯಾನೆಟ್ ನ್ಯೂಸ್‌ನೊಂದಿಗೆ ಮಾತನಾಡಿದ ಅವರ ಅಭಿಪ್ರಾಯದ ವಿವರ ಹೀಗಿದೆ ನೋಡಿ.. ಇತ್ತೀಚಿನ ವರ್ಷಗಳಲ್ಲಿ ಅಭಿಪ್ರಾಯ-ಆಧಾರಿತ ಜಾಗತಿಕ ಸೂಚ್ಯಂಕಗಳು ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ ಮುಂತಾದ ವ್ಯಕ್ತಿನಿಷ್ಠ ವಿಷಯಗಳ ಮೇಲೆ ಭಾರತದ ಶ್ರೇಯಾಂಕದಲ್ಲಿ ಕುಸಿತ ಕಾಣುತ್ತಿದೆ ಎನ್ನುವ ಪ್ರವೃತ್ತಿ ಕಂಡುಬರುತ್ತಿದೆ. ಈ ಗಮನಾರ್ಹ ಪ್ರವೃತ್ತಿಗೆ ಪ್ರತಿಕ್ರಿಯಿಸುವ ಒಂದು ಮಾರ್ಗವೆಂದರೆ ಅವುಗಳನ್ನು ಕೇವಲ ಅಭಿಪ್ರಾಯಗಳೆಂದು ನಿರ್ಲಕ್ಷಿಸಬೇಕು, ಎದುರಿಸಬೇಕು ಎನ್ನುವ ದೃಷ್ಟಿಕೋನವನ್ನು ಅವರು ಮಂಡಿಸಿದ್ದಾರೆ. 

ಸಂಜೀವ್ ಸಾನ್ಯಾಲ್ ಅವರು ಇಎಸಿ ಉಪನಿರ್ದೇಶಕಿ ಆಕಾಂಕ್ಷಾ ಅರೋರಾ ಅವರ ಪ್ರಬಂಧವೊಂದರ ಸಹ-ಲೇಖಕರಾಗಿದ್ದಾರೆ. ಈ ಪ್ರಬಂಧ ಮೂರು ಪ್ರಸಿದ್ಧ ಪಾಶ್ಚಿಮಾತ್ಯ ಚಿಂತಕರ ಸಮಿತಿಯ ವರದಿಗಳನ್ನು ತನಿಖೆ ಮಾಡುತ್ತದೆ. ಈ ವರದಿಗಳು ಆಳವಾಗಿರುವುದಿಲ್ಲ ಹಾಗೂ ಅಪಾರದರ್ಶಕ ವಿಧಾನಗಳನ್ನು ಬಳಸಲಾಗುತ್ತಿದೆ. ಇದನ್ನು ನೋಡಿದರೆ ಕೇವಲ ನಗಬೇಕು ಎಂದು ಅನಿಸುತ್ತದೆ ಎಂದು ಕಂಡುಕೊಂಡಿರುವುದಾಗಿಯೂ ಸಂಜೀವ್‌ ಸಾನ್ಯಾಲ್‌ ಹೇಳಿದ್ದಾರೆ. 

Tap to resize

Latest Videos

ಇದನ್ನು ಓದಿ: Global Hunger Index 2022: ಪಾಕ್‌, ಶ್ರೀಲಂಕಾಕ್ಕಿಂತ ಕಳಪೆ, 107ನೇ ಸ್ಥಾನಕ್ಕೆ ಕುಸಿದ ಭಾರತ!

"ಈ ಜಾಗದಲ್ಲಿ ಪಾಶ್ಚಿಮಾತ್ಯ ಥಿಂಕ್ ಟ್ಯಾಂಕ್‌ಗಳ ಒಂದು ಸಣ್ಣ ಬಣದ ಪ್ರಭಾವವು ನವ-ವಸಾಹತುಶಾಹಿಯ ಒಂದು ರೂಪವಾಗಿದೆ. ನಾವು ಇದನ್ನು ಎದುರಿಸಬೇಕಿದೆ’’ಎಂದು ಸಂಜೀವ್‌ ಸಾನ್ಯಾಲ್‌ ಅಭಿಪ್ರಾಯ ಪಟ್ಟಿದ್ದಾರೆ. ಹಾಗೂ, ಈ ಅಭಿಪ್ರಾಯ-ಆಧಾರಿತ ಸೂಚ್ಯಂಕಗಳು 'ವಿಶ್ವಬ್ಯಾಂಕ್‌ನ ಜಾಗತಿಕ ಆಡಳಿತ ಸೂಚಕಗಳಿಗೆ (WGI) ಒಳಹರಿವು ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೂ, ಈ ಸೂಚಕಗಳು ಸಾರ್ವಭೌಮ ರೇಟಿಂಗ್‌ಗಳಲ್ಲಿ ಸರಿಸುಮಾರು 18-20 ಶೇಕಡಾ ತೂಕವನ್ನು ಹೊಂದಿರುತ್ತದೆ ಎಂದೂ ಅವರು ಹೇಳಿದ್ದಾರೆ. 

ಇಎಸಿಯ ಪ್ರಬಂಧವು ಸಂಪೂರ್ಣವಾಗಿ ಗ್ರಹಿಕೆ-ಆಧಾರಿತ, ಹಾಗೂ ಜಾಗತಿಕ ಆಡಳಿತ ಸೂಚಕಗಳಿಂದ ಬಳಸಲ್ಪಟ್ಟ - ಜಾಗತಿಕ ಸೂಚ್ಯಂಕದಲ್ಲಿ ಸ್ವಾತಂತ್ರ್ಯ, ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (EIU) ಡೆಮಾಕ್ರಸಿ ಇಂಡೆಕ್ಸ್ ಮತ್ತು ಪ್ರಜಾಪ್ರಭುತ್ವದ ವೈವಿಧ್ಯಗಳು ಎಂಬ ಮೂರು ಸೂಚ್ಯಂಕಗಳನ್ನು ಪರಿಶೀಲಿಸುತ್ತದೆ. ಇನ್ನು, ಜಾಗತಿಕ ಗ್ರಹಿಕೆ ಸೂಚ್ಯಂಕಗಳ ಮೇಲೆ ಭಾರತವು ಏಕೆ ಕಳಪೆಯಾಗಿರುತ್ತದೆ ಎಂಬ ಶೀರ್ಷಿಕೆಯ ಈ ಪ್ರಬಂಧದ ಎಲ್ಲಾ ಸೂಚ್ಯಂಕಗಳಲ್ಲಿನ ಸಾಮಾನ್ಯ ಅಂಶವೆಂದರೆ 'ಅವು ಕೆಲವು ತಜ್ಞರ ಗ್ರಹಿಕೆಗಳು ಅಥವಾ ಅಭಿಪ್ರಾಯಗಳಿಂದ ಹುಟ್ಟಿಕೊಂಡಿವೆ' ಎಂಬ ವಾದವನ್ನು ಮಂಡಿಸಿವೆ.

ಇದನ್ನೂ ಓದಿ: ಜಾಗತಿಕ ಹಸಿವಿನ ಸೂಚ್ಯಂಕ್ಯ ವರದಿ ಅವೈಜ್ಞಾನಿಕ, ಸಂಶೋಧನೆ ಆಘಾತಕಾರಿ ಎಂದ ಭಾರತ!

ಈ ಸಂಸ್ಥೆಗಳು ತಜ್ಞರನ್ನು ಹೇಗೆ ಆಯ್ಕೆ ಮಾಡಲಾಯಿತು ಅಥವಾ ಅವರ ರಾಷ್ಟ್ರೀಯತೆ ಅಥವಾ ಪರಿಣತಿಯ ಬಗ್ಗೆ ಯಾವುದೇ ಪಾರದರ್ಶಕ ಮಾಹಿತಿಯನ್ನು ಒದಗಿಸುವುದಿಲ್ಲ. ಪ್ರಜಾಪ್ರಭುತ್ವದ ವೈವಿಧ್ಯಗಳ ಪ್ರಕರಣದಲ್ಲಿ ಮಾತ್ರ ಅವರು ಪ್ರತಿ ದೇಶದಿಂದ ವಿವಿಧ ಕ್ಷೇತ್ರಗಳಿಂದ ಕೆಲವು ತಜ್ಞರನ್ನು ಆಯ್ಕೆ ಮಾಡಿರುವ ಬಗ್ಗೆ ಅವರು ಸ್ಪಷ್ಟಪಡಿಸುತ್ತಾರೆ. ಉದಾಹರಣೆಗೆ, ಫ್ರೀಡಂ ಹೌಸ್ ವರದಿಯು ಆಂತರಿಕ ಸಿಬ್ಬಂದಿ ಅಥವಾ ವಿಶ್ಲೇಷಕರು ಅಥವಾ ಸಮಾಲೋಚಕರು, ಬಾಹ್ಯ ವಿಶ್ಲೇಷಕರು ಮತ್ತು ಶೈಕ್ಷಣಿಕ, ಚಿಂತಕರ ಚಾವಡಿ ಮತ್ತು ಮಾನವ ಹಕ್ಕುಗಳ ಸಮುದಾಯಗಳ ಪರಿಣಿತ ಸಲಹೆಗಾರರ ​​ತಂಡದಿಂದ ವರದಿಯನ್ನು ರಚಿಸಲಾಗಿದೆ ಎಂದು ಉಲ್ಲೇಖಿಸುತ್ತದೆ. ಆದರೆ, ತಜ್ಞರ ಪರಿಣತಿ ಮತ್ತು ರಾಷ್ಟ್ರೀಯತೆ ವರದಿಯಲ್ಲಿ ಅಸ್ಪಷ್ಟವಾಗಿದೆ' ಎಂದು ಪ್ರಬಂಧ ಹೇಳಿದೆ.

ಹಾಗೂ ಈ ಸೂಚ್ಯಂಕಗಳು ಪ್ರಶ್ನೆಗಳ ಗುಂಪನ್ನು ಆಧರಿಸಿವೆ. ಪ್ರಶ್ನೆಗಳು ಸ್ವಭಾವತಃ ವ್ಯಕ್ತಿ ನಿಷ್ಠವಾಗಿವೆ. ಹಾಗೂ, ಪ್ರಶ್ನೆಗಳನ್ನು ರೂಪಿಸುವ ವಿಧಾನದಿಂದ ಅಂಕಗಳ ಮೇಲೆ ಪ್ರಭಾವ ಬೀರಬಹುದು. ಉದಾಹರಣೆಗೆ, 'ರಾಜ್ಯದ ಮುಖ್ಯಸ್ಥರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದಾರೆಯೇ?' ಎಂಬ ಪ್ರಶ್ನೆ ಇದ್ದರೆ, ಇದು ತಕ್ಷಣವೇ ಯುಕೆ, ಡೆನ್ಮಾರ್ಕ್, ಸ್ವೀಡನ್, ನಾರ್ವೆ, ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್‌ನಂತಹ ದೇಶಗಳ ಮೇಲೆ ನೆಗೆಟಿವ್‌ ಪರಿಣಾಮ ಬೀರುತ್ತದೆ. ಏಕೆಂದರೆ ಈ ದೇಶಗಳು ಸಾಂವಿಧಾನಿಕ ರಾಜಪ್ರಭುತ್ವಗಳಾಗಿವೆ. ದೇಶದ ಪ್ರಜಾಪ್ರಭುತ್ವ ಪರಿಸ್ಥಿತಿಯನ್ನು ನಿರ್ಣಯಿಸಲು ಪ್ರಯತ್ನಿಸುತ್ತಿರುವ ಸೂಚ್ಯಂಕದಲ್ಲಿ ಇಂತಹ ಪ್ರಶ್ನೆ ಕೇಳುವುದು ಸಮಂಜಸವಲ್ಲ ಎಂದು ಹೆಚ್ಚಿನ ಓದುಗರು ಒಪ್ಪುತ್ತಾರೆ ಎಂದು ಸಂಜೀವ್ ಮತ್ತು ಆಕಾಂಕ್ಷಾ ಹೇಳಿದ್ದಾರೆ.

ಇದನ್ನೂ ಓದಿ: ಹಸಿವಿನ ಸೂಚ್ಯಂಕ: ಭಾರತದಲ್ಲಿ ಪಾಕ್‌ಗಿಂತಲೂ ಕೆಟ್ಟ ಸ್ಥಿತಿ..! ಕಂಗ್ರಾಟ್ಸ್ ಮೋದಿ ಜೀ ಎಂದ ಸಿಬಲ್

ಅಲ್ಲದೆ, ಈ ಗ್ರಹಿಕೆ-ಆಧಾರಿತ ಸೂಚ್ಯಂಕಗಳಲ್ಲಿ ಬಳಸಲಾದ ವಿಧಾನದಲ್ಲಿ ಗಂಭೀರ ಸಮಸ್ಯೆಗಳಿವೆ ಎಂದೂ ಸಂಜೀವ್ ಮತ್ತು ಆಕಾಂಕ್ಷಾ ಅವರು ಬರೆದಿದ್ದಾರೆ. ಇದಕ್ಕೆ ಪರಿಹಾರ ಕ್ರಮಗಳನ್ನು ಸೂಚಿಸುವ ಇವರು, ಭಾರತ ಸರ್ಕಾರವು ವಿಶ್ವ ಬ್ಯಾಂಕ್ ಬಳಿ ಈ ಬಗ್ಗೆ ಚರ್ಚಿಸಬೇಕು. ಮತ್ತು ಈ ಸೂಚ್ಯಂಕಗಳಿಂದ ಹೆಚ್ಚಿನ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಇರುವ ಹಾಗೆ ಮನವಿ ಮಾಡಬೇಕು ಎಂದು ಹೇಳಿದೆ.

ಹಾಗೂ, ಸ್ವತಂತ್ರ ಭಾರತೀಯ ಥಿಂಕ್ ಟ್ಯಾಂಕ್‌ಗಳನ್ನು ಜಗತ್ತಿಗೆ ಇದೇ ರೀತಿಯ ಗ್ರಹಿಕೆ ಆಧಾರಿತ ಸೂಚ್ಯಂಕಗಳನ್ನು ಮಾಡಲು ಪ್ರೋತ್ಸಾಹಿಸುವ ಮೂಲಕ ಬೆರಳೆಣಿಕೆಯ ಪಾಶ್ಚಿಮಾತ್ಯ ಸಂಸ್ಥೆಗಳ ಏಕಸ್ವಾಮ್ಯವನ್ನು ಮುರಿಯಬೇಕಾಗಿದೆ ಎಂದೂ ಪ್ರಬಂಧವು ಅಭಿಪ್ರಾಯಪಟ್ಟಿದೆ. 
 

click me!