ಸಿಜೆಐ ರಮಣ ನಿವೃತ್ತಿ, ಕೋರ್ಟ್‌ ಹಾಲ್‌ನಲ್ಲೇ ಕಣ್ಣೀರಿಟ್ಟ ಹಿರಿಯ ವಕೀಲ ದುಷ್ಯಂತ್‌ ದಾವೆ!

By Santosh Naik  |  First Published Aug 26, 2022, 3:37 PM IST

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರಿಗೆ ಶುಕ್ರವಾರ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಕೊನೆಯ ದಿನ. ಇದಕ್ಕಾಗಿ ಮುಖ್ಯ ನ್ಯಾಯಾಧೀಶರ ಕೋರ್ಟ್‌ ಹಾಲ್‌ನಲ್ಲಿ ವಿದಾಯ ಸಮಾರಂಭ ಏರ್ಪಡಿಸಲಾಗಿತ್ತು. ಹಲವು ಹಿರಿಯ ವಕೀಲರು ಹಾಗೂ ನ್ಯಾಯಮೂರ್ತಿಗಳು ಈ ವೇಳೆ ಅವರ ಕುರಿತಾಗಿ ಮಾತನಾಡಿದರು. ಹಿರಿಯ ವಕೀಲ ದುಷ್ಯಂತ್‌ ದಾವೆ, ರಮಣ ಅವರ ಬಗ್ಗೆ ಮಾತನಾಡುವಾಗ ಕಣ್ಣೀರಿಟ್ಟ ಘಟನೆಯೂ ನಡೆಯಿತು.


ನವದೆಹಲಿ (ಆ. 26): ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಶುಕ್ರವಾರ ನಿವೃತ್ತರಾದರು. ತಮ್ಮ ನಿವೃತ್ತಿಯ ಕೊನೆಯ ಎರಡು ದಿನಗಳಲ್ಲಿ ಎನ್‌ವಿ ರಮಣ, ಬಹಳ ಪ್ರಮುಖವಾದ ಕೇಸ್‌ಗಳ ವಿಚಾರಣೆಯನ್ನು ನಡೆಸಿದರು. ಔಪಚಾರಿಕ ಪೀಠದಿಂದ ಬೀಳ್ಕೊಡುಗೆ ನೀಡುವ ವೇಳೆ ಮಾತನಾಡಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ನಿಮ್ಮ ನಿವೃತ್ತಿಯಿಂದ ನಾವು ಒಬ್ಬ ಬುದ್ಧಿಜೀವಿ ಮತ್ತು ಮಹೋನ್ನತ ನ್ಯಾಯಾಧೀಶರನ್ನು ಕಳೆದುಕೊಳ್ಳುತ್ತಿದ್ದೇವೆ, ಅದೇ ಸಮಯದಲ್ಲಿ, ಹಿರಿಯ ವಕೀಲ ದುಷ್ಯಂತ್ ದಾವೆ ನ್ಯಾಯಾಲಯದ ಕೊಠಡಿಯಲ್ಲಿಯೇ ಕಣ್ಣೀರಿಡಲು ಆರಂಭಿಸಿದರು. ಅದಲ್ಲದೆ, ನೀವು ಜನರ ನ್ಯಾಯಾಧೀಶರು ಎಂದು ದುಷ್ಯಂತ್‌ ದಾವೆ ಈ ವೇಳೆ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಜೆಐ ಅವರ ಔಪಚಾರಿಕ ಪೀಠವನ್ನು ನೇರಪ್ರಸಾರ ಮಾಡಲಾಯಿತು. ಇದನ್ನು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ವೆಬ್‌ಕಾಸ್ಟ್ ಮಾಡಲಾಗಿದೆ. ಇದಕ್ಕೂ ಮುನ್ನ 2018ರ ಸೆಪ್ಟೆಂಬರ್‌ 26 ರಂದಲೂ ಸುಪ್ರೀಂ ಕೋರ್ಟ್‌ನ 3 ನ್ಯಾಯಾಧೀಶರ ಪೀಠವು ಲೈಂಗಿಕ ಅಪರಾಧಗಳು ಮತ್ತು ವೈವಾಹಿಕ ವಿವಾದಗಳನ್ನು ಒಳಗೊಂಡ ಪ್ರಕರಣಗಳನ್ನು ಹೊರತುಪಡಿಸಿ ವಿಚಾರಣೆಗಳ ನೇರ ಪ್ರಸಾರಕ್ಕೆ ಅವಕಾಶ ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್ ಅದನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡಿಲ್ಲ. ಕರ್ನಾಟಕ, ಗುಜರಾತ್, ಒಡಿಶಾದಂತಹ ದೇಶದ ಹಲವು ಹೈಕೋರ್ಟ್‌ಗಳು ತಮ್ಮ ಅಧಿಕೃತ ಯೂಟ್ಯೂಬ್‌ನಲ್ಲಿ ವಿಚಾರಣೆಯನ್ನು ನೇರ ಪ್ರಸಾರ ಮಾಡುತ್ತಿವೆ.

Senior Advocate Dushyant Dave gets emotional and cries in Court Hall 1 at CJI NV Ramana farewell pic.twitter.com/dsZsp9796F

— Bar & Bench (@barandbench)


ಕಳೆದ ಎರಡು ದಿನಗಳಲ್ಲಿ ಈ ಪ್ರಕರಣಗಳ ವಿಚಾರಣೆ..

- ಕರ್ನಾಟಕ ಕಲ್ಲಿದ್ದಲು ಗಣಿಗಾರಿಕೆ: ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ಸಂಸ್ಥೆಗಳಿಗೆ ಕಬ್ಬಿಣದ ಅದಿರು ಗಣಿಗಾರಿಕೆ ಮಿತಿಯಲ್ಲಿ ಹೆಚ್ಚಳ.

Tap to resize

Latest Videos

- ಉಚಿತ ಚುನಾವಣಾ ಘೋಷಣೆಗಳು: 3 ನ್ಯಾಯಾಧೀಶರ ಪೀಠಕ್ಕೆ ಉಚಿತ ಪ್ರಕರಣವನ್ನು ಉಲ್ಲೇಖಿಸಲಾಗಿದೆ.

- ಗೋರಖ್‌ಪುರ ಗಲಭೆ ಪ್ರಕರಣ: 2007ರ ದ್ವೇಷ ಭಾಷಣ ಪ್ರಕರಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.

- ದಿವಾಳಿತನ ಕಾನೂನು:  ದಿವಾಳಿತನ ಮತ್ತು ದಿವಾಳಿತನ ಕೋಡ್ (IBC) ಕಸ್ಟಮ್ಸ್ ಕಾಯಿದೆಗೆ ಅನ್ವಯಿಸುತ್ತದೆ. ಕಸ್ಟಮ್ಸ್ ಪ್ರಾಧಿಕಾರವು ಸುಂಕ ಮತ್ತು ಲೆವಿಯ ಪ್ರಮಾಣವನ್ನು ಮಾತ್ರ ನಿರ್ಧರಿಸಬಹುದು ಆದರೆ ವಸೂಲಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ.

- ಪೆಗಾಸಸ್: ಸಮಿತಿಯು 5 ಫೋನ್‌ಗಳಲ್ಲಿ ಮಾಲ್‌ವೇರ್ ಅನ್ನು ಕಂಡುಹಿಡಿದಿದೆ, ಆದರೆ ಅದು ಪೆಗಾಸಸ್ ಆಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸರ್ಕಾರ ಸಹಾಯ ಮಾಡಿಲ್ಲ ಎಂದು ಸಮಿತಿ ಹೇಳಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ನಡೆಯಲಿದೆ.

- ಬಿಲ್ಕಿಸ್ ಬಾನೊ:  ಗುಜರಾತ್ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ, 11 ತಪ್ಪಿತಸ್ಥರ ಒಂದು ಪಕ್ಷ ರಚಿಸಲು ಕೇಳಿದೆ. ಮುಂದಿನ ವಿಚಾರಣೆ ಎರಡು ವಾರಗಳ ನಂತರ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.

- ಪಿಎಂಎಲ್‌ಎ: ಪರಿಶೀಲನಾ ಅರ್ಜಿ ಕುರಿತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ. ಅಲ್ಲದೆ ಈ ಕಾನೂನು ಬಹಳ ಮುಖ್ಯವಾಗಿದ್ದು, ಕೇವಲ 2 ಅಂಶಗಳನ್ನು ಮಾತ್ರ ಮರುಪರಿಶೀಲನೆಗೆ ಯೋಗ್ಯವಾಗಿದೆ ಎಂದು ಹೇಳಿದರು.

-ಪಿಎಂ ಮೋದಿ ಭದ್ರತಾ ಉಲ್ಲಂಘನೆ: ಫಿರೋಜ್‌ಪುರದ ಎಸ್‌ಎಸ್‌ಪಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕರ್ತವ್ಯವನ್ನು ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಪ್ರಧಾನಿ ಮೋದಿ ಅವರ ಭದ್ರತಾ ಉಲ್ಲಂಘನೆ ಪ್ರಕರಣದ ತನಿಖೆಗಾಗಿ ರಚಿಸಲಾದ ಸಮಿತಿಯು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಚುನಾವಣೆಗಳಲ್ಲಿ ಯಾವುದೆಲ್ಲಾ ಉಚಿತವಾಗಿ ಘೋಷಿಸಬಹುದು ಅನ್ನೋದನ್ನ ನಾವೇ ಹೇಳ್ತೀವಿ: ಸುಪ್ರೀಂ ಕೋರ್ಟ್‌

ಎನ್‌ವಿ ರಮಣ ಅವರ ಪ್ರಖ್ಯಾತ ತೀರ್ಪುಗಳು: ಮನೆಗೆಲಸದಲ್ಲಿಯೇ ಜೀವನಪೂರ್ತಿ ಕಳೆಯುವ ಮಹಿಳೆಯರ ಕೆಲಸ, ಆಫೀಸ್‌ ಕೆಲಸಕ್ಕೆ ಹೋಗುವ ಪುರುಷನಿಂಗಿತ ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ ಎಂದು ಅವರು ತೀರ್ಪು ನೀಡಿದ್ದರು. ಕಾಶ್ಮೀರದಲ್ಲಿ ಇಂಟರ್‌ನೆಟ್‌ ಸ್ತಬ್ಧವಾಗಿರುವ ಬಗ್ಗೆ, ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಸೇರಿದಂತೆ ಹಲವು ತೀರ್ಪುಗಳನ್ನು ಇವರು ನೀಡಿದ್ದಾರೆ.

ಐಷಾರಾಮಿ ವಕೀಲರ ಕೊಠಡಿ ನಿರೀಕ್ಷಿಸಬೇಡಿ, ಮರದ ಕೆಳಗೆ ನಿಂತು ಕಾನೂನು ಅಭ್ಯಾಸ ಮಾಡಿದ್ದೆವು: ಸಿಜೆಐ

ಯುಯು ಲಲಿತ್‌ ಮುಂದಿನ ಸಿಜೆಐ: ಸಿಜೆಐ ಎನ್‌ವಿ ರಮಣ ನಿವೃತ್ತಿಯ ಬಳಿಕ, ಯುಯು ಲಲಿತ್‌ ದೇಶದ 49ನೇ ಮುಖ್ಯನ್ಯಾಯಮೂರ್ತಿಯಾಗಿ ಪದಗ್ರಹಣ ಮಾಡಲಿದ್ದಾರೆ. ಸುಪ್ರೀಂ ಕೋರ್ಟ್‌ನ 2ನೇ ಹಿರಿಯ ವಕೀಲರಾಗಿರುವ ಯುಯು ಲಿಲಿತ್‌ ಆಗಸ್ಟ್‌ 27 ರಂದು ಸಿಜೆಐ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 74 ದಿನಗಳ ಕಾಲ ಇವರು ಅಧಿಕಾರದಲ್ಲಿ ಇರಲಿದ್ದು, ನವೆಂಬರ್‌ 8 ರಂದು ನಿವೃತ್ತಿಯಾಗಲಿದ್ದಾರೆ. ತ್ರಿವಳಿ ತಲಾಖ್‌ ಸೇರಿದಂತೆ ಹಲವು ಮೈಲಿಗಲ್ಲುಗಳ ತೀರ್ಪನ್ನು ಯುಯು ಲಿಲಿತ್‌ ನೀಡಿದವರಾಗಿದ್ದಾರೆ.
 

click me!