ರಾಹುಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ!

By Suvarna News  |  First Published Dec 13, 2019, 6:33 PM IST

‘ಭಾರತ ರೇಪ್ ಇನ್ ಇಂಡಿಯಾ ಆಗಿ ಬದಲಾಗುತ್ತಿದೆ| ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ| ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ| ರಾಹುಲ್ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪಿಸಿದ ಬಿಜೆಪಿ| ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ ಸ್ಮೃತಿ ಇರಾನಿ ನೇತೃತ್ವದ ನಿಯೋಗ|


ನವದೆಹಲಿ(ಡಿ.13): ಭಾರತ ‘ರೇಪ್ ಇನ್ ಇಂಡಿಯಾ’ ಆಗಿ ಬದಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ, ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

Union Minister and BJP leader Smriti Irani: We have registered our objection against the remark of Rahul Gandhi. Election Commission has assured us that they will follow the legal procedure and do justice. pic.twitter.com/lNnvvy3JYj

— ANI (@ANI)

ಚುನಾವಣಾ ಪ್ರಚಾರದ ವೇಳೆ ಅತ್ಯಾಚಾರ ಪ್ರಕರಣಗಳನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ದೂರು ನೀಡಿದೆ.

Tap to resize

Latest Videos

undefined

ರೇಪ್ ಇನ್ ಇಂಡಿಯಾ: ರಾಹುಲ್ ಕ್ಷಮೆಗೆ ಸದನದ ಒತ್ತಾಯ!

ಇಂದು ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ನೇತೃತ್ವದ ಬಿಜೆಪಿ ನಿಯೋಗ, ರಾಹು್ಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯೋಗವನ್ನು ಒತ್ತಾಯಿಸಿತು.

Union Minister and BJP leader, Smriti Irani: We have said this before that crimes against women should not be politicised. Rahul Gandhi dared to make rapes a political tool. We have requested Election Commission to take action. https://t.co/BJgOSYrJe6

— ANI (@ANI)

ರಾಹುಲ್ ಹೇಳಿಕೆಯಿಂದ ದೇಶದ ಮಾನ ಹರಾಜಾಗಿದ್ದು, ಅತ್ಯಾಚಾರ ಪ್ರಕರಣಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗ ಒತ್ತಾಯಿಸಿದೆ.

click me!