
ಬೆಂಗಳೂರು (ಜುಲೈ 14): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರ್ಕ್ ಫ್ರಮ್ ಆಫೀಸ್ ಮತ್ತೆ ಆರಂಭವಾಗಿದೆ. ಈವರೆಗೂ ಮನೆಯಲ್ಲೇ ಕುಳಿತುಕೊಂಡು ಕೆಲಸ ಮಾಡುತ್ತಿದ್ದವರು ಈಗ ಆಫೀಸ್‌ಗೆ ಹೋಗಲು ಆರಂಭಿಸಿದ್ದಾರೆ. ಇದರ ಬೆನ್ನಲ್ಲಿಯೇ ನಗರದ ಎರಡು ಕ್ಯಾಬ್ ಅಗ್ರಿಗೇಟರ್ ಆ್ಯಪ್‌ಗಳಾದ ಒಲಾ ಹಾಗೂ ಉಬರ್‌ಗೂ ಬೇಡಿಕೆ ಹೆಚ್ಚಾಗಿದೆ. ಆದರೆ, ಪ್ರಸ್ತುತ ಆ್ಯಪ್‌ಗಳಲ್ಲಿ ಮೊದಲ ಪ್ರಯತ್ನದಲ್ಲಿಯೇ ರೈಡ್ ಬುಕ್ ಮಾಡುವುದು ಕಷ್ಟವಾಗುತ್ತಿದೆ ಎನ್ನುವುದು ಹೆಚ್ಚಿನವರ ಅಭಿಪ್ರಾಯ. ಈ ಕುರಿತಾಗಿ ಟ್ವಿಟರ್‌ನಲ್ಲಿ ತಮ್ಮ ಬೇಸರವನ್ನೂ ತೋಡಿಕೊಂಡಿದ್ದಾರೆ. ಜನಾಗ್ರಹದಲ್ಲಿ ಕೆಲಸ ಮಾಡುವ ಶ್ರೀನಿವಾಸ್ ಅಲವಿಲ್ಲಿ ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ 'ನಾನು ಸ್ವಲ್ಪ ಆತುರದಲ್ಲಿದ್ದ ಕಾರಣ, 15 ಪಟ್ಟು ಹೆಚ್ಚಿನ ಹಣವನ್ನು ಕೊಟ್ಟು ಕ್ಯಾಬ್‌ನಲ್ಲಿ ಹೋಗಬೇಕು ಎಂದು ನಿರ್ಧರಿಸಿದರೂ ನನಗೆ ಕ್ಯಾಬ್ ಸಿಕ್ಕಿರಲಿಲ್ಲ. ಬುಕ್ಕಿಂಗ್‌ನಲ್ಲಿ ನನ್ನ ಹೆಚ್ಚಿನ ಸಮಯ ಹಾಳು ಮಾಡಿದೆ. ಕ್ಯಾಬ್ ಬುಕ್ ಆದಲ್ಲಿ, ಕರೆ ಮಾಡುವ ಡ್ರೈವರ್ 'ಎಲ್ಲಿ ಸಾರ್' ಎಂದು ಕೇಳುತ್ತಿದ್ದ ಹಾಗೂ ಆತನ ಮುಂದಿನ ಉತ್ತರ ಏನು ಅನ್ನೋದನ್ನು ನೀವೇ ಅರ್ಥ ಮಾಡಿಕೊಳ್ಳಬಹುದು. ಆದರೆ, ಬಿಎಂಟಿಸಿಯ 13ನೇ ನಂಬರ್‌ನ ಬಸ್‌ನಲ್ಲಿ ಜಯನಗರದವರೆಗೆ ಬರೀ 20 ರೂಪಾಯಿಯಲ್ಲಿ ಪ್ರಯಾಣ ಮಾಡಿದೆ' ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ ಬೆಂಗಳೂರಿನಂತಹ (Bengaluru) ಟ್ರಾಫಿಕ್ (Trafic) ಪೀಡಿತ ಮಹಾನಗರಗಳಲ್ಲಿ ಕ್ಯಾಬ್ (cab aggregators) ಅಗ್ರಿಗೇಟರ್‌ಗಳ ಕಾರ್ಯಸಾಧ್ಯತೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಒಬ್ಬ ಬಳಕೆದಾರ ಈ ಬಗ್ಗೆ ಬರೆದುಕೊಂಡಿದ್ದು, “ಇದು ಬರೀ ನನ್ನ ಊಹೆಯಷ್ಟೇ.. ಹೀಗೆ ಅದಲ್ಲಿ ಮುಂದಿನ 3 ರಿಂದ 5 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಒಲಾ (Ola) ಹಾಗೂ ಉಬರ್ (Uber)ಮಾಯವಾಗುವುದಂತೂ ಖಂಡಿತ' ಎಂದು ಬರೆದುಕೊಂಡಿದ್ದಾರೆ.
ಚಾಲಕರಿಗೆ ದಂಡ ಯಾಕಿಲ್ಲ: ಪದೇಪದೇ ರೈಡ್ ಕ್ಯಾನ್ಸಲೇಷನ್, ಓಲಾ ಹಣವೋ, ನಗದು ಪಾವತಿಯೋ ಎನ್ನುವ ಚಾಲಕರ ನಿರಂತರ ಪ್ರಶ್ನೆ, ರೈಡ್‌ಗಾಗಿ ಬಹಳ ಹೊತ್ತು ಕಾಯುವ ವಿಚಾರವಾಗಿ ಈಗಾಗಲೇ ಗ್ರಾಹಕರು ಸಾಕಷ್ಟು ದೂರು ನೀಡಿದ್ದಾರೆ. "ಉಬರ್ ಹಾಗೂ ಒಲಾ ಚಾಲಕರ ದುಂಡಾವರ್ತನೆಯಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಪ್ರಯಾಣಿಕರು ರೈಡ್‌ಅನ್ನು ಕ್ಯಾನ್ಸಲ್ (raid cancellation) ಮಾಡಿದರೆ ಅವರು ಗ್ರಾಹಕರಿಗೆ ದಂಡ ವಿಧಿಸುತ್ತಾರೆ. ಅದೇ ರೀತಿ ಚಾಲಕರು ಬುಕ್ಕಿಂಗ್‌ಅನ್ನು ಒಪ್ಪದೇ ಇದ್ದಾಗ ಅವರಿಗೆ ದಂಡ ಹಾಕುವ ವ್ಯವಸ್ಥೆ ಯಾಕಿಲ್ಲ' ಎಂದು ಇನ್ನೊಬ್ಬ ವ್ಯಕ್ತಿ ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ನಮ್ಮ ಕುಟುಂಬವನ್ನು ಹೆದ್ದಾರಿಯಲ್ಲಿಯೇ ಬಿಟ್ಟ ಓಲಾ ಕ್ಯಾಬ್, ಪ್ರಯಾಣದ ಕಹಿ ಅನುಭವ ಹಂಚಿಕೊಂಡ ಬೆಂಗಳೂರು ವ್ಯಕ್ತಿ!
ಕ್ಯಾಬ್‌ಗಳ ಸಂಖ್ಯೆ ಕಡಿಮೆ: ಮೇ ವರದಿಯ ಪ್ರಕಾರ, ಕೋವಿಡ್ ಪೂರ್ವದ ಸಮಯದಲ್ಲಿ ನಗರದಲ್ಲಿದ್ದ 1 ಲಕ್ಷ ಕ್ಯಾಬ್‌ಗಳಿಗೆ ಹೋಲಿಸಿದರೆ ಇಂದು ಕೇವಲ 30,000 ಕ್ಯಾಬ್‌ಗಳು ಮಾತ್ರ ರಸ್ತೆಗಳಲ್ಲಿವೆ. ಏಕೆಂದರೆ ನಗರದಲ್ಲಿ ಕೆಲಸ ಮಾಡುತ್ತಿದ್ದ ಅರ್ಧಕ್ಕಿಂತ ಹೆಚ್ಚು ಡ್ರೈವರ್‌ಗಳು ಕೊರೋನಾವೈರಸ್ ಸಾಂಕ್ರಾಮಿಕದ ಸಮಯದಲ್ಲಿ ತಮ್ಮ ಸ್ವಂತ ಊರುಗಳಿಗೆ ಹೋಗಿದ್ಮದಾರೆ. ಪ್ರತಿ ರೈಡ್‌ಗೆ ಅಗ್ರಿಗೇಟರ್‌ಗಳಿಗೆ ಪಾವತಿಸಬೇಕಾದ ಹೆಚ್ಚಿನ ಕಮಿಷನ್‌ಗಳ ಕಾರಣಕ್ಕಾಗಿ ಅವರು ಮತ್ತೆ ನಗರಕ್ಕೆ ವಾಪಸ್ ಆಗಿಲ್ಲ. ಇವರಿಗೆ ನೀಡುವ ಕಮೀಷನ್ ಅಂದಾಜು ಶೇ. 30 ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳು, ಏರುತ್ತಿರುವ ಹಣದುಬ್ಬರ, ಇಎಂಐಗಳು, ಸಾಲ ಮತ್ತು ಹೆಚ್ಚಿದ ಜೀವನ ವೆಚ್ಚದ ಜೊತೆಗೆ, ಚಾಲಕರು ನಗರಕ್ಕೆ ಹಿಂತಿರುಗದಿರಲು ಬಯಸಿದ್ದಾರೆ.
ಇದನ್ನೂ ಓದಿ: License expired ಬೆಂಗಳೂರಲ್ಲಿ ಅಗತ್ಯ ಲೈಸೆನ್ಸ್ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ ಒಲಾ, ಊಬರ್, ಸಾರಿಗೆ ಇಲಾಖೆ ವಾರ್ನಿಂಗ್!
ಒಲಾ-ಉಬರ್ ಬಳಸುತ್ತಿಲ್ಲ: ಆಶಿಶ್ ಜೈನ್ ಎಂಬ ಟೆಕ್ಕಿ ಕೂಡ ಇದೇ ವಿಚಾರವನ್ನು ಪೋಸ್ಟ್ ಮಾಡಿದ್ದಾರೆ. 'ಬೆಂಗಳೂರಿನಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಟ್ರಾಫಿಕ್‌ನೊಂದಿಗೆ, ನಾನು ನನ್ನ ವೈಯಕ್ತಿಕ ವಾಹನವನ್ನು ಬಳಸದಿರಲು ಮತ್ತು ವಾರಾಂತ್ಯದ ಪ್ರವಾಸಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಲು ನಿರ್ಧರಿಸಿದ್ದೇನೆ. ನಾನು ಒಲಾ ಮತ್ತು ಉಬರ್ ಕ್ಯಾಬ್‌ಗಳನ್ನು ಇನ್ನೆಂದೂ ಬಳಸೋದಿಲ್ಲ. ಒಂದೇ ಒಂದು ಬಾರಿಯೂ ರದ್ದಾಗದೇ ಕ್ಯಾಬ್‌ಗಳನ್ನು ಪಡೆಯುವ ಸಂಖ್ಯೆ ಅಂದಾಜು ಶೂನ್ಯಕ್ಕೆ ತಲುಪಿದೆ. ಈಗ ನಾನು #ezidrive ಮತ್ತು #Savaari ನಿಂದ ಕ್ಯಾಬ್‌ಗಳನ್ನು ಬಾಡಿಗೆಗೆ ಬಳಸುತ್ತಿದ್ದೇನೆ' ಎಂದು ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ