ದೊಡ್ಡ ಡಾನ್‌ ಆಗಲು ದೊಡ್ಡ ತಲೆಯನ್ನೇ ತೆಗೆಯಬೇಕೆಂದು ಯುಪಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹತ್ಯೆ!

By Kannadaprabha News  |  First Published Apr 17, 2023, 1:11 PM IST

ದೊಡ್ಡ ಗ್ಯಾಂಗ್‌ಸ್ಟರ್‌ಗಳಾಗುವ ಕನಸು ಕಂಡಿದ್ದ ಲವಲೇಶ್‌, ಮೋಹಿತ್‌ ಮತ್ತು ಮೌರ್ಯ ಇದಕ್ಕಾಗಿ ದೊಡ್ಡ ತಲೆಯನ್ನೇ ಹೊಡೆದುರುಳಿಸಲು ಬಯಸಿದ್ದರು. ಅದಕ್ಕೆಂದೇ ಅವರು ಅತಿಕ್‌ನನ್ನು ಗುರಿಯಾಗಿಸಿಕೊಂಡಿದ್ದರು.


ಪ್ರಯಾಗ್‌ರಾಜ್‌: ಶನಿವಾರ ರಾತ್ರಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಉತ್ತರಪ್ರದೇಶದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಮತ್ತು ಆತನ ಸೋದರ ಅಶ್ರಫ್‌ ಹತ್ಯೆ ಏಕಾಏಕಿ ನಡೆದ ಘಟನೆಯಲ್ಲ. ಅದಕ್ಕೊಂದು ಯೋಜಿತ ಸಂಚು ರೂಪುಗೊಂಡಿದ್ದು, ತಾವು ಅಂಡರ್‌ವರ್ಲ್ಡ್‌ ಡಾನ್‌ ಎನ್ನಿಸಿಕೊಳ್ಳುವ ಕನಸು ಕಂಡಿದ್ದ ಮೂವರು, ಉತ್ತರಪ್ರದೇಶದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನನ್ನು ಹತ್ಯೆ ಮಾಡಲು ಅನೇಕ ದಿನಗಳಿಂದ ಚಿಂತನೆ ನಡೆಸಿದ್ದರು. ಈ ಚಿಂತನೆಯನ್ನು ಕಾರ್ಯರೂಪಕ್ಕೆ ತರಲು ಗುರುವಾರವೇ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಬಂಧಿತ ಪಾತಕಿಗಳಾದ ಲವಲೇಶ್‌, ಮೋಹಿತ್‌ ಮತ್ತು ರಾಜೇಶಕುಮಾರ್‌ ಮೌರ್ಯನನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಈ ಅಂಶಗಳು ಬೆಳಕಿಗೆ ಬಂದಿದೆ.

3 ದಿನ ಮೊದಲೇ ಆಗಮನ:
ತಾವು ಕೂಡಾ ದೊಡ್ಡ ಗ್ಯಾಂಗ್‌ಸ್ಟರ್‌ಗಳಾಗುವ ಕನಸು ಕಂಡಿದ್ದ ಲವಲೇಶ್‌, ಮೋಹಿತ್‌ ಮತ್ತು ಮೌರ್ಯ ಇದಕ್ಕಾಗಿ ದೊಡ್ಡ ತಲೆಯನ್ನೇ ಹೊಡೆದುರುಳಿಸಲು ಬಯಸಿದ್ದರು. ಅದಕ್ಕೆಂದೇ ಅವರು ಅತಿಕ್‌ನನ್ನು ಗುರಿಯಾಗಿಸಿಕೊಂಡಿದ್ದರು. ಅತೀಕ್‌ ನ್ಯಾಯಾಂಗ ಬಂಧನದ ಅವಧಿ ಶನಿವಾರ ಮುಕ್ತಾಯವಾಗಬೇಕಿತ್ತು, ಅಂದು ಆತನನ್ನು ಪೊಲೀಸ್‌ ವಶಕ್ಕೆ ಒಪ್ಪಿಸಬಹುದು ಎಂದು ಹೇಳಲಾಗಿತ್ತು. 

Tap to resize

Latest Videos

ಇದನ್ನು ಓದಿ: ಅತೀಕ್ ಅಹ್ಮದ್ ಹತ್ಯೆ ಕೇಸ್‌: ತನಿಖೆಗೆ 3 ಸದಸ್ಯರ ನ್ಯಾಯಾಂಗ ಆಯೋಗ ರಚನೆಗೆ ಸಿಎಂ ಯೋಗಿ ಆದಿತ್ಯನಾಥ್‌ ಆದೇಶ

ಈ ಹಿನ್ನೆಲೆ ಪೊಲೀಸ್‌ ವಶಕ್ಕೆ ಹೋಗುವಾಗ ವೈದ್ಯಕೀಯ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಈ ವೇಳೆ ಅತೀಕ್‌ನನ್ನು ಪ್ರಯಾಗ್‌ರಾಜ್‌ ಜಿಲ್ಲಾಸ್ಪತ್ರೆಗೆ ತಂದೇ ತರುತ್ತಾರೆ. ಹಾಗೆ, ಎಂದಿನಂತೆ ಅತೀಕ್‌ ಹೇಳಿಕೆ ಪಡೆಯಲು ಟಿವಿ ಪತ್ರಕರ್ತರು ಮುಗಿಬೀಳುತ್ತಾರೆ ಎಂಬ ಪಕ್ಕಾ ಮಾಹಿತಿ ಅವರಿಗೆ ಇತ್ತು. 

ಹೀಗಾಗಿ ಪತ್ರಕರ್ತರ ಸೋಗಿನಲ್ಲೇ ದಾಳಿ ನಡೆಸಲು ಯೋಜಿಸಿ ಮೂವರು ಗುರುವಾರವೇ ಪ್ರಯಾಗ್‌ರಾಜ್‌ನ ಹೋಟೆಲ್‌ಗೆ ಆಗಮಿಸಿ ಅಲ್ಲಿ ತಂಗಿದ್ದರು. ಅಲ್ಲಿ ಹತ್ಯೆಗೆ ಬೇಕಾದ ಪೂರ್ವತಯಾರಿ ಮಾಡಿಕೊಂಡಿದ್ದರು. ದಾಳಿ ನಡೆಸಬೇಕಾದ ಸ್ಥಳ, ರೀತಿ, ತಪ್ಪಿಸಿಕೊಳ್ಳಲು ಬೇಕಾದ ರೀತಿಯ ಬಗ್ಗೆ ಚರ್ಚೆ ನಡೆಸಿದ್ದರು.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮಾಫಿಯಾ ಗಡಗಡ, ಪೊಲೀಸ್ ಕಸ್ಟಡಿಯಲ್ಲಿದ್ದ ಅತೀಕ್ ಅಹಮ್ಮದ್ ಹತ್ಯೆ!

ಹೀಗೆ ಪೂರ್ವ ಯೋಜಿತ ರೀತಿಯಂತೆ ಟಿವಿ ಮೈಕ್‌, ನಕಲಿ ಐಡಿ ಕಾರ್ಡ್‌ ಹಾಗೂ ಕ್ಯಾಮರಾ ಖರೀದಿಸಿ ಮೂವರೂ ಶನಿವಾರ ರಾತ್ರಿ ಆಸ್ಪತ್ರೆ ಬಳಿ ಪತ್ರಕರ್ತರ ಟೀಂ ಸೇರಿಕೊಂಡರು. ಹೀಗಾಗಿ ಯಾರಿಗೂ ಇವರ ಬಗ್ಗೆ ಅನುಮಾನ ಬರಲಿಲ್ಲ. ಕೊನೆಗೆ ಅತೀಕ್‌ನನ್ನು ಅಸಲಿ ಪತ್ರಕರ್ತರು ಮಾತನಾಡಿಸುವಾಗ ಪತ್ರಕರ್ತರ ವೇಷದಲ್ಲಿದ್ದ ಹಂತಕರು ಬಚ್ಚಿಟ್ಟಿದ್ದ ಗನ್‌ ಹೊರತೆಗೆದು ಅತೀಕ್‌ ಹಾಗೂ ಸೋದರನಿಗೆ ಹೊಡೆದರು ಎಂಬ ಅಂಶ ಬೆಳಕಿಗೆ ಬಂದಿದೆ.

ಹೇಗಿತ್ತು ಹತ್ಯೆ ಸಂಚು?

  • ದೊಡ್ಡ ಗ್ಯಾಂಗ್‌ಸ್ಟರ್‌ ಆಗುವ ಕನಸು ಕಂಡಿದ್ದ ಮೂವರು ಯುವಕರು
  • ಅದಕ್ಕಾಗಿ ದೊಡ್ಡ ತಲೆಯನ್ನೇ ತೆಗೆಯಬೇಕು ಎಂದು ತಮ್ಮಲ್ಲೇ ನಿರ್ಧಾರ
  • ಅತೀಕ್‌ನನ್ನು ಪೊಲೀಸರು ಪ್ರಯಾಗರಾಜ್‌ಗೆ ಕರೆತಂದಾಗ ಹತ್ಯೆಗೆ ಸಂಚು
  • ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವುದನ್ನೇ ಕಾಯುತ್ತಿದ್ದ ಹಂತಕರು
  • ಆಗ ಪತ್ರಕರ್ತರು ಮುತ್ತಿಕೊಳ್ಳುತ್ತಾರೆಂದು ಕೂಡ ಮೊದಲೇ ತಿಳಿದಿದ್ದರು
  • ಹೀಗಾಗಿ ಟಿವಿ ಮೈಕ್‌, ನಕಲಿ ಐಡಿ, ಕ್ಯಾಮೆರಾ ಖರೀದಿಸಿ ತಂದಿದ್ದರು
  • 3 ದಿನ ಮೊದಲೇ ಸಮೀಪದ ಲಾಡ್ಜ್‌ಗೆ ಬಂದು ನೆಲೆಸಿ ಕಾಯುತ್ತಿದ್ದರು
  • ಎಲ್ಲವೂ ಅವರು ಅಂದುಕೊಂಡಂತೆಯೇ ನಡೆದು ಅವರ ಪ್ಲಾನ್‌ ಸಕ್ಸಸ್‌

ಇದನ್ನೂ ಓದಿ: ಫೇಕ್ ಐಡಿಕಾರ್ಡ್, ಕ್ಯಾಮರಾ ಹಿಡಿದುಕೊಂಡು ಇಡೀ ದಿನ ಅತೀಕ್ ಹಿಂಬಾಲಿಸಿದ್ದ ದಾಳಿಕೋರರು! 

click me!