ಯೋಜನೆಗೆ ಕಲಾಂ ಬದಲು ತಂದೆ ಹೆಸರಿಡಲು ಬಯಸಿದ್ದ ಜಗನ್: ಸುಮ್ನೆ ಬಿಡುತ್ತಾ ವಿದ್ಯಾರ್ಥಿ ಸಮೂಹ?
ಅಬ್ದುಲ್ ಕಲಾಂ ಪ್ರತಿಭಾ ವಿದ್ಯಾ ಪುರಸ್ಕಾರ ಯೋಜನೆಯ ಹೆಸರು ಬದಲಿಸಲು ಮುಂದದಾಗಿದ್ದ ಆಂಧ್ರ ಸರ್ಕಾರ/ ಯೋಜನೆಗೆ ಸಿಎಂ ಜಗನ್ ಮೋಹನ್ ರೆಡ್ಡಿ ತಂದೆ ವೈಎಸ್’ರಾಜಶೇಖರ್ ಹೆಸರಿಡಲು ಮುಂದಾಗಿದ್ದ ಸರ್ಕಾರ/ ತೀವ್ರ ಜನಾಕ್ರೋಶ ಹಿನ್ನೆಲೆಯಲ್ಲಿ ನಿರ್ಧಾರ ಬದಲಿಸಿದ ಸಿಎಂ ಜಗನ್ ಮೋಹನ್ ರೆಡ್ಡಿ/ ಸರ್ಕಾರದ ನಿರ್ಧಾರ ವಿರೋಧಿಸಿದ್ದ ಮಾಜಿ ಸಿಎಂ ಚಂದ್ರಬಾಬು ನಾಯ್ಡು/
ಹೈದರಾಬಾದ್(ನ.05): ಆಂಧ್ರಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಅಬ್ದುಲ್ ಕಲಾಂ ಪ್ರತಿಭಾ ವಿದ್ಯಾ ಪುರಸ್ಕಾರ ಯೋಜನೆಯ ಹೆಸರು ಬದಲಿಸುವ ನಿರ್ಧಾರವನ್ನು ಸಿಎಂ ಜಗನ್ ಮೋಹನ್ ರೆಡ್ಡಿ ಹಿಂಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಯೋಜನೆಗೆ ಅಬ್ದುಲ್ ಕಲಾಂ ಅವರ ಹೆಸರಿನ ಬದಲು, ಆಂಧ್ರ ಪ್ರದೇಶದ ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಅವರ ಹೆಸರಿಡಲು ಸಿಎಂ ಜಗನ್ ರೆಡ್ಡಿ ಆದೇಶ ನೀಡಿದ್ದರು.
ಗ್ರಾಪಂ ಕಟ್ಟಡದ ತ್ರಿವರ್ಣ ಬಣ್ಣ ಅಳಿಸಿ ಪಕ್ಷದ ಬಣ್ಣ ಹಚ್ಚಿಸಿದ ಜಗನ್ ವಿವಾದ
ಆದರೆ ಸರ್ಕಾರದ ಆದೇಶದ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗಿರುವ ಕಾರಣ, ಜಗನ್ ತಮ್ಮ ಆದೇಶವನ್ನು ಹಿಂಪಡೆದಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಆಂಧ್ರ ಸರ್ಕಾರ ಪ್ರೋತ್ಸಾಹಧನ ನೀಡುವ ಯೋಜನೆ ಇದಾಗಿದೆ.
ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸರ್ಕಾರ ಆದೇಶದ ವಿರುದ್ಧ ಸಿಡಿದಿದ್ದರು. ವಿದ್ಯಾರ್ಥಿಗಳ ಪಾಲಿನ ದೇವರಾಗಿರುವ ಕಲಾಂ ಹೆಸರು ಬದಲಿಸಲು ಹೊರಟಿದ್ದ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ನಾಯ್ಡು ಕಿಡಿಕಾರಿದ್ದರು.
ಎಪಿ ಸಿಎಂ ಜಗನ್ ಕಾರು ನಿಲ್ಲಿಸಿ, ವಂಚನೆ ಪ್ರಕರಣ ದಾಖಲಿಸಿದ ಪೊಲೀಸ್!
ಇದೀಗ ಭಾರೀ ವಿರೋಧದ ಬಳಿಕ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ತಮ್ಮ ಆದೇಶವನ್ನು ಹಿಂಪಡೆದಿದ್ದು, ವಿವಾದ ತಣ್ಣಗಾಗಿದೆ.
ಮಾಧ್ಯಮಗಳಿಗೆ ಜಗನ್ ಸರ್ಕಾರ ಮೂಗುದಾರ!