ಲಖನೌ(ಮಾ.25): ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ರಚನೆಯಾಗಿದೆ. ಲಖನೌದಲ್ಲಿನ ಎಕಾನ ಕ್ರೀಡಾಂಗಣದಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಜೊತೆಗೆ ಇಬ್ಬರು ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರು ಯೋಗಿ ಸಂಪುಟ ಸೇರಿಕೊಂಡಿದ್ದಾರೆ. ಯೋಗಿ 2.0 ಸರ್ಕಾರಕ್ಕೆ ಅಭಿನಂದನ ಸಲ್ಲಿಸುವ ನೆಪದಲ್ಲಿ ಸಮಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೋಲಿನ ನೋವನ್ನು ಹೊರಹಾಕಿದ್ದಾರೆ.
ಯೋಗಿ ಸರ್ಕಾರವನ್ನು ಅಭಿನಂದಿಸುವ ಬದಲು ಕುಟುಕಿದ್ದಾರೆ. ಯೋಗಿ ಆದಿತ್ಯನಾಥ್ ಹಾಗೂ ಸಚಿವರು ಪ್ರಮಾಣವಚನ ಸ್ವೀಕರಿಸಿದ ಕ್ರೀಡಾಂಗಣ ಸಮಾಜವಾದ ಪಾರ್ಟಿ ಕಟ್ಟಿದ ಕ್ರೀಡಾಂಗಣ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಅಖಿಲೇಶ್ ಹೇಳಿಕೆಗೆ ವಿರೋಧಗಳ ವ್ಯಕ್ತವಾಗಿದೆ. ಸೋಲಿನಿಂದ ಚೇತರಿಸಿಕೊಳ್ಳದ ಅಖಿಲೇಶ್ ಯಾದವ್ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ, ಮೋದಿ, ಶಾ ಭಾಗಿ!
ಹೊಸ ಸರ್ಕಾರಕ್ಕೆ ಅಭಿನಂದನೆಗಳು. ಈ ಸರ್ಕಾರ ಪ್ರಮಾಣವಚನ ಸ್ವೀಕರಿಸುತ್ತಿರುವ ಕ್ರೀಡಾಂಗಣವನ್ನು ಸಮಾಜವಾದಿ ಪಾರ್ಟಿ ನಿರ್ಮಿಸಿದೆ. ಪ್ರಮಾಣವಚನ ಸ್ವೀಕರಿಸಿರುವ ಸಿಎಂ, ಮಂತ್ರಿಗಳು ಹಾಗೂ ಹೊಸ ಸರ್ಕಾರ ಜನರಿಗೆ ಉತ್ತಮ ಸೇವೆ ನೀಡಲಿ ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
नई सरकार को बधाई कि वो सपा के बनाए स्टेडियम में शपथ ले रही है। शपथ सिर्फ़ सरकार बनाने की नहीं, जनता की सच्ची सेवा की भी लेनी चाहिए।
— Akhilesh Yadav (@yadavakhilesh)
ಯೋಗಿ ಅದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ 2.0 ಸರ್ಕಾರ ಎಕಾನಾ ಅಟಲ್ ಬಿಹಾರಿ ಕ್ರೀಡಾಂಗಣದಲ್ಲಿ ಯೋಗಿ ಆದಿತ್ಯನಾಥ್ ಸೇರಿ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ್ದಾರೆ. 50 ಸಾವಿರಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮಕದಲ್ಲಿ ಪಾಲ್ಗೊಂಡಿದ್ದರು. ಇನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವೆ ಸ್ಮೃತಿ ಇರಾನಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಧೈರ್ಯ ಅನ್ನೋದಿದ್ರೆ ದಾವೂದ್ ಇಬ್ರಾಹಿಂನನ್ನು ಕೊಂದು ತೋರಿಸಿ!
52 ಮಂತ್ರಿಗಳು, ಇಬ್ಬರು ಉಪಮುಖ್ಯಮಂತ್ರಿಗಳು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರಲ್ಲಿ ಐವರು ಮಹಿಳಾ ಸಚಿವರಾಗಿದ್ದಾರೆ. ಇನ್ನು ಏಕೈಕ ಮುಸ್ಲಿಂ ನಾಯಕ ಕೂಡ ಪ್ರಮಾಣವಚನ ಸ್ವೀಕರಿಸಿ ಯೋಗಿ ಸಂಪುಟ ಸೇರಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಕೇಶವ್ ಮೌರ್ಯ ಹಾಗೂ ಬ್ರಜೇಶ್ ಪಾಟಕ್ ಉಪ ಮುಖ್ಯಮಂತ್ರಿಯಾಗಿದ್ದಾರೆ.
ಗೆಲುವಿನ ನಿರೀಕ್ಷೆಯಲ್ಲಿದ್ದ ಅಖಿಲೇಶ್‌ಗೆ ಭಾರಿ ಮುಖಭಂಗ
2017ರ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇೃತ್ವದ ಸಮಾಜವಾದಿ ಪಾರ್ಟಿ ಉತ್ತಮ ಪ್ರದರ್ಶನ ತೋರಿದೆ. 70ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಸಮಾಜವಾದಿ ಪಾರ್ಟಿ ಗೆಲುವು ಸಾಧಿಸಿದೆ. ಬಹಳ ಯೋಜಿತ ರೀತಿಯಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಿದ್ದ ಸಮಾಜವಾದಿ ಪಕ್ಷ ಈ ಬಾರಿ ಸಣ್ಣ ಪುಟ್ಟಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಇಡೀ ರಾಜ್ಯಾದ್ಯಂತ ಎಲ್ಲೂ ಪಕ್ಷದ ಪರ ಹಾಗೂ ಬಿಜೆಪಿ ವಿರುದ್ಧ ಅಲೆ ಏಳಲಿಲ್ಲ. 2017ರ 47 ಸ್ಥಾನಕ್ಕೆ ಹೋಲಿಸಿದರೆ ಸಮಾಜವಾದಿ ಪಕ್ಷಕ್ಕೆ ಲಾಭವಾಗಿರುವುದೇನೋ ನಿಜ, ಆದರೆ ಅಧಿಕಾರ ಸಿಕ್ಕಿಲ್ಲ. ಯೋಗಿ ಉತ್ತಮ ಆಡಳಿತದ ಜತೆ ಹೋಲಿಕೆ ಮಾಡಿದಾಗ ಅಖಿಲೇಶ್ ಅಳ್ವಿಕೆ ಪೇಲವವಾಗಿ ಕಂಡಿದ್ದು ಇದಕ್ಕೆ ಪ್ರಮುಖ ಕಾರಣ. ಜತೆಗೆ ಕೇಂದ್ರ- ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದರೆ ಅಭಿವೃದ್ಧಿ ಸುಗಮ ಎಂಬ ಮತದಾರರ ಭಾವನೆಯೂ ಎಸ್‌ಪಿ ಸೋಲಿನ ಹಿಂದೆ ಪ್ರಮುಖ ಪಾತ್ರ ವಹಿಸಿದೆ. ಜಾಟರು, ನಿಶಾದರು, ಯಾದವರು, ಮುಸ್ಲಿಮರು, ಕೂರ್ಮಿಯಂತಹ ಹಿಂದುಳಿದ ಸಮುದಾಯಗಳು ತನ್ನ ಬೆಂಬಲಕ್ಕೆ ನಿಲ್ಲಬಹುದು ಎಂದು ಎಸ್‌ಪಿ ಎಣಿಸಿತ್ತು. ಆ ಲೆಕ್ಕಾಚಾರ ಕೈಕೊಟ್ಟಿದೆ. ಗೆದ್ದೇ ಬಿಟ್ಟೇವು ಎಂಬ ಅತಿಯಾದ ಆತ್ಮವಿಶ್ವಾಸವೂ ಮುಳುವಾಗಿದೆ.