ಅಹಮದಾಬಾದ್(ಮೇ.15): 1200 ಬೆಡ್ ವ್ಯವಸ್ಥೆ ಇರೋ ಅಹಮದಾಬಾಸದ್‌ನ ಸಿವಿಲ್ ಆಸ್ಪತ್ರೆಯಲ್ಲಿ 8 ಗಂಟೆ ಶಿಫ್ಟ್‌ನಲ್ಲಿ ಕೆಲಸ ಮಾಡೋ 30 ವರ್ಷದ ಝೆಬಾ ಚೋಖವಾಲಾ ಈಕೆ.
ದಿನಪೂರ್ತಿ ಪಿಪಿಇ ಕಿಟ್ ಧರಿಸಿ ಅತಿಯಾಗಿ ಬೆವರುವಾಗ ದೇಹದಲ್ಲಿ ಇದ್ದ ನೀರಿನಂಶವೂ ಬೆವರಿನ ರೂಪದಲ್ಲಿ ಹೋಗಿ ದೇಹ ನಿರ್ಜಲೀಕರಣ ಸಮಸ್ಯೆ ಎದುರಿಸುತ್ತದೆ. ರಂಝಾನ್ ತಿಂಗಳಲ್ಲಿ ದೇಹ ಹೈಡ್ರೇಟ್ ಆಗಿರುವುದೇ ಆಕೆಗೆ ದೊಡ್ಡ ಸವಾಲಾಗಿತ್ತು.
undefined
ಕೊರೋನಾ ತಪ್ಪು ಮಾಹಿತಿಗೆ ಬ್ರೇಕ್ ಹಾಕಲು ಫೇಸ್‌ಬುಕ್ ವಿಶೇಷ ಅಭಿಯಾನ!
ಆದರೆ ನನಗೆ ದೈವಿಕ ಶಕ್ತಿ ಸಿಕ್ಕಿದೆ. ಒಬ್ಬ ನರ್ಸ್ ಆಗಿ ರೋಝಾ ಸಮಯದಲ್ಲಿ ನಾನು ಕರ್ತವ್ಯ ಮಾಡದೆ ಹೇಗಿರಲು ಸಾಧ್ಯ ? ಸ್ವಲ್ಪ ವೀಕ್ನೆಸ್ ಕಾಡುವುದು ಸರ್ವೇ ಸಾಮಾನ್ಯ. ಆದರೆ ರಂಝಾನ್ ಸಮಯದಲ್ಲಿ ಈ ಹಿಂದೆ ಯಾವತ್ತೂ ಈ ರೀತಿ ಕೆಲಸ ಮಾಡಿರಲಿಲ್ಲ.
ಮೂರುವರೇ ವರ್ಷದ ಹೆಣ್ಣು ಮಗಳಿಗೆ ತಾಯಿಯಾಗಿರೋ ಝೆಬಾ ಅಮ್ಮ ಕ್ಯಾನ್ಸರ್ ಪೇಷೆಂಟ್. ಇವರ ಪತಿ ವ್ಯಾಪಾರಿ. ಆದರೆ ಎಲ್ಲವನ್ನೂ ಈಕೆಯೇ ಮ್ಯಾನೇಜ್ ಮಾಡಿದ್ದಾರೆ. ಸಾಮಾನ್ಯ ದಿನಗಳಲ್ಲಿ 3-4 ಲೀಟರ್ ನೀರು ಕುಡಿಯುತ್ತಿದ್ದೆ. ಆದರೆ ರಂಝಾನ್ ಸಮಯದಲ್ಲಿ ಬೆಳಗ್ಗೆ 3 ಗಂಟೆಗೆ ಬೆಳಗಿನ ಉಪಹಾರ ಮತ್ತು ಸಂಹೆ 7 ಗಂಟೆಗೆ ಇಫ್ತಾರ್ ಸೇವಿಸುತ್ತಿದ್ದೆ. ಕೆಲವೊಮ್ಮೆ ಕರ್ತವ್ಯದಿಂದ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತಿತ್ತು. ಆಗೆಲ್ಲಾ ನನ್ನ ಜೊತೆ ಸಿಬ್ಬಂದಿ ಸಹಕರಿಸಿದ್ದಾರೆ ಎಂದಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona