ಕೇರಳದಲ್ಲಿನ ಗರ್ಭಿಣಿಗೆ ಆನೆಗೆ ಸ್ಫೋಟಕ ತುಂಬಿದ ಪೈನಾಪಲ್ ನೀಡಿ ಹತ್ಯೆ ಮಾಡಿದ ಘಟನೆಯನ್ನು ಯಾವ ಭಾರತೀಯನೂ ಇನ್ನು ಆರಗಿಸಿಕೊಂಡಿಲ್ಲ. ಈ ಘಟನೆ ಮಾಸುವ ಮುನ್ನವೇ ಗರ್ಭಿಣಿ ದನಕ್ಕೆ ಸ್ಫೋಟಕ ನೀಡಿದ ಘಟನೆ ಬೆಳಕಿಗೆ ಬಂದಿದೆ. ಸ್ಫೋಟಕ ಜಗಿದ ದನದ ದವಡೆ ಪುಡಿ ಪುಡಿಯಾಗಿದ್ದು, ನೋವಿನಿಂದ ನರಳಾಡುತ್ತಿದೆ.
ಹಿಮಾಚಲ ಪ್ರದೇಶ(ಜೂ.06): ದೇಶದಲ್ಲಿ ಮಾನವೀಯತೆ ಸತ್ತುಹೋಗುತ್ತಿದೆಯಾ ಎಂಬ ಪ್ರಶ್ನೆಗೆ ಕೇರಳದ ಗರ್ಭಿಣಿ ಆನೆ ಕೊಂದ ಪ್ರಕರಣ ಕನ್ನಡಿಯಂತಿದೆ. ಸ್ಫೋಟಕ ತುಂಬಿದ ಪೈನಾಪಲ್ ತಿಂದ ಗರ್ಭಿಣಿ ಆನೆಯ ಸಂಪೂರ್ಣ ದವಡೆ ಪುಡಿ ಪುಡಿಯಾಗಿತ್ತು. ನೋವು ತಾಳಲಾರದೆ ನದಿಯ ನೀರಿನಲ್ಲಿ ಸೊಂಡಿಲ ಮುಳುಗಿಸಿ ನಿಂತ ಆನೆ ಪ್ರಾಣಬಿಟ್ಟಿತು. ಈ ಘಟನೆ ಬಿಸಿ ಇನ್ನೂ ಆರಿಲ್ಲ, ಆಕ್ರೋಶ ತಣ್ಣಗಾಗಿಲ್ಲ, ತನಿಖೆ ಮುಗಿದಿಲ್ಲ. ಇದರ ಬೆನ್ನಲ್ಲೇ ಗರ್ಭಿಣಿ ದನಕ್ಕೆ ಸ್ಫೋಟಕ ನೀಡಿ ದವಡೆಯನ್ನೇ ಪುಡಿ ಪುಡಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಗರ್ಭಿಣಿ ಆನೆ ಕೊಂದ ಪ್ರಕರಣ; ಮರಳು ಶಿಲ್ಪದ ಮೂಲಕ ಕ್ರೂರತೆ ಖಂಡಿಸಿ ಸುದರ್ಶನ ಪಟ್ನಾಯಕ್!
ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯ ಜಂದುತಾ ಗ್ರಾಮದಲ್ಲಿ ಈ ಕ್ರೂರ ಘಟನೆ ನಡೆದಿದೆ. ದನದ ಮಾಲೀಕ ಗುರುಡಿಯಲ್ ಸಿಂಗ್ ವಿಡಿಯೋ ಮೂಲಕ ಈ ಘಟನೆ ಬಹಿರಂಗ ಪಡಿಸಿದ್ದಾರೆ. ನೆರಮನೆಯ ನಂದ್ ಲಾಲ್ ದನಕ್ಕೆ ಸ್ಫೋಟಕ ತುಂಬಿದ ಆಹಾರ ನೀಡಿದ್ದಾರೆ. ಆಹಾರ ಜಗಿದ ದನದ ದವಡೆ ಪುಡಿ ಪಡಿಯಾಗಿದೆ. ತಕ್ಷಣವೇ ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗುರುಡಿಯಲ್ ಸಿಂಗ್ ಆಗ್ರಹಿದ್ದಾರೆ.
ವನ್ಯಜೀವಿಗಳ ವಿರುದ್ಧ ಕ್ರೌರ್ಯ: ಕಾಯ್ದೆ ತಿದ್ದುಪಡಿ, ಕಠಿಣ ಶಿಕ್ಷೆಗೆ ಸಂಸದ ರಾಜೀವ್ ಆಗ್ರಹ
ಗರ್ಭಿಣಿ ದನ ನೆರೆಮನೆಯ ಆವರ ಪ್ರವೇಶಿಸುತ್ತಿದೆ ಅನ್ನೋ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಇದು ಅತ್ಯಂತ ಕ್ರೂರ ನಡೆಯಾಗಿದೆ. ಘಟನೆ ಬಳಿಕ ನೆರೆಮನೆಯ ನಂದ್ ಲಾಲ್ ಕಾಣೆಯಾಗಿದ್ದಾರೆ. 10 ದಿನಗಳ ಹಿಂದೆ ಈ ಘಟನೆ ನಡೆದಿದೆ. ದವಡೆ ಸಂಪೂರ್ಣ ಗುಣವಾಗುವ ವರೆಗೆ ದನಕ್ಕೆ ಏನೂ ತಿನ್ನಲು ಸಾಧ್ಯವಿಲ್ಲ. ನನ್ನ ದನವನ್ನು ಕಾಪಾಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಕೇರಳದಲ್ಲಿ ಪ್ರತಿ ವರ್ಷ 600 ಆನೆಗಳ ಹತ್ಯೆ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮೇನಕಾ ಗಾಂಧಿ!.
ಈ ಕುರಿತು ದೂರು ದಾಖಲಾಗಿದೆ. ತನಿಖೆ ನಡೆಯುತ್ತಿದೆ. ಇಷ್ಟೇ ಅಲ್ಲ ದನಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕೇರಳದ ಗರ್ಭಿಣಿ ಆನೆ ಹತ್ಯೆ ಪ್ರಕರಣ ಬೆನ್ನಲ್ಲೇ ಪ್ರಾಣಿ ಹಿಂಸೆ ನೀಡಿದ ಘಟನೆಗಳು ವರದಿಯಾಗುತ್ತಿದೆ. ಭಾರತದಲ್ಲಿ ಇಂತಹ ಹಲವು ಘಟನೆಗಳು ನಡೆಯುತ್ತಿದೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ.