7000 ಐಐಟಿ ಪದವೀಧರರಿಗೆ ಇನ್ನೂ ಉದ್ಯೋಗ ಆಫರ್‌ ಇಲ್ಲ!

Published : May 24, 2024, 11:19 AM ISTUpdated : May 24, 2024, 12:35 PM IST
7000 ಐಐಟಿ ಪದವೀಧರರಿಗೆ ಇನ್ನೂ ಉದ್ಯೋಗ ಆಫರ್‌ ಇಲ್ಲ!

ಸಾರಾಂಶ

ಭಾರತದ ಹೆಮ್ಮೆಯ ತಂತ್ರಜ್ಞಾನ ಶಿಕ್ಷಣ ಸಂಸ್ಥೆಯಾದ ಐಐಟಿ ಸೇರುವುದು ಬಹುತೇಕರ ಕನಸು. ಆ ಸಂಸ್ಥೆಗೆ ಸೇರಿದಲ್ಲಿ ಜೀವನದಲ್ಲಿ ಉದ್ಯೋಗ ಹುಡುಕುವ ಪ್ರಮೇಯವೇ ಬರುವುದಿಲ್ಲ ಎಂದು ಹಲವರ ನಂಬಿಕೆ. ಆದರೆ ಈ ವರ್ಷ (2024)ದಲ್ಲಿ ಉತ್ತೀರ್ಣರಾಗಲಿರುವ ಸುಮಾರು 7,000(ಶೇ.38) ಪದವೀಧರರಿಗೆ ಇನ್ನೂ ಉದ್ಯೋಗವೇ ಸಿಕ್ಕಿಲ್ಲ ಎಂಬ ಆತಂಕಕಾರಿ ವಿಷಯ ಬಯಲಾಗಿದೆ.

ನವದೆಹಲಿ (ಮೇ.24): ಭಾರತದ ಹೆಮ್ಮೆಯ ತಂತ್ರಜ್ಞಾನ ಶಿಕ್ಷಣ ಸಂಸ್ಥೆಯಾದ ಐಐಟಿ ಸೇರುವುದು ಬಹುತೇಕರ ಕನಸು. ಆ ಸಂಸ್ಥೆಗೆ ಸೇರಿದಲ್ಲಿ ಜೀವನದಲ್ಲಿ ಉದ್ಯೋಗ ಹುಡುಕುವ ಪ್ರಮೇಯವೇ ಬರುವುದಿಲ್ಲ ಎಂದು ಹಲವರ ನಂಬಿಕೆ. ಆದರೆ ಈ ವರ್ಷ (2024)ದಲ್ಲಿ ಉತ್ತೀರ್ಣರಾಗಲಿರುವ ಸುಮಾರು 7,000(ಶೇ.38) ಪದವೀಧರರಿಗೆ ಇನ್ನೂ ಉದ್ಯೋಗವೇ ಸಿಕ್ಕಿಲ್ಲ ಎಂಬ ಆತಂಕಕಾರಿ ವಿಷಯ ಬಯಲಾಗಿದೆ.

ಕಾನ್ಪುರ ಐಐಟಿಯ ಮಾಜಿ ವಿದ್ಯಾರ್ಥಿ ಧೀರಜ್‌ ಸಿಂಗ್‌ ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ 23 ಐಐಟಿಗಳಲ್ಲಿ ಶೇ.38ಮಂದಿಗೆ ಇನ್ನೂ ಉದ್ಯೋಗ ನೇಮಕಾತಿ ಆಗಿಲ್ಲ ಎಂಬ ವಿಷಯವನ್ನು ತಿಳಿಸಲಾಗಿದೆ. ಅದರಲ್ಲೂ ದೆಹಲಿ (400), ಬಾಂಬೆ(250) ಅಂತಹ ಪ್ರತಿಷ್ಠಿತ ಐಐಟಿಗಳಲ್ಲೇ ಇನ್ನೂ ಬಹುಪಾಲು ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿ ಆಗಿಲ್ಲ ಎಂದು ತಿಳಿದುಬಂದಿದೆ.

ಈಗ ಕೇಳೋಕೆ ಮುಂಚೆ ಎಲ್ಲಾ ಸಿಗುತ್ತೆ ಆದ್ರೆ ಆಗ ಫೋನ್‌ಗಾಗಿ 5 ವರ್ಷ ಕಾದಿದ್ರಂತೆ ಸುಂದರ್ ಪಿಚೈ

ಮಾಜಿ ವಿದ್ಯಾರ್ಥಿಗಳಿಗೆ ಮೊರೆ: ಉದ್ಯೋಗ ನೇಮಕಾತಿ ತೀವ್ರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಐಐಟಿಗಳು ಮಾಜಿ ವಿದ್ಯಾರ್ಥಿಗಳಿಂದ ನೆರವು ಕೋರಿದ್ದು, ತಮಗೆ ತಿಳಿದ ಸಂಸ್ಥೆಗಳಿಂದ ನೇಮಕಾತಿ ಆಗುವ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಕೋರಿದೆ. ಜೊತೆಗೆ ಇಂಟರ್ನ್‌ಶಿಪ್‌, ಅಪ್ರೆಂಟಿಸ್‌ಶಿಪ್‌ನಂತಹ ನೇಮಕಾತಿಗಳಿದ್ದರೂ ತಿಳಿಸಲು ವಿನಂತಿಸಿದೆ.

ಏಕೆ ನೇಮಕ ಇಲ್ಲ? ತಂತ್ರಜ್ಞಾನದಲ್ಲಿ ಚಾಟ್‌ಜಿಪಿಟಿ, ಕೃತಕ ಬುದ್ಧಿಮತ್ತೆ (ಎಐ) ಮುಂತಾದ ನವನವೀನ ತಂತ್ರಜ್ಞಾನಗಳು ಅತ್ಯಂತ ಅಗ್ಗದ ದರದಲ್ಲಿ ಲಭ್ಯವಾಗುತ್ತಿರುವುದು ಉದ್ಯೋಗಿಗಳ ಅಗತ್ಯತೆಯನ್ನು ಕುಂಠಿತಗೊಳಿಸಿವೆ. ಜೊತೆಗೆ ಈ ವರ್ಷ ಭಾರತ, ಯುಕೆ, ದಕ್ಷಿಣ ಆಫ್ರಿಕಾ, ಅಮೆರಿಕ ಸೇರಿದಂತೆ ಪ್ರತಿಷ್ಠಿತ ರಾಷ್ಟ್ರಗಳಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಕಂಪನಿಗಳು ಕಾದು ನೊಡುವ ತಂತ್ರವನ್ನು ಅನುಸರಿಸುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್