66 ವರ್ಷದ ಹಿಂದಿನ ಗೋಲ್ಡ್ ಬಿಲ್ ವೈರಲ್; ಚಿನ್ನದ ಬೆಲೆ ನೋಡಿ ಕಣ್ಣರಳಿಸಿದ ಜನರು

By Mahmad Rafik  |  First Published Jan 4, 2025, 4:03 PM IST

1959ರ ರಶೀದಿಯೊಂದು ತೋರಿಸುತ್ತದೆ. ಈ ರಶೀದಿ ಮಹಾರಾಷ್ಟ್ರದ ವಾಮನ್ ನಿಂಬಾಜಿ ಅಂಗಡಿಯದ್ದಾಗಿದ್ದು, ಶಿವಲಿಂಗ ಆತ್ಮರಾಮ್ ಎಂಬವರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಿದ್ದಾರೆ.


ಬೆಂಗಳೂರು: ಒಂದು ಕಾಲದಲ್ಲಿ ರೂಪಾಯಿ ಬೆಲೆ  ತುಂಬಾನೇ ಕಡಿಮೆ ಇತ್ತು.  ಯಾವುದೇ ವಸ್ತುವೂ ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿಯೇ ಸಿಗುತ್ತಿತ್ತು. ಮನೆಯಲ್ಲಿ ಹಿರಿಯರು ಒಂದು ರೂಪಾಯಿಗೆ ಅಷ್ಟು ಚಿನ್ನ ಸಿಗುತ್ತಿತ್ತು. ಆದ್ರೆ ನಮ್ಮ ಬಳಿ ಅಷ್ಟೊಂದು ಹಣ ಇರುತ್ತಿರಲಿಲ್ಲ ಎಂದು ಹೇಳುವುದನ್ನು ನಾವೆಲ್ಲರೂ ಕೇಳಿರುತ್ತೇವೆ. ಅಂದಿನ ಸಮಯದಲ್ಲಿ ಚಿನ್ನದ ಬೆಲೆ ತುಂಬಾನೇ ಕಡಿಮೆ ಇತ್ತು. ಇಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 75-72 ಸಾವಿರದ ಆಸುಪಾಸಿನಲ್ಲಿದೆ. ಇದೀಗ ಸೋಶಿಯಲ್  ಮೀಡಿಯಾದಲ್ಲಿ 1959ರ ಕಾಲದ ಚಿನ್ನದ ರಶೀದಿ ಫೋಟೋ ವೈರಲ್ ಆಗಿದೆ. ಈ ರಶೀದಿಯಲ್ಲಿನ ಚಿನ್ನದ ಬೆಲೆ ನೋಡಿ ನೆಟ್ಟಿಗರು ಕಣ್ಣರಳಿಸಿ ನೋಡುತ್ತಿದ್ದಾರೆ.

1959ರ ಚಿನ್ನ ಖರೀದಿಯ ರಶೀದಿಯನ್ನು  @upscworldofficial ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್  ಮಾಡಿಕೊಳ್ಳಲಾಗಿದೆ. ಬಿಲ್ ನಲ್ಲಿ 1959ರಂದು ದಿನಾಂಕ ನಮೂದಿಸಲಾಗಿದೆ. ಹಾಗೆ 1 ಗ್ರಾಂ ಚಿನ್ನದ ಬೆಲೆ ಎಷ್ಟು ಎಂಬುದನ್ನು ಸಹ ಬರೆಯಲಾಗಿದೆ. 66 ವರ್ಷಗಳ ಹಿಂದಿನ ಬೆಲೆ ನೋಡಿದ ನೆಟ್ಟಿಗರು, ಇಂದಿನ ಚಾಕ್ಲೆಟ್‌ ಬೆಲೆ ಅದಕ್ಕಿಂತಲೂ ಹೆಚ್ಚು ಎಂದು ಕಮೆಂಟ್ ಮಾಡಿದ್ದಾರೆ. 

Tap to resize

Latest Videos

ವೈರಲ್ ಆಗಿರುವ ಫೋಟೋ ಪ್ರಕಾರ,. 1959ರಲ್ಲಿ 1 ತೊಲಾ (11.66 ಗ್ರಾಂ) ಚಿನ್ನದ ಬೆಲೆ ಕೇವಲ 113 ರೂಪಾಯಿ ಆಗಿತ್ತು.  ಇದು ಮಹಾರಾಷ್ಟ್ರದ ವಾಮನ್ ನಿಂಬಾಜಿ ಎಂಬ ಮಳಿಗೆಯ ಬಿಲ್ ಆಗಿದ್ದು, ಮರಾಠಿ ಅಕ್ಷರದಲ್ಲಿ ಬರೆಯಲಾಗಿದೆ. ಈ  ರಶೀದಿ ಶಿವಲಿಂಗ ಆತ್ಮರಾಮ್ ಎಂಬವರ ಹೆಸರಿನಲ್ಲಿದ್ದು, 3  ತೊಲಾ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಿ ಒಟ್ಟು 909 ರೂಪಾಯಿ ಹಣವನ್ನು ಪಾವತಿಸಿದ್ದಾರೆ. 

.ಇದನ್ನೂ ಓದಿ: ಭಾರತದ ಮಹಿಳೆಯರ ಬಳಿ ಇದೆ 24 ಸಾವಿರ ಟನ್‌ ಚಿನ್ನ, ಇದು ವಿಶ್ವದ ಶೇ. 11 ರಷ್ಟು ಎಂದ ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌!

ಈ ಪೋಸ್ಟ್‌ಗೆ 38 ಸಾವಿರ ಲೈಕ್‌ಗಳು ಬಂದಿದ್ದು, ಅನೇಕ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಆ ಕಾಲದಲ್ಲಿ ಚಾಕಲೇಟ್‌ನ ಬೆಲೆ ಎಷ್ಟು ಎಂದು ಹೇಳಿ, 113 ರೂ. ಆ ಕಾಲದಲ್ಲಿ 1 ಪೈಸೆಗೂ ಬೆಲೆ ಇತ್ತು ಎಂದು ಒಬ್ಬರು ಹೇಳಿದರೆ, ಇಂದಿನ ಕಾಲದಲ್ಲಿ 1 ರೂಪಾಯಿ ಬಿದ್ದರೂ ಯಾರು ಎತ್ತಿಕೊಳ್ಳಲ್ಲ ಎಂದು ಕಮೆಂಟ್ ಮಾಡಿದ್ದಾರೆ. 

ಭಾರತದಲ್ಲಿ ಇಂದಿನ ಚಿನ್ನದ ಬೆಲೆ (4 ಜನವರಿ 2024)
ಇಂದಿನ 22 ಕ್ಯಾರಟ್ ಚಿನ್ನದ ಬೆಲೆ 
1 ಗ್ರಾಂ: 7,261 ರೂಪಾಯಿ
8 ಗ್ರಾಂ: 58,088 ರೂಪಾಯಿ 
10 ಗ್ರಾಂ: 72,610 ರೂಪಾಯಿ
100 ಗ್ರಾಂ: 7,26,100 ರೂಪಾಯಿ

ಇದನ್ನೂ ಓದಿ: 2025ರಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಾ? ಆರ್ಥಿಕ ತಜ್ಞರ ಉತ್ತರ

click me!