World Alzheimers Day: ಮರೆವು ಹೆಚ್ಚಾದ್ರೆ ಸಾವಿಗೂ ಕಾರಣವಾಗುತ್ತೆ ಹುಷಾರ್

By Suvarna News  |  First Published Sep 21, 2022, 9:52 AM IST

ಸೆಪ್ಟೆಂಬರ್‌ 21ನ್ನು ವಿಶ್ವ ಅಲ್ಝೈಮರ್ ದಿನ ಎಂದು ಆಚರಿಸಲಾಗುತ್ತದೆ. ಇದು ಪ್ರಪಂಚದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ ಈ ದಿನದ ಇತಿಹಾಸ, ಮಹತ್ವ, ಥೀಮ್‌ ಸೇರಿದಂತೆ ಮಹತ್ವದ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.


ಮನುಷ್ಯನಿಗೆ ವಯಸ್ಸಾದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುವ ಸಮಸ್ಯೆಯೆಂದರೆ ಮರೆವಿನ ಕಾಯಿಲೆ. ಯಾವ ವಿಷಯವೂ ನೆನಪಿನಲ್ಲಿ ಉಳಿಯದೆ ಒದ್ದಾಡುವಂತಾಗುತ್ತದೆ. 
ಮರೆವಿನ ಕಾಯಿಲೆಯನ್ನು ಇಂಗ್ಲಿಷ್‌ನಲ್ಲಿ alzheimer ಎಂದು ಕರೆಯುತ್ತಾರೆ. ಇದೊಂದು ಜಗತ್ತಿನ ಪ್ರಮುಖ ಆರೋಗ್ಯ ತೊಂದರೆಯೂ ಹೌದು. ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ಸೆಪ್ಟೆಂಬರ್‌ 21ನ್ನು ವಿಶ್ವ ಅಲ್ಝೈಮರ್ ದಿನ ಎಂದು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ, ಥೀಮ್‌ ಸೇರಿದಂತೆ ಪ್ರಮುಖ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.

ವಿಶ್ವ ಆಲ್ಝೈಮರ್‌ ದಿನದ ಇತಿಹಾಸ
ಆಲ್ಝೈಮರ್‌ ಕಾಯಿಲೆ (Disease) ಒಂದು ನ್ಯೂರೋ ಡಿಜೆನೆರೇಟಿವ್ ಕಾಯಿಲೆಯಾಗಿದ್ದು, ಅದು ನಿಧಾನವಾಗಿ ಪ್ರಾರಂಭವಾಗುತ್ತದೆ ಮತ್ತು ಹಂತಹಂತವಾಗಿ ಹೆಚ್ಚಾಗುತ್ತಾ ಹೋಗುತ್ತದೆ. ಮರೆವಿನ ಕಾಯಿಲೆಗೆ ಹಲವು ಶತಮಾನಗಳ ಇತಿಹಾಸವಿದೆ. ಆದರೆ, ಇಂತಹ ಪ್ರಕರಣವನ್ನು ಮೊದಲ ಬಾರಿಗೆ ಗುರುತಿಸಿದ್ದು ಜರ್ಮನ್‌ ಮನೋವೈದ್ಯರಾದ ಅಲೋಯಿಸ್‌ ಅಲ್ಝೈಮರ್‌. 1901ರಲ್ಲಿ ಮೊದಲ ಪ್ರಕರಣವನ್ನು ಗುರುತಿಸಿದರು. ಹೀಗಾಗಿ ಈ ಕಾಯಿಲೆಗೆ ಅವರ ಹೆಸರನ್ನೇ ಇಡಲಾಯಿತು. ಐವತ್ತು ವರ್ಷ ವಯಸ್ಸಿನ ಮಹಿಳೆ (Woman)ಯಲ್ಲಿ ಮೊದಲು ಈ ಕಾಯಿಲೆ ಕಾಣಿಸಿಕೊಂಡಿತು. ಅವರು ಸಾರ್ವಜನಿಕವಾಗಿ ಅದರ ಬಗ್ಗೆ ವರದಿ ಮಾಡಿದರು. ಮಹಿಳೆ 1906ರಲ್ಲಿ ಈ ಕಾಯಿಲೆಯಿಂದ ಮೃತಪಟ್ಟರು. ಮುಂದಿನ ಐದು ವರ್ಷಗಳಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಈ ರೀತಿ ಹನ್ನೊಂದು ರೀತಿಯ ಪ್ರಕರಣಗಳು ವರದಿಯಾದವು. ಈ ಕಾಯಿಲೆಯೂ ಬುದ್ದಿಮಾಂದ್ಯತೆಯ (Dementia) ಲಕ್ಷಣಗಳನ್ನೂ ಹೊಂದಿರುತ್ತದೆ.

Tap to resize

Latest Videos

ಕೋವಿಡ್ ತಗುಲಿದ ವಯೋವೃದ್ಧರನ್ನು ಕಾಡ್ತಿದೆ Alzheimer

ಈ ವರ್ಷದ ಥೀಮ್‌
ಈ ವರ್ಷ ನೋ ಡಿಮೋನ್ಶಿಯಾ, ನೋ ಅಲ್ಝೈಮರ್ಸ್‌ (Know dementia, know Alzheimer's.) ಎಂಬ ಥೀಮ್‌ನಡಿ ಈ ದಿನವನ್ನು ಆಚರಿಸಲಾಗುತ್ತದೆ.

ಅಲ್ಝೈಮರ್ ದಿನದ ಮಹತ್ವ
ಅಲ್ಝೈಮರ್ ದಿನವನ್ನು ಆಚರಿಸುವುದರ ಉದ್ದೇಶ ಜನರಲ್ಲಿ ಮರೆವಿನ ಕಾಯಿಲೆಯ ಕುರಿತು ಜಾಗೃತಿ ಮೂಡಿಸುವುದು, ಇದರ ತೊಂದರೆಗಳು, ಅಪಾಯಗಳ ಕುರಿತು ಜಾಗೃತಿ (Awareness) ಮೂಡಿಸುವುದಾಗಿದೆ. ಬುದ್ದಿಮಾಂದ್ಯತೆಯ ಬಗ್ಗೆ ಹಲವರಲ್ಲಿ ತಪ್ಪು ಅಭಿಪ್ರಾಯಗಳೂ ಇದ್ದೂ ಅದನ್ನೂ ಹೋಗಲಾಡಿಸಲು ಈ ದಿನ ಪ್ರಯತ್ನಿಸಲಾಗುತ್ತದೆ. 

ನಮ್ಮ ದೇಶದಲ್ಲಿ 5.3 ದಶಲಕ್ಷ ಜನರು ಅಲ್ಝೈಮರ್ ತೊಂದರೆಯಿಂದ ಬಳಲುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಅಲ್ಝೈಮರ್ ಲಕ್ಷಣಗಳನ್ನು ಗುರುತಿಸಿದರೆ, ವೈದ್ಯರನ್ನು ಭೇಟಿಯಾದರೆ ಕಾಯಿಲೆಯ ಹಲವು ಪರಿಣಾಮಗಳನ್ನು ಕಡಿಮೆ ಮಾಡಬಹುದಾಗಿದೆ. ರೋಗಲಕ್ಷಣಗಳು (Symptoms) ಕಂಡು ಬಂದ ಸಂದರ್ಭದಲ್ಲಿ ಸ್ಪೆಷಲಿಸದ್ಟ್‌ ಜೆರಿಯಾಟ್ರಿಕ್‌ ಸೈಕಿಯಾಟ್ರಿಸ್‌, ಜೆರಿಯಾಟ್ರಿಕ್‌ ಪಿಜಿಷಿಯನ್‌ ಅಥವಾ ನ್ಯೂರೊಲಜಿಸ್ಟ್‌ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮರೆವಿನ ಕಾಯಿಲೆ ಹೆಚ್ಚಾದರೆ ಸಾವು ಕೂಡ ಉಂಟಾಗಬಹುದು. ಹೀಗಾಗಿ, ತೀವ್ರ ಹಂತದಲ್ಲಿ ನಿರ್ಲಕ್ಷ್ಯ ಸಲ್ಲದು.

ಹಗಲು ನಿದ್ದೆ ಮಾಡುವ ಅಭ್ಯಾಸದಿಂದ ಆಲ್ಝೈಮರ್‌ ಅಪಾಯ ಹೆಚ್ಚು..!

ಅಲ್ಝೈಮರ್ ಕಾಯಿಲೆಯ ವಿವಿಧ ಹಂತಗಳು
ಆಲ್ಝೈಮರ್‌ ಕಾಯಿಲೆಯ ಕೋರ್ಸ್ ಅನ್ನು ಸಾಮಾನ್ಯವಾಗಿ ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಮೂರು ಹಂತಗಳನ್ನು ಆರಂಭಿಕ ಅಥವಾ ಸೌಮ್ಯ, ಮಧ್ಯಮ ಮತ್ತು ತೀವ್ರವಾಗಿ ಎಂದು ವಿವರಿಸಲಾಗಿದೆ. ಒಬ್ಬ ವ್ಯಕ್ತಿಯು ಮೊದಲ ಹಂತದಲ್ಲಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ, ಏಕೆಂದರೆ ಕೊನೆಯ ಹಂತದಲ್ಲಿ ಈ ರೋಗವು ರೋಗಿಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಯಿದೆ.

ಮೊದಲ ಹಂತದಲ್ಲಿ ಅಲ್ಝೈಮರ್ ಇರುವ ವ್ಯಕ್ತಿಗಳಲ್ಲಿ ಯಾವುದೇ ರೀತಿಯ ದೌರ್ಬಲ್ಯ ಕಂಡು ಬರುವುದಿಲ್ಲ. ಸಣ್ಣ ಪುಟ್ಟ ಮರೆವುಗಳು ಮಾತ್ರ ಇರುತ್ತದೆ. ಎರಡನೇ ಹಂತದಲ್ಲಿ ಮರೆವು ಸ್ವಲ್ಪ ಹೆಚ್ಚುತ್ತದೆ. ಎಲ್ಲಾದರೂ ಏನಾದರೂ ವಸ್ತುಗಳನ್ನು ಇಟ್ಟರೆ ಅದನ್ನು ತಕ್ಷಣ ಮರೆಯುವುದು ಇತ್ಯಾದಿ ಲಕ್ಷಣಗಳು ಇರುತ್ತವೆ. ಸ್ವಲ್ಪ ಕಷ್ಟಪಟ್ಟು ನೆನಪಿಸಿಕೊಂಡರೆ ಮರೆತ ವಿಷಯ ನೆನಪಾಗುತ್ತದೆ. ಮಧ್ಯಮ ಹಂತದಲ್ಲಿ ಮರೆವು ಇನ್ನಷ್ಟು ಹೆಚ್ಚುತ್ತದೆ. ಕೆಲವೊಮ್ಮೆ ಸಂಬಂಧಗಳನ್ನೇ ಮರೆಯುವಂತಹ ಪರಿಸ್ಥಿತಿ ಬರುತ್ತದೆ. ವ್ಯಕ್ತಿಗಳನ್ನು ಗುರುತಿಸಲು ಕಷ್ಟವಾಗುತ್ತದೆ. ಈ ಸಮಯದಲ್ಲಿ ವೈದ್ಯರನ್ನು ಕಾಣಲೇಬೇಕು. 

click me!