ಮಕ್ಕಳ ವಸ್ತುಗಳನ್ನು ಸಂಗ್ರಹಿಸುವ ಅಭ್ಯಾಸ ಅನೇಕ ಪಾಲಕರಿಗಿರುತ್ತದೆ. ಮೊದಲ ಬಾರಿ ಮಕ್ಕಳ ಕೂದಲು ಕತ್ತರಿಸಿದಾಗ ಅದನ್ನು ಇಟ್ಟುಕೊಳ್ಳುವವರಿದ್ದಾರೆ. ಹಾಗೆಯೇ ಮಕ್ಕಳ ಹಲ್ಲನ್ನು ಕೂಡ ಸಂಗ್ರಹಿಸುವ ಆಸಕ್ತಿ ಅನೇಕ ಪಾಲಕರಿಗಿರುತ್ತದೆ. ಮಕ್ಕಳ ಹಲ್ಲನ್ನು ರಕ್ಷಿಸಬೇಕೆಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
ಮಕ್ಕಳ ಮೇಲೆ ಪಾಲಕರಿಗೆ ವಿಶೇಷ ಪ್ರೀತಿ ಸಾಮಾನ್ಯ. ಮಕ್ಕಳ ಪ್ರತಿಯೊಂದು ಕ್ಷಣವನ್ನು ಸ್ಮರಣೀಯವಾಗಿ ಮಾಡಲು ಪಾಲಕರು ಬಯಸ್ತಾರೆ. ಮಕ್ಕಳು ಮೊದಲು ನಕ್ಕಾಗ, ಮಕ್ಕಳು ಮೊದಲು ಹೆಜ್ಜೆಯಿಟ್ಟಾಗ, ಮಕ್ಕಳು ಮೊದಲು ಮಾತನಾಡಿದಾಗ ಹೀಗೆ ಮಕ್ಕಳು ಮೊದಲು ಮಾಡುವ ಎಲ್ಲವನ್ನು ಪಾಲಕರು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾರೆ. ಹಾಗೆಯೇ ಮಕ್ಕಳ ಕೆಲ ವಸ್ತುಗಳನ್ನು ಸಂಗ್ರಹಿಸಿಡುತ್ತಾರೆ. ಮಗು ಹುಟ್ಟಿದಾಗ ಬಳಸಿದ ಬಟ್ಟೆ, ಮಗುವಿನ ಮೊದಲ ಆಟಿಕೆ, ಚಪ್ಪಲಿ ಹೀಗೆ ಅನೇಕ ವಸ್ತುಗಳನ್ನು ಸಂಗ್ರಹಿಸಿಡುತ್ತಾರೆ. ಮಕ್ಕಳು ದೊಡ್ಡವರಾಗ್ತಿದ್ದಂತೆ ಅನೇಕ ಬದಲಾವಣೆಯಾಗುತ್ತದೆ. ಮಕ್ಕಳ ಹಾಲು ಹಲ್ಲು ಬಿದ್ದು, ಹೊಸ ಹಲ್ಲು ಬರಲು ಶುರುವಾಗುತ್ತದೆ.
ಹಲ್ಲು ಬೀಳುವಾಗ ಮಕ್ಕಳು ಕೆಲ ಸಮಸ್ಯೆ ಎದುರಿಸುತ್ತಾರೆ. ಮಕ್ಕಳಿಗೆ ಭಯವಾಗೋದು ಸಾಮಾನ್ಯ. ಮಕ್ಕಳಿಗೆ ಆಹಾರ ಸೇವನೆ ಮಾಡಲು ಕಷ್ಟವಾಗುತ್ತದೆ. ಮಕ್ಕಳ ಹಾಲು ಹಲ್ಲು ಬಿದ್ದಾಗ ಬಹುತೇಕರು ಅದನ್ನು ಎಸೆಯುತ್ತಾರೆ. ಇನ್ನು ಕೆಲವರು ಅದನ್ನು ಸುರಕ್ಷಿತವಾಗಿಡಲು ಬಯಸ್ತಾರೆ. ನಾವಿಂದು ಮಕ್ಕಳ ಹಾಲು ಹಲ್ಲನ್ನು ಹೇಗೆ ಸಂಗ್ರಹಿಸಿಡಬಹುದು ಎಂಬ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಹಾಲು ಹಲ್ಲಿನ ರಕ್ಷಣೆ ಹೇಗೆ? :
ವೈದ್ಯರನ್ನು ಸಂಪರ್ಕಿಸಿ : ಮಕ್ಕಳ ಹಲ್ಲನ್ನು ರಕ್ಷಿಸಿಡಲು ಬಯಸಿದ್ರೆ ನೀವು ವೈದ್ಯರನ್ನು ಭೇಟಿಯಾಗಿ ಅವರ ಸಲಹೆ ಪಡೆಯಿರಿ. ವೈದ್ಯರನ್ನು ಭೇಟಿಯಾಗುವ ಮೊದಲೇ ಮಕ್ಕಳ ಹಲ್ಲು ಬಿದ್ದಿದೆ ಎಂದ್ರೆ ಅವರನ್ನು ಭೇಟಿಯಾಗುವವರೆಗೆ ಹಲ್ಲನ್ನು ನೀವು ಹಸುವಿನ ಹಾಲು ಅಥವಾ ಎಮ್ಮೆ ಹಾಲಿನಲ್ಲಿ ಹಲ್ಲನ್ನು ಇಡಬೇಕು.
10 ವರ್ಷ ಚಿಕ್ಕವರಾಗಿ ಕಾಣ್ಬೇಕೆಂದ್ರೆ ವಾರಕ್ಕೊಮ್ಮೆ ಊಟ ಬಿಡಿ
ಹಲ್ಲನ್ನು ಸ್ವಚ್ಛಗೊಳಿಸಿ : ಮಕ್ಕಳ ಹಲ್ಲ ಬಿದ್ದರೆ ಸಾಬೂನು ಮತ್ತು ನೀರಿನಿಂದ ಅವುಗಳನ್ನು ಸ್ವಚ್ಛಗೊಳಿಸಿ. ಇದು ಹಲ್ಲಿನ ಮೇಲೆ ಸಂಗ್ರಹವಾಗಿರುವ ಧೂಳು, ರಕ್ತ ಮತ್ತು ಲಾಲಾರಸವನ್ನು ತೆಗೆದುಹಾಕುತ್ತದೆ. ಸಾಬೂನಿನಿಂದ ಸ್ವಚ್ಛಗೊಳಿಸಿದ ನಂತ್ರ ಬ್ರಶ್ ಮೇಲೆ ಆಲ್ಕೋಹಾಲ್ ಹಚ್ಚಿ ಹಲ್ಲುಗಳನ್ನು ಸ್ವಚ್ಛಗೊಳಿಸಿ. ಇದು ಹಲ್ಲಿನಲ್ಲಿರುವ ರೋಗಾಣುಗಳನ್ನು ಸ್ವಚ್ಛಗೊಳಿಸುತ್ತದೆ.
ಹಲ್ಲನ್ನು ಒಣಗಿಸಿ : ಹಲ್ಲುಗಳನ್ನು ಸ್ವಚ್ಛಗೊಳಿಸಿದ ನಂತ್ರ ನೀವು ಹಲ್ಲನ್ನು ಒಣಗಿಸಬೇಕು. ಹಲ್ಲಿನಲ್ಲಿ ಬ್ಯಾಕ್ಟೀರಿಯಾ ಬೆಳೆಯುವುದನ್ನು ಇದು ತಡೆಯುತ್ತದೆ. ನೀವು ಒಣ ಬಟ್ಟೆಯಲ್ಲಿ ಹಲ್ಲನ್ನು ಇಟ್ಟು ಒಣಗಿಸಬಹುದು. ಇಲ್ಲವೆ ಬಿಸಿಲಿಗೆ ಹಲ್ಲನ್ನು ಇಟ್ಟು ಒಣಗಿಸಬೇಕು.
ಎಷ್ಟು ದಿನ ಹಲ್ಲನ್ನು ರಕ್ಷಿಸಬಹುದು? : ಹಲ್ಲನ್ನು ನೀವು ಹೇಗೆ ರಕ್ಷಣೆ ಮಾಡ್ತೀರಿ ಎನ್ನುವುದರ ಮೇಲೆ ಅದು ಎಷ್ಟು ವರ್ಷ ಸುರಕ್ಷಿತವಾಗಿ ಇರುತ್ತದೆ ಎಂಬುದನ್ನು ಹೇಳಬಹುದು.
ತಜ್ಞರ ಪ್ರಕಾರ, ಮಕ್ಕಳ ಹಾಲು ಹಲ್ಲು ಬಿದ್ದಾಗ ಅದನ್ನು ಮಣ್ಣಿನಲ್ಲಿ ಹೂಳಬೇಕು. ಒಂದ್ವೇಳೆ ಹಲ್ಲನ್ನು ಸುರಕ್ಷಿತವಾಗಿ ಇಡಲು ಬಯಸಿದ್ರೆ ಹಲ್ಲನ್ನು ಸ್ವಚ್ಛಗೊಳಿಸಿ, ಒಣಗಿಸಿ ಅದನ್ನು ಒಂದು ಬಾಕ್ಸ್ ನಲ್ಲಿ ಇಡಬೇಕು. ಬಾಕ್ಸ್ ನಲ್ಲಿ ಹಲ್ಲನ್ನು ಇಟ್ಟರೆ ಅದು ಬೇಗ ಹಾಳಾಗುವುದಿಲ್ಲ.
ಹಲ್ಲು ಮುರಿಯುತ್ತಿದ್ದಂತೆ ಮಕ್ಕಳು ಭಯಗೊಳ್ತಾರೆ. ರಕ್ತ ಕಾಣಿಸಿಕೊಳ್ಳುತ್ತಿದ್ದಂತೆ ಅವರಿಗೆ ಆತಂಕವಾಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಧೈರ್ಯ ತುಂಬುವುದು ಬಹಳ ಮುಖ್ಯ.
'ಆ' ವಿಷಯದಲ್ಲಿ ಸುಖವೇ ಇಲ್ಲ ಅನ್ನೋರಿಗೆ ಕಿವಿ ಮಾತು!
ಒಂದು ಹಲ್ಲು ಬೀಳ್ತಿದ್ದಂತೆ ಇನ್ನೊಂದು ಹಲ್ಲು ಹುಟ್ಟಿಕೊಳ್ಳುತ್ತದೆ. ಈ ವೇಳೆ ಮಕ್ಕಳಿಗೆ ಹಲ್ಲಿನ ಸುರಕ್ಷತೆ ಬಗ್ಗೆ ಪಾಲಕರು ಮಾಹಿತಿ ನೀಡಬೇಕಾಗುತ್ತದೆ. ಹಲ್ಲಿಗೆ ಹುಳ ಬರದಂತೆ ಹೇಗೆ ರಕ್ಷಿಸಬೇಕೆಂದು ಮಕ್ಕಳಿಗೆ ತಿಳಿಸಬೇಕು. ಹಾಗೆ ಪದೇ ಪದೇ ಹಲ್ಲು ಬಿದ್ದ ಜಾಗಕ್ಕೆ ನಾಲಿಗೆ ಹಾಕ್ತಿದ್ದರೆ ಅಥವಾ ಬೆರಳು ಹಾಕ್ತಿದ್ದರೆ ಹಲ್ಲು ಸರಿಯಾಗಿ ಬರುವುದಿಲ್ಲ. ಕೈ ಬಾಯಿಗೆ ಹಾಕುವುದ್ರಿಂದ ಹೊಟ್ಟೆನೋವು (Stomach Pain) ಬರುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಸಿ. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುವ ಅಭ್ಯಾಸವನ್ನು ಮಕ್ಕಳಿಗೆ ಕಲಿಸಿ ಎನ್ನುತ್ತಾರೆ ತಜ್ಞರು.