ವಿಡಿಯೋ ಗೇಮ್ ಆಡಿದರೂ ಸರಿ, ಮನೆಯ ಹೊರಗೆ ಬರಬೇಡಿ!

By Suvarna News  |  First Published Apr 8, 2020, 7:51 PM IST

ಇಷ್ಟು ವರ್ಷಗಳ ಕಾಲ ವಿಡಿಯೋ ಗೇಮಿಂಗ್ ಚಟವನ್ನು ವಿರೋಧಿಸುತ್ತಿದ್ದ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ಬಹಳಷ್ಟು ಆರೋಗ್ಯ ಸಂಸ್ಥೆಗಳು ವಿಡಿಯೋ ಗೇಮ್ ಆಡಿದರೂ ಪರವಾಗಿಲ್ಲ, ಆಮೇಲೆ ಚಟ ಬಿಡಿಸಬಹುದು. ಆದರೆ ಮನೆಯಿಂದ ಹೊರಬಂದು ಕೊರೋನಾ ಹಬ್ಬಿಸಬೇಡಿ ಎನ್ನುತ್ತಿದ್ದಾರೆ.


ಜಗತ್ತೇ ಮನೆಯೊಳಗೆ ಬಂಧಿಯಾಗಿರುವ ಈ ಸಂದರ್ಭದಲ್ಲಿ ಮಕ್ಕಳನ್ನು ಎಂಗೇಜ್ ಮಾಡಿಡುವುದು ಪೋಷಕರಿಗೆ ಕಷ್ಟವಾಗುತ್ತಿದೆ. ಒಂದೋ ಎರಡೋ ಗಂಟೆ ಅವರೊಂದಿಗೆ ಆಡಬಹುದು. ಇಡೀ ದಿನ ಮಕ್ಕಳನ್ನು ಎಂಗೇಜ್ ಮಾಡುವುದೇ ಕಚೇರಿ ಕೆಲಸಕ್ಕಿಂತ ಹೆಚ್ಚು ಒತ್ತಡದಾಯಕವಾಗಿರುವಾಗ ಪೋಷಕರು ಏನಾದರೂ ಮಾಡಿಕೊಳ್ಳಲಿ ಎಂದು ಬಿಡುತ್ತಿದ್ದಾರೆ. ಇದರಿಂದ ಹೆಚ್ಚು ಹೆಚ್ಚು ಮಕ್ಕಳು, ಅಷ್ಟೇ ಏಕೆ, ನಿರುದ್ಯೋಗಿ ಯುವಜನತೆ ಕೂಡಾ ವಿಡಿಯೋ ಗೇಮ್ ದಾಸರಾಗುತ್ತಿದ್ದಾರೆ. 

ವಿಡಿಯೋ ಗೇಮ್ ಎಂಬ ಚಟ ಒತ್ತಡ, ನಿರುದ್ಯೋಗ, ಒಂಟಿತನದಿಂದ ಹೈರಾಣಾಗಿರುವ ಚಿಕ್ಕ ವಯಸ್ಸಿನವರನ್ನು ಸುಲಭವಾಗಿ ಸೆಳೆದುಕೊಳ್ಳುತ್ತಿದೆ. ದುರದೃಷ್ಟವೆಂದರೆ ಇಷ್ಟು ವರ್ಷಗಳ ಕಾಲ ವಿಡಿಯೋ ಗೇಮಿಂಗ್ ಚಟವನ್ನು ವಿರೋಧಿಸುತ್ತಿದ್ದ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ಬಹಳಷ್ಟು ಆರೋಗ್ಯ ಸಂಸ್ಥೆಗಳು ವಿಡಿಯೋ ಗೇಮ್ ಆಡಿದರೂ ಪರವಾಗಿಲ್ಲ, ಆಮೇಲೆ ಚಟ ಬಿಡಿಸಬಹುದು. ಆದರೆ ಮನೆಯಿಂದ ಹೊರಬಂದು ಕೊರೋನಾ ಹಬ್ಬಿಸಬೇಡಿ ಎನ್ನುತ್ತಿದ್ದಾರೆ.

ಲಾಕ್ ಡೌನ್ ಎಫೆಕ್ಟ್; ಭಾರತದಲ್ಲಿ ಪೋರ್ನ್ ವೀಕ್ಷಣೆ ಪ್ರಮಾಣ ಏರಿದ್ದು ನ ...

ಕೊರೋನಾ ಹತ್ತಿಕ್ಕುವುದಷ್ಟೇ ಸಧ್ಯದ ಪ್ರಾಶಸ್ತ್ಯ
ಹೌದು, "ಈ ಮನರಂಜನೆ ಆಯ್ಕೆ ಇರುವುದರಿಂದಲೇ ಜನರಿಗೆ ಮನೆಯೊಳಗೆ ಇರಲು ಕೊಂಚ ಮಟ್ಟಿಗೆ ಸಾಧ್ಯವಾಗುತ್ತಿದೆ. ಇದೇ ಕಾರಣಕ್ಕೆ ಹೊರ ಹೋಗದೆ, ಜನರನ್ನು ಭೇಟಿಯಾಗದೆಯೂ ಅವರು ಬದುಕುತ್ತಿದ್ದಾರೆ," ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸ್ಟ್ರ್ಯಾಟಜಿ ರಾಯಭಾರಿ ರೇ ಚೇಂಬರ್ಸ್. ಅಂದ ಹಾಗೆ ವಿಡಿಯೋ ಗೇಮ್ ಅಡಿಕ್ಷನ್ ಒಂದು ಮಾನಸಿಕ ಸಮಸ್ಯೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. 

ಈ ಲಾಕ್‌ಡೌನ್ ಹೆಚ್ಚು ಕಾಲ ಮುಂದುವರಿದಂತೆಲ್ಲ ಹೆಚ್ಚು ಹೆಚ್ಚು ಜನರು ಈ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುತ್ತಾರೆ. ಆದರೆ, ಈ ಕೊರೋನಾ ಕಿರಿಕಿರಿ ಎಲ್ಲ ಮುಗಿದ ಬಳಿಕ ಗೇಮರ್ಸ್‌ಗಳನ್ನು ಮತ್ತೆ ಹಳಿಗೆ ತರಬಹುದು ಎನ್ನುವುದು ಚೇಂಬರ್ಸ್ ಮಾತು. ಅಂದರೆ, ಆರೋಗ್ಯದ ವಿಷಯದಲ್ಲಿ ಈಗ ಮೊದಲ ಪ್ರಾಮುಖ್ಯತೆ ಏನಿದ್ದರೂ ಕೊರೋನಾ ತಡೆಗಟ್ಟುವುದು. ವಿಶ್ವವು ಇದರಿಂದ ಮುಕ್ತವಾದರಷ್ಟೇ ಉಳಿದೆಲ್ಲ ಸಮಸ್ಯೆಗಳನ್ನು ನೀಗಿಸುವುದರತ್ತ ಗಮನ ಹರಿಸಬಹುದು ಎನ್ನುವುದು ಅವರ ಚಿಂತನೆ. 

ಜಂಕ್ ಫುಡ್ ದ್ವೇಷಿಸೋಕೆ ಮೆದುಳಿಗೆ ಟ್ರೇನ್ ಮಾಡಿ, ಇಲ್ಲಿದೆ ನೋಡಿ ಟಿಪ ...

Tap to resize

Latest Videos

ಹೊಸ ಹೊಸ ಗೇಮ್‌ಗಳು ಮಾರುಕಟ್ಟೆಗೆ
ಜನರನ್ನು ಮನೆಯೊಳಗೇ ಕೂರಿಸುವುದು ಸವಾಲಾಗಿರುವ ಈ ದಿನಗಳಲ್ಲಿ ಟೆಕ್ ಕಂಪನಿಗಳು ಕೂಡಾ ಹೊಸ ಹೊಸ ವಿಡಿಯೋ ಗೇಮ್‌ಗಳನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುತ್ತಿವೆ. ಅಂದರೆ ಸಧ್ಯಕ್ಕೆ ಗೇಮಿಂಗ್ ಕೂಡಾ ಆರೋಗ್ಯ ಕಾಪಾಡಿಕೊಳ್ಳುವ ಒಂದು ವಿಧಾನವೇ ಆಗಿದೆ. ಇದೇ ನೆಪದಲ್ಲಿ ಯುಬಿಸಾಫ್ಟ್ ಎಂಟರ್‌ಟೇನ್ಮೆಂಟ್‌ನಂಥ ಹಲವು ಗೇಮಿಂಗ್ ದಿಗ್ಗಜ ಕಂಪನಿಗಳು ಫ್ರೀ ಗೇಮ್‌ಗಳನ್ನು, ಇಲ್ಲವೇ ಡಿಸ್ಕೌಂಟ್ ಆಫರ್‌ಗಳನ್ನು ನೀಡಿ ಗೇಮ್‌ಗಳನ್ನು ಬಿಡುಗಡೆ ಮಾಡುತ್ತಿವೆ. 'ಪ್ಲೇ ಯುವರ್ ಪಾರ್ಟ್, ಪ್ಲೇ ಅಟ್ ಹೋಂ' ಎನ್ನುತ್ತಾ ಮಾರ್ಕೆಟಿಂಗ್ ಜೊತೆಗೆ ಜನರನ್ನು ಮನೆಯೊಳಗೇ ಇರಲೂ ಪ್ರೇರೇಪಿಸುತ್ತಿವೆ. 

ಶೇ.75ರಷ್ಟು ಏರಿಕೆ
ಮಾರ್ಚೊಂದರಲ್ಲೇ ಒಂದೇ ಸಮಯದಲ್ಲಿ 24 ದಶಲಕ್ಷ ಜನರು ಗೇಮಿಂಗ್‌ನಲ್ಲಿ ತೊಡಗಿದ್ದರು ಎನ್ನುತ್ತವೆ ಅಂಕಿ ಅಂಶ. ಅಂದರೆ, ಲಾಕ್‌ಡೌನ್‌ನಿಂದಾಗಿ ಗೇಮಿಂಗ್ ಬಳಕೆ ಮುಂಚೆಗಿಂತಾ ಶೇ.75ರಷ್ಟು ಏರಿಕೆ ಕಂಡಿದೆ. 'ಮೊದಲಾದರೆ ಎಲ್ಲ ವೀಕೆಂಡ್‌ಗಳಿಗೂ ಮುಂಚಿತವಾಗಿಯೇ ಪ್ಲ್ಯಾನ್ ರೆಡಿ ಇರುತ್ತಿತ್ತು. ಈಗ ಮಾಡಲು ಏನೂ ಇಲ್ಲ. ಹಾಗಾಗಿ, ಪೋಕೆಮನ್, ಓವರ್‌ವಾಚ್ ಮುಂತಾದ ಆಟಗಳನ್ನು ಆಡುತ್ತೇನೆ. ಇದರಿಂದ ಸಣ್ಣ ಜಾಗದಲ್ಲಿ ತಿಂಗಳುಗಟ್ಟಲೆ ಇರಬೇಕಾಗಿಬಂದಾಗಲೂ ಖಿನ್ನತೆಗೆ ಜಾರದಂತೆ ಇರಲು ನನಗೆ ಸಾಧ್ಯವಾಗಿದೆ' ಎನ್ನುತ್ತಾರೆ ಗೇಮಿಂಗ್ ಪ್ರಿಯೆ ರಿಶಿಕಾ. 

ಒಟ್ಟಿನಲ್ಲಿ ವಿಡಿಯೋ ಗೇಮಿಂಗ್ ಮಕ್ಕಳ ಹಾಗೂ ಯುವಜನತೆಯ ಬೆಳವಣಿಗೆಯ ದಿನಗಳನ್ನು ಕದಿಯುತ್ತಿದ್ದರೂ, ಅವನ್ನು ಸಹಿಸಿಕೊಳ್ಳಲೇಬೇಕಾದ, ಏನೂ ಮಾಡಲಾರದ ಸ್ಥಿತಿಗೆ ಪೋಷಕರು ತಲುಪಿದ್ದಾರೆ. 

"

click me!