ಕೋವಿಡ್ ನಂತರ ಯುವಜನತೆಯಲ್ಲಿ ಹೆಚ್ಚಾಗಿದೆ Depression

By Suvarna News  |  First Published Mar 21, 2022, 5:39 PM IST

ಇತ್ತೀಚಿನ ಸಂಶೋಧನೆಯ ಪ್ರಕಾರ, ಭಾರತದಲ್ಲಿ ಯುವಜನರು ಕೋವಿಡ್ ನಂತರದ ದಿನಗಳಲ್ಲಿ ಹೆಚ್ಚು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.. 


ನಾವು ತಿಳಿದುಕೊಂಡ ಹಾಗೆ ಕಳೆದೆರಡು ವರ್ಷಗಳಲ್ಲಿ ಕಾಣಿಸಿಕೊಂಡ ಕೋವಿಡ್ 19 ಬರೀ ದೇಹದ ಆರೋಗ್ಯಕ್ಕೆ (Health) ಮಾತ್ರ ತೊಂದರೆಗಳನ್ನು ಉಂಟು ಮಾಡಿಲ್ಲ. ಜೊತೆಗೆ, ಎಷ್ಟು ಜನರು ಮಾನಸಿಕ ಖಿನ್ನತೆಗೆ ಒಳಗಾಗುವ ಹಾಗೆ ಕೂಡ ಮಾಡಿದೆ. ಇತ್ತೀಚಿಗೆ ನಡೆದ ಹಲವಾರು ಸಂಶೋಧನೆಗಳ ಪ್ರಕಾರ ಭಾರತದಲ್ಲಿ 15 ವರ್ಷದಿಂದ 24 ವರ್ಷಗಳವರೆಗಿನ ಯುವಕರಲ್ಲಿ ಖಿನ್ನತೆ ಹೆಚ್ಚಾಗಿ ಕಂಡು ಬಂದಿದೆ. ಪ್ರತಿ 7 ಜನರಲ್ಲಿ ಒಬ್ಬ ಯುವಕನಿಗೆ ಖಿನ್ನತೆ ಆವರಸಿದೆ ಎಂಬುದನ್ನು ಈ ಸಂಶೋಧನೆಗಳು ಹೇಳುತ್ತವೆ. 

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, 2020 ರಲ್ಲಿ ದೇಶದಲ್ಲಿ ನಡೆದ ಎಲ್ಲ ಆತ್ಮಹತ್ಯೆಗಳಲ್ಲಿ (Suicide) ಮೂರನೇ ಒಂದು ಭಾಗದಷ್ಟು ಯುವಕರು. ವೈಯಕ್ತಿಕ ಶಿಕ್ಷಣ, ಸಾಮಾಜಿಕ ಅವಕಾಶಗಳ ನಷ್ಟದಿಂದಾಗಿ ಅವರ ಜೀವನಕ್ಕೆ ಉಂಟಾದ ತೊಂದರೆಗಳು, ಒತ್ತಡ, ಖಿನ್ನತೆ ಈ ಎಲ್ಲಾ ಕಾರಣದಿಂದಾಗಿ ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ಪ್ರತಿದಿನ ಓದು ಇಲ್ಲವೇ ಸ್ನೇಹಿತರೊಂದಿಗಿನ ಒಡನಾಟ ಹೀಗೆ ಸಮಯವನ್ನು ಕಳೆಯುತ್ತಿದ್ದರ ಜನರು ಇದ್ದಕ್ಕಿದ್ದಂತೆ, ಎಲ್ಲರಿಂದ ದೂರ ಇರಬೇಕಾದ ಪರಿಸ್ಥಿತಿಯಿಂದಾಗಿ ಈ ಸಮಸ್ಯೆ ಉದ್ಭವವಾಗಿದೆ ಎಂಬುದು ತಜ್ಞರ ಅಭಿಪ್ರಾಯ. 

Tap to resize

Latest Videos

Heart Attackಗೆ ಬಲಿಯಾಗುವವರಲ್ಲಿ ಮಹಿಳೆಯರೇ ಹೆಚ್ಚು

UNICEF ಸಂಶೋಧನೆಯ ಪ್ರಕಾರ ಶೇಕಡ 60ರಷ್ಟು ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣವನ್ನು ಅರ್ಥಮಾಡಿಕೊಳ್ಳಲು ಸಾಮರ್ಥ್ಯವನ್ನು ಹೊಂದಿದ್ದಾರೆ ಆದರೆ ಇನ್ನುಳಿದಂತೆ ವಿದ್ಯಾರ್ಥಿಗಳು ದೈಹಿಕ ಪಾಠಶಾಲೆಯ (Offline class) ಶಿಕ್ಷಣದಷ್ಟು ಪ್ರಭಾವಶಾಲಿಯಾಗಿ ಆನ್ಲೈನ್ ಶಿಕ್ಷಣವನ್ನು ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಡಿಜಿಟಲ್ ಶಿಕ್ಷಣದ ಮೂಲಕ ಗಮನಾರ್ಹವಾಗಿ ಕಡಿಮೆ ಕಲಿಯುತ್ತಿದ್ದಾರೆ ಎಂದು ಕಂಡುಹಿಡಿದಿದೆ. ಆನ್‌ಲೈನ್ ಮೋಡ್‌ಗೆ ಪರಿವರ್ತನೆಯು ಅವರ ಕಲಿಕೆ ಮತ್ತು ನಿಭಾಯಿಸುವ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರಿದೆ, ಹೆಚ್ಚಿದ ಒತ್ತಡ ಅವರ ನಿದ್ರೆ ಮತ್ತು ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತವೆ. ಇದು ಅವರ ಮೆದೂಳಿನ ನರಗಳ ಬೆಳವಣಿಗೆಯನ್ನು (Mental Development) ಕುಂಠಿಗೊಳಿಸುತ್ತದೆ. ಇನ್ನೂ ದೈಹಿಕ ಶಾಲೆಗಳಿಗೆ ತೆರಳಿದರೆ ಬರೀ ಪಾಠವನ್ನು ಅಲ್ಲದೆ ಜೊತೆಗೆ ವಿದ್ಯಾರ್ಥಿಗಳಲ್ಲಿರುವ ಇತರೆ ಕಲೆಗಳನ್ನು ಪ್ರದರ್ಶನ ನೀಡಲು ಅವಕಾಶ ದೊರೆಯುತ್ತಿತ್ತು ಉದಾಹರಣೆಗೆ ಹಾಡು, ನೃತ್ಯ,  ಸ್ಫೋರ್ಟ್ಸ್ ಕರಕುಶಲಗಳು ಇತ್ಯಾದಿ.. ಆದರೆ ಡಿಜಿಟಲ್ ತರಗತಿಗಳಲ್ಲಿ ಇಂಥವುಗಳಿಗೆ ಕಡಿಮೆ ಅವಕಾಶ ದೊರೆಯುತ್ತದೆ. 

ಇನ್ನು ಹೆಣ್ಣುಮಕ್ಕಳ ವಿಚಾರಕ್ಕೆ ಬಂದರೆ ಅವರು ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಯುಎನ್ ವುಮನ್ ನ ಸಂಶೋಧನೆಯ ಪ್ರಕಾರ ಹುಡುಗರಿಗಿಂತ ಹುಡುಗಿಯರೇ ವಿದ್ಯಾಭ್ಯಾಸದಿಂದ ಬಹುತೇಕ ಹಿಂದುಳಿಯುವ ಸನ್ನಿವೇಶ ಬಂದಿದೆ. ತಂದೆ-ತಾಯಿಯರು ತಮ್ಮ ಜೀವನ ನಿರ್ವಹಣೆಗಾಗಿ ಕಷ್ಟ ಪಡುವಂಥ ಸಮಯದಲ್ಲಿ ಮಕ್ಕಳ ವಿದ್ಯಾಭ್ಯಾಸ ಮುಂದುವರಿಸುವುದಕ್ಕೆ ಬಹಳ ತೊಂದರೆ ಅನುಭವಿಸಿದರು. ಫೀಸ್ ಜಾಸ್ತಿಯಾಗುತ್ತದೆ ಎಂಬ ಕಾರಣದಿಂದಾಗಿ ತಮ್ಮ ಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಸಿದರು. ಉನ್ನತ ಶಿಕ್ಷಣ ಪಡೆಯುತ್ತಿದ್ದ ಹೆಣ್ಣುಮಕ್ಕಳ ವಿಚಾರ ನೋಡಿದರೆ, ಬಹುತೇಕ ಹೆಣ್ಣು ಮಕ್ಕಳಿಗೆ ಅನಿವಾರ್ಯ ಕಾರಣಗಳಿಂದಾಗಿ ಲಾಕ್ಡೌನ್ ಸಮಯದಲ್ಲಿಯೇ ಮದುವೆ (Marriage) ಮಾಡಲಾಗಿದೆ. ಅಲ್ಲಿಗೆ ಹೆಚ್ಚಿನ ಜನರ ವಿದ್ಯಾಭ್ಯಾಸ ನಿಂತು ಹೋಗಿದೆ. 

ಇವರು ಕಾಫಿ ಜತೆ ಮಿಕ್ಸ್ ಮಾಡೋದು ಹಾಲಲ್ಲ, ಆಲ್ಕೋಹಾಲ್!

ಹೀಗೆ ಈ ಎಲ್ಲ ಕಾರಣದಿಂದಾಗಿ ಯುವಜನರು ತಮಗೆ ಅರಿವಿಲ್ಲದಂತೆ ಮಾನಸಿಕ ಕಾಯಿಲೆಗೆ ಒಳಗಾಗಿದ್ದಾರೆ. ಇದರ ಕಡೆಗೆ ಹೆಚ್ಚಿನ ಗಮನ ನೀಡಿ,  ಯುವಜನತೆ ನಮ್ಮ ದೇಶದ ಶಕ್ತಿ ಹಾಗಾಗಿ ಅವರ ಆರೋಗ್ಯ, ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಿ ಶಿಕ್ಷಣದ ಮೇಲೆ ಅವರಿಗಿರುವ ಹಕ್ಕು (Rights) ಮತ್ತು ದೇಶದ ಬಗೆಗಿರುವ ಕರ್ತವ್ಯವನ್ನು ನಿಭಾಯಿಸುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲಾ ಭಾರತೀಯರಿಗೂ ಇದೆ.

click me!