ಮಕ್ಕಳಲ್ಲಿ ಮಧುಮೇಹ ನಿಧಾನವಾಗಿ ಎಲ್ಲೆಡೆ ಹೆಚ್ಚುತ್ತಿದೆ. ಕೆಟ್ಟ ಆಹಾರಶೈಲಿ ಹಾಗೂ ಚಟುವಟಿಕೆ ಇಲ್ಲದ ಜೀವನಶೈಲಿಯಿಂದಾಗಿ ಮಕ್ಕಳು ಬೊಜ್ಜು ದೇಹ ಹೊಂದುತ್ತಿದ್ದಾರೆ. ಪರಿಣಾಮವಾಗಿ, ಅವರಲ್ಲಿ ಮಧುಮೇಹದ ಅಪಾಯವೂ ಹೆಚ್ಚಿದೆ. ಈ ಸಮಯದಲ್ಲಿ ಪಾಲಕರು ಜವಾಬ್ದಾರಿಯಿಂದ ವರ್ತಿಸಬೇಕು.
ಮಧುಮೇಹ ಇಂದು ವ್ಯಾಪಕವಾಗುತ್ತಿದೆ. ಮಕ್ಕಳೂ ಇದಕ್ಕೆ ಹೊರತಾಗಿಲ್ಲ. ಜೀವನಶೈಲಿಯ ಸಮಸ್ಯೆಯಿಂದಾಗಿ ಮಕ್ಕಳಲ್ಲೂ ಟೈಪ್ 2 ಮಧುಮೇಹದ ಸಮಸ್ಯೆ ಹೆಚ್ಚುತ್ತಿದೆ. ಬೊಜ್ಜಿನ ಸಮಸ್ಯೆ ಹೊಂದಿರುವ ಮಕ್ಕಳಲ್ಲಂತೂ ಮಧುಮೇಹದ ಅಪಾಯ ಇನ್ನಷ್ಟು ಹೆಚ್ಚು. ಬಹಳಷ್ಟು ಪಾಲಕರು ಮಕ್ಕಳು ತಮ್ಮಂತೆ ಕಷ್ಟಪಡುವುದು ಬೇಡ ಎಂದು ಕೇಳಿದ್ದನ್ನೆಲ್ಲ ಕೊಡಿಸುತ್ತಾರೆ. ಯಾವುದಕ್ಕೂ ಇಲ್ಲವೆನ್ನುವುದಿಲ್ಲ. ಬಾಹ್ಯ ತಿಂಡಿತಿನಿಸುಗಳು, ಬದಲಾದ ಆಹಾರ ಶೈಲಿ, ಜತೆಗೆ ಚಟುವಟಿಕೆ ರಹಿತ ದಿನಚರಿಯಿಂದಾಗಿ ಬೊಜ್ಜು ಹೆಚ್ಚುವ ಜತೆಗೆ ಮಧುಮೇಹಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ. ಈ ಸನ್ನಿವೇಶದಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಧುಮೇಹ ಹಾಗೂ ಬೊಜ್ಜಿನ ಸಮಸ್ಯೆಯ ಬಗ್ಗೆ ಅರಿತುಕೊಳ್ಳಬೇಕಾಗಿದೆ. ನಿಮಗೆ ಗೊತ್ತೇ? ಅಧ್ಯಯನದ ಪ್ರಕಾರ, ನಗರ ಪ್ರದೇಶಗಳಲ್ಲಿ ವಾಸಿಸುವ ಮೂರನೇ ಒಂದು ಭಾಗದಷ್ಟು ಮಕ್ಕಳು ಬೊಜ್ಜು ದೇಹ ಹೊಂದಿದ್ದು, ಅವರಲ್ಲಿ ಇನ್ಸುಲಿನ್ ಪ್ರತಿರೋಧಕ ಶಕ್ತಿ ಹಿಗ್ಗುತ್ತಿದೆ. ಹೀಗಾಗಿ, ಪಾಲಕರು ತಮ್ಮ ಜೀವನಶೈಲಿ, ಆಹಾರಶೈಲಿ ಬದಲಿಸಿಕೊಳ್ಳುವ ಮೂಲಕ ಮಕ್ಕಳ ಆರೋಗ್ಯದ ಕಡೆಗೆ ಗಮನ ನೀಡಬೇಕು ಎನ್ನುತ್ತಾರೆ ತಜ್ಞರು. ಆಹಾರದ ಬಗ್ಗೆ ಗಮನ ನೀಡುವುದು ಎಂದರೆ, ಕೇವಲ ಪೌಷ್ಟಿಕ ಆಹಾರ ನೀಡುವುದಲ್ಲ.
ಮಕ್ಕಳಲ್ಲಿ (Children) ಮಧುಮೇಹದ (Diabetes) ಲಕ್ಷಣವೇನು?
ನಗರ ಪ್ರದೇಶದ ಮಕ್ಕಳ ಹೊಟ್ಟೆ (Belly) ಹಾಗೂ ಸೊಂಟದ ಭಾಗ ದಪ್ಪಗಾಗುತ್ತಿದೆ. ಇದರಿಂದಾಗಿ ಇನ್ಸುಲಿನ್ ಪ್ರತಿರೋಧಕ (Insulin Resistant) ಹೆಚ್ಚಿ, ಟೈಪ್ 2 ಮಧುಮೇಹದ ಆತಂಕವೂ ಹೆಚ್ಚಿದೆ. ಗ್ರಾಮೀಣ ಭಾಗದಲ್ಲೂ ಈ ಸಮಸ್ಯೆ ಇದ್ದರೂ ಕಡಿಮೆ. ಮಕ್ಕಳಲ್ಲಿ ಮಧುಮೇಹ ಆರಂಭವಾಗಿದೆ ಎನ್ನುವುದನ್ನು ಕೆಲವು ಲಕ್ಷಣಗಳ ಮೂಲಕ ಅರಿಯಬಹುದು. ಅವರಿಗೆ ಬಾಯಾರಿಕೆ (Thirsty) ಹೆಚ್ಚು. ಅಧಿಕ ನೀರು (Water) ಕುಡಿಯುವುದರಿಂದ ಅವರು ಪದೇ ಪದೆ ಮೂತ್ರಕ್ಕೆ ಹೋಗಬಹುದು. ಹಾಸಿಗೆಯಲ್ಲೂ ಮೂತ್ರ (Urine) ವಿಸರ್ಜನೆ ಆಗಬಹುದು. ಹಸಿವು ಹೆಚ್ಚಬಹುದು. ಹೆಚ್ಚು ತಿಂದರೂ ತೃಪ್ತಿಯಾಗದೆ ಇರಬಹುದು. ಆಲಸಿತನ (Lethargy) ಕಾಡಬಹುದು. ಹಾಗೆಯೇ ಇದ್ದಕ್ಕಿದ್ದ ಹಾಗೆ ತೂಕ ಕಡಿಮೆ ಆಗಲು ಶುರುವಾಗಬಹುದು. ಕಿರಿಕಿರಿ (Irritation) ಮಾಡಿಕೊಳ್ಳಬಹುದು, ವರ್ತನೆಯಲ್ಲಿ ಬದಲಾವಣೆ ಕಂಡುಬರಬಹುದು, ಅವರ ಉಸಿರು ಹಣ್ಣಿನ (Fruit) ವಾಸನೆಯಿಂದ ಕೂಡಿರಬಹುದು.
undefined
ಪೋಷಕರು ಮಕ್ಕಳಲ್ಲಿ ಕಂಡು ಬರುವ ಮಧುಮೇಹವನ್ನು ಗುರುತಿಸುವುದು ಹೇಗೆ ?
ಪಾಲಕರು (Parents) ಮಾಡಬೇಕಾದುದೇನು?
• ಆರೋಗ್ಯಕರ ಆಹಾರದ (Healthy Food) ಅಭ್ಯಾಸ
ಮಕ್ಕಳಲ್ಲಿ ಆರೋಗ್ಯಕರ ಆಹಾರ ಅಭ್ಯಾಸವಾಗಬೇಕಾದರೆ ಮೊದಲು ಪಾಲಕರಲ್ಲಿ ಈ ಅರಿವು ಮೂಡಬೇಕು. ತಾವು ಸ್ವತಃ ಜಂಕ್ ಫುಡ್ (Junk Food) ತೊರೆದು, ಉತ್ತಮ ಆಹಾರದ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು. ಯಾವುದೇ ಕಾರಣಕ್ಕೂ ಚಾಕೋಲೇಟ್ ಸೇರಿದಂತೆ ಮನೆಗೆ ಯಾವುದೇ ಬಾಹ್ಯ ತಿಂಡಿತಿನಿಸು ತರಬಾರದು. ಹುಟ್ಟುಹಬ್ಬ, ಹಬ್ಬ ಮುಂತಾದ ಸಮಯದಲ್ಲಿ ಮನೆಯಲ್ಲೇ ಸಿಹಿತಿನಿಸು ಸಿದ್ಧ ಮಾಡಬೇಕು. ಸ್ಕ್ರೀನ್ (Screen) ನೋಡುತ್ತ ಆಹಾರ ತಿನ್ನಬಾರದು. ಮಕ್ಕಳಿಗೆ ತರಕಾರಿ, ಹಣ್ಣು ಸೇವಿಸುವ ಅಭ್ಯಾಸ ಮಾಡಿಸಬೇಕು. ಹೆಚ್ಚು ನೀರು ಕುಡಿಯಲು ತಿಳಿಸಬೇಕು. ಮಕ್ಕಳ ಆಹಾರದಲ್ಲಿ ನೆಲ್ಲಿಕಾಯಿ, ಅರಿಶಿಣ ಮುಂತಾದವುಗಳನ್ನು ಬಳಕೆ ಮಾಡಬೇಕು. ಹಾಗೆಯೇ, ನಿಗದಿತ ಸಮಯಕ್ಕೆ ಆಹಾರ, ನಿದ್ರೆ (Sleep) ರೂಢಿಸಬೇಕು.
• ದೈಹಿಕ ಚಟುವಟಿಕೆ (Activity)
ಬೊಜ್ಜು (Obese) ದೇಹದ ಮಕ್ಕಳಿಗೆ ಕಡ್ಡಾಯವಾಗಿ ವ್ಯಾಯಾಮ, ಆಟೋಟ ಮಾಡಿಸಬೇಕು. ಮನೆಯಲ್ಲಿ ವ್ಯಾಯಾಮ (Exercise) ಮಾಡುವುದರಿಂದ ಹಿಡಿದು, ಹೊರಗೆ ಆಟವಾಡುವ ಅಭ್ಯಾಸ ಮಾಡಿಸಬೇಕು. ಯಾವುದಾದರೂ ಕ್ಲಾಸ್ ಗೆ ಸೇರಿಸಬಹುದು. ಮಕ್ಕಳು ದಿನಕ್ಕೆ ಕನಿಷ್ಠ ಒಂದು ಗಂಟೆ ದೈಹಿಕ ಚಟುವಟಿಕೆಯಲ್ಲಿ ತೊಡಗುವುದು ಅಗತ್ಯ.
Diabetes Care: ಈ ಅಭ್ಯಾಸ ನಿಮ್ಮನ್ನು ಮಧುಮೇಹಿಗಳನ್ನಾಗಿ ಮಾಡ್ಬೋದು, ಎಚ್ಚರ
• ಮಾನಸಿಕ ಆರೋಗ್ಯ (Mental Wellbeing)
ಪಾಲಕರು ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ನೀಡಬೇಕು. ಶಿಕ್ಷಣಕ್ಕೆ ಸಂಬಂಧಿಸಿ ಅವರು ಎದುರಿಸುವ ಒತ್ತಡದ (Stress) ಬಗ್ಗೆ ಅರಿತುಕೊಳ್ಳಬೇಕು. ಸಮಾನ ವಯಸ್ಕರಿಂದ ಉಂಟಾಗುವ ಒತ್ತಡದ ಬಗ್ಗೆಯೂ ಮನೆಯಲ್ಲಿ ಮುಕ್ತ ಮಾತುಕತೆ ನಡೆಯಬೇಕು.