ಕೀಟಾಣುಗಳನ್ನು ದೂರವಿಡುವ ನಿಮ್ಮ ಈ ಟ್ರಿಕ್ಸ್ ನಡೆಯೋಲ್ಲ

By Suvarna News  |  First Published Apr 4, 2020, 4:53 PM IST

ಸಾರ್ವಜನಿಕ ಶೌಚಾಲಯ ಬಳಸುವಾಗ ಕೀಟಾಣು ತಾಕಿಸಿಕೊಳ್ಳಬಾರದೆಂದು ಕಾಲಿನ ಮೂಲಕ ಫ್ಲಶ್ ಬಟನ್ ಒತ್ತುವುದು, ಕೈಗಂಟಿನ ಮೂಲಕ ಎಲಿವೇಟರ್ ಬಟನ್ ಒತ್ತುವುದು ಮುಂತಾದ ಟೆಕ್ನಿಕ್ ಬಳಸುತ್ತಿದ್ದರೆ, ಇದರಿಂದೆಲ್ಲ ಏನೂ ಪ್ರಯೋಜನವಿಲ್ಲ ಎನ್ನುತ್ತಾರೆ ಹೈಜೀನ್ ಎಕ್ಸ್‌ಪರ್ಟ್ಸ್. 


ಜರ್ಮ್ಸ್ ದೂರ ಇಡೋಕೆ ನಮ್ಮದೇ ಆದ ಹತ್ತಾರು ದಾರಿ ಕಂಡುಕೊಂಡಿರ್ತೀವಿ. ಹೀಗ್ ಮಾಡಿದ್ರಿಂದ ಕೀಟಾಣುವಿನಿಂದ ದೂರ ಉಳುದ್ವಿ, ಅನಾರೋಗ್ಯ ಹತ್ತಿರ ಬರಲ್ಲ ಅಂತೆಲ್ಲ ನಾವ್ ನಾವೇ ಅಂದುಕೊಂಡು ಸಮಾಧಾನ ಪಡ್ಕೋತಿರ್ತೀವಿ. ಆದ್ರೆ ನಮ್ಮ ಈ ಭ್ರಮೆಗಳ ಬಲೂನ್‌ಗೆ ಸೂಜಿ ಚುಚ್ಚತ್ತೆ ಹೈಜೀನ್ ಎಕ್ಸ್‌ಪರ್ಟ್‌ಗಳ ಈ ವಿವರಣೆ. 

ಟಾಯ್ಲೆಟ್ ಸೀಟ್ ಮೇಲೆ ಪೇಪರ್ ಹಾಕಿಕೊಳ್ಳೋದು
ಸಾರ್ವಜನಿಕ ಟಾಯ್ಲೆಟ್ ಬಳಸುವಾಗ ಕಮೋಡ್ ಮೇಲೆ ಟಾಯ್ಲೆಟ್ ಪೇಪರ್ ಹರಡಿಕೊಂಡು ಕುಳಿತು ಬಳಸಿದರೆ ಬ್ಯಾಕ್ಟೀರಿಯಾಗಳ ಭಯ ಮರೆತು ಹೋಗಬಹುದು. ಆದರೆ, ಇದರಿಂದ ಏನೇನೂ ಪ್ರಯೋಜನವಿಲ್ಲ. ನೀರನ್ನು ತಕ್ಷಣದಲ್ಲಿ ಹೀರಿಕೊಳ್ಳುವ ಈ ಪೇಪರ್‌ಗಳು ಅದರೊಂದಿಗೆ ಬ್ಯಾಕ್ಟೀರಿಯಾಗಳೂ ನುಗ್ಗಿರುತ್ತವೆ. ಹಾಗಂಥ ಹೆಚ್ಚೇನು ಹೆದರುವ ಅಗತ್ಯವಿಲ್ಲ. ನಮ್ಮ ಚರ್ಮ ನಮಗೆ ಬೇಕಾದ ರಕ್ಷಣೆ ನೀಡಲು ಸದಾ ಸಿದ್ಧವಾಗಿರುತ್ತದೆ. ಆದರೆ ಗಾಯಗಳಿದ್ದಲ್ಲಿ, ದೇಹದೊಳಕ್ಕೆ ಹೋಗಲು ಓಪನಿಂಗ್ ಇದ್ದಲ್ಲಿ ಇಲ್ಲವೇ ಕೈಯಿಯ ಮೂಲಕವೇ ಬ್ಯಾಕ್ಟೀರಿಯಾ ದೇಹ ಸೇರುವುದು. ಹಾಗಾಗಿಯೇ ಟಾಯ್ಲೆಟ್ ಬಳಸಿದ ಬಳಿಕ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವ ಅಗತ್ಯವಿದೆ. 

ಅಂತರ್ಮುಖಿ ಮಗುವಿನ ಪೋಷಕರಿಗಿಷ್ಟು ಟಿಪ್ಸ್


ನೆಲಕ್ಕೆ ಬಿದ್ದ ತಿಂಡಿ
ನೆಲಕ್ಕೆ ಕೈಯಿಂದ ಹಣ್ಣು, ಕೋಡುಬಳೆ ಇತ್ಯಾದಿ ತಿಂಡಿ ಬಿದ್ದಾಗ ಅಥವಾ ಪಾತ್ರೆ ಬಿದ್ದಾಗ 5 ಸೆಕೆಂಡ್‌ನೊಳಗೆ ಅದನ್ನು ಎತ್ತಿಕೊಂಡರೆ ಹಾಗೆ ಕೊಡವಿ ತಿನ್ನುವ ಅಭ್ಯಾಸ ಹಲವರದು. ತಕ್ಷಣ ಎತ್ತಿಕೊಂಡಿದ್ದರಿಂದ ಜರ್ಮ್ಸ್ ತಾಕುವುದಿಲ್ಲ ಎಂಬ ನಂಬಿಕೆ. ಆದರೆ, ಸಂಶೋಧನೆಗಳು ಹೇಳುವುದೇ ಬೇರೆ. ಹೌದು, ಹೆಚ್ಚು ಹೊತ್ತು ಯಾವುದಾದರೂ ನೆಲದಲ್ಲಿದ್ದಾಗ ಹೆಚ್ಚು ಬ್ಯಾಕ್ಟೀರಿಯಾಗಳು ಅದಕ್ಕೆ ಸೇರಿಕೊಳ್ಳುತ್ತವೆ. ಆದರೆ, ಒಂದು ಸೆಕೆಂಡ್‌ನಲ್ಲಿ ಕೂಡಾ ಬಹಳಷ್ಟು ಬ್ಯಾಕ್ಟೀರಿಯಾಗಳು ತಿನ್ನುವ ಪದಾರ್ಥಕ್ಕೆ ನೆಗೆಯಬಹುದು. ಹಾಗಾಗಿ, ಕೆಳಗೆ ಬಿದ್ದ ಪದಾರ್ಥ ತೊಳೆಯಲು ಬಂದರೆ ಅದನ್ನು ತೊಳೆದು ಬಳಸಿ. ಇಲ್ಲದಿದ್ದಲ್ಲಿ ನೆಲಕ್ಕೆ ತಾಕಿದ ಭಾಗವನ್ನು ಕತ್ತರಿಸಿ ಸೇವಿಸಿ. 

ಶರ್ಟ್ ಸ್ಲೀವ್ ಬಳಸಿ ಬಾತ್‌ರೂಂ ಬಾಗಿಲು ತೆಗೆಯುವುದು
ಕೀಟಾಣುಗಳಿಂದ ತುಂಬಿತುಳುಕುವ ಟಾಯ್ಲೆಟ್ ಹಾಗೂ ಬಾತ್‌ರೂಂ ಡೋರ್‌ಗಳನ್ನು ತೆಗೆವಾಗ, ಅಲ್ಲಿಯ ನಲ್ಲಿಗಳನ್ನು ಮುಟ್ಟುವಾಗ ಹ್ಯಾಂಡಲ್ ಹಾಗೂ ಕೈ ನಡುವೆ ಸಂಪರ್ಕ ಏರ್ಪಡದಂತೆ ನೋಡಿಕೊಳ್ಳುವುದು ಉತ್ತಮ ಐಡಿಯಾ. ಹಾಗಂಥ ನಮ್ಮದೇ ಶರ್ಟ್ ಸ್ಲೀವ್‌ಗಳನ್ನು ಬಳಸಿ ತೆಗೆಯುವುದರಿಂದ ಏನೂ ಸ್ವಚ್ಛತೆ ಸಾಧಿಸಿದಂತಾಗುವುದಿಲ್ಲ. ಏಕೆಂದರೆ ಹ್ಯಾಂಡಲ್‌ನಲ್ಲಿದ್ದ ಜರ್ಮ್ಸ್ ನಿಮ್ಮ ಬಟ್ಟೆಗೆ ಸೇರಿಕೊಳ್ಳುತ್ತದೆ. ಬಟ್ಟೆಗೆ ಸೇರಿಕೊಂಡ ಮೇಲೆ ದೇಹದೊಳಕ್ಕೆ ಹೋಗಲು ಎಷ್ಟು ಸಮಯ ಬೇಕು? ಹಾಗಾಗಿ ಇಂಥ ಸಂದರ್ಭದಲ್ಲಿ ಪೇಪರ್ ಟವಲ್ ಬಳಸಿ, ನಂತರ ಡಸ್ಟ್‌ಬಿನ್‌ಗೆ ಹಾಕುವುದು ಉತ್ತಮ ಕ್ರಮ. 

ಮೊಣಕೈಯಿಂದ ಎಲಿವೇಟರ್ ಬಟನ್ ಒತ್ತುವುದು
ಸಾರ್ವಜನಿಕ ಸ್ಥಳಗಳ ಸರ್‌ಫೇಸ್‌ಗಳನ್ನು ಮುಟ್ಟದಿರುವುದು ಒಳ್ಳೆಯದು. ಆದರೆ, ಕೆಲವೊಮ್ಮೆ ಎಲಿವೇಟರ್, ಲಿಫ್ಟ್ ಬಟನ್‌ಗಳಂಥ ವಿಷಯದಲ್ಲಿ ಅನಿವಾರ್ಯವಾಗಿ ಮುಟ್ಟಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಹೆಚ್ಚಿನವರು ತಮ್ಮ ಮೇಗೈ, ಮೊಣಕೈಗಳನ್ನು ಬಳಸಿ ಬಟನ್ ಪ್ರೆಸ್ ಮಾಡುತ್ತಾರೆ. ಆದರೆ, ಇದರಿಂದ ಜರ್ಮ್ಸ್ ದೂರವಿಡಲು ಸಾಧ್ಯವಿಲ್ಲ. ಕೈಯಿಯ ಹಿಂಭಾಗ ಕೂಡಾ ಮುಖ ಮುಟ್ಟುತ್ತಿರುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳು ದೇಹ ಸೇರುವುದನ್ನು ತಡೆಯಲಾಗುವುದಿಲ್ಲ. 

ಕಾಲನ್ನು ಬಳಸಿ ಫ್ಲಶ್ ಮಾಡುವುದು
ಸಾರ್ವಜನಿಕ ಶೌಚಾಲಯಗಳಲ್ಲಿ ಯಾವುದನ್ನೂ ತಾಗಿಸಿಕೊಳ್ಳಲು ಮನಸ್ಸಾಗುವುದಿಲ್ಲ. ಆದರೆ, ಡೋರ್ ನಾಬ್, ಕಮೋಡ್ ಹಾಗೂ ಫ್ಲಶ್ ಬಟನ್ ಮುಟ್ಟುವುದು ಅನಿವಾರ್ಯವಾಗುತ್ತದೆ. ಇದನ್ನು ಅವಾಯ್ಡ್ ಮಾಡುವ ಸಾಹಸದಲ್ಲಿ ಹಲವರು ಕಾಲಿನಿಂದ ಫ್ಲಶ್ ಬಟನ್ ಒತ್ತುತ್ತಾರೆ. ಆದರೆ, ಟಾಯ್ಲೆಟ್‌ನ ನೆಲ ಹಾಗೂ ಶೂಗಳೇ ಅತಿ ಕೊಳಕಾದ ವಸ್ತುಗಳಾಗಿರುವುದರಿಂದ ಎಲ್ಲರೂ ಕಾಲಿನಿಂದ ಫ್ಲಶ್ ಮಾಡುವಾಗ ಫ್ಲಶ್ ಬಟನ್ ಇನ್ನೂ ಹೆಚ್ಚು ಬ್ಯಾಕ್ಟೀರಿಯಾಗಳಿಂದ ತುಂಬುತ್ತದೆ. ಈ ಅಭ್ಯಾಸ ಬಿಡಬೇಕು. ಕೈಯ್ಯಲ್ಲಿಯೇ ಫ್ಲಶ್ ಮಾಡಿ. ನಂತರ ಕೈಗಳನ್ನು ಹ್ಯಾಂಡ್‌ವಾಶ್ ಬಳಸಿ 20 ಸೆಕೆಂಡ್‌ಗಳ ಕಾಲ ತೊಳೆಯಿರಿ. ಕೈಗಳನ್ನು ಬಳಸಲು ಮತ್ತೊಂದು ಕಾರಣವೆಂದರೆ, ನೀವು ಯಾವ ಬ್ಯಾಕ್ಟೀರಿಯಾ ಅವಾಯ್ಡ್ ಮಾಡಬೇಕೆಂದು ಬಯಸುತ್ತಿದ್ದಿರೋ ಅದು ಹೆಚ್ಚಿನ ಬಾರಿ ಸತ್ತು ಹೋಗಿಯಾಗಿರುತ್ತದೆ. ಏಕೆಂದರೆ ತಣ್ಣಗಿರುವ ಫ್ಲಶ್ ಬಟನ್ ಮೇಲೆ ಅದು ಹೆಚ್ಚು ಕಾಲ ಬದುಕಲಾರದು. ಅದಕ್ಕೇನಿದ್ದರೂ ಮಾನವನ ದೇಹದಂಥ ಉಷ್ಣತೆ ಹೆಚ್ಚಿರುವ ಸ್ಥಳ ಬೇಕು. 

ವರದಕ್ಷಿಣೆ ಅಪರಾಧ, ಅದಕ್ಕೇ ಉಡುಗೊರೆಯ ಹೆಸರಿಟ್ಟರೆ?

Latest Videos

undefined


ಯಾರಾದರೂ ಸೀನಿದಾಗ ಉಸಿರು ಬಿಗಿಹಿಡಿವುದು
ಇದನ್ನು ಬಹಳಷ್ಟು ಜನ ಮಾಡುತ್ತಾರೆ. ಅಕ್ಕಪಕ್ಕದಲ್ಲಿರುವವರು ಕೆಮ್ಮಿದಾಗ ಅಥವಾ ಸೀನಿದಾಗ 10 ಸೆಕೆಂಡ್‌ಗಳ ಕಾಲ ಉಸಿರು ಬಿಗಿ ಹಿಡಿಯುವುದರಿಂದ ಹೊರಬಿದ್ದ ಬ್ಯಾಕ್ಟೀರಿಯಾಗಳು ಉಸಿರಿನ ಮೂಲಕ ನಮ್ಮ ದೇಹ ಸೇರದಂತೆ ತಡೆಯಬಹುದು ಎಂಬುದು ಅವರ ನಂಬಿಕೆ. ಆದರೆ ನಿಜವೆಂದರೆ, ತಕ್ಷಣ ಆ ಸ್ಥಳದಿಂದ ಎದ್ದು ಹೋಗದ ಹೊರತು ಈ ಅಭ್ಯಾಸದಿಂದ ಪ್ರಯೋಜನವಿಲ್ಲ. ಅವರು ಸೀನಿದಾಗ ಕಣ್ಣಿಗೆ ಕಾಣದ ಎಂಜಲು ಹೊರಗೆ ನೆಲಕ್ಕೆ ತಾಕಿರುತ್ತದೆ. ನಿಮ್ಮ ಕೈ ಅಲ್ಲಿ ತಾಕಿದಾಗ ಅದರಲ್ಲಿದ್ದ ಜರ್ಮ್ಸ್ ಕೈಗಳಿಗೆ ಸೇರಿಕೊಳ್ಳುತ್ತದೆ. ನಂತರ ಯಾವುದೋ ಯೋಚನೆಯಲ್ಲಿ ಕಣ್ಣು, ಮೂಗು, ಬಾಯಿ ಮುಟ್ಟಿಕೊಂಡಾಗ ಅವು ದೇಹ ಸೇರುತ್ತವೆ. 

ಅತಿಯಾದ ಸ್ಯಾನಿಟೈಸರ್ಸ್ ಬಳಕೆ
ಪದೇ ಪದೆ ಹ್ಯಾಂಡ್ ಸ್ಯಾನಿಟೈಸರ್ ಬಳಸುವುದರಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು. ಹೌದು, ನೀರು ಸೋಪು ಸಿಗದಾಗ ಹ್ಯಾಂಡ್ ಸ್ಯಾನಿಟೈಸರ್‌ಗಳು ಹೆಚ್ಚು ಸಹಾಯಕ್ಕೆ ಬರುತ್ತವೆ. ಆದರೆ, ಪದೇ ಪದೆ ಬಳಸುವುದರಿಂದ ಕೈಗಳಲ್ಲಿರುವ ಆರೋಗ್ಯವಂತ ಬ್ಯಾಕ್ಟೀರಿಯಾಗಳೂ ಸಾಯುತ್ತವೆ. ಇದರಿಂದ ಇತರೆ ಕಾಯಿಲೆ ಹರಡುವ ಬ್ಯಾಕ್ಟೀರಿಯಾಗಳು ಅಲ್ಲಿ ಸೇರಿಕೊಳ್ಳಲು ಸುಲಭವಾಗುತ್ತದೆ. 

"

click me!