ಸಕ್ಕರೆ ಮೇಲೆ ಅಕ್ಕರೆ: ಆಪತ್ತು ಒಂದೆರಡಲ್ಲ, ಬಿಟ್ಟರೆ ಆರೋಗ್ಯದ ಮೇಲೆ ಮಾಡುತ್ತೆ ಮೋಡಿ

By Suvarna News  |  First Published Sep 10, 2022, 3:59 PM IST

ಈ ಸಕ್ಕರೆ ಇದೆಯಲ್ಲ, ಇದು ಒಂಥರಾ ಬಿಳಿ ವಿಷವಿದ್ದಂತೆ. ನಮ್ಮ ದೇಹವನ್ನು ಸ್ವಲ್ಪ ಸ್ವಲ್ಪೇ ಸೇರುವ ಈ ಸಕ್ಕರೆಯಿಂದ ಬರೋ ಕಾಯಿಲೆಗಳು ಒಂದರೆಡಲ್ಲ. ಎಲುಬನ್ನೇ ದುರ್ಬಲಗೊಳಿಸಿ, ನಿಧಾನವಾಗಿ ವಿಷವಾಗಿ ಪರಿವರ್ತನೆಯಾಗುವ ಈ ಸಕ್ಕರೆ ಬಳಸೋದ ಬಿಟ್ಟರೆ ಎಷ್ಟೆಲ್ಲಾ ಆರೋಗ್ಯ ಸುಧಾರಣೆಗಳಾಗುತ್ತವೆ ಗೊತ್ತಾ? 


ಸಿಹಿ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಹೊಟ್ಟೆ ತುಂಬಿದಾಗಲೂ ಬಾಯಿ ಸಿಹಿ ಮಾಡಿಕೊಳ್ಳೋಣ ಅನ್ಸುತ್ತೆ. ಆಗಾಗ ಚಾಕೋಲೇಟ್ ತಿನ್ನುವ ಬಯಕೆ ಎಲ್ಲರಿಗೂ ಆಗುತ್ತೆ. ಬಾಯಿಯನ್ನು ಸಿಹಿಯಾಗಿಸುವ ಸಂಕ್ಕರೆ ಮನುಷ್ಯನಿಗೆ ಬೊಜ್ಜು ಬರಿಸಿ, ಬೇಗ ವಯಸ್ಸಾಗಿ ಕಾಣುವಂತೆ ಮಾಡುತ್ತದೆ. ಅದೇ ನಿಮ್ಮ ಡಯಟ್‌ನಲ್ಲಿ ಶುಗರ್ ಡಿಟಾಕ್ಸ್ ಮಾಡಿದರೆ ಲಾಭಗಳು ನೂರಾರು. ಅಷ್ಟಕ್ಕೂ ಈ ಶುಗರ್ ಡಿಟಾಕ್ಸ್ ಎಂದರೇನು? ಸಕ್ಕರೆ ತಿನ್ನೋದು ಬಿಡುವುದರಿಂದ ಮನಸ್ಸು, ಆರೋಗ್ಯದಲ್ಲೇನು ಬದಲಾವಣೆಯಾಗುತ್ತದೆ?

ಸಕ್ಕರೆ ಆರೋಗ್ಯಕ್ಕೆ ಶತ್ರು 
ಹಣ್ಣಿನ ಜೂಸ್ (Fruit Juice), ಪ್ಯಾಕಡ್ ಫುಡ್ (Packed Food), ಸಿಹಿ ತಿಂಡಿಗಳು (Sweets), ಟೀ, ಡ್ರಿಂಕ್ ಮಿಕ್ಸ್‌ (Drink Mix), ಕೋಲ್ಡ್ ಡ್ರಿಂಕ್ (Cold Drink) ಮತ್ತಿತರೆ ಆಹಾರ ಸೇವನೆ ಮನುಷ್ಯನ ದೇಹದ ಮೇಲೆ ಬೀರುವ ಪರಿಣಾಮ ಅಷ್ಟಿಷ್ಟಲ್ಲ. ಭಾರತೀಯನೊಬ್ಬ ವರ್ಷಕ್ಕೆ ಸರಾಸರಿ 18.5 ಕೆಜಿ ಸಕ್ಕರೆ ಸೇವಿಸುತ್ತಾನೆ ಎನ್ನುತ್ತದೆ ಅಂಕಿಅಂಶಗಳು. 2015ಕ್ಕೆ ಹೋಲಿಸಿದರೆ ಈಗೀಗ ಸಕ್ಕರೆ ಸೇವನೆ ಪ್ರತಿ ವ್ಯಕ್ತಿಯ ಲೆಕ್ಕದಲ್ಲಿ 2 ಕೆಜಿಯಷ್ಟು ಇಳಿಕೆಯಾಗಿದೆಯಂತೆ. ಆದರೂ ವಿಶ್ವದ ಸಕ್ಕರೆ ಕಾಯಿಲೆಯ ರಾಜಧಾನಿ ಎಂಬ ಕೆಟ್ಟ ಹೆಸರು ಪಡೆದಿರುವ ನಮ್ಮ ದೇಶದಲ್ಲಿ ಸುಮಾರು 6.2 ಕೋಟಿಯಷ್ಟು ಜನರು ಟೈಪ್ 2 ಡಯಾಬಿಟೀಸ್‌ನಿಂದ ಬಳಲುತ್ತಿದ್ದಾರೆ. ಸುಮಾರು 10 ಲಕ್ಷ ಜನ ವಾರ್ಷಿಕ ಡಯಾಬಿಟೀಸ್ ಸಂಬಂಧಿ ಸಮಸ್ಯೆಗಳಿಂದ ಕೊನೆಯುಸಿರೆಳೆಯುತ್ತಿದ್ದಾರೆ.

Latest Videos

undefined

ಅಮೆರಿಕದ ಡಯಟಿಶಿಯನ್ ಬ್ರೂಕ್ ಆಲ್ಪರ್ಟ್ ಪ್ರಕಾರ ಈ ಸಿಹಿ ಸಕ್ಕರೆ ದೇಹವನ್ನು ಕುರೂಪವನ್ನಾಗಿಸಿ, ವಯಸ್ಸಲ್ಲದ ವಯಸ್ಸಿಗೇ ಮುಪ್ಪು ಆವರಿಸುವಂತೆ ಮಾಡುತ್ತದೆ. ಸಕ್ಕರೆ ಮನುಷ್ಯನ ದೇಹದ ಮೇಲೆ ಬೀರುವ ಪರಿಣಾಮದ ಬಗ್ಗೆ ದೊಡ್ಡ ಪುಸ್ತಕವನ್ನೇ ಬರೆದಿದ್ದಾರೆ ಈ ಬ್ರೂಕ್. ಮನುಷ್ಯನ ದೇಹದ ತೂಕ ಹೆಚ್ಚಿಸುವ (Weight Gain) ಈ ಸಕ್ಕರೆ ಹೃದಯದ ಕಾಯಿಲೆ (Heart Disease) ಸೇರಿ, ಇತರೆ ರೋಗಗಳನ್ನೂ ಕೈ ಬೀಸಿ ಕರೆಯುತ್ತದೆ. ಚರ್ಮದ ಆರೋಗ್ಯಕ್ಕಂತೂ ಸ್ವಲ್ಪವೂ ಒಳ್ಳೇಯದಲ್ಲ. ತಕ್ಷಣ ಎನರ್ಜಿ ನೀಡಿದಂತೆನಿಸಿದರೂ, ಸಕ್ಕರೆಯಿಂದ ದೇಹ ಸುಸ್ತಾಗಿ ಸೋಮಾರಿಯನ್ನಾಗಿಸುತ್ತದೆ. ಒಟ್ಟಿನಲ್ಲಿ ಡಯಟ್‌ನಲ್ಲಿ ಶುಗರ್ ಡಿಟಾಕ್ಸ್ (Sugar Detox) ಎಂಬುದು ಮಾತ್ರ ಅತ್ಯಗತ್ಯ. 

ಗರ್ಭಿಣಿಯರಲ್ಲಿ ರಕ್ತದ ಸಕ್ಕರೆ ನಿಯಂತ್ರಿಸಿ, ಅನಾರೋಗ್ಯದ ಅಪಾಯ ತಪ್ಪಿಸಿ

ಶುಗರ್ ಡಿಟಾಕ್ಸ್
ತೆಳ್ಳಗಾಗಬೇಕೆಂದು ಜನರು ತಿನ್ನೋದನ್ನು ಕಡಿಮೆ ಮಾಡುತ್ತಾರೆ. ಅನ್ನವನ್ನು ತ್ಯಜಿಸುತ್ತಾರೆ. ಒಂದು ಹೊತ್ತಿನ ಊಟವನ್ನೇ ಬಿಡುತ್ತಾರೆ. ಇದರಿಂದ ಅಗತ್ಯ ಪೋಷಕಾಂಶಗಳು ದೇಹಕ್ಕೆ ಸಿಗದೇ ವ್ಯತಿರಿಕ್ತ ಪರಿಣಾಮ ಬೀರುವುದೇ ಹೆಚ್ಚು. ಆದರೆ, ಅದೇ ಸಕ್ಕರೆಯನ್ನು ತ್ಯಜಿಸಿದರೆ ದೇಹದ ಮೇಲೆ ಬೀರುವ ಸಕರಾತ್ಮಕ ಅಂಶಗಳು ಒಂದೆರಡಲ್ಲ. ದೇಹದ ತೂಕ ತಾನಾಗಿಯೇ ಇಳಿಯುತ್ತೆ. ತಿಂಗಳ ಕಾಲ ಶುಗರ್ ಡಿಟಾಕ್ಸ್ ಮಾಡಿ ನೋಡಿ. ದೇಹ ನಿಮ್ಮ ಮಾತು ಕೇಳುವಂತಾಗಿ ಬಿಡುತ್ತದೆ. 

ಮುಖದ ಹೊಳಪು ಹೆಚ್ಚಿಸುತ್ತದೆ
ವಿಶೇಷವಾಗಿ ತ್ವಚಾ ಸೌಂದರ್ಯಕ್ಕೆ (Skin Beauty), ಆರೋಗ್ಯಯುತ ಚರ್ಮ ಬೇಕು ಅಂದ್ರೆ ಈ ಸಕ್ಕರೆಯನ್ನು ಮೊದಲು ತ್ಯಜಿಸಿ. ಇದೊಂಥರಾ ಡ್ರಗ್ಸ್‌ನಂತೆ ಕೆಲಸ ಮಾಡುತ್ತೆ. ಈ ಚಟದಿಂದ ಮುಕ್ತಿ ಹೊಂದುವುದು ಸುಲಭವಲ್ಲ. ನಾವು ಬಳಸುವ ಪ್ರತಿಯೊಂದೂ ಆರ್ಟಿಫಿಷಯಲ್ ವಸ್ತುವಿನಲ್ಲಿಯೂ ಈ ಸಕ್ಕರೆ ಅಂಶ ಇದ್ದೇ ಇರುತ್ತದೆ. ಐಸ್ ಕ್ರೀಮ್ (Ice Cream) ಬಿಡಿ,  ಟೊಮ್ಯಾಟೋ ಸಾಸ್ (Tomato Sauce), ಬ್ರೆಡ್ (Bread), ಸಲಾಡ್ ಡ್ರೆಸ್ಸಿಂಗ್ಸ್ (Salad Dressings) ಮುಂತಾದ ಆಹಾರಗಳಲ್ಲಿಯೂ ಸಕ್ಕರೆ ಇರುತ್ತೆ ಎಂಬುವುದು ಅನೇಕರಿಗೆ ಗೊತ್ತೇ ಆಗುವುದಿಲ್ಲ. ಬಹುತೇಕರ ತಮಗೆ ಗೊತ್ತಿಲ್ಲದಂತೆಯೇ ಇಡೀ ದಿವಸ ಸಕ್ಕರೆ ತಿನ್ನುತ್ತಲೇ ಇರುತ್ತಾರೆ. ಆದ್ದರಿಂದ, ಶುಗರ್ ಡಿಟಾಕ್ಸ್ ಡಯಟ್ ಆರಂಭಿಸುವ ಮುನ್ನ ಸಕ್ಕರೆ ಯಾವುದರಲ್ಲೆಲ್ಲ ಇರುತ್ತೆ ಎಂಬುದನ್ನು ಗೊತ್ತು ಮಾಡಿಕೊಳ್ಳಿ. 

ಮಕ್ಕಳಿಗೆ ಮೊದಲು ಸಕ್ಕರೆ ಚಟ ಬಡಿಸಿ
ಅಯ್ಯೋ ನಂಗೇನು  ಸಕ್ಕರೆ ಬಳಸೋ ಅಭ್ಯಾಸವಿಲ್ಲ ಎಂದುಕೊಂಡವರೂ ತಮಗೇ ಗೊತ್ತಿಲ್ಲದಂತೆ ಬೇರೆ ಬೇರೆ ಆಹಾರಗಳ ಮೂಲಕ ಸಕ್ಕರೆ ತಿನ್ನುತ್ತಿರುತ್ತಾರೆ. ಇಷ್ಟಿಷ್ಟೇ ಸಕ್ಕರೆ ದೇಹವನ್ನು ಸೇರುತ್ತದೆ. ಅಂಥವರೂ ಡಿಟಾಕ್ಸ್ ಕಡೆ ಗಮನ ಕೊಟ್ಟು, ಸಕ್ಕರೆ ಬಳಸುವುದನ್ನು ಕಡಿಮೆ ಮಾಡಬೇಕು. ಆರೋಗ್ಯದ ಮೇಲೆ ಬೀರುವ ಪರಿಣಾಮ ಕಾಣಿಸುತ್ತದೆ. ಮೂಡ್ ಸದಾ ಚೆನ್ನಾಗಿರುತ್ತದೆ. ಹೊಟ್ಟೆ ಕರಗುತ್ತದೆ. ದೃಷ್ಟಿ ಸಾಮರ್ಥ್ಯ (Eye Sight) ಹೆಚ್ಚುತ್ತದೆ. ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ಡಾರ್ಕ್ ಸರ್ಕಲ್ (Dark Circle) ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ. ಲಾಭ ಹೇಳುತ್ತಾ ಹೋದರೆ ಒಂದೆರಡಲ್ಲಿ. ಎಲ್ಲ ಆರೋಗ್ಯ ಸಮಸ್ಯೆಗಳಿಗೂ ಈ ಶುಗರ್ ಡಿಟಾಕ್ಸಿಕೇಷನ್ ಮುಕ್ತಿ ಹಾಡುತ್ತೆ. ಬೊಜ್ಜಿನ (Obesity) ಸಮಸ್ಯೆಯಿಂದ ಬಳಲುತ್ತಿದ್ದರಂತೂ  ಮಕ್ಕಳಲ್ಲಿ ಬೊಜ್ಜಿದ್ದರೆ ಕೇವಲ 9 ದಿನಗಳ ಕಾಲ ಸಕ್ಕರೆ ಪದಾರ್ಥಗಳಿಂದ ಅವರನ್ನು ದೂರವಿರಿಸಿ ನೋಡಿ. ಅವರ ತೂಕ ಇಳಿಯದಿದ್ದರೂ, ಮೆಟಾಬಾಲಿಕ್ ಚಟುವಟಿಕೆ (Metabolic Activity) ಬಹಳ ಉತ್ತಮಗೊಳ್ಳುತ್ತದೆ. ಉದಾಸೀನತೆ, ಸುಸ್ತು ತಗ್ಗುತ್ತದೆ. ಹಾಗಿದ್ದರೆ ಆರಂಭದಲ್ಲಿ ಸಕ್ಕರೆಯನ್ನು ಕಡಿಮೆ ಮಾಡಿದರೆ ಸಾಕೇ ಎಂದರೆ, ಪೂರ್ತಿ ದೂರವಿದ್ದು ನೋಡಿ ಎನ್ನುತ್ತಾರೆ ಲುಸ್ಟೆಗ್. 

ಸ್ಲಿಮ್‌ ಆಗಿದ್ದೇನೆಂದು ಬೀಗುತ್ತಿದ್ದೀರಾ? ಅಂಥವರಿಗೆ ಟೈಪ್ 4 ಮಧುಮೇಹದ ಅಪಾಯ ಹೆಚ್ಚು!

ಸಕ್ಕರೆ ಮೇಲೆ ಅಕ್ಕರೆ ಹೆಚ್ಚಿಸುತ್ತೆ ಖಿನ್ನತೆ  (Depression)
ಒಮ್ಮೆ ಸಕ್ಕರೆಯಿಂದ ದೂರವಾಗಿ. ಆಗ ನೈಸರ್ಗಿಕ ಆಹಾರ ಪದಾರ್ಥಗಳಲ್ಲಿರುವ ಸಿಹಿ ಅಂಶ ಅನುಭವಕ್ಕೆ ಬರುತತ್ದೆ. ಪ್ರೊಟೀನ್, ತರಕಾರಿ, ಹೆಲ್ದಿ ಫ್ಯಾಟ್ಸ್ (Healthy Fats) ಹೆಚ್ಚಿಸಿದರೆ ಅತ್ಯುತ್ತಮ ಡಯಟ್ ಆಗಬಲ್ಲದು. ಜ್ಯೂಸನ್ನೂ ಸಕ್ಕರೆ ಇಲ್ಲದೇ ಸೇವಿಸಿ. ಬ್ಲ್ಯಾಕ್ ಕಾಫಿ (Black Coffee), ಗ್ರೀನ್ ಟೀ ಅಭ್ಯಾಸ ಒಳಿತು. ಕೃತಕ ಸಿಹಿ ಹಾಕಿರುವ ಯಾವುದೇ ಆಹಾರವನ್ನೂ ತಿನ್ನಲು ಹೋಗಬೇಡಿ. ಡಾರ್ಕ್ ಚಾಕೋಲೇಟ್ ಬಿಟ್ಟರೆ ಕ್ಯಾಂಡಿಗಳು, ಐಸ್ ಕ್ರೀಂ, ಪ್ಯಾಕೇಜ್ಡ್ ತಿಂಡಿಗಳಿಂದ ದೂರವಿದ್ದಷ್ಟೂ ಆರೋಗ್ಯಕ್ಕೆ ಒಳ್ಳೆಯದು.  ವುಳಿಯಿರಿ. ಸ್ವೀಟ್ ತಿನ್ನಲೇಬೇಕೆನಿಸಿದಲ್ಲಿ ಬೆಲ್ಲದಿಂದ ತಯಾರಿಸಿದ ಆಹಾರಗಳ ಸೇವನೆ ಅಭ್ಯಾಸ ಮಾಡಿಕೊಳ್ಳಬಹುದು. ಡಯಟ್‌ನಲ್ಲಿ ಹೆಲ್ದೀ ಫ್ಯಾಟ್ಸ್ ಸೇರಿಸುವುದರಿಂದ ಶುಗರ್ ಕ್ರೇವಿಂಗ್ಸ್ ತಗ್ಗುತ್ತದೆ. 

 

 

click me!