ಸ್ಕಿಪ್ಪಿಂಗ್ ಎಂದಾಗ ಮಕ್ಕಳು ನೆನಪಾಗೋದು ಸಹಜ. ಇದನ್ನು ಮಕ್ಕಳ ಆಟವೆಂದೇ ಪರಿಗಣಿಸಲಾಗುತ್ತದೆ. ಆದರೆ ಇದೇ ಸ್ಕಿಪ್ಪಿಂಗ್ ನಲ್ಲಿ ಆರೋಗ್ಯದ ಗುಟ್ಟಿದೆ. ತೂಕ ಇಳಿಸಿ ನಿಮ್ಮನ್ನು ಫಿಟ್ ಮಾಡುವ ಶಕ್ತಿ ಸ್ಕಿಪ್ಪಿಂಗ್ ಗಿದೆ.
ಲಾಕ್‌ಡೌನ್ (Lockdown) ಅನೇಕರಿಗೆ ಸವಾಲಾಗಿತ್ತು. ಆತಂಕ, ಅತಿಯಾದ ಆಹಾರ (Food) ಸೇವನೆ, ವರ್ಕ್ ಫ್ರಂ ಹೋಮ್ ಒತ್ತಡ, ಸೋಮಾರಿತನ ಹಾಗೂ ದಿನಚರಿಯಲ್ಲಿ ಬದಲಾವಣೆಯಿಂದಾಗಿ ಬೇಡವೆಂದ್ರೂ ಅನೇಕರ ತೂಕ ಏರಿದೆ. ಲಾಕ್ ಡೌನ್ ಅವಧಿ ಮುಗಿದು ವರ್ಷವಾಗ್ತಾ ಬಂದ್ರೂ ತೂಕ (Weight) ಇಳಿಸೋದು ಮಾತ್ರ ಸಾಧ್ಯವಾಗ್ಲಿಲ್ಲ. ಅನೇಕ ಬಾರಿ ತೂಕ ಏರಿದ್ದು ತಿಳಿಯೋದೇ ಇಲ್ಲ. ಹಾಗೆ ತೂಕ ಜಪ್ಪಯ್ಯ ಅಂದ್ರೂ ಇಳಿಯೋದಿಲ್ಲ. ಬೊಜ್ಜು ಕರಗಿಸಿಕೊಳ್ಳಲು ಜನರು ಈಗ ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ. ಜಿಮ್,ವ್ಯಾಯಾಮ, ಯೋಗ, ವಾಕಿಂಗ್, ರನ್ನಿಂಗ್, ಜಾಗಿಂಗ್ ಹೀಗೆ ಬೇರೆ ಬೇರೆ ವಿಧಾನಗಳನ್ನು ಅನುಸರಿಸ್ತಿದ್ದಾರೆ. ಆದ್ರೆ ಇವೆಲ್ಲಕ್ಕಿಂತ ತೂಕ ಇಳಿಸಲು ಸ್ಕಿಪ್ಪಿಂಗ್ (Skipping) ಬೆಸ್ಟ್ ಎನ್ನಬಹುದು. ಸ್ಕಿಪ್ಪಿಂಗ್ ನಿಂದ ಸಾಕಷ್ಟು ಪ್ರಯೋಜನವಿದೆ. ಬರೀ ತೂಕ ಇಳಿಕೆಗೆ ಮಾತ್ರವಲ್ಲ ಇದು ಆತಂಕ, ಒತ್ತಡ (Stress) ವನ್ನು ಕಡಿಮೆ ಮಾಡುತ್ತೆ.
ಸ್ಕಿಪ್ಪಿಂಗ್ ಬಾಲ್ಯವನ್ನು ನಮಗೆ ನೆನಪು ಮಾಡಿಸುತ್ತೆ. ಸ್ಕಿಪ್ಪಿಂಗ್ ಗೆ ದೊಡ್ಡ ಜಾಗ ಬೇಡ, ಯೋಗ ಮ್ಯಾಟ್ ಬೇಡ, ವ್ಯಾಯಾಮಕ್ಕೆ ಒಂದಿಷ್ಟು ಯಂತ್ರಗಳು ಬೇಡ. ಹಾಗೆ ಸ್ಕಿಪ್ಪಿಂಗ್ ಒಂದು ಕಡೆಯಿಂದ ಇನ್ನೊಂದು ಕರೆ ಒಯ್ಯೋದು ಸುಲಭ. ಮನೆಯ ಸೋಫಾ ಮೇಲೆ ಸ್ಕಿಪ್ಪಿಂಗ್ ಇಟ್ಟಿರಿ. ಬೆಳಿಗ್ಗೆ ಕಣ್ಣಿಗೆ ಬೀಳ್ತಿದ್ದಂತೆ ಒಂದು ಹತ್ತು ನಿಮಿಷ ಅದ್ರಲ್ಲಿ ಆಟವಾಡಿ. ಮುಗೀತು. ಇದಕ್ಕೆ ನೀವು ಹೆಚ್ಚು ಸಮಯ ನೀಡ್ಬೇಕಾಗಿಲ್ಲ. ಆರಂಭದಲ್ಲಿ ಐದು ನಿಮಿಷ ಮಾಡಿದ್ರೆ ಸಾಕು. ನಂತ್ರ ಸಮಯವನ್ನು 10, 15 ಹೀಗೆ 20ಕ್ಕೆ ತಂದು ನಿಲ್ಲಿಸಿ.
ಮನೆಯಲ್ಲಿ ಕೆಲಸ ಮಾಡುವಾಗ ಕಾಡುವ ಒತ್ತಡವನ್ನು ಸ್ಕಿಪ್ಪಿಂಗ್ ಸಂಪೂರ್ಣ ಕಡಿಮೆ ಮಾಡುತ್ತದೆ. ಕೋವಿಡ್ ಆತಂಕ ದೂರ ಮಾಡುವ ಜೊತೆಗೆ ಇದು ಸೋಮಾರಿತನವನ್ನು ಹತ್ತಿಕ್ಕುತ್ತದೆ. ಬರೀ ಒಂದು ತಿಂಗಳು ಸ್ಕಿಪ್ಪಿಂಗ್ ಮಾಡಿ ಸಾಕಷ್ಟು ಸಂತೋಷ, ನೆಮ್ಮದಿ ಕಂಡಿದ್ದೇನೆ ಎನ್ನುತ್ತಾರೆ ಅದ್ರ ಬಳಕೆದಾರರು.
ತೂಕ ಇಳಿಕೆಗೆ ಸ್ಕಿಪ್ಪಿಂಗ್ : ಹೃದಯ (Heart) ದ ಬಡಿತವನ್ನು ಹೆಚ್ಚಿಸಲು, ದೊಡ್ಡ ಮಟ್ಟದಲ್ಲಿ ಕ್ಯಾಲೊರಿ (Calories) ಬರ್ನ್ ಮಾಡಲು ರನ್ನಿಂಗ್ ಅತ್ಯುತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಇದಕ್ಕಿಂತಲೂ ಸ್ಕಿಪ್ಪಿಂಗ್ ಬೆಸ್ಟ್ ಎನ್ನುತ್ತಾರೆ ತಜ್ಞರು. ವರ್ಷಗಳಿಂದ ಒಂದು ಗಂಟೆ ರನ್ ಮಾಡಿದ್ರೂ ಕಾಣದ ಬದಲಾವಣೆ ಒಂದು ತಿಂಗಳ ಸ್ಕಿಪ್ಪಿಂಗ್ ನಲ್ಲಿ ಕಾಣಿಸಿದೆ ಅಂದ್ರೆ ನೀವು ನಂಬ್ಲೇಬೇಕು. ಅಮೇರಿಕನ್ ಕೌನ್ಸಿಲ್ ಆನ್ ಎಕ್ಸರ್ಸೈಸ್ ಪ್ರಕಾರ, 155 ಪೌಂಡ್ ತೂಕದ ವ್ಯಕ್ತಿಯು 30 ನಿಮಿಷಗಳ ಕಾಲ ಸ್ಕಿಪ್ ಮಾಡುವುದರಿಂದ 420 ಕ್ಯಾಲೊರಿ ಬರ್ನ್ ಆಗುತ್ತದೆ. ಅದೇ ಸಮಯದಲ್ಲಿ 420 ಕ್ಯಾಲೊರಿ ಬರ್ನ್ ಆಗ್ಬೇಕೆಂದ್ರೆ ವ್ಯಕ್ತಿ ಸುಮಾರು 8.5 ಮೈಲಿಗಳಷ್ಟು ಓಡ್ಬೇಕು.
HEALTH TIPS: ಈ ರೋಗ ಇರೋರು ಟ್ರೆಡ್ ಮಿಲ್ ಹತ್ತಲೇ ಬಾರದು
ಸ್ಕಿಪ್ಪಿಂಗ್ ಇಡೀ ದೇಹಕ್ಕೆ ವ್ಯಾಯಾಮ ನೀಡುತ್ತದೆ. ಕಾಲಿನ ಸ್ನಾಯುಗಳು, ತೋಳಿನ ಸ್ನಾಯುಗಳು ಮತ್ತು ಕೋರ್ ಸ್ನಾಯುಗಳಿಗೆ ವ್ಯಾಯಾಮ ನೀಡುವುದ್ರಿಂದ ಹೆಚ್ಚು ಕ್ಯಾಲೋರಿ ಬರ್ನ್ ಆಗುತ್ತದೆ.
ಮೊಣಕಾಲಿನ ನೋವಿರುವವರು ರನ್ನಿಂಗ್ ಮಾಡುವುದು ಕಷ್ಟ. ಸ್ಕಿಪ್ಪಿಂಗ್ ಕೂಡ ಕಷ್ಟ ಎನ್ನುವವರಿದ್ದಾರೆ. ಆದ್ರೆ ಅದು ತಪ್ಪು. ಸ್ಕಿಪ್ಪಿಂಗ್ ನಂತ್ರ ಮೊಣಕಾಲು ಬಲ ಪಡೆದುಕೊಂಡಿದೆ. ಅದ್ರ ನೋವು ಕಡಿಮೆಯಾಗಿದೆ ಎನ್ನುವವರಿದ್ದಾರೆ.
ದೇಹದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಿಸೋಕೆ ಈ ಹಣ್ಣು ತಿನ್ಬೋದು
ಪೂರ್ವ ಕೆರೊಲಿನಾ ವಿಶ್ವವಿದ್ಯಾಲಯ ಮತ್ತು ಅಪಲಾಚಿಯನ್ ರಾಜ್ಯದಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ, ರನ್ನಿಂಗ್ ಮಾಡುವ ಜನರಿಗೆ ಸ್ಕಿಪ್ಪಿಂಗ್ ಮಾಡುವವರಿಗಿಂತ ಟಿಬಿಯೊ ಫೆಮೊರಲ್ ಕೀಲು ನೋವು ಶೇಕಡಾ 30ರಷ್ಟು ಹೆಚ್ಚಿರುತ್ತದೆಯಂತೆ. ಅನೇಕ ಬಾರಿ ವೈದ್ಯರು ಅತಿಯಾದ ವ್ಯಾಯಾಮ ಮಾಡದಂತೆ ಸಲಹೆ ನೀಡ್ತಾರೆ. ಆ ಸಂದರ್ಭದಲ್ಲಿ ಸ್ಕಿಪ್ಪಿಂಗ್ ಅಥವಾ ರನ್ನಿಂಗನ್ನು ಯಾವುದೇ ಕಾರಣಕ್ಕೂ ಮಾಡ್ಬೇಡಿ.