ಬಹುತೇಕರು ಫಿಲ್ಟರ್‌ಡ್, ಕ್ಲೀನ್ ಎಂದು ಹೇಳಿ ನೀರು ಕುಡಿಯಲು ವಾಟರ್ ಬಾಟಲ್‌ಗಳನ್ನೇ ಉಪಯೋಗಿಸುತ್ತಾರೆ. ಆದ್ರೆ ಈ ರಿ ಯೂಸೆಬಲ್ ಕುಡಿಯುವ ನೀರಿನ ಬಾಟಲಿಯಲ್ಲಿ ಟಾಯ್ಲೆಟ್ ಸೀಟ್‌ಗಿಂತಲೂ ಅಧಿಕ ಬ್ಯಾಕ್ಟಿರೀಯಾ ಇರುತ್ತೆ ಅನ್ನೋ ವಿಷ್ಯ ನಿಮ್ಗೆ ಗೊತ್ತಿದ್ಯಾ?
ಬಹುತೇಕರು ಮನೆಯಿಂದ ಹೊರ ಹೋದಾಗ ಕುಡಿಯಲು ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಅವಲಂಬಿಸುತ್ತಾರೆ. ಆದ್ರೆ ನಿಮ್ಗೊಂದು ವಿಚಾರ ಗೊತ್ತಿದ್ಯಾ ಈ ಕುಡಿಯುವ ನೀರಿನ ಬಾಟಲಿಯಲ್ಲಿ ಟಾಯ್ಲೆಟ್ ಸೀಟ್‌ಗಿಂತಲೂ ಅಧಿಕ ಬ್ಯಾಕ್ಟಿರೀಯಾ ಇರುತ್ತಂತೆ. ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ವಾಟರ್‌ಫಿಲ್ಟರ್ ಗುರು ಡಾಟ್ ಕಾಮ್ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ನಾವು ಬಳಸುತ್ತಿರುವ ನೀರಿನ ಬಾಟಲಿಗಳಲ್ಲಿ ಟಾಯ್ಲೆಟ್ ಸೀಟ್‌ಗಿಂತ ಹೆಚ್ಚಿನ ಬ್ಯಾಕ್ಟಿರೀಯಾ ಇರುವ ಸಾಧ್ಯತೆಯಿದೆ ಎಂದು ವರದಿ ಬಹಿರಂಗಪಡಿಸಿದೆ. ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಯಲ್ಲಿ ಈ ಭಯಾನಕತೆ ಅಡಗಿದೆ ಎಂದು ವರದಿ ಹೇಳಿದೆ. ಹೆಚ್ಚು ಬ್ಯಾಕ್ಟಿರೀಯಾ ತುಂಬಿದ ಸ್ಥಳವು ಬಾಟಲಿಯ ಒಳಭಾಗವಲ್ಲ. ಬದಲಿಗೆ ಸ್ಪೌಟ್ ಟಾಪ್ ಮತ್ತು ಸ್ಕ್ರೂ ಟಾಪ್ ಮುಚ್ಚಳಗಳು ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ.
ಬಾಟಲಿಗಳಲ್ಲಿ ಟಾಯ್ಲೆಟ್ ಸೀಟಿಗಿಂತ 40,000 ಪಟ್ಟು ಹೆಚ್ಚು ಬ್ಯಾಕ್ಟೀರಿಯಾ
ಯುಎಸ್ ವೆಬ್‌ಸೈಟ್ waterfilterguru.com ನಲ್ಲಿನ ಇತ್ತೀಚಿನ ಅಧ್ಯಯನದ (Study) ಪ್ರಕಾರ, ಮರುಬಳಕೆ ಮಾಡಬಹುದಾದ ಬಾಟಲಿಗಳು ಸಾಮಾನ್ಯ ಟಾಯ್ಲೆಟ್ ಸೀಟಿಗಿಂತ 40,000 ಪಟ್ಟು ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ. ಅಧ್ಯಯನದ ಸಂಶೋಧಕರು ಹಲವಾರು ರೀತಿಯಲ್ಲಿ ಸಂಶೋಧನೆ ನಡೆಸಿದ ಬಳಿಕ ಬಾಟಲಿಯಲ್ಲಿ ಇರುವ ಎರಡು ರೀತಿಯ ಬ್ಯಾಕ್ಟಿರೀಯಾಗಳನ್ನು ಕಂಡು ಹಿಡಿದಿದ್ದಾರೆ. ಇವು ಜನರಿಗೆ ಖಂಡಿತವಾಗಿಯೂ ಸೋಂಕನ್ನು ಉಂಟು ಮಾಡಬಲ್ಲವು ಎಂಬುದಾಗಿ ಹೇಳಿದ್ದಾರೆ.
Kids Health: ಆಟಿಕೆಯಿಂದ ಕಾಯಿಲೆ ಹರಡುತ್ತೆ, ಟಾಯ್ಸ್ ಕ್ಲೀನ್ ಮಾಡೋದ್ ಹೇಗೆ ಗೊತ್ತಿರಲಿ
ಮರುಬಳಕೆ (Reusauble) ಮಾಡಬಹುದಾದ ನೀರಿನ ಬಾಟಲಿಯು ಟಾಯ್ಲೆಟ್ ಸೀಟ್‌ಗಿಂತ ನಲವತ್ತು ಸಾವಿರ ಹೆಚ್ಚು ಬ್ಯಾಕ್ಟಿರೀಯಗಳನ್ನು ಹೊಂದಿದೆ. ಕಂಪ್ಯೂಟರ್ ಮೌಸ್‌ಗಿಂದ ಐದು ಪಟ್ಟು ಹೆಚ್ಚು ಬ್ಯಾಕ್ಟಿರೀಯಾವನ್ನು ಹೊಂದಿದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಹಲವಾರು ಬಾಟಲ್ ಘಟಕಗಳನ್ನು ಸಂಶೋಧಕರು ಸ್ವ್ಯಾಬ್ ಮಾಡಿದರು, ನಂತರ ಅವುಗಳೊಳಗೆ ಬೆಳೆದ ವಸಾಹತು-ರೂಪಿಸುವ ಘಟಕಗಳನ್ನು (CFUs) ವೀಕ್ಷಿಸಿದರು. CFU ಎನ್ನುವುದು ಯಾವುದೇ ಮಾದರಿಯಲ್ಲಿರುವ ಬ್ಯಾಕ್ಟೀರಿಯಾದ ಪ್ರಮಾಣವನ್ನು ಪ್ರಮಾಣೀಕರಿಸಲು ಬಳಸುವ ಅಳತೆಯಾಗಿದೆ.
ಅಧ್ಯಯನದ ಪ್ರಕಾರ, ಬಾಟಲಿಗಳಲ್ಲಿರುವ ಬ್ಯಾಕ್ಟಿರೀಯಾದಲ್ಲಿ ಕೆಲವು ಬ್ಯಾಸಿಲಸ್ ಪ್ರಭೇದಗಳು ಜಠರಗರುಳಿನ ಸಮಸ್ಯೆಗಳನ್ನು (Gut problem) ಉಂಟುಮಾಡಬಹುದ. ಇತರ ಗೃಹೋಪಯೋಗಿ ವಸ್ತುಗಳಿಗೆ ಹೋಲಿಸಿದರೆ ಬಾಟಲಿಗಳು, ಕಂಪ್ಯೂಟರ್ ಮೌಸ್‌ಗಿಂತ ಎರಡು ಪಟ್ಟು ಹೆಚ್ಚು, ಕಿಚನ್ ಸಿಂಕ್‌ಗಿಂತ ನಾಲ್ಕು ಪಟ್ಟು ಹೆಚ್ಚು ಮತ್ತು ಸಾಕುಪ್ರಾಣಿಗಳ ನೀರಿನ ಭಕ್ಷ್ಯಕ್ಕಿಂತ ಹದಿನಾಲ್ಕು ಪಟ್ಟು ಹೆಚ್ಚು ಸೂಕ್ಷ್ಮಾಣುಜೀವಿಗಳನ್ನು ಆಶ್ರಯಿಸಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಟಾಯ್ಲೆಟ್‌ನಲ್ಲಿರೋದಕ್ಕಿಂತ ಹೆಚ್ಚು ಬ್ಯಾಕ್ಟಿರೀಯಾ ಬೆಡ್‌ಶೀಟ್‌ನಲ್ಲಿರುತ್ತಂತೆ !
ಬಾಟಲಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅಗತ್ಯ
ನ್ಯೂಯಾರ್ಕ್ ಪೋಸ್ಟ್‌ನ ಪ್ರಕಾರ, ಮಾನವ ಬಾಯಿಯು ದೊಡ್ಡ ಸಂಖ್ಯೆಯ ಮತ್ತು ವಿವಿಧ ಬ್ಯಾಕ್ಟೀರಿಯಾಗಳಿಗೆ ನೆಲೆಯಾಗಿದೆ ಎಂದು ಇಂಪೀರಿಯಲ್ ಕಾಲೇಜ್ ಲಂಡನ್ ಆಣ್ವಿಕ ಸೂಕ್ಷ್ಮ ಜೀವಶಾಸ್ತ್ರಜ್ಞ ಡಾ ಆಂಡ್ರ್ಯೂ ಎಡ್ವರ್ಡ್ಸ್ ಹೇಳಿದ್ದಾರೆ. ಮರುಬಳಕೆ ಮಾಡಬಹುದಾದ ಬಾಟಲಿಗಳನ್ನು ದಿನಕ್ಕೆ ಒಮ್ಮೆಯಾದರೂ ಬಿಸಿ ನೀರನ್ನು ಹಾಕಿ ಸಾಬೂನಿನಿಂದ ತೊಳೆಯಲು ಮತ್ತು ಕಲುಷಿತ ನೀರನ್ನು ಕುಡಿಯುವುದನ್ನು ತಪ್ಪಿಸಲು ವಾರಕ್ಕೊಮ್ಮೆಯಾದರೂ ಅವುಗಳನ್ನು ಸ್ವಚ್ಛಗೊಳಿಸಲು (Clean) ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ.
ಆದರೆ ಸ್ಕ್ವೀಜ್ ಟಾಪ್ ಬಾಟಲಿಗಳು ಈ ರೀತಿಯ ನೀರಿನ ಬಾಟಲಿಗಿಂತ ಆರೋಗ್ಯಕ್ಕೆ (Health) ಹೆಚ್ಚು ಸುರಕ್ಷಿತವಾಗಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಸ್ಕ್ವೀಜ್ ಟಾಪ್ ಬಾಟಲಿ ಅಂದರೆ ಬಾಟಲಿಯನ್ನು ಒತ್ತುವ ಮೂಲಕ ಒಳಗಿರುವ ಸಾಮಗ್ರಿ ಹೊರಬರುವಂತಹಾ ಬಾಟಲಿ. ಉದಾಹರಣೆಗೆ ಕೆಚಪ್ ಬಾಟಲಿಗಳು ಹೆಚ್ಚು ಸ್ವಚ್ಛವಾಗಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.