ಕೋವಿಡ್ ಪೀಡಿತರಾದವರು ಆತಂಕಿತರಾಗಬೇಕಿಲ್ಲ. ಇತರ ಔಷಧಗಳ ಜತೆ ಪ್ರಾಣಾಯಾಮದ ಅಭ್ಯಾಸದಿಂದ ಬೇಗ ಗುಣಮುಖರಾಗಬಹುದು. ನನಗೆ ಪ್ರಾಣಾಯಾಮದ ಅಭ್ಯಾಸ ಮೊದಲಿನಿಂದ ಚೆನ್ನಾಗಿಯೇ ಇತ್ತು. ಹೀಗಾಗಿ ನಾನು ಬೇಗನೆ ಚೇತರಿಸಿಕೊಂಡೆ ಎಂದಿದ್ದಾರೆ ದಿಲ್ಲಿಯ ಮೊದಲ ಕೋವಿಡ್ ರೋಗಿ, ಈಗ ಗುಣಮುಖರಾಗಿರುವ ರೋಹಿತ್ ದತ್ತ. ಇವರಿಗೆ 45 ವರ್ಷ.
ಕೋವಿಡ್ ಪೀಡಿತರಾದವರು ಆತಂಕಿತರಾಗಬೇಕಿಲ್ಲ. ಇತರ ಔಷಧಗಳ ಜತೆ ಪ್ರಾಣಾಯಾಮದ ಅಭ್ಯಾಸದಿಂದ ಬೇಗ ಗುಣಮುಖರಾಗಬಹುದು. ನನಗೆ ಪ್ರಾಣಾಯಾಮದ ಅಭ್ಯಾಸ ಮೊದಲಿನಿಂದ ಚೆನ್ನಾಗಿಯೇ ಇತ್ತು. ಹೀಗಾಗಿ ನಾನು ಬೇಗನೆ ಚೇತರಿಸಿಕೊಂಡೆ ಎಂದಿದ್ದಾರೆ ದಿಲ್ಲಿಯ ಮೊದಲ ಕೋವಿಡ್ ರೋಗಿ, ಈಗ ಗುಣಮುಖರಾಗಿರುವ ರೋಹಿತ್ ದತ್ತ. ಇವರಿಗೆ 45 ವರ್ಷ.
ಫೆ.24ರಂದು ಇವರಿಗೆ ಕೋವಿಡ್ ಬಂದಿರುವುದು ಖಚಿತವಾಗಿತ್ತು. ಯುರೋಪ್ ಪ್ರವಾಸ ಮುಗಿಸಿ ಹಿಂದಿರುಗಿ ಬಂದಿದ್ದ ಇವರನ್ನು ದಿಲ್ಲಿಯ ಲೋಹಿಯಾ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಅಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಅವರು ಬೇಗ ಚೇತರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಚಿಕಿತ್ಸೆ ಜೊತೆಗೆ ಅವರು ತಾವು ಮೊದಲು ಮಾಡುತಿದ್ದ ಪ್ರಾಣಾಯಾಮವನ್ನೂ ಮಾಡಿದ್ದರು. ಇದರಿಂದ ಬೇಗ ಗುಣಮುಖನಾದೆ. ಇತರ ರೋಗಿಗಳೂ ಇದರಿಂದ ಲಾಭ ಪಡೆಯಬಹುದು ಎನ್ನುತ್ತಾರೆ ದತ್ತ.
ಒತ್ತಡ ನಿವಾರಣೆಗೆ ಇಲ್ಲಿದೆ ಸಿಂಪಲ್ ಟಿಪ್ಸ್
ಪ್ರಾಣಾಯಾಮ ಯಾವುದೇ ವಯಸ್ಸಿನವರು ಬಹು ಸುಲಭವಾಗಿ ಕಲಿಯಬಹುದಾದ ಒಂದು ಅಭ್ಯಾಸ. ಇದು ಯೋಗಾಸನಗಳಂತೆ ಕಠಿಣವೂ ಅಲ್ಲ. ಭಾರತದ ಅತಿ ಪುರಾತನ ಯೋಗಶಾಸ್ತ್ರ ಆಗಿರುವ ಪತಂಜಲಿ ಯೋಗಸೂತ್ರದಲ್ಲಿ ಇದನ್ನು ಹೇಳಲಾಗಿದೆ.
ಪ್ರಾಣಾಯಾಮದಿಂದ ಮನಸ್ಸು ಮತ್ತು ದೇಹ ಆರೋಗ್ಯದಿಂದ ಕೂಡಿರುತ್ತದೆ. ಇದನ್ನು ಮುಂಜಾನೆ ಮಾಡಬೇಕು. ಪ್ರಾಣಾಯಾಮಕ್ಕೆ ಮೊದಲು 5 ನಿಮಿಷ ಧ್ಯಾನ ಮಾಡಬೇಕು. ನಂತರ ಪ್ರಾಣಾಯಾಮ ಆರಂಭಿಸಬೇಕು. ಏಕಾಗ್ರತೆಯಿಂದ ಧ್ಯಾನ ಮಾಡುತ್ತಾ ನಾಲ್ಕೈದು ಬಾರಿ ಒಂದೇ ಅವಧಿಯ ದೀರ್ಘಶ್ವಾಸ ತೆಗೆದು ಕೊಳ್ಳಬೇಕು. ನಾಲ್ಕೈದು ಬಾರಿ ಹೀಗೆ ಉಸಿರಾಡಿದ ಬಳಿಕ ಪ್ರಾಣಾಯಾಮ ಪ್ರಾರಂಭಿಸಬೇಕು.
ಪ್ರಾಣಾಯಾಮದಲ್ಲಿ ಕಪಾಲಭಾತಿ, ಧೌತಿ, ಭ್ರಾಮರಿ, ಶೀತಲೀ ಎಂದು ನಾನಾ ಬಗೆಗಳಿವೆ. ಆರಂಭಿಕವಾಗಿ ಕಲಿಯುವವರಿಗೆ ಕಪಾಲಭಾತಿ ಸೂಕ್ತ.
ಕಪಾಲಭಾತಿ: ನೇರವಾಗಿ ಕುಳಿತುಕೊಳ್ಳಬೇಕು. ನಂತರ ಉಸಿರನ್ನು ವೇಗವಾಗಿ ಮೂಗಿನಿಂದ ಎಳೆದು ಹೊರ ಹಾಕಬೇಕು. ಮನಸ್ಸನ್ನು ಏಕಾಗ್ರತೆಯಿಂದ ಇಟ್ಟುಕೊಳ್ಳಬೇಕು. ಉಸಿರನ್ನು ಹೊರ ಹಾಕುವಾಗ ಹೊಟ್ಟೆಯನ್ನು ಒಳಕ್ಕೆ ಎಳೆದುಕೊಂಡು ಹೊರಹಾಕಬೇಕು. ಇದನ್ನು ಇಪ್ಪತ್ತರಿಂದ ಆರಂಭಿಸಿ ಎಷ್ಟು ಸಾಧ್ಯವೋ ಅಷ್ಟು ಬಾರಿ ಮಾಡಬಹುದು. ನಂತರ ಉಸಿರನ್ನು ಬಿಗಿ ಹಿಡಿದು ಎರಡು ನಿಮಿಷ ಕಾಲ ಹಾಗೇ ಇರಬೇಕು. ಇದನ್ನು ಎರಡರಿಂದ ಮೂರು ಬಾರಿ ಮಾಡಬೇಕು. ಇದು ಉಸಿರಾಟದ ತೊಂದರೆಗಳನ್ನು ನೀಗಿಸುತ್ತದೆ. ಶೀತ, ನೆಗಡಿ ಕೆಮ್ಮು ಮುಂತಾದ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಇದನ್ನು ನಿಯಮಿತವಾಗಿ ಮಾಡುತ್ತಿದ್ದರೆ ಶೀತ, ಕೆಮ್ಮು, ತಲೆನೋವು ಮುಂತಾದ ಸಮಸ್ಯೆಯಿಂದ ಶಾಶ್ವತವಾಗಿ ದೂರವಾಗಬಹುದು, ಮಾತ್ರವಲ್ಲ ಉಸಿರಾಟ ಸರಾಗವಾಗಿ ಮತ್ತು ನಿರಾಳವಾಗಿ ಉಸಿರಾಡಲು ಸಹಾಯಕ.
ಕೊರೋನಾ ವೈರಸ್ ತಗುಲದಂತೆ ಲಸಿಕೆ, ಶುರುವಾಯ್ತು ಪ್ರಯೋಗ..
undefined
ಕಪಾಲಭಾತಿಯ ಇನ್ನೊಂದು ವಿಧ: ಬಲ ಕೈಯ ಹೆಬ್ಬೆರಳಿಂದ ಮೂಗಿನ ಬಲ ಹೊಳ್ಳೆಯನ್ನು ಅದುಮಿ ಹಿಡಿಯಬೇಕು. ನಂತರ ಇನ್ನೊಂದು ಹೊಳ್ಳೆಯಿಂದ ಗಾಳಿಯನ್ನು ಒಳಕ್ಕೆಳೆದು ಮತ್ತೆ ಅದೇ ಮೂಗಿನಿಂದ ನಿಧಾನವಾಗಿ ಹೊರಗೆ ಬಿಡಬೇಕು. ಹೀಗೆ ಏಳೆಂಟು ಬಾರಿ ಮಾಡಬೇಕು. ನಂತರ ಎಡ ಮೂಗಿನ ಹೊಳ್ಳೆಯನ್ನು ಮುಚ್ಚಿ ಅದೇ ರೀತಿ ಮಾಡಬೇಕು. ನಮ್ಮ ಎಲ್ಲಾ ಗಮನವನ್ನು ಅದರಲ್ಲಿ ಕೇಂದ್ರಿಕರಿಸಬೇಕು. ನಂತರ ಎಡ ಮೂಗಿನ ಹೊಳ್ಳೆಯಿಂದ ಗಾಳಿಯನ್ನು ಒಳಕ್ಕೆ ಎಳೆದು ಬಲ ಮೂಗಿನ ಹೊಳ್ಳೆಯಿಂದ ಹೊರಬಿಡಬೇಕು. ಮತ್ತದೇ ದ್ವಾರದಿಂದ ಶ್ವಾಸ ಒಳಕ್ಕೆಕೆಳೆದು ಎಡಭಾಗದ ಹೊಳ್ಳೆಯಿಂದ ಹೊರ ಬಿಡಬೇಕು. ಹೀಗೆ ಹತ್ತರಿಂದ ಹನ್ನೆರಡು ಬಾರಿ ಮಾಡಬೇಕು.
ಧೌತಿ: ಇದು ಬಹಳ ಸುಲಭವಾಗಿ ಮಾಡಬಹುದಾದ ಪ್ರಾಣಾಯಾಮ ಮಾತ್ರವಲ್ಲ ಅಷ್ಟೇ ಪರಿಣಾಮಕಾರಿ. ಪ್ರಾಣಾಯಾಮದ ಭಂಗಿಯಲ್ಲೇ ಕುಳಿತು ಎರಡು ಕೈಯನ್ನು ನೆಲದಲ್ಲಿ ಊರಿ ದೀರ್ಘ ಶ್ವಾಸ ತೆಗೆದುಕೊಂಡು ಆ ಶ್ವಾಸವನ್ನು ಬಾಯಿ ಮೂಲಕ ಬಲವಾಗಿ ಹೊರ ಹಾಕಬೇಕು. ಹೀಗೆ ಶ್ವಾಸ ಹೊರಹಾಕುವಾಗ ತಲೆಯನ್ನು ರಭಸದಲ್ಲಿ ಅದಕ್ಕೆ ತಕ್ಕಂತೆ ಬಾಗಿಸಬೇಕು. ಹಾಗೆ ಗಂಟಲೊಳಗಿಂದ ರಭಸವಾಗಿ ಗಾಳಿಯನ್ನು ಹೊರಹಾಕಬೇಕು. ಐದಾರು ಬಾರಿ ಹೀಗೆ ಮಾಡುತ್ತಿದ್ದರೆ ಗಂಟಲೊಳಗಿನ ಸಮಸ್ಯೆ ನಮಗರಿವಿಲ್ಲದೇ ಮಾಯವಾಗಿಬಿಡುತ್ತದೆ.
ವಯಸ್ಸನ್ನು ನಿಲ್ಲಿಸೋ ಮನೆಮದ್ದು, ಸಿಂಪಲ್ ಇದೆ ಟ್ರೈ ಮಾಡಿ
ಶೀತಲೀ: ಪ್ರಾಣಾಯಾಮ ಮಾಡಿದಾಗ ಮೈ ಉಷ್ಣತೆ ಏರುತ್ತದೆ. ಆಗ ಶೀತಲೀ ಪ್ರಾಣಾಯಾಮ ಮಾಡಿದರೆ ಬಿಸಿಯಾಗುವ ದೇಹಕ್ಕೆ ತಂಪಾಗುವುದು. ನಾಲಗೆಯನ್ನು ತುಟಿಯಂಚಿನಲ್ಲಿ ಕೊಳವೆಯಂತೆ ಮಾಡಿ ಆ ನಾಲಿಗೆಯ ಕೊಳವೆಯ ಮುಖಾಂತರ ಶ್ವಾಸವನ್ನು ದೀರ್ಘವಾಗಿ ಒಳಕ್ಕೆಳೆದು ಅದೇ ರೀತಿ ದೀರ್ಘವಾಗಿ ಮೂಗಿನ ಮೂಲಕ ಬಿಡಬೇಕು. ಈ ರೀತಿ ಐದಾರು ಬಾರಿ ಮಾಡಬೇಕು. ಕಪಾಲಭಾತಿ ಮಾಡಿದಾಗ ದೇಹದ ಉಷ್ಣತೆ ಹೆಚ್ಚಾದರೆ ಇದು ಅದಕ್ಕೆ ವಿರುದ್ದವಾಗಿ ದೇಹವನ್ನು ತಂಪಾಗಿಸುವುದು.