ಬಾಗಲಕೋಟೆ ಜಿಲ್ಲೆಗೆ ಡೆಂಘೀ ಕಾಟ: ಜನರಲ್ಲಿ ಭೀತಿ..!

By Kannadaprabha News  |  First Published Dec 23, 2022, 11:00 PM IST

ಡೆಂಘೀ ಜ್ವರದ ಕಾರಣ ನೂರಾರು ಸಂಖ್ಯೆಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ನಗರ, ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ರೋಗ ಭೀತಿಯಿಂದ ಹಾಗೂ ಲಕ್ಷಣದಿಂದ ಜನರು ತತ್ತರಿಸಿದ್ದಾರೆ.


ಈಶ್ವರ ಶೆಟ್ಟರ್‌

ಬಾಗಲಕೋಟೆ(ಡಿ.23): ಬಾಗಲಕೋಟೆ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಡೆಂಘೀ ಜ್ವರದ ಕಾರಣ ನೂರಾರು ಸಂಖ್ಯೆಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ನಗರ, ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ರೋಗ ಭೀತಿಯಿಂದ ಹಾಗೂ ಲಕ್ಷಣದಿಂದ ಜನರು ತತ್ತರಿಸಿದ್ದಾರೆ.

Tap to resize

Latest Videos

undefined

ಜಿಲ್ಲೆಯಲ್ಲಿ ಕಳದೆರೆಡು ತಿಂಗಳಲ್ಲಿ ಡೆಂಘೀ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದು, ಈ ಸಾಂಕ್ರಾಮಿಕ ರೋಗ ಹೆಚ್ಚಾಗಿ ಮಕ್ಕಳಲ್ಲಿ, ಹಿರಿಯರಲ್ಲಿ ಪತ್ತೆಯಾಗಿದೆ. ಇದಕ್ಕೆ ಕಾರಣ ಮನೆಯ ಸುತ್ತಮುತ್ತಲ್ಲಿ ಅಥವಾ ಮನೆಯೊಳಗೆ ಹಲವು ದಿನಗಳಿಂದ ಸಂಗ್ರಹವಾಗಿರುವ ಸ್ವಚ್ಛ ನೀರಿನಲ್ಲಿ ಉತ್ಪತಿಯಾಗುವ ಈಡಿಸ್‌ ಎಂಬ ಸೊಳ್ಳೆಯು ಹಗಲು ಹೊತ್ತಿನಲ್ಲಿ ಜನರಿಗೆ ಕಚ್ಚುತ್ತದೆ. ಒಬ್ಬರಿಗೆ ಕಚ್ಚಿದ ಸೊಳ್ಳೆಯು ಮತ್ತೊಬ್ಬರಿಗೆ ಕಚ್ಚುವುದರಿಂದ ಈ ಸಾಂಕ್ರಾಮಿಕ ರೋಗ ಹರಡುತ್ತದೆ. ಈ ವರ್ಷದ ಜನವರಿಯಿಂದ ನವೆಂಬರ್‌ ತಿಂಗಳವರೆಗೆ ಜಿಲ್ಲೆಯಲ್ಲಿ ಒಟ್ಟು 226 ಜನರಲ್ಲಿ ಡೆಂಘೀ ರೋಗ ಕಾಣಿಸಿಕೊಂಡಿದೆ.

ಬೆಂಗಳೂರಲ್ಲಿ ಮಳೆಯಿಂದ ಹೆಚ್ಚಿದ ಸೊಳ್ಳೆ ಕಾಟ, ಪ್ರತಿದಿನ 50ಕ್ಕೂ ಹೆಚ್ಚು ಡೆಂಘಿ ಕೇಸ್ ಪತ್ತೆ

ಡೆಂಘೀ ಜಿಲ್ಲಾ ಕೇಂದ್ರದಲ್ಲಿ ಹೆಚ್ಚು:

ಡೆಂಘೀ ರೋಗ ಹಳ್ಳಿ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿಯೇ ಹೆಚ್ಚಾಗಿ ಕಂಡು ಬರುತ್ತಿದೆ. ಈ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ನಗರಸಭೆಯ ಸಾಮಾನ್ಯ ಸಭೆಯಲ್ಲಿಯೂ ಈ ಕುರಿತು ವಿಸ್ತ?ತ ಚರ್ಚೆಯಾಗಿತ್ತು. ನಗರದಲ್ಲಿ ಡೆಂಘೀ ಹೆಚ್ಚಾಗಿ ಕಂಡು ಬರುತ್ತಿರುವುದು ಗಮನಿಸಿದರೆ ಅದಕ್ಕೆ ನಗರದಲ್ಲಿ ಹಾಳಾಗಿ ಬಿದ್ದಿರುವ ಟೈರ್‌, ಒಡೆದ ಮಡಿಕೆಯ ತುಂಡು, ಪ್ಲಾಸ್ಟಿಕ್‌ನಲ್ಲಿ ಸಂಗ್ರಹವಾಗಿರುವ ನೀರಿನಿಂದ ನಗರದಲ್ಲಿ ಸೊಳ್ಳೆಗಳು ಉತ್ಪತಿಯಾಗುತ್ತಿದೆ. ಆದ್ದರಿಂದ ಜಿಲ್ಲಾ ಕೇಂದ್ರದ ಪ್ರದೇಶದಲ್ಲಿ ಹೆಚ್ಚಾಗಿ ಡೆಂಘೀ ಕಾಣಿಸಿಕೊಂಡಿದೆ. ಬಾಗಲಕೊಟೆಯ ನಗನಗರದಲ್ಲಿ 42, ಹಳೇ ಬಾಗಲಕೋಟೆಯಲ್ಲಿ 21, ಮುಧೋಳ 11, ಬಾದಾಮಿ 7, ಕೆರಕಲಮಟ್ಟಿಹಾಗೂ ಹುನಗುಂದದಲ್ಲಿ ತಲಾ 5 ಡೆಂಘೀ ಸಾಂಕ್ರಾಮಿಕ ರೋಗ ಪತ್ತೆಯಾಗಿದೆ.

ಮಕ್ಕಳಿಗಾಗಿ ಮುಂಜಾಗ್ರತೆ ವಹಿಸಿ:

ಮಕ್ಕಳ್ಳಲ್ಲಿ ಡೆಂಘೀ ರೋಗ ಹೆಚ್ಚಾಗಿ ಕಂಡುಬರುತ್ತಿದ್ದು, ಮಕ್ಕಳ ಆರೋಗ್ಯಕ್ಕಾಗಿ ಮನೆಯ ಪಾಲಕರು ಮಕ್ಕಳಿಗೆ ಮೈತುಂಬಾ ಬಟ್ಟೆಗಳನ್ನು ಹಾಕಬೇಕು. ಕಾಲುಗಳಿಗೆ ಸಾಕ್ಸ್‌, ಹ್ಯಾಂಡ್‌ಗ್ಲೌಸ್‌ ಹಾಕುವ ಮೂಲಕ ಮಕ್ಕಳನ್ನು ರಕ್ಷಿಸಬೇಕು. ಡೆಂಘೀ ರೋಗಕ್ಕೆ ಕಾರಣವಾಗುವ ಈಡಿಸ್‌ ಸೊಳ್ಳೆಯನ್ನು ನಿಯಂತ್ರಿಸುವುದಕ್ಕಾಗಿ ಹಳ್ಳಿಗಳಲ್ಲಿ, ಪಟ್ಟಣ ಪ್ರದೇಶದಲ್ಲಿ ಹಾಗೂ ನಗರದಲ್ಲಿ ಗ್ರಾಮ ಪಂಚಾಯಿತಿಯಿಂದ, ಪಟ್ಟಣ ಪಂಚಾಯಿತಿಯಿಂದ ಹಾಗೂ ನಗರ ಸಭೆಯಿಂದ ಫಾಗಿಂಗ್‌ ಮಾಡಿಸುವ ಕೆಲಸವಾಗುತ್ತಿದೆ. ಜೊತೆಗೆ ಅದಕ್ಕೆ ಬೇಕಾಗಿರುವ ಎಲ್ಲ ರೀತಿಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಕೆರೆ, ಬಾವಿ, ಕ್ವಾರಿಗಳಲ್ಲಿ ಉತ್ಪತಿಯಾಗುವ ಸೊಳ್ಳೆಗಳನ್ನು ನಿಯಂತ್ರಿಸುವ ಸಲುವಾಗಿ ಗಪ್ಸಿ ಮತ್ತು ಗ್ಯಾಂಬುಸಿ ಎನ್ನುವ ಮೀನುಗಳನ್ನು ಬಿಡಲಾಗಿದ್ದು, ಅದರಿಂದ ಕೆರೆ, ಬಾವಿಗಳಲ್ಲಿ ಉತ್ಪತಿಯಾಗುವ ಸೊಳ್ಳೆಗಳನ್ನು ನಿಯಂತ್ರಿಸುವ ಕೆಲಸವಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆರೋಗ್ಯ ಇಲಾಖೆ ಚುರುಕುಗೊಳ್ಳಬೇಕಿದೆ:

ಆರೋಗ್ಯ ಇಲಾಖೆ ಸೇರಿ ಸಂಬಂ​ಧಿಸಿದ ಗ್ರಾಮ ಹಾಗೂ ನಗರ ವ್ಯಾಪ್ತಿಯ ಜವಾಬ್ದಾರಿ ಹೊಂದಿದ ಅಧಿ​ಕಾರಿ ವರ್ಗ ಕೇವಲ ಕರಪತ್ರಗಳನ್ನು ಮುದ್ರಿಸಿ ಹಂಚುವುದನ್ನು ಬಿಟ್ಟರೆ ಸೊಳ್ಳೆ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಏಷ್ಯನ್ ಟೈಗರ್ ಸೊಳ್ಳೆ ಕಚ್ಚೋದರಿಂದ ಸಾವು ಸಂಭವಿಸಬಹುದು ಜೋಪಾನ!

ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪರಣೆ, ಫಾಗಿಂಗ್‌ ಮೂಲಕ ಸೊಳ್ಳೆಗಳ ಹರಡುವಿಕೆ ತಪ್ಪಿಸುವ ಪ್ರಯತ್ನ ನಡೆದಿದ್ದು ಕಡಿಮೆ. ಜೊತೆಗೆ ಜಾಗೃತಿ ಮೂಡಿಸುವ ಪ್ರಯತ್ನವಂತೂ ಕೇವಲ ಕಾಗದದಲ್ಲಿ ಮಾತ್ರವಾಗಿದೆ. ಹೀಗಾಗಿ, ತಕ್ಷಣದಿಂದಲೇ ಇಲಾಖೆ ಚುರುಕುಗೊಳ್ಳುವ ಅಗತ್ಯವಿದೆ.

ಹಳ್ಳಿಗಳಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ಭೇಟಿ ನೀಡುವ ಮೂಲಕ ಜನರಲ್ಲಿ ಡೆಂಘೀ ಜ್ವರದ ಬಗ್ಗೆ ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಡೆಂಘೀ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ಬೇಕಾಗಿರುವ ಎಲ್ಲ ಮುಂಜಾಗ್ರತಾ ಕ್ರಮವನ್ನು ಆರೋಗ್ಯ ಇಲಾಖೆಯಿಂದ ಕೈಗೊಳ್ಳುತ್ತಿದೆ ಅಂತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅ​ಧಿಕಾರಿ ಡಾ.ಜಯಶ್ರೀ ಎಮ್ಮಿ ತಿಳಿಸಿದ್ದಾರೆ. 

ತಿಂಗಳುವಾರ ಡೆಂಘೀ ದೃಢಪಟ್ಟವರ ಸಂಖ್ಯೆ: ತಿಂಗಳು ದೃಢಪಟ್ಟವರ ಸಂಖ್ಯೆ

ಜನವರಿ 12
ಫೆಬ್ರುವರಿ 4
ಮಾರ್ಚ್‌ 3
ಎಪ್ರೀಲ್‌ 5
ಮೇ 4
ಜೂನ್‌ 7
ಜುಲೈ 19
ಅಗಸ್ಟ್‌ 18
ಸಪ್ಟೆಂಬರ್‌ 45
ಅಕ್ಟೋಬರ್‌ 56
ನವೆಂಬರ್‌ 53
ಒಟ್ಟು 226

click me!