ಒಂದು ನಿಮಿಷದಲ್ಲಿ ಮನಸ್ಸು ಎಲ್ಲೆಲ್ಲೋ ಹೋಗಿ ಬಂದಿರುತ್ತದೆ. ಅನೇಕರು ಬೇಕಾದ ವಿಷ್ಯಕ್ಕಿಂತ ಬೇಡದ ವಿಷ್ಯವನ್ನು ಹೆಚ್ಚು ಆಲೋಚನೆ ಮಾಡ್ತಾರೆ. ಅತಿಯಾಗಿ ಚಿಂತೆ ಮಾಡುವ ಮೂಲಕ ಈಗಿನ ಸುಖ ಕಳೆದುಕೊಳ್ಳುವ ಜೊತೆಗೆ ಮಾನಸಿಕ ಆರೋಗ್ಯ ಹಾಳು ಮಾಡಿಕೊಳ್ತಾರೆ.
ಚಿಂತೆ (Worries) ಚಿತೆಗೆ ದಾರಿ ಮಾಡಿಕೊಡುತ್ತದೆ. ಚಿಂತೆ ಹಾಗೂ ಚಿತೆ ಮಧ್ಯೆ ಇರುವುದು ಒಂದು ಸೊನ್ನೆ (Zero) ಮಾತ್ರ. ಚಿತೆ ನಿರ್ಜೀವವನ್ನು ಸುಟ್ಟರೆ, ಚಿಂತೆ ಜೀವಂತ (Alive) ಇರುವವರನ್ನು ಸುಡುತ್ತದೆ ಎಂದು ಹಿರಿಯರು ಹೇಳ್ತಾರೆ. ಇದು ನೂರಕ್ಕೆ ನೂರು ಸತ್ಯ (Truth). ಒಬ್ಬ ವ್ಯಕ್ತಿಯು ಅತಿಯಾಗಿ ಯೋಚಿಸಿದಾಗ, ಅದು ಅವನ ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ವ್ಯಕ್ತಿ ನಕಾರಾತ್ಮಕವಾಗಿ ಆಲೋಚನೆ ಮಾಡಲು ಕಾರಣವಾಗಬಹುದು. ಈ ಆಲೋಚನೆಗಳು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿಯು ಏನನ್ನಾದರೂ ದೀರ್ಘಕಾಲ ಯೋಚಿಸಿದರೆ, ಅದು ಅವನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅತಿಯಾಗಿ ಆಲೋಚನೆ ಮಾಡಿದಾಗ ಮೆದುಳು ಒಂದು ರೀತಿಯ ಬಲೆ ಸೃಷ್ಟಿಯಾಗಲು ಪ್ರಾರಂಭವಾಗುತ್ತದೆ. ಇದರಿಂದ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಬರಲು ಪ್ರಾರಂಭಿಸುತ್ತವೆ. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲು ಶುರುವಾಗುತ್ತದೆ.
ಅತಿಯಾಗಿ ಯೋಚಿಸುವುದು ವ್ಯಕ್ತಿಯೊಳಗೆ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ತಜ್ಞರು ಹೇಳ್ತಾರೆ. ಆ ಸಮಸ್ಯೆಗಳಲ್ಲಿ ಒಂದು ಪಿಟಿಎಸ್‌ಡಿ ಅಂದರೆ- ನಂತರ ಸಂಭವಿರುವ ಒತ್ತಡದ ಅಸ್ವಸ್ಥತೆ. ಈ ಸಮಸ್ಯೆಯಿಂದಾಗಿ, ಒಬ್ಬ ವ್ಯಕ್ತಿಯು ಕೆಲವು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾನೆ.
ಅತಿಯಾಗಿ ಯೋಚಿಸುವುದು ಅಥವಾ ಮಾತನಾಡುವುದರಿಂದ ಉಂಟಾಗುವ ಹಾನಿಗಳು :
• ಒಬ್ಬ ವ್ಯಕ್ತಿಯು ಅತಿಯಾಗಿ ಯೋಚಿಸಲು ಅಥವಾ ಮಾತನಾಡಲು ಪ್ರಾರಂಭಿಸಿದಾಗ, ಇದು ಅವನಿಗೆ ಅಭ್ಯಾಸವಾಗುತ್ತದೆ. ವರ್ತಮಾನದಲ್ಲಿ ಅಥವಾ ಭವಿಷ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆ ಆತ ಸದಾ ಚಿಂತಿಸತೊಡಗುತ್ತಾನೆ. ಹೆಚ್ಚಿನ ಜನರು ನಕಾರಾತ್ಮಕ ವಿಷ್ಯಗಳ ಬಗ್ಗೆಯೇ ಹೆಚ್ಚು ಆಲೋಚನೆ ಮಾಡ್ತಾರೆ. ಇದರಿಂದಾಗಿ ಅವರು ದುಃಖ ಮತ್ತು ಹತಾಶೆ ಭಾವನೆಗೊಳಗಾಗ್ತಾರೆ.
• ಅತಿಯಾದ ಆಲೋಚನೆ ಹಾಗೂ ಮಾತಿನಿಂದ ವ್ಯಕ್ತಿಯಲ್ಲಿ ಸಾಮಾಜಿಕ ಸಮಸ್ಯೆಗಳು ಉದ್ಭವಿಸಲು ಪ್ರಾರಂಭವಾಗುತ್ತವೆ. ಜನರೊಂದಿಗೆ ದೂರವಿರಲು ಶುರು ಮಾಡ್ತಾರೆ. ವಾಸ್ತವದಲ್ಲಿ ಸಂಭವಿಸದೆ ಇರುವು ವಿಷ್ಯಗಳನ್ನು ಕೂಡ ಆಲೋಚನೆ ಮಾಡಲು ಶುರು ಮಾಡುವುದ್ರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.
• ಅತಿಯಾದ ಆಲೋಚನೆ ದೈನಂದಿನ ಚಟುವಟಿಕೆಗಳ ಮೇಲೂ ಗಾಢ ಪರಿಣಾಮ ಬೀರಬಹುದು. ಯಾವುದೇ ಕೆಲಸ ಮಾಡ್ತಿದ್ದರೂ ನಿಮ್ಮ ಆಲೋಚನೆ, ಕೆಲಸದ ಮೇಲೆ ಗಮನ ಹರಿಸಲು ಬಿಡುವುದಿಲ್ಲ. ಆಲೋಚನೆ ಸುಖ ನೀಡಲು ಶುರುವಾಗುತ್ತದೆ. ಕುಳಿತು ಬರೀ ಆಲೋಚನೆ ಮಾಡುವ ಕಾರಣ ಸೋಮಾರಿಗಳಾಗ್ತೀರಿ. ನಿಮ್ಮೆಲ್ಲ ಕೆಲಸಗಳು ಹಾಳಾಗುತ್ತವೆ.
• ನಿಮ್ಮ ನಿದ್ರೆ ಮತ್ತು ಹಸಿವು ಕೂಡ ಈ ಸಮಸ್ಯೆಯಿಂದ ಪ್ರಭಾವಿತವಾಗಿರುತ್ತದೆ. ಈ ಸ್ಥಿತಿಯಲ್ಲಿ ದೀರ್ಘಕಾಲ ಉಳಿಯುವುದ್ರಿಂದ ಹಸಿವಾಗಿರುವುದು ನಿಮ್ಮ ಗಮನಕ್ಕೆ ಬರುವುದಿಲ್ಲ. ನಿದ್ರೆ ಸಮಯದಲ್ಲೂ ಆಲೋಚನೆ ಮಾಡುವ ಕಾರಣ ನಿದ್ರಾಹೀನತೆ ನಿಮ್ಮನ್ನು ಕಾಡಲು ಶುರುವಾಗುತ್ತದೆ. ಆದ್ರೆ ಅತಿಯಾಗಿ ಆಲೋಚನೆ ಮಾಡುವ ಕೆಲವರು ಅತಿ ನಿದ್ರೆ ಮಾಡುತ್ತಾರೆ.
ಅತಿಯಾದ ಆಲೋಚನೆಯಿಂದ ಹೊರ ಬರುವುದು ಹೇಗೆ? :
• ಮೊದಲನೆಯದಾಗಿ, ನಿಮ್ಮದೇ ಆದ ಟೈಂ ಟೇಬಲ್ ತಯಾರಿಸಿ. ಅದರಂತೆ ನಡೆದುಕೊಳ್ಳಿ. ಆಲೋಚನೆ ಮಾಡುವ ಸಮಯದಲ್ಲಿ ಬೇರೆ ಕೆಲಸದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಿ. ಮಾತನಾಡುವ ಅಭ್ಯಾಸವನ್ನು ಕ್ರಮೇಣ ಕಡಿಮೆ ಮಾಡಿ.
• ಧ್ಯಾನ ಮತ್ತು ಯೋಗದ ಮೂಲಕವೂ ನೀವು ಈ ಪರಿಸ್ಥಿತಿಯಿಂದ ಹೊರಬರಬಹುದು.
ಅಸ್ತಮಾ ಔಷಧ ಕೋವಿಡ್ ವಿರುದ್ಧ ಹೋರಾಡಲು ಸಹಾಯಕ ಎನ್ನುತ್ತದೆ ಅಧ್ಯಯನ
• ಬೆಳಿಗ್ಗೆ ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ದೀರ್ಘ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳಿ. ನಕಾರಾತ್ಮಕ ಆಲೋಚನೆ ಬರ್ತಿದೆ ಎನ್ನುವ ಸಂದರ್ಭದಲ್ಲಿ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ. ಇದು ನಕಾರಾತ್ಮಕ ಆಲೋಚನೆಗಳನ್ನು ತೊಡೆದು ಹಾಕಲು ನೆರವಾಗುತ್ತದೆ.
ಇನ್ಸುಲಿನ್ ಎಲೆಗಳನ್ನು ತಿಂದು ಡಯಾಬಿಟೀಸ್ ನಿಯಂತ್ರಿಸಬಹುದಾ ?
• ಸ್ನೇಹಿತರು ಮತ್ತು ಕುಟುಂಬದೊಂದಿಗೆ ನೀವು ಗರಿಷ್ಠ ಸಮಯವನ್ನು ಕಳೆಯಬೇಕು. ಇದ್ರಿಂದ ಆಲೋಚನೆ ಧನಾತ್ಮಕವಾಗುವ ಸಾಧ್ಯತೆಯಿರುತ್ತದೆ. ಬಯಸಿದರೆ ಇದರಿಂದ ಹೊರ ಬರಲು ಪ್ರೇರಣಾತ್ಮಕ ವಿಡಿಯೋಗಳನ್ನು ಕೂಡ ನೋಡಿ.
• ಸಮಸ್ಯೆ ಅತಿಯಾಗ್ತಿದೆ ಎನ್ನಿಸಿದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.