ಮಾಸ್ಕ್‌ನಿಂದ ನಗೋದು ಹೇಗಂತ ಮರ್ತು ಹೋಯ್ತು, ನಗೋಕು ಟ್ರೈನಿಂಗ್ ಪಡೀತಿದ್ದಾರೆ ಈ ದೇಶದ ಜನ!

By Vinutha PerlaFirst Published May 10, 2023, 4:14 PM IST
Highlights

ಯಾರಾದರೂ ನಗುವುದನ್ನು ಮರೆಯಬಹುದೇ? ಹಾಗೆಂದು ಹೇಳಿದರೆ ನಂಬುವುದು ಕಷ್ಟ. ಆದರೆ ನಗುವುದನ್ನೇ ಮರೆತ ದೇಶವೊಂದಿದೆ. ಅದ್ಯಾವುದು, ಅಲ್ಲಿನ ಜನರು ನಗುವುದನ್ನೇ ಮರೆತಿದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ನಗು, ಮನುಷ್ಯನ ಸಹಜ ಗುಣ. ಖುಷಿಯಾದಾಗ ಮನುಷ್ಯ ನಗುತ್ತಾನೆ. ಯಾರಾದರೂ ನಗುವುದು ಹೇಗೆ ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಆದರೆ ನಗುವುದನ್ನೇ ಮರೆತ ದೇಶವೊಂದಿದೆ. ಅಲ್ಲಿನ ಜನರು ನಗುವುದನ್ನೇ ಮರೆತಿದ್ದಾರೆ. ಹೇಗೆ ನಗುವುದು ಎಂಬುದನ್ನು ಕಲಿಯಲು ಹಣ ಕೊಟ್ಟು ತರಗತಿಗಳಿಗೆ ಸೇರಿಕೊಳ್ಳುತ್ತಿದ್ದಾರೆ. ನಂಬಲು ಕಷ್ಟವಾದರೂ ಇದು ನಿಜ. ಜಪಾನ್‌ನಲ್ಲಿ ಜನರು ಮೂರು ವರ್ಷಗಳ ಕಾಲ ಕೊರೋನಾ ವೈರಸ್ ಕಾರಣದಿಂದ ನಗುವುದನ್ನೇ ಮರೆತಿದ್ದಾರೆ. ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದ ಜನರು, ಪರಸ್ಪರ ಮುಖ ನೋಡುತ್ತಿಲ್ಲವಾಗಿದ್ದ ಕಾರಣ ನಗುವುದನ್ನ ಮರೆತು ಬಿಟ್ಟಿದ್ದಾರೆ. ಅಲ್ಲಿ ಜನರು ಈಗ ಹಣವನ್ನು ಪಾವತಿಸಿ ನಗಲು ಮತ್ತು ನಗಿಸಲು ತರಬೇತಿ ಪಡೆಯುತ್ತಿದ್ದಾರೆ.

ಜಪಾನ್‌ನಲ್ಲಿ ಕೊರೋನಾ ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಆದರೆ ಈಗಲೂ ಕೆಲವರು ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಇನ್ನು ಕೆಲವರು ಮೂರು ವರ್ಷಗಳಿಂದ ಮುಖವಾಡ (Mask) ಹಾಕಿಕೊಂಡ ಪರಿಣಾಮ ನಗುವುದನ್ನೇ (Laughing) ಮರೆತಿದ್ದಾರೆ. ಮಾಸ್ಕ್ ತೆಗೆದ ನಂತರ ಮುಖದ ಕೆಳಗಿನ ಭಾಗವನ್ನು ತೋರಿಸಲು ಮುಜುಗರ ಅನುಭವಿಸುತ್ತಿದ್ದಾರೆ. ಅವರ ನಗು ಈಗ ಮೊದಲಿನಂತಿಲ್ಲ ಎಂದು ಕೆಲವರು ಹೇಳುತ್ತಾರೆ. 

Laughing Benefits: ಸದಾ ಸ್ಮೈಲ್ ಮಾಡೋರ ಸ್ಕಿನ್ ಹೊಳೆಯುತ್ತೆ, ಸದಾ ನಗ್ ನಗ್ತಾ ಇರಿ

ಸ್ಮೈಲ್‌ಗಾಗಿ ತರಬೇತಿ ಪಡೆಯುತ್ತಿದ್ದಾರೆ ಜಪಾನೀಯರು
ಜಪಾನ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಜನರು ಈಗ ಸ್ಮೈಲ್‌ಗಾಗಿ ತರಬೇತಿ (Training) ಪಡೆಯುತ್ತಿದ್ದಾರೆ. ಯಾರಾದರೂ ತಮ್ಮ ಮುಖವಾಡವನ್ನು ತೆಗೆದರೂ, ಮುಖದ ಕೆಳಗಿನ ಭಾಗವು ತೋರಿಸಲು ಬಯಸುವುದಿಲ್ಲ ಎಂದು ನಾನು ಜನರಿಂದ ಕೇಳಿದ್ದೇನೆ ಎಂದು ಸ್ಮೈಲ್ ಟ್ರೈನರ್ ಮಿಹೋ ಕಿಟಾನೊ ಹೇಳುತ್ತಾರೆ. 

ಮುಗುಳ್ನಗುವುದು ಹೇಗೆಂದು ಸಹ ಹಲವರಿಗೆ ಗೊತ್ತಿಲ್ಲ. ಸ್ಮೈಲ್ ಫೇಶಿಯಲ್ ಮಸಲ್ ಅಸೋಸಿಯೇಷನ್ ​​ಕಂಪನಿಯ ವ್ಯಾಪಾರವೂ ಇದರಿಂದ ಹೆಚ್ಚಾಗಿದೆ. ಜನರು ಇಲ್ಲಿಗೆ ಬಂದು ತರಬೇತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ಮೈಲ್ ಟ್ರೈನರ್ ಹೇಳುತ್ತಾರೆ. ಜನರು ಸಾಂಕ್ರಾಮಿಕ (Pandemic) ರೋಗಕ್ಕೆ ಮೊದಲು ಹೇಗೆ ನಗುತ್ತಿದ್ದರೋ ಅದೇ ರೀತಿಯಲ್ಲಿ ಮತ್ತೆ ನಗಲು ಬಯಸುತ್ತಿದ್ದಾರೆ.

ದಿನ ನಿತ್ಯ ಬಳಸುವ ಎಮೋಜಿಗಳು ನಿಮ್ಮ ವ್ಯಕ್ತಿತ್ವ ಹೇಳುತ್ತೆ!

ಸ್ಮೈಲ್ ತರಬೇತಿ ನೀಡುವುದು ಹೇಗೆ?
ಸ್ಮೈಲ್ ತಜ್ಞರು ಜನರಿಗೆ ನಗುವುದು ಹೇಗೆಂದು ಕಲಿಸಲು ವ್ಯಾಯಾಮವನ್ನು (Exercise) ನೀಡುತ್ತಾರೆ. ಕೆನ್ನೆಯ ಸ್ನಾಯುಗಳನ್ನು ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ. ಇದರಿಂದ ಹಲ್ಲುಗಳನ್ನು ತೋರಿಸಲು ಸಹಾಯ (Help) ಮಾಡುತ್ತದೆ. ಇಲ್ಲಿಯವರೆಗೆ ಈ ಕಂಪನಿಯು 4000 ಜಪಾನಿಯರಿಗೆ ಮತ್ತೆ ನಗುವುದನ್ನು ಕಲಿಸಿದೆ.

ಜನರು ಮೊದಲಿಗಿಂತ ಕಡಿಮೆ ನಗುತ್ತಾರೆ
ಜಪಾನ್ ಸಂಪ್ರದಾಯದ (Tradition) ಬಗ್ಗೆ ಮಾತನಾಡುವುದಾದರೆ, ನಗುವುದು ಮತ್ತು ಹಲ್ಲುಗಳನ್ನು ತೋರಿಸುವುದನ್ನು ಇಲ್ಲಿ ಕಡಿಮೆಯಾಗಿದೆ. ಇಲ್ಲಿ ಜನರು ಹೆಚ್ಚು ಬಾಯಿ ತೆಗೆಯದೆ ಜಪಾನಿ ಭಾಷೆಯಲ್ಲಿ ಮಾತನಾಡಬಹುದು. ಸ್ಮೈಲ್ ಎಜುಕೇಶನ್ ಟ್ರೇನರ್ ಅಸೋಸಿಯೇಷನ್‌ನ ಕೀಕೊ ಕವಾನೊ ಅವರ ಪ್ರಕಾರ, ಸಾಂಕ್ರಾಮಿಕ ರೋಗದ ನಂತರ ಅದು ಸಂಪೂರ್ಣವಾಗಿ ನಿಂತುಹೋಯಿತು. ಈಗ ಜನರು ಮೊದಲಿಗಿಂತ ಕಡಿಮೆ ನಗುತ್ತಿದ್ದಾರೆ ಎಂದು ತಿಳಿದುಬಂದಿದೆ.

Health Tips : ನಗ್ತಾ ನಗ್ತಾ ಇದ್ದಾನೆಂದ್ರೆ ಆತ ಸುಖಿ ಅಲ್ಲ..! ಸ್ಮೈಲಿಂಗ್ ಡಿಪ್ರೆಶನ್ ಆಗಿರ್ಬಹುದು!

ಒಂಟಿತನದಿಂದ ಸಮಸ್ಯೆ
ಕೊರೋನಾ ಸಾಂಕ್ರಾಮಿಕದಲ್ಲಿ, ಜಪಾನ್ ತನ್ನ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದೆ. ಇದರಿಂದಾಗಿ ಇಲ್ಲಿ ಕೊರೊನಾ ಸೋಂಕು ತಗುಲಿರುವುದು ವಿರಳ. ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ. ಆದರೆ ಈಗ ನಿಷೇಧವನ್ನು ಹಿಂಪಡೆಯಲಾಗಿದೆ. ಆದರೆ ಈಗ ಇಲ್ಲಿನ ಜನರು ಒಂಟಿತನದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಜನರನ್ನು ಭೇಟಿ ಮಾಡಲು ಬಯಸುವುದಿಲ್ಲ. ಅವರು ತಮ್ಮ ಮನೆಗಳಲ್ಲಿ ತಮ್ಮನ್ನು ಬಂಧಿಸಲು ಪ್ರಾರಂಭಿಸಿದ್ದಾರೆ. ಈಗ ಸರ್ಕಾರವೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ತಿಳಿದುಬಂದಿದೆ.

click me!