ಆರೋಗ್ಯಕ್ಕೆ ನೀರು ತುಂಬಾ ಮುಖ್ಯ. ಹಾಗೆಂದು ಎಲ್ಲಿ ಬೇಕೆಂದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವೊಬ್ಬರಿಗೆ ಬಾತ್‌ರೂಮ್ ಟ್ಯಾಪ್‌ನಿಂದ ನೀರು ಕುಡಿಯೋ ಅಭ್ಯಾವಿರುತ್ತದೆ. ಆದ್ರೆ ಇದು ಆರೋಗ್ಯಕ್ಕೆಷ್ಟು ಕೆಟ್ಟದ್ದು ಅನ್ನೋದು ನಿಮಗೆ ತಿಳಿದಿದ್ಯಾ ?
ನೀರಿಲ್ಲದೆ ಬದುಕೋದು ಸಾಧ್ಯವೇ ಇಲ್ಲ. ನೀರನ್ನು ಅದೇ ಕಾರಣಕ್ಕೆ ಜೀವ ಜಲ ಎನ್ನುತ್ತಾರೆ. ನೀರು ಪ್ರತಿಯೊಬ್ಬ ಮನುಷ್ಯನಿಗೆ ಅತ್ಯಂತ ಅವಶ್ಯಕ. ಇಡೀ ದೇಹ ಆರೋಗ್ಯವಾಗಿರಲು ನೀರು ಬೇಕು. ಆದ್ರೆ ಆರೋಗ್ಯಕ್ಕೆ ನೀರು ಬೇಕು. ಪ್ರತಿ ದಿನ ಮೂರು ಲೀಟರ್ ನೀರು ಸೇವನೆ ಮಾಡುವಂತೆ ವೈದ್ಯರು ಹೇಳ್ತಾರೆ. ಹೆಚ್ಚು ನೀರು ಕುಡಿಯದೇ ಇರುವುದರಿಂದ ದೇಹ ನಿರ್ಜಲೀಕರಣಗೊಳ್ಳುತ್ತದೆ. ಇದ್ರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಆದರೆ ನೀರನ್ನು ಸಹ ಹೇಗೆಂದರೆ ಹಾಗೆ ಕುಡಿಯಬಾರದು. ನೀರಿನ ಶುದ್ಧತೆಯ ಗುಣಮಟ್ಟ ತಿಳಿದಿರಬೇಕು.
ಭಾರತದಲ್ಲಿ ಜನರು ಹೆಚ್ಚಾಗಿ ನೀರನ್ನು ಶುದ್ಧೀಕರಿಸಿಯೇ ಕುಡಿಯುತ್ತಾರೆ. ಆದರೆ ವಿದೇಶದಲ್ಲಿ ಜನರು ಕುಡಿಯುವ ನೀರನ್ನು (Drinking water) ಪಡೆಯಲು ಯಾವಾಗಲೂ ನೀರಿನ ಶುದ್ಧೀಕರಣವನ್ನು ಅವಲಂಬಿಸುವುದಿಲ್ಲ. ಮನೆಯ ಯಾವುದೇ ಟ್ಯಾಪ್‌ನಿಂದ, ಅದು ಅಡುಗೆಮನೆ (Kitchen)ಯಲ್ಲಿರಲಿ ಅಥವಾ ಬಾತ್‌ರೂಮ್ ಆಗಿರಲಿ ಅಲ್ಲೇ ನೀರು ಹಿಡಿದುಕೊಂಡು ಕುಡಿದು ಬಿಡುತ್ತಾರೆ. ಭಾರತದಲ್ಲೂ ಈ ರೀತಿ ಮಾಡುವವರಿದ್ದಾರೆ. ಎಲ್ಲಾ ಟ್ಯಾಪ್‌ಗೆ ಒಂದೇ ನೀರು ಸಪ್ಲೈ ಆಗುತ್ತೆ ಅನ್ನೋ ಕಾರಣಕ್ಕೆ ಹೀಗೆ ಮಾಡುತ್ತಾರೆ. ಆದರೆ ಬಾತ್‌ರೂಮ್‌ನಿಂದ ನೀರು ಹಿಡಿದು ಕುಡಿಯುವುದು ಅಸುರಕ್ಷಿತ (Unsafe) ಎಂದು ನಿಮಗೆ ತಿಳಿದಿದೆಯೇ ?
ಟೀ ಕುಡಿದ ತಕ್ಷಣ ನೀರು ಕುಡಿದು ಯಡವಟ್ಟು ಮಾಡ್ಕೊಳ್ಬೇಡಿ
ಬಾತ್‌ರೂಮ್ ಟ್ಯಾಪ್‌ನಿಂದ ನೀರು ಕುಡಿಯುವುದು ಏಕೆ ಅಸುರಕ್ಷಿತ ?
ನೀರು ರಾಸಾಯನಿಕಗಳನ್ನು ಹೊಂದಿರಬಹುದು: ಟ್ಯಾಂಕ್ ನೀರಿಗೆ ಸೋಂಕುನಿವಾರಕವನ್ನು ಬಳಸುವುದರಿಂದ ಬಾತ್‌ರೂಮಿನ ಕುಡಿಯುವ ನೀರು ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದರಿಂದ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಕುಡಿಯುವ ನೀರನ್ನು ಸಂಸ್ಕರಿಸಲು ಮತ್ತು ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆಯಲು ಬಳಸುವ ರಾಸಾಯನಿಕಗಳು (Chemical) ಗಾಳಿಗೆ ಒಡ್ಡಿಕೊಂಡಾಗ ನಾಶವಾಗುತ್ತವೆ. ಇದು ಹಳೆಯ ನೀರಿನ ತೊಟ್ಟಿಗಳನ್ನು ಅಳವಡಿಸಲಾಗಿರುವ ಮನೆಗಳಲ್ಲಿ ಸಂಭವಿಸಬಹುದು. ಈ ಹಳೆಯ ಟ್ಯಾಂಕ್‌ಗಳು ಸರಿಯಾದ ಪ್ರಮಾಣದ ರಾಸಾಯನಿಕಗಳನ್ನು ಹೊಂದಿರದಿರಬಹುದು. ಹೀಗಾಗಿ ಈ ನೀರು ಬ್ಯಾಕ್ಟಿರೀಯಾವನ್ನು ಹೊಂದಿರಬಹುದು.
ಬ್ಯಾಕ್ಟಿರೀಯಾಗಳನ್ನು ಹೊಂದಿರುತ್ತದೆ: ಬಾತ್‌ರೂಮ್‌ನಲ್ಲಿ ನಾವು ದೇಹದ (Body) ಕೊಳೆಯನ್ನೆಲ್ಲಾ ತೆಗೆಯಲು ಸ್ನಾನ ಮಾಡುತ್ತೇವೆ. ಹೀಗಾಗಿಯೇ ಕಣ್ಣಿಗೆ ಕಾಣದ ಅದೆಷ್ಟೋ ಕ್ರಿಮಿಗಳು, ಬ್ಯಾಕ್ಟಿರೀಯಾಗಳು ಬಾತ್‌ರೂಮ್‌ನಲ್ಲಿ ಸೇರಿಕೊಂಡಿರಬಹುದು. ಹೀಗಾಗಿ ಇಲ್ಲಿಂದ ನೀರು ಹಿಡಿದು ಕುಡಿಯುವುದು ಸಹ ಆರೋಗ್ಯಕ್ಕೆ ಹಾನಿಕರವಾಗಬಹುದು. ಆರೋಗ್ಯ ಸಮಸ್ಯೆಗಳನ್ನು (Health problem) ಉಂಟು ಮಾಡಬಹುದು.
ನೀರಿನ ಬಾಟಲ್ ಹಳದಿ ಬಣ್ಣಕ್ಕೆ ತಿರುಗಿದೆಯೇ ? ಕ್ಲೀನ್ ಮಾಡೋಕೆ ಇಲ್ಲಿದೆ ಸಿಂಪಲ್ ಟಿಪ್ಸ್
ನೀರಿನ ತೊಟ್ಟಿಯ ನೀರು ಯಾವಾಗಲೂ ತಾಜಾವಾಗಿರುವುದಿಲ್ಲ: ಸ್ನಾನದ ಟ್ಯಾಪ್‌ನಿಂದ ನೀರು ಯಾವಾಗಲೂ ಅಡುಗೆಮನೆಯ ನೀರಿನಿಂದ ಸ್ವಲ್ಪ ಭಿನ್ನವಾಗಿರುವುದನ್ನು ನೀವು ಗಮನಿಸಿರಬಹುದು. ಬಾತ್‌ರೂಮ್‌ನ ನೀರು ಸ್ವಲ್ಪ ಬೆಚ್ಚಗಿನ ತಾಪಮಾನ (Temperature)ದಲ್ಲಿರುತ್ತದೆ. ಸ್ನಾನದ ಟ್ಯಾಪ್‌ಗಳಲ್ಲಿನ ನೀರನ್ನು ಸಾಮಾನ್ಯವಾಗಿ ಮೇಲಂತಸ್ತಿನ ತೊಟ್ಟಿಯಲ್ಲಿ ಸಂಗ್ರಹಿಸಲಾಗುತ್ತದೆ. ಆದ್ದರಿಂದ, ನಿಮ್ಮ ಅಡುಗೆಮನೆಯಲ್ಲಿನ ನೀರಿನಂತೆ, ಈ ನೀರು ತಾಜಾ (Fresh)ವಾಗಿರುವುದಿಲ್ಲ. ಮನೆಯಲ್ಲಿರುವ ಶೇಖರಣಾ ತೊಟ್ಟಿಯಿಂದ ಸಣ್ಣ ಪ್ರಮಾಣದ ಧೂಳು (Dust) ಮತ್ತು ಅವಶೇಷಗಳನ್ನು ಹೊಂದಿರುವ ಸಾಧ್ಯತೆಯಿದೆ.
ಕಲುಷಿತ ನೀರನ್ನು ಕುಡಿಯುವುದರಿಂದ ಆರೋಗ್ಯದ ಅಪಾಯಗಳೇನು ?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕಳಪೆ ನೈರ್ಮಲ್ಯ ಮತ್ತು ಕಲುಷಿತ ನೀರಿನ ಸೇವನೆಯು ರೋಗಗಳ (Disease) ಪ್ರಸರಣದೊಂದಿಗೆ ಸಂಬಂಧ ಹೊಂದಿದೆ. ಇಂಥಾ ನೀರು ಕುಡಿಯುವುದರಿಂದ ಪೋಲಿಯೋ, ಕಾಲರಾ, ಅತಿಸಾರ, ಹೆಪಟೈಟಿಸ್ ಎ, ಭೇದಿ, ಟೈಫಾಯ್ಡ್ ಮೊದಲಾದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಕಲುಷಿತ ನೀರಿನ ಸೇವನೆಯು ಪ್ರತಿ ವರ್ಷ 485000 ಅತಿಸಾರ ಸಾವುಗಳಿಗೆ ಕಾರಣವಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದು WHO ಹೇಳಿದೆ. 2020 ರಲ್ಲಿ ಜಾಗತಿಕ ಜನಸಂಖ್ಯೆಯ 74 ಪ್ರತಿಶತದಷ್ಟು ಜನರು ಸುರಕ್ಷಿತ ಕುಡಿಯುವ ನೀರಿನ ಸೇವೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನೀರಿಗೆ ಇವನ್ನು ಹಾಕಿ ಸ್ಟೀಮ್ ತೆಗೆದುಕೊಂಡರೆ ಕ್ಷಣದಲ್ಲೇ ಶೀತ ಮಾಯವಾಗುತ್ತೆ!