
ಕ್ಯಾನರ್, ಗುಣಪಡಿಸಲಾಗದ ಕಾಯಿಲೆ ಎಂದೇ ಜನರು ಪರಿಗಣಿಸಿದ್ದಾರೆ. ಕ್ಯಾನ್ಸರ್ ಹೆಸರು ಕೇಳ್ತಿದ್ದಂತೆ ಬೆಚ್ಚಿ ಬೀಳುವವರೇ ಹೆಚ್ಚು. ಅನೇಕ ಕ್ಯಾನ್ಸರ್ ಕೊನೆ ಹಂತದಲ್ಲಿ ಪತ್ತೆಯಾಗುತ್ತದೆ. ಮತ್ತೆ ಕೆಲ ಕ್ಯಾನ್ಸರ್ ಲಕ್ಷಣ ಮೊದಲೇ ಗೋಚರಿಸಿದ್ರೂ ಅದನ್ನು ನಿರ್ಲಕ್ಷ್ಯ ಮಾಡುವ ಕಾರಣ ಅದು ಸಾವಿನ ಕೊನೆಗೆ ತಂದು ನಿಲ್ಲಿಸುತ್ತೆ. ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಅನೇಕ ಸಮೀಕ್ಷೆ, ಸಂಶೋಧನೆ, ಅಧ್ಯಯನಗಳು ನಡೆದಿವೆ. ಹೀಗಿದ್ದೂ ಕ್ಯಾನ್ಸರ್ ಬಗ್ಗೆ ಜನರಿಗಿರೋ ಪ್ರಶ್ನೆಗಳು ಒಂದೆರಡಲ್ಲ. ಇತ್ತೀಚಿಗೆ ಕ್ಯಾನ್ಸರ್ ಅನುವಂಶಿಕವಾಗಿದೆಯೇ ಎಂಬ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಇದಕ್ಕೆ ತಜ್ಞರು ಉತ್ತರ ನೀಡಿದ್ದಾರೆ.
ಕ್ಯಾನ್ಸರ್ ಅನುವಂಶಿಕವಾಗಿದೆಯೇ?
ಕ್ಯಾನ್ಸರ್ ಅನುವಂಶಿಕವಾಗಿದೆಯೇ ಎಂಬ ಪ್ರಶ್ನೆಗೆ ತಜ್ಞರು ಹೌದು ಎಂದು ಉತ್ತರಿಸಿದ್ದಾರೆ. ಶಸ್ತ್ರಚಿಕಿತ್ಸಾ ಆಂಕೊಲಾಜಿಯ ಸಲಹೆಗಾರ ಡಾ.ರಾಹುಲ್ ಎಸ್ ಕನಕ ಈ ಬಗ್ಗೆ ಮಾತನಾಡಿ, 'ಸುಮಾರು 5-10% ಪ್ರಕರಣಗಳಲ್ಲಿ ಕ್ಯಾನ್ಸರ್ ಅನುವಂಶಿಕ (Hereditary)ವಾಗಿದೆ, ಇದರಲ್ಲಿ ಒಬ್ಬ ವ್ಯಕ್ತಿಯು ತಮ್ಮ ಪೋಷಕರಿಂದ (Parents) ದೋಷಯುಕ್ತ ಜೀನ್ ಅನ್ನು ಆನುವಂಶಿಕವಾಗಿ ಪಡೆದರೆ ಅದು ಮತ್ತೆ ಅವನ ಅಥವಾ ಅವಳ ಮಕ್ಕಳಿಗೆ ಹರಡುತ್ತದೆ' ಎಂದು ಮಾಹಿತಿ ನೀಡಿದ್ದಾರೆ.
ಈ ಆಹಾರ ಸೇವಿಸಿದ್ರೆ ಸ್ತನ ಕ್ಯಾನ್ಸರ್ ಅಪಾಯ ಇರೋದೇ ಇಲ್ಲ
ಜೀನ್‌ಗಳು, ಕ್ಯಾನ್ಸರ್ ಬರುವುದನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೆಲವು ಅನುವಂಶಿಕ ರೂಪಾಂತರಗಳು ನಿರ್ದಿಷ್ಟ ರೀತಿಯ ಕ್ಯಾನ್ಸರ್‌ನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಈ ರೂಪಾಂತರಗಳನ್ನು ನಮ್ಮ ಪೋಷಕರಿಂದ ಅನುವಂಶಿಕವಾಗಿ ಪಡೆಯಬಹುದು, ರೋಗಕ್ಕೆ (Disease) ಕೌಟುಂಬಿಕ ಲಿಂಕ್ ಅನ್ನು ರಚಿಸಬಹುದು. ಇದು ಕ್ಯಾನ್ಸರ್‌ನ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.
ಉದಾಹರಣೆಗೆ, ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ಗಳು ಅನುವಂಶಿಕ ಸಂಪರ್ಕಗಳನ್ನು ಹೊಂದಿವೆ. BRCA1 ಮತ್ತು BRCA2 ಜೀನ್‌ಗಳಲ್ಲಿನ ರೂಪಾಂತರಗಳು ಈ ಕ್ಯಾನ್ಸರ್‌ಗಳ ಅಪಾಯವನ್ನು ಗಣನೀಯವಾಗಿ ಹೆಚ್ಚಿಸಲು ಕಾರಣವಾಗಿವೆ. ಈ ರೂಪಾಂತರಗಳನ್ನು ಆನುವಂಶಿಕವಾಗಿ ಪಡೆಯುವ ವ್ಯಕ್ತಿಗಳು ತಮ್ಮ ಜೀವನದಲ್ಲಿ ಕೆಲವು ಹಂತದಲ್ಲಿ ಸ್ತನ ಅಥವಾ ಅಂಡಾಶಯದ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಸರಾಸರಿಗಿಂತ ಹೆಚ್ಚಿನ ಸಂಭವನೀಯತೆಯನ್ನು ಎದುರಿಸುತ್ತಾರೆ.
ವಯಸ್ಸು ಜಾಸ್ತಿಯಾದಂತೆ ಪ್ರಾಸ್ಟೇಟ್ ಕ್ಯಾನ್ಸರ್ ಬರೋ ಅಪಾಯ ಹೆಚ್ಚಾಗುತ್ತಾ?
ವಂಶಪಾರಂಪರ್ಯವಾಗಿ ಕ್ಯಾನ್ಸರ್ ಬರುವ ಅಪಾಯ ಹೆಚ್ಚು ಯಾರಿಗೆ?
ಒಂದೇ ರೀತಿಯ ಕ್ಯಾನ್ಸರ್ ಹೊಂದಿರುವ ಇಬ್ಬರು ಅಥವಾ ಹೆಚ್ಚಿನ ಸಂಬಂಧಿಕರ ಉಪಸ್ಥಿತಿಯು ಕುಟುಂಬದ ಒಂದೇ ಭಾಗದಲ್ಲಿ, ಬಹು ತಲೆಮಾರುಗಳಲ್ಲಿ ಮತ್ತು ಆರಂಭಿಕ ಕ್ಯಾನ್ಸರ್ ರೋಗನಿರ್ಣಯಗಳೊಂದಿಗೆ, ರೋಗಕ್ಕೆ ಸಂಭವನೀಯ ಅನುವಂಶಿಕ ಪ್ರವೃತ್ತಿಯನ್ನು ಸೂಚಿಸುತ್ತದೆ. ಈ ಮಾದರಿಯು ಅನುವಂಶಿಕ ಕ್ಯಾನ್ಸರ್ ಸಿಂಡ್ರೋಮ್ ಅಪಾಯವನ್ನು ನಿರ್ಣಯಿಸಲು ಜೆನೆಟಿಕ್ ಕೌನ್ಸೆಲಿಂಗ್ ಮತ್ತು ಪರೀಕ್ಷೆಯ ಅಗತ್ಯವನ್ನು ಸೂಚಿಸುತ್ತದ.
ಆನುವಂಶಿಕ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಮಾರ್ಗಗಳ ಕುರಿತು ಮಾತನಾಡಿದ ಡಾ.ಕನಕಾ, 'ಅನುವಂಶಿಕ ಕ್ಯಾನ್ಸರ್ ಹೆಚ್ಚಿನ ಅಪಾಯವಿರುವ ವ್ಯಕ್ತಿಯಲ್ಲಿ ರಕ್ತ ಪರೀಕ್ಷೆಯ ಮೂಲಕ ದೋಷಯುಕ್ತ ಜೀನ್ ಅನ್ನು ಗುರುತಿಸಿ ನಂತರ ರೋಗನಿರೋಧಕ ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ' ಎಂದು ಮಾಹಿತಿ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.