
ಯೋಗ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿ ಹುಟ್ಟಿದ್ದು ಯೋಗ. ಋಗ್ವೇದಗಳಲ್ಲಿ, ಪೌರಾಣಿಕ ಪುಸ್ತಕಗಳಲ್ಲೂ ಯೋಗದ ಉಲ್ಲೇಖವಿದೆ. ಯೋಗದ ಮೊದಲು ಗುರು ಶಿವ ಎಂದೇ ಹೇಳಲಾಗುತದೆ. ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯ ತರುವ ಕೆಲಸವನ್ನು ಯೋಗ ಮಾಡುತ್ತದೆ.
ಭಾರತ (India) ವೇ ಯೋಗ (Yoga) ದ ತವರಾಗಿದ್ರೂ ವಿದೇಶಗಳಲ್ಲಿ ಕೂಡ ಯೋಗಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಯೋಗವನ್ನು ಬಹುತೇಕ ಎಲ್ಲ ದೇಶಗಳಲ್ಲಿ ನಿಯಮಿತವಾಗಿ ಮಾಡುವ ಜನರಿದ್ದಾರೆ. ದೈಹಿಕ (Physical) ಹಾಗೂ ಮಾನಸಿಕ ಎರಡೂ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾದ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಯೋಗ ದಿನವನ್ನು ಆಚರಣೆ ಮಾಡಲಾಗ್ತಿದೆ. ಪ್ರತಿ ವರ್ಷ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. ನಮ್ಮ ದೇಹಕ್ಕೆ ಹೊಸ ಶಕ್ತಿಯನ್ನು ನೀಡುವ ಯೋಗದಿಂದ ಅನೇಕ ಪ್ರಯೋಜನವಿದೆ. ನಾವಿಂದು ಅಂತರಾಷ್ಟ್ರೀಯ ಯೋಗ ದಿನದ ಇತಿಹಾಸ, ಥೀಮ್ ಹಾಗೂ ದಿನಕ್ಕೆ ಐದು ನಿಮಿಷ ಯೋಗ ಮಾಡಿದ್ರೂ ಅದ್ರಿಂದ ಆಗುವ ಲಾಭವೇನು ಎಂಬುದನ್ನು ನಿಮಗೆ ಹೇಳ್ತೇವೆ.
Health Tips : ವ್ಯಾಯಾಮ ಮಾಡುವಾಗ ಆಕಳಿಕೆ ಬಂದ್ರೆ ಅದು ಆಲಸ್ಯವಲ್ಲ.. ಕಾರಣ ಇಲ್ಲಿದೆ
ಅಂತರಾಷ್ಟ್ರೀಯ ಯೋಗ ದಿನದ ಇತಿಹಾಸ : ಸೆಪ್ಟೆಂಬರ್ 27, 2014 ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ (UNGA) ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮೊದಲ ಬಾರಿ ಅಂತರರಾಷ್ಟ್ರೀಯ ಯೋಗ ದಿನದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಡಿಸೆಂಬರ್ 11, 2014 ರಂದು ಅಂತರಾಷ್ಟ್ರೀಯ ಯೋಗ ದಿನದ ಘೋಷಣೆ ಮಾಡಿತು. ಜೂನ್ 21ನ್ನು ಅಂತರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿತು. ಅಲ್ಲಿಂದ ಪ್ರತಿ ವರ್ಷ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಿಕೊಂಡು ಬರಲಾಗ್ತಿದೆ. ಈ ದಿನ ಸೆಲೆಬ್ರಿಟಿಗಳಿಂದ ಹಿಡಿದು ಸಾರ್ವಜನಿಕರು, ಮಕ್ಕಳವರೆಗೆ ಎಲ್ಲರೂ ಒಂದಾಗಿ ಯೋಗ ಮಾಡುವ ಮೂಲಕ, ಯೋಗದ ಮಹತ್ವವನ್ನು ಸಾರುತ್ತಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನದ ಥೀಮ್ : ಪ್ರತಿ ವರ್ಷ ಒಂದೊಂದು ಥೀಮ್ ನೊಂದಿಗೆ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಯೋಗ ದಿನ 2023 ಥೀಮ್ 'ವಸುದೈವ ಕುಟುಂಬಕಂ' ಆಗಿದೆ. 2022ರಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಥೀಮ್ ಎಲ್ಲರೂ ಒಟ್ಟಾಗಿ ಯೋಗ ಮಾಡಿ ಎಂದಾಗಿತ್ತು. 2021ರಲ್ಲಿ ಕಲ್ಯಾಣಕ್ಕಾಗಿ ಯೋಗ ಥೀಮ್ ಜೊತೆ ಯೋಗ ದಿನವನ್ನು ಆಚರಣೆ ಮಾಡಲಾಗಿತ್ತು. ಇನ್ನು 2020ರಲ್ಲಿ ಮನೆಯಲ್ಲಿ ಯೋಗ ಹಾಗೂ ಕುಟುಂಬದವರ ಜೊತೆ ಯೋಗ ಎಂಬ ಥೀಮ್ ನಿಶ್ಚಯಿಸಲಾಗಿತ್ತು. 2019ರಲ್ಲಿ ಹೃದಯಕ್ಕೆ ಯೋಗವಾದ್ರೆ, 2018ರಲ್ಲಿ ಶಾಂತಿಗಾಗಿ ಯೋಗ ಥೀಮ್ ನಡಿ ಯೋಗ ಮಾಡಲಾಗಿತ್ತು. ಇನ್ನು 2016ರಲ್ಲಿ ಆರೋಗ್ಯಕ್ಕಾಗಿ ಯೋಗವಾದ್ರೆ, 2016ರಲ್ಲಿ ಯುವಕರು ಕೈಜೋಡಿಸಿ ಹಾಗೂ 2015ರಲ್ಲಿ ಸಾಮರಸ್ಯ ಹಾಗೂ ಶಾಂತಿಗಾಗಿ ಯೋಗ ಥೀಮ್ ನಡಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲಾಗಿತ್ತು.
ಈ ಯೋಗಾಸನ ಮಹಿಳೆಯರಿಗೆ ಬೆಸ್ಟ್, ಆದ್ರೆ ಮಾಡುವಾಗ ತುಸು ಎಚ್ಚರ
ಪ್ರತಿ ದಿನ ಕನಿಷ್ಠ ಐದು ನಿಮಿಷ ಯೋಗ ಮಾಡೋದು ಯಾಕೆ ಮುಖ್ಯ? : ಈಗಿನ ಜೀವನ ಶೈಲಿಯಲ್ಲಿ ಜನರಿಗೆ ಯೋಗ ಮಾಡಲು ಸಮಯ ಸಿಗ್ತಿಲ್ಲ. ಒಂದು ಗಂಟೆ ಯೋಗಕ್ಕೆ ಮೀಸಲಿಡಲು ಸಾಧ್ಯವಾಗ್ತಿಲ್ಲ. ತಜ್ಞರ ಪ್ರಕಾರ, ದಿನದಲ್ಲಿ ಅರ್ಧಗಂಟೆ ಯೋಗ ಮಾಡಿದ್ರೆ ಸಾಕಷ್ಟು ಲಾಭ ಸಿಗುತ್ತದೆ. ಅದು ಸಾಧ್ಯವಿಲ್ಲ ಎನ್ನುವವರು ದಿನದಲ್ಲಿ ಐದರಿಂದ 10 ನಿಮಿಷವಾದ್ರೂ ಯೋಗ ಮಾಡಿ, ಅದ್ರ ಲಾಭ ಪಡೆಯಬೇಕು. ನೀವು ಬೆಳಿಗ್ಗೆ, ಸಂಜೆ ಅಥವಾ ಕಚೇರಿಯ ಬಿಡುವಿನ ಸಮಯದಲ್ಲಿ ಯೋಗ ಮಾಡಬಹುದು.
ಕುಳಿತಲ್ಲಿಯೇ ಐದು ನಿಮಿಷ ಯೋಗ ಮಾಡಿದ್ರೂ ಅದ್ರಿಂದ ಉತ್ತಮ ಆರೋಗ್ಯವನ್ನು ನೀವು ಪಡೆಯಬಹುದು.
• ಯೋಗವು ಶಕ್ತಿ, ಸಮತೋಲನ (Balancing Energy) ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ.
• ಬೆನ್ನು ನೋವು (Backache) ನಿವಾರಣೆಗೆ ಯೋಗ ಸಹಾಯ ಮಾಡುತ್ತದೆ.
• ಯೋಗ ಸಂಧಿವಾತದ ಲಕ್ಷಣವನ್ನು ಕಡಿಮೆ ಮಾಡುತ್ತದೆ.
• ಹೃದಯದ ಆರೋಗ್ಯಕ್ಕೆ (Heart Health) ಯೋಗ ಒಳ್ಳೆಯದು.
• ನಿಮ್ಮನ್ನು ವಿಶ್ರಾಂತಿಗೊಳಿಸುವುದಲ್ಲದೆ ಉತ್ತಮ ನಿದ್ರೆಗೆ ಯೋಗ ಸಹಕಾರಿ
• ಶಕ್ತಿ ಹೆಚ್ಚಾಗುವ ಜೊತೆಗೆ ಮೂಡ್ ಬೂಸ್ಟರ್ (Mood Booster) ಯೋಗ.
• ಒತ್ತಡ (Stress) ನಿಭಾಯಿಸಲು ಯೋಗ ಬೆಸ್ಟ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.