Feeling Anxiety: ಆತಂಕವೇ? ಸಿಂಪಲ್ಲಾಗಿ ನಿವಾರಿಸ್ಕೊಳಿ

By Contributor Asianet  |  First Published Sep 30, 2022, 5:19 PM IST

ಆತಂಕ ನಮ್ಮೆಲ್ಲರನ್ನೂ ಒಂದಲ್ಲ ಒಂದು ಬಾರಿ ಕಾಡುತ್ತದೆ.  ಆದರೆ, ಕೆಲವೇ ಸಮಯದಲ್ಲಿ ಅದರಿಂದ ಹೊರಬರುತ್ತೇವೆ. ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಮಿತಿಮೀರಿ ಅದೊಂದು ಮಾನಸಿಕ ಸಮಸ್ಯೆಯಾಗಿ ಪರಿವರ್ತನೆಯಾಗಬಲ್ಲದು. ಹೀಗಾಗಿ, ನಿಮ್ಮಲ್ಲಿರುವ ಆತಂಕ ಗುರುತಿಸಿ ಸರಿಪಡಿಸಿಕೊಳ್ಳಿ. 
 


ಭಯ, ಅನಿಶ್ಚಿತತೆಯಿಂದ ಉಂಟಾಗುವ ಒಂದು ರೀತಿಯ ವಿಚಿತ್ರ ತಳಮಳದಿಂದಾಗಿ ಕೂತಲ್ಲಿ ಕೂರಲು ಆಗದು, ಯಾವುದಾದರೂ ಒಂದು ಕೆಲಸವನ್ನು ಏಕಾಗ್ರ ಚಿತ್ತದಿಂದ ಮಾಡಲೂ ಸಾಧ್ಯವಾಗದು. ಒತ್ತಡದಿಂದಾಗಿ ಉಂಟಾಗುವ ಈ ಸ್ಥಿತಿಯನ್ನು ಆತಂಕ ಎಂದು ಹೇಳಲಾಗುತ್ತದೆ. ಸಹಜವಾಗಿ ಎಲ್ಲರಿಗೂ ಒಂದಿಲ್ಲೊಮ್ಮೆ ಆತಂಕವಾಗುತ್ತದೆ. ಆದರೆ, ಇದು ಸಾಮಾನ್ಯ ಆತಂಕವನ್ನು ಮೀರಿದ ಸ್ಥಿತಿ. ಉದ್ಯೋಗದ ಸ್ಥಳದಲ್ಲಿ ತೊಂದರೆ,   ಸಮಾಜದಲ್ಲಿ ಸಮಸ್ಯೆ, ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ, ಹಣಕಾಸು ಪರಿಸ್ಥಿತಿ, ಸಂಬಂಧದಲ್ಲಿ ಏರುಪೇರು ಮುಂತಾದ ಹಲವಾರು ಸಮಸ್ಯೆಗಳಿಂದಾಗಿ ಆತಂಕದ ಸ್ಥಿತಿ ನಿರ್ಮಾಣವಾಗಬಹುದು. ನಾವು ತೀವ್ರ ಒತ್ತಡಕ್ಕೀಡಾದಾಗ ನಮ್ಮ ದೇಹದಲ್ಲಿರುವ ಅನುಕಂಪದ ನರವ್ಯವಸ್ಥೆ ಅತಿಯಾಗಿ ಕ್ರಿಯಾಶೀಲವಾಗುತ್ತದೆ. ಪಾರಿಸಾರಿಕ ಕಾರಣಗಳ ಹೊರತಾಗಿ, ಆನುವಂಶೀಯತೆ, ಮಿದುಳಿನ ರಾಸಾಯಕನಿಕದಲ್ಲಾಗುವ ವ್ಯತ್ಯಾಸದಿಂದಾಗಿಯೂ ಈ ನರವ್ಯವಸ್ಥೆ ಕ್ರಿಯಾಶೀಲವಾಗಬಲ್ಲದು. ಆಗಲೂ ಆತಂಕದ ಸಮಸ್ಯೆ ಉಂಟಾಗುತ್ತದೆ. ಹೀಗಾದಾಗ ಹಲವು ರೀತಿಯ ಲಕ್ಷಣಗಳು ಗೋಚರಿಸುತ್ತವೆ. ಮಾನಸಿಕ ನಿಯಂತ್ರಣ ಕಳೆದುಕೊಳ್ಳುವ ಭಯ, ದೈಹಿಕ ಗಾಯವಾಗುವ ಭಯ, ಸಾವಿನ ಭಯ, ಹೆದರಿಸುವ ವಿಚಾರಗಳು, ಹಣ ಕಳೆದುಕೊಳ್ಳುವ ಭಯ, ನೆನಪಿನ ಶಕ್ತಿ ನಾಶವಾಗುವುದು, ಗೊಂದಲವುಂಟಾಗುವುದು ಹಲವು ಲಕ್ಷಣಗಳಲ್ಲಿ ಒಂದು.

ಇದನ್ನೂ ಓದಿ: ಯೂರಿಕ್ ಹೆಚ್ಚಳ: ಯುವ ಜನರನ್ನೂ ಬಿಡದ ಅನಾರೋಗ್ಯ ಸಮಸ್ಯೆ

Tap to resize

Latest Videos

ಆತಂಕ (Anxiety) ಉಂಟಾದಾಗ ದೈಹಿಕ (Body) ಲಕ್ಷಣಗಳೂ ಕಾಣಬಹುದು. ಹೃದಯದ ಬಡಿತ (Heart Rate) ಹೆಚ್ಚಬಹುದು, ಏರುಪೇರು, ಎದೆನೋವು (Chestpain), ಒತ್ತಡ (Stress), ತಲೆಸುತ್ತಿದಂತೆ ಆಗುವುದು, ಬೆವರು, ಸೆಕೆ (Hot) ಹೆಚ್ಚಿದಂತಾಗುವುದು, ಚಳಿ, ವಾಂತಿ, ಹೊಟ್ಟೆ ಹಾಳಾಗುವುದು, ಕೈಕಾಲುಗಳಲ್ಲಿ ನಡುಕ, ಮಾಂಸಖಂಡಗಳ ಬಿಗಿತ ಹಾಗೂ ಬಾಯಿ ಒಣಗುತ್ತದೆ. ಈ ರೀತಿಯ ಆತಂಕವಾದಾಗ ಹಲವರು ಯಾವುದೇ ಕೆಲಸ ಮಾಡದೆ ಸುಮ್ಮನಿರಬಹುದು, ಕ್ಷೋಭೆಗೆ ಒಳಗಾಗಬಹುದು. ತಮ್ಮ ವಿಚಾರಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳಲು ವಿಫಲವಾಗಬಹುದು. ಆಗ ಅವರು ತೀವ್ರ ಕಿರಿಕಿರಿಗೆ (Irritate) ಒಳಗಾಗಬಹುದು. ಸದಾಕಾಲ ಒತ್ತಡ ಕಾಡಬಹುದು. 

ಇದನ್ನೂ ಓದಿ: ನಿದ್ರೆ ಒಳ್ಳೆಯದು, ಆದರೆ ಆತಿ ನಿದ್ರೆ ಆರೋಗ್ಯಕ್ಕೆ ಕುತ್ತು ತರಬಹುದು!

ಆತಂಕ ಹೀಗೆ ನಿಭಾಯಿಸಿ
ಆತಂಕವನ್ನು ಮನಸ್ಸು ಮಾಡಿದರೆ ಸುಲಭವಾಗಿ ನಿಭಾಯಿಸಬಹುದು. ಯಾವುದೇ ಮಾನಸಿಕ ಸಮಸ್ಯೆಯನ್ನು (Mental Problem) ಆರಂಭದಲ್ಲೇ ನಮ್ಮ ಸಮೀಪದವರು ಸಾಮಾನ್ಯವಾಗಿ ಗುರುತಿಸುತ್ತಾರೆ. “ಯಾಕೆ ಸುಮ್ಮನಿದ್ದೀರಿ? ಯಾಕೆ ಏನೂ ಕೆಲಸ ಮಾಡುತ್ತಿಲ್ಲ, ಮಾತನಾಡುವುದಿಲ್ಲ? ಏನಾಯಿತು ನಿಮಗೆ?ʼ ಎನ್ನುವ ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ. ಪದೇ ಪದೆ ಇಂತಹ ಪ್ರಶ್ನೆಗಳು ಬಂದರೆ, ದೈನಂದಿನ ಕೆಲಸಕ್ಕೂ ನಿಮಗೆ ಬೇಸರ ಕಾಡಿದರೆ ಅದು ಎಚ್ಚೆತ್ತುಕೊಳ್ಳುವ ಸಮಯ ಎಂದರ್ಥ. ದಿನಚರಿ ಸರಿಪಡಿಸಿಕೊಳ್ಳುವ ಜತೆಗೆ, ಹಲವು ರೀತಿಯಲ್ಲಿ ಯತ್ನಿಸಬಹುದು.
•    ಉಸಿರಾಟದ ವ್ಯಾಯಾಮ ಮಾಡಬೇಕು. ಪ್ರಾಣಾಯಾಮದಿಂದ (Pranayama) ಮಿದುಳು ಶಾಂತವಾಗುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ನಿಮಗೆ ಒಂದೊಮ್ಮೆ ಗೊತ್ತಿಲ್ಲವಾದರೆ, ಗೊತ್ತಿರುವವರನ್ನು ಕೇಳಿ ಅರಿತುಕೊಳ್ಳಿ, ಯಾವುದೇ ಕಾರಣಕ್ಕೂ ಅಸಡ್ಡೆ ಬೇಡ. 
•    ದೇಹವನ್ನು ಸ್ಕ್ಯಾನ್‌ (Scan) ಮಾಡಿಕೊಳ್ಳಬೇಕು! ತಜ್ಞರ ಪ್ರಕಾರ, ಇದು ಭಯವನ್ನು ಮೆಟ್ಟಿ ನಿಲ್ಲುವ ಉತ್ತಮ ಮಾರ್ಗ. ಕುರ್ಚಿಯಲ್ಲಿ ನೇರವಾಗಿ ಕುಳಿತು ಕಣ್ಮುಚ್ಚಿ, ಇಡೀ ದೇಹದ ಪ್ರತಿಯೊಂದು ಅಂಗಾಗದ ಮೇಲೆ ಗಮನ ಹರಿಸಬೇಕು. ಅವುಗಳನ್ನು ರಿಲ್ಯಾಕ್ಸ್‌ ಗೊಳಿಸುತ್ತ ಬರಬೇಕು. “ಕಾಲು, ತೊಡೆ, ಮಂಡಿಗಳು ರಿಲ್ಯಾಕ್ಸ್‌, ಬೆನ್ನು, ಸೊಂಟ, ಕತ್ತುಗಳು ರಿಲ್ಯಾಕ್ಸ್‌ (Relax)ʼ ಎಂದು ಪಾದದಿಂದ ತಲೆಯವರೆಗಿನ ಪ್ರತಿಯೊಂದು ಭಾಗದ ಬಗ್ಗೆ ಗಮನ ಹರಿಸಿ ರಕ್ತದ ಹರಿವು ಹೆಚ್ಚುವಂತೆ ಮಾಡಬೇಕು. 
•    ದಿನವೂ ಉತ್ತಮ ಸಂಗೀತ (Music) ಕೇಳಿ ಆಸ್ವಾದಿಸಬೇಕು. ನಿಮಗೆ ಯಾವ ಸಮಯದಲ್ಲಿ ಕೆಲಸವಿಲ್ಲದೆ ಕುಳಿತುಕೊಳ್ಳುತ್ತೀರೋ, ಯಾವ ಸಮಯ ಹೆಚ್ಚು ಬೇಸರವೆನಿಸುತ್ತದೆಯೋ ಆಗ ಸಂಗೀತ ಹಚ್ಚಿಕೊಳ್ಳಿ.
•    ಕೈಗಳು, ಹಣೆಯ ಎರಡೂ ಕಡೆ, ಕೆನ್ನೆಯ ಭಾಗವನ್ನು ಏಳು ಬಾರಿ ಮೃದುವಾಗಿ ಒತ್ತಿ ಉಜ್ಜುವುದರಿಂದ ಅನುಕೂಲ. ಜತೆಗೆ, ಪ್ರತಿದಿನ ಎರಡು ಬಾರಿ, “ನನಗೆ ಇಷ್ಟು ಸಮಸ್ಯೆ (Problems) ಇದ್ದರೂ ನನ್ನನ್ನು ನಾನು ಒಪ್ಪಿಕೊಳ್ಳುತ್ತೇನೆ, ಪ್ರೀತಿಸುತ್ತೇನೆʼ ಎಂದು ಹೇಳಿಕೊಳ್ಳಿ.
•    ಆತಂಕವಾದಾಗ ಬರೆಯಿರಿ. ಸಾಕಷ್ಟು ನೀರು (Water) ಕುಡಿಯಿರಿ. ದಿನವೂ ವ್ಯಾಯಾಮ ಮಾಡಿ. ಸ್ನೇಹಿತರು, ಕುಟುಂಬದ ಜತೆ ಸಮಯ ಕಳೆಯಿರಿ. ಅಗತ್ಯವಿದ್ದರೆ ವೈದ್ಯರು, ಆಪ್ತಸಮಾಲೋಚಕರನ್ನು ಭೇಟಿಯಾಗಿ. 
 

click me!