
ಮೊಬೈಲ್ ಇವತ್ತಿನ ದಿನಗಳಲ್ಲಿ ಎಷ್ಟು ಅನಿವಾರ್ಯವಾಗಿ ಬಿಟ್ಟಿದೆಯೆಂದರೆ ಎಲ್ಲಿ ಹೋಗುವಾಗಲೂ ಕೈಯಲ್ಲಿ ಮೊಬೈಲ್ ಇರಲೇಬೇಕು. ಊಟ ಮಾಡುವಾಗ, ನಿದ್ರೆ ಮಾಡುವಾಗ, ಕೊನೆಗೆ ಬಾತ್‌ರೂಮ್‌ಗೆ ಹೋಗುವಾಗಲೂ ಮೊಬೈಲ್ ಕೈಯಲ್ಲಿರಬೇಕು. ಬಾತ್‌ರೂಮ್‌ನಲ್ಲಿ ಫೋನ್‌ನಲ್ಲಿ ಗಂಟೆಗಟ್ಟಲೆ ಕಾಲ ಕಳೆಯುವ ಅಭ್ಯಾಸಕ್ಕೆ ಹೆಚ್ಚಿನವರು ಒಗ್ಗಿಕೊಂಡಿದ್ದಾರೆ. ಶೌಚಾಲಯಕ್ಕೆ ಹೋದಾಗಲೂ ಗಂಟೆಗಟ್ಟಲೆ ಮೊಬೈಲ್ ಬಳಸುವವರಿದ್ದಾರೆ. ಇದರಲ್ಲಿ ಬಹುತೇಕರು ಟೈಮ್ ಪಾಸ್‌ಗಾಗಿ ಮೊಬೈಲ್ ಹಿಡಿದುಕೊಂಡು ಹೋಗುತ್ತಾರೆ. ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸುವವರಲ್ಲಿ ನೀವೂ ಒಬ್ಬರಾಗಿದ್ದರೆ, ಇಂದೇ ಆ ಅಭ್ಯಾಸ ಬಿಡಿ. ಯಾಕಂದ್ರೆ ಇದ್ರಿಂದ ಆರೋಗ್ಯದ ಮೇಲಾಗುವ ಅಪಾಯ ಒಂದೆರಡಲ್ಲ.
ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸುವ ಅಭ್ಯಾಸದಿಂದ ಆರೋಗ್ಯ ಸಮಸ್ಯೆ
ಪೈಲ್ಸ್ ಕಾಡುತ್ತೆ: ಶೌಚಾಲಯದಲ್ಲಿ ಮೊಬೈಲ್ ಹಿಡಿದು ಐದು ನಿಮಿಷಗಳ ಕಾಲ ಕಳೆಯುವುದು ದೊಡ್ಡ ತಪ್ಪು ಎಂದು ತಜ್ಞರು ನಂಬುತ್ತಾರೆ. ಸರಾಸರಿ ವ್ಯಕ್ತಿಯೊಬ್ಬರು ಒಂದು ಬಾರಿಗೆ ಶೌಚಾಲಯದಲ್ಲಿ (Toilet) ಐದು ನಿಮಿಷಗಳನ್ನು ಕಳೆಯುತ್ತಾರೆ ಮತ್ತು ಒಂದು ದಿನದಲ್ಲಿ ನಾಲ್ಕರಿಂದ ಏಳು ಬಾರಿ ಹೀಗೆ ಮಾಡುತ್ತಾರೆ ಎಂದು ಸಮೀಕ್ಷೆಯು ತೋರಿಸುತ್ತದೆ. ಇದು ಸಾಮಾನ್ಯವಾಗಿ ಸಂದೇಶ ಕಳುಹಿಸುವಿಕೆ, ವೀಡಿಯೊಗಳನ್ನು ವೀಕ್ಷಿಸುವುದು ಅಥವಾ ದಿನಪತ್ರಿಕೆ ಓದುವಿಕೆಯಿಂದ ಉಂಟಾಗುತ್ತದೆ. ಇದು ಮಲವಿಸರ್ಜನೆಯನ್ನು ತುಂಬಾ ಗಟ್ಟಿಯಾಗಿ ತಳ್ಳುವ ಪ್ರಕ್ರಿಯೆಗೆ ಕಾರಣವಾಗುತ್ತೆ. ಮಾತ್ರವಲ್ಲ ನಂತರ ಇದು ಹೆಮೊರೊಯಿಡ್ಸ್ ಅಥವಾ ಪೈಲ್ಸ್ ಅಪಾಯವನ್ನು ಹೆಚ್ಚಿಸಬಹುದು ಎಂದು ತಜ್ಞರು ತಿಳಿಸುತ್ತಾರೆ. ಶೌಚಾಲಯದೊಳಗೆ ಮೊಬೈಲ್ ಬಳಸುವ ಅಭ್ಯಾಸ ಆರೋಗ್ಯಕ್ಕೆ (Health) ಹೇಗೆ ತೊಂದರೆಯನ್ನುಂಟು ಮಾಡುತ್ತೆ ತಿಳಿಯೋಣ.
ಕಾಯಿಲೆ ಹರಡಿಸೋ ಮೊಬೈಲ್ ಕ್ಲೀನ್ ಮಾಡೋಕೆ ಸಿಂಪಲ್ ಟಿಪ್ಸ್
ಗುದನಾಳ ಹಾಳಾಗುತ್ತೆ: ದೀರ್ಘಕಾಲದವರೆಗೆ ಶೌಚಾಲಯದಲ್ಲಿ ಕುಳಿತುಕೊಳ್ಳುವ ಅಭ್ಯಾಸ ಗುದನಾಳವನ್ನು ಹಾನಿಗೊಳಿಸುತ್ತದೆ. ಇದು ಕಡಿಮೆ ಗುದನಾಳದ ರಕ್ತನಾಳಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ, ಇದು ಅಂತಿಮವಾಗಿ ಪೈಲ್ಸ್ ಅಥವಾ ಗುದನಾಳದ ರಕ್ತಸ್ರಾವಕ್ಕೆ ಕಾರಣವಾಗಬಹುದು. ಮೂಲವ್ಯಾಧಿ ಅಥವಾ ರಾಶಿಗಳು ಸಾಮಾನ್ಯವಾಗಿ ತಾವಾಗಿಯೇ ತೆರವುಗೊಳ್ಳುತ್ತವೆ. ಆದರೂ, ಸೋಂಕು ತೀವ್ರಗೊಂಡಾಗ, ಅದಕ್ಕೆ ವೈದ್ಯಕೀಯ ಬೆಂಬಲ ಬೇಕಾಗಬಹುದು. ಗುದದ್ವಾರದೊಳಗೆ ಊದಿಕೊಂಡ ರಕ್ತನಾಳಗಳ ಸಮಸ್ಯೆ ಉಂಟಾಗಬಹುದು ಎಂದು ತಿಳಿಸಲಾಗಿದೆ.
ಒತ್ತಡದ ಪ್ರಮಾಣ ಹೆಚ್ಚಳ: ನಿತ್ಯಕರ್ಮಗಳನ್ನು ಯಾವುದೇ ಚಿಂತೆಯಿಲ್ಲದೆ ಮಾಡಿ ಮುಗಿಸಬೇಕು. ಆದ್ರೆ ಶೌಚಾಲಯಕ್ಕೆ ನಿಮ್ಮ ಫೋನ್ ಅನ್ನು ತೆಗೆದುಕೊಂಡು ಹೋಗುತ್ತಿದ್ದೀರಿ ಅಂತಾದರೆ ಮನಸ್ಸಿಗೆ ಒತ್ತಡ (Pressure) ಮತ್ತು ಆತಂಕವನ್ನು ನೀವು ಆಹ್ವಾನಿಸುತ್ತಿದ್ದೀರಿ ಎಂದರ್ಥ. ನಿಮ್ಮ ಫೋನ್ ಅನ್ನು ಟಾಯ್ಲೆಟ್ ರೂಂಗೆ ತೆಗೆದುಕೊಂಡು ಹೋಗುವ ಮೂಲಕ ನಿಮ್ಮ ಮೆದುಳು ಮತ್ತು ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತಿದ್ದೀರಿ. ಇದೇ ಕಾರಣದಿಂದಾಗಿ ಕೆಲವರು ಮಲವನ್ನು ಹೊರಹಾಕಲು ಸಹ ತೊಂದರೆ ಅನುಭವಿಸುತ್ತಾರೆ.
ಸೋಂಕಿನ ಅಪಾಯ: ಫೋನ್ ಅನ್ನು ಬಾತ್ರೂಂಗೆ ತೆಗೆದುಕೊಂಡು ಹೋಗುವುದರಿಂದ ಸೋಂಕಿನ ಅಪಾಯ ಹೆಚ್ಚು ಎಂದು ತಜ್ಞರು ಹೇಳುತ್ತಾರೆ. ಫೋನ್ ಪರದೆಯ ಮೇಲೆ ಬ್ಯಾಕ್ಟೀರಿಯಾ ದೀರ್ಘಕಾಲ ಉಳಿಯಬಹುದು. ಹೀಗಾಗಿ ನಾವನ್ನು ಮುಟ್ಟಿದಾಗ ನಮಗೆ ಸೋಂಕು ತಗುಲುವ ಅಪಾಯ ಹೆಚ್ಚಿರುತ್ತದೆ.
ಮೊಬೈಲ್‌ನಿಂದಾಗಿಯೇ ಹಿರಿಯನ್ನು ಇಗ್ನೋರ್ ಮಾಡ್ತಿದ್ದಾರೆ ಮಕ್ಕಳು, ನಿಮಗೂ ಹೀಗನ್ಸುತ್ತಾ?
ಟಾಯ್ಲೆಟ್‌ಗೆ ಹೋಗುವಾಗ ಮೊಬೈಲ್ ಕೊಂಡೊಯ್ಯದಿರಿ
ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಉತ್ತಮ ಮಾರ್ಗವೆಂದರೆ ಯಾವುದೇ ಕಾರಣಕ್ಕೂ ಮೊಬೈಲ್‌ನ್ನು ಬಾತ್‌ರೂಮ್‌ಗೆ ತೆಗೆದುಕೊಂಡು ಹೋಗಬೇಡಿ. ಎಷ್ಟೇ ಬಿಝಿ, ಒತ್ತಡದ ಕೆಲಸವಿದ್ದರೂ ನಿತ್ಯಕರ್ಮಗಳನ್ನು ಮಾಡುವಾಗ ಮೊಬೈಲ್ ಕೊಂಡೊಯ್ಯುವ ರೂಢಿ ಮಾಡಬೇಡಿ. ನಿಮ್ಮ ಫೋನ್ ಅನ್ನು ನಿಯಮಿತವಾಗಿ ಸೋಂಕು (Virus) ರಹಿತಗೊಳಿಸುವುದು ಅಂದರೆ ಸ್ಯಾನಿಟೈಸ್ ಮಾಡುವ ಅಭ್ಯಾಸ ತುಂಬಾ ಒಳ್ಳೆಯದು. ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯುವ ಅಭ್ಯಾಸ (Habit) ಮಾಡಿಕೊಳ್ಳಿ. ವಿಶೇಷವಾಗಿ ಬಾತ್ರೂಂನಿಂದ ಹೊರಬರುವಾಗ ಅಥವಾ ಬೇರೆಯವರ ಸ್ಮಾರ್ಟ್‌ಫೋನ್‌ಗಳನ್ನು ಮುಟ್ಟಿದಾಗ ನಿಮ್ಮ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.